ಬೆಂಗಳೂರು; ಸದನದಲ್ಲಿ ಡಿ.ಕೆ ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹೇಳಿದ ವಿಚಾರದ ಬಗ್ಗೆ ಮಾಜಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದು ತತ್ವ ಸಿದ್ದಾಂತದ ಬಗ್ಗೆ ಬಿಜೆಪಿಯವರಿಗೆ ಗೊತ್ತಿಲ್ಲ. ಡಿಕೆಶಿ ಎಲ್ಲ ತತ್ವ ಸಿದ್ದಾಂತಗಳನ್ನ ತಿಳಿದುಕೊಂಡಿದ್ದಾರೆ. ಬಿಜೆಪಿಯವರಿಗೆ ಅದರ ಬಗ್ಗೆ ಗೊತ್ತಿಲ್ಲ. ಡಿಕೆಶಿ ಹೇಳಿದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಿಯಾಲಿಟಿ ಚೆಕ್ ಮಾಡಿ, ಬಿಜೆಪಿಯರಿಗೆ ಆರ್ ಎಸ್ಎಸ್ ಗೀತೆಯೇ ಗೊತ್ತಿರುವುದಿಲ್ಲ. ನಕಲಿ ಬಿಜೆಪಿಗರು ಅಲ್ಲಿ ಇದ್ದಾರೆ. ಡಿಕೆಶಿಗೆ ಯಾವತ್ತೂ ಆರ್ ಎಸ್ ಎಸ್ ಜೊತೆಗೆ ನಂಟಿಲ್ಲ. ನಮ್ಮ ಮನೆ ಹತ್ತಿರವೇ ಆರ್ ಎಸ್ ಎಸ್ ಶಾಖೆ ಇತ್ತು. ನನ್ನ ದೊಡ್ಡಮ್ಮ ಮನೆ ಬಳಿಯೇ ಇತ್ತು.ನಾನು ಯಾವತ್ತೂ ಹೋಗಿಲ್ಲ ಎಂದಿದ್ದಾರೆ.
ಸಚಿವ ಸ್ಥಾನ ಹೋಗಲು 3 ಜನರ ಷಡ್ಯಂತ್ರ ಎಂಬ ಕೆಎನ್. ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನಾನು ದೆಹಲಿಗೆ ಹೋಗಿ ಬಹಳ ದಿನ ಆಯ್ತು. ರಾಜಣ್ಣ ಹೇಳಿಕೆ ಬಗ್ಗೆ ನನಗೆ ಗೊತ್ತು. ವಾಪಾಸ್ಸು ಬರಲಿ ಬಿಡಿ, ಅವರು ಹಿರಿಯರು. ಸಚಿವ ಸ್ಥಾನ ಕೊಡೋದು ಮುಖ್ಯಮಂತ್ರಿ ತೀರ್ಮಾನ ಮಾಡ್ತಾರೆ ಎಂದರು. ಕೆಎಂಎಫ್ ಆಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಬಗ್ಗೆ ಮಾತನಾಡಿ ನಂಜೇಗೌಡ, ರಾಘವೇಂದ್ರ ಹಿಟ್ನಾಳ್ ಕೇಳುವುದರಲ್ಲಿ ತಪ್ಪಿಲ್ಲ. ನೀವು ಕೇಳಿ, ಬೇಕಿದ್ರೆ ನೀವು ಆಕಾಂಕ್ಷಿ ಆಗಬಹುದು. ತಪ್ಪೇನಿಲ್ಲ ಎಂದು ನಕ್ಕಿದ್ದಾರೆ.
ಇದೇ ವೇಳೆ ಇಡಿ ರೇಡ್ ವಿಚಾರದ ಬಗ್ಗೆ ಮಾತನಾಡಿ ರಾಜಕಾರಣ, ವ್ಯವಾಹರದ ದೃಷ್ಟಿಯಿಂದ ರೇಡ್. ಇದರಿಂದ ಹೊರ ಬರುತ್ತಾರೆ. ರಾಜಕೀಯದಿಂದ ಹನುಮಂತರಾಯಪ್ಪ ಮನೆ ಮೇಲೆ ರೇಡ್ ಆಗಿರಬಹುದು. ವ್ಯವಹಾರದ ಸ್ನೇಹಿತರು ಇರಬಹುದು. ಕಾಂಗ್ರೆಸ್ ನವರನ್ನೇ ಹಿಡಿಯಬೇಕು, ಬಿಜೆಪಿಯರವನ್ನ ಹಿಡಿಯೋಕೆ ಆಗುತ್ತಾ?. ಬಿಜೆಪಿ ಏನೇ ಮಾಡಿದ್ರೂ ಒಳ್ಳೆಯದು.ಮೋದಿ ಟನಲ್ ಮಾಡ್ತಾರೆ ಚಪ್ಪಾಳೆ ತಟ್ಟುತ್ತಾರೆ. ಕಾಂಗ್ರೆಸ್ ಏನೇ ಮಾಡಿದ್ರೂ ಅಪಪ್ರಚಾರ ಎಂದಿದ್ದಾರೆ. ಸುರ್ಜೇವಾಲ ಸಭೆ ವಿಚಾರದ ಬಗ್ಗೆ ಮಾತನಾಡಿ ಜಾತಿಗಣತಿ ವಿಚಾರದಲ್ಲಿ ಮನೆ ಮನೆಗೆ ಸಮೀಕ್ಷೆ ಬಗ್ಗೆ ಕೇಳಿದ್ದಾರೆ. ಬಿಬಿಎಂಪಿ ಚುನಾವಣೆ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ವಾರ್ಡ್ ವಿಂಗಡಣೆ ಬಗ್ಗೆ ಚರ್ಚೆ ಆಯ್ತು. ಸರ್ಕಾರದ ಕ್ರಮದ ಬಗ್ಗೆ ಚರ್ಚೆ ಆಯ್ತು. ನಿನ್ನೆಯ ಸಭೆಯಿಂದ ಸಿಎಂ ಅಂತರ ಕಾಯ್ದುಕೊಂಡ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆಹ್ವಾನ ಇತ್ತು, ಹೋಗಿದ್ದೆ. ಬೆಂಗಳೂರು ಭಾಗದ ನಾಯಕರನ್ನ ಕರೆದಿದ್ದರು. ಮುಂದಿನ ತಿಂಗಳು ಜಾತಿಗಣತಿ ಸಮೀಕ್ಷೆ ಶುರು ಆಗ್ತಿದೆ.ವಾರ್ಡ್ ವಿಂಗಡನೆ ಬಗ್ಗೆ ಚರ್ಚಿಸಲಾಯ್ತು. ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಿಕೆ ಆಗಬಾರದು.ಡಿಸೆಂಬರ್ ನಲ್ಲಿ ಚುನಾವಣೆ ಆಗಬೇಕು ಕೋರ್ಟ್ ನಿರ್ದೇಶನ ಇದೆ.ನವೆಂಬರ್ ನೊಳಗೆ ನಾವು ಎಲ್ಲ ಪ್ರಕ್ರಿಯೆ ಮುಗಿಸುತ್ತೇವೆ . ಬೂತ್ ಮಟ್ಟದಲ್ಲಿ ಜವಾಬ್ದಾರಿ ನೀಡಲಾಗುತ್ತದೆ ಎಂದರು.
ಜಾತಿಗಣತಿ ವಿಚಾರವಾಗಿ ಒಕ್ಕಲಿಗ ಸಮುದಾಯ ಯಾವಾಗ ಸಭೆ ಎಂಬ ಪ್ರಶ್ನೆ ಮಾತನಾಡಿ ಪಬ್ಲಿಕ್ ನಲ್ಲಿ ನಡೆಯುವ ವಿಚಾರ. ನಮ್ಮ ಜಾತಿಯವರೂ ಅಪಸ್ವರ ಎತ್ತಿದ್ರು. ವ್ಯಾಪಕವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಯಾವುದೇ ಜಾತಿ ಅಂತಲ್ಲ.ಎಲ್ಲ ಜಾತಿಯವರು ಭಾಗಿಯಾಗಬಹುದು.ಪಕ್ಷದವರು, ಮಠಾಧಿಪತಿಗಳು ಎಲ್ಲ ಭಾಗಿಯಾಗಬಹುದು ಎಂದು ಹೇಳಿದರು. ಗಣೇಶ ಹಬ್ಬ ಹಿನ್ನೆಲೆ ಬಸ್ ವ್ಯವಸ್ಥೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಹಬ್ಬದ ಪ್ರಯುಕ್ತ ಹೆಚ್ಚಿನ ಬಸ್ ಹಾಕಲಾಗಿದೆ. ಗಣೇಶ ಹಬ್ಬದಲ್ಲಿ ಡಿಜೆ ಹಾಕಲು ಹಿಂದೆ ಕೂಡ ಪೋಲಿಸ್ ಅನುಮತಿ ಬೇಕಿತ್ತು.ಈಗ ಆನ್ಲೈನ್ ವ್ಯವಸ್ಥೆ ತರಲಾಗಿದೆ.ಬೊಮ್ಮಾಯಿ ಅವರ ಸರ್ಕಾರ ಇದ್ದಾಗ ೧೦ ಗಂಟೆಗೆಲ್ಲಾ ಕ್ಲೋಸ್ ಮಾಡಬೇಕೆಂದಿದ್ರು.ನಾವು ಇನ್ನೂ ಹೆಚ್ಚಿನ ಅವಕಾಶ ಕೊಟ್ಟಿದ್ದೇವೆ ಎಂದ್ರು.
ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬ ನಾಡಹಬ್ಬ ಎಂದು ಘೋಷಣೆ ವಿಚಾರದ ಬಗ್ಗೆ ಮಾತನಾಡಿ ಅವರು ಆದೇಶ ಕೊಡಬೇಕು ನಾವು ಕೊಡೋದು ಬೇಡ. ಗಣೇಶ ಹಬ್ಬ ಎಲ್ಲರಿಗೂ ಅನ್ವಯ ಅಗುತ್ತೆ. ರಾಜ್ಯಾದ್ಯಂತ ಸಂಭ್ರಮದಿಂದ ಆಚರಣೆ ಮಾಡ್ತಾರೆ ಎಂದು ತಿಳಿಸಿದರು.











