ಬೆಂಗಳೂರು: ವಿನಯ್ ಸೋಮಯ್ಯ ಕೇಸ್ ಸಿಬಿಐಗೆ ಕೊಡುವ ಅಗತ್ಯ ಕಾಣಿಸ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ವಿನಯ್ ಕೇಸ್ ಅನ್ನು ಸಿಬಿಐಗೆ ನೀಡಲು ಬಿಜೆಪಿ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಗರು ಆಗ್ರಹ ಮಾಡುತ್ತಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡುವ ಅಗತ್ಯ ಏನು ಕಾಣಿಸುತ್ತಿಲ್ಲ. ನಮ್ಮ ಪೊಲೀಸ್ ತನಿಖೆ ಮಾಡುತ್ತಿದ್ದಾರೆ. ಏನಾದರೂ ಲ್ಯಾಪ್ಸ್ ಇದ್ರೆ ಗೊತ್ತಾಗುತ್ತದೆ. ಲ್ಯಾಪ್ಸ್ ಇದ್ರೆ ಬೇರೆ ಕ್ರಮ ತೆಗೆದುಕೊಳ್ಳುತ್ತೇವೆ. ಶಾಸಕರ ಹೆಸರನ್ನು ಬಿಜೆಪಿಗರು ಹೇಳುತ್ತಿದ್ದಾರೆ. ಎಫ್ ಐಆರ್ ನಲ್ಲಿ ಹೆಸರು ಬಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಶಾಸಕರ ಹೆಸರಿದೆ ಅಂತಿದ್ದಾರೆ.ಎಲ್ಲವನ್ನೂ ನೋಡುತ್ತೇವೆ, ಕಾನೂನು ಪ್ರಕಾರ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಕೊರೊನಾ ಮಧ್ಯಂತರ ವರದಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ವರದಿ ನೋಡಿಲ್ಲ. ಕಳೆದ ಸಾರಿಕೊಟ್ಟ ವರದಿ ಚರ್ಚೆಯಾಗಿದೆ. ಆರೋಗ್ಯ ಇಲಾಖೆ ಕೆಲ ಎಫ್ ಐಆರ್ ಆಗಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಸರ್ಕಾರದ ವಿರುದ್ಧ ಕುಮಾರಸ್ವಾಮಿ ಯುದ್ಧ ಸಾರಿದ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸಚಿವರಿದ್ದಾರೆ, ದೊಡ್ಡ ಖಾತೆ ಅವರ ಬಳಿ ಇದೆ. ರಾಜ್ಯ ಸರ್ಕಾರಕ್ಕೆ ಏನು ಸಲಹೆ ಕೊಡ್ತಾರೆ ಅಂತ ನೋಡೊಣ. ರಾಜಕೀಯ ಯುದ್ಧ ಅಂದ್ರೆ ಬಂದೂಕ ಹಿಡಿದು ಮಾಡ್ತಾರಾ?. ಯುದ್ಧ ಅಂದ್ರೆ ಟೀಕೆ ಟಿಪ್ಪಣಿ. ಸರ್ಕಾರ ಉತ್ತರ ಕೊಡಲು ಸಮರ್ಥ ಇದೆ. ಅವರು ದಾಖಲಾತಿ ಬಿಡುಗಡೆ ಅಂತ ಹೇಳಿದ್ದಾರೆ. ಅವರು ಬಿಡುಗಡೆ ಮಾಡಲಿ ಆಮೇಲೆ ಉತ್ತರ ಕೋಡುತ್ತೇವೆ. ರಾಜ್ಯದ ಜನತೆ ಕುಮಾರಸ್ವಾಮಿ ವಾರ್ ಬಗ್ಗೆ ತೀರ್ಮಾನ ಮಾಡಬೇಕು. ಕೇಂದ್ರ ಯೋಜನೆಗಳು ರಾಜ್ಯಕ್ಕೆ ಸಹಾಯ ಮಾಡಬೇಕು. ಕುಮಾರಸ್ವಾಮಿ ಅವರಿಗೆ ವಿನಂತಿ ಮಾಡುತ್ತೇನೆ. ಆದ್ರೆ ಯುದ್ಧ ಮಾಡ್ತೇನೆ ಅಂದ್ರೆ ಜನರು ಗಮನಿಸುತ್ತಾರೆ.ಕುಮಾರಸ್ವಾಮಿ ರಾಜಕೀಯ ಯೋಜನೆ ನನಗೆ ಗೊತ್ತಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಂಗಳೂರಿಗೆ ಖರ್ಗೆ ಬಂದಿದ್ದಾರೆ.ನಾನು ಭೇಟಿ ಮಾಡುತ್ತೇನೆ.ಈಗ ಕ್ಷೇತ್ರದ ಕಾರ್ಯಕ್ರಮ ಇದೆ. ಅದು ಮುಗಿಸಿಕೊಂಡು ಬಂದು ಭೇಟಿ ಮಾಡುತ್ತೇನೆ. ದೆಹಲಿಗೆ ಹೋಗಲು ನಾನು ಅಪಾಯ್ಮೆಂಟ್ ಪಡೆದಿರಲಿಲ್ಲ ಎಂದಿದ್ದಾರೆ.
ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ, ಕೊಲೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ
ಬೆಂಗಳೂರು; ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರದ್ದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ ಎಂದಿದ್ದಾರೆ. ಕಾನೂನು ಸಲಹೆಗಾರರನ್ನ ಭೇಟಿ ಮಾಡುತ್ತೇನೆ. ಭೇಟಿ ಮಾಡಿ ಮುಂದೆ ಚರ್ಚೆ ಮಾಡುತ್ತೆವೆ ಎಂದಿದ್ದಾರೆ.
ನಾಳೆಯಿಂದ ಈ ಭ್ರಷ್ಟ, ಜನವಿರೋಧಿ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭವಾಗುತ್ತದೆ. ನಾಳೆ ಮೈಸೂರಿನಲ್ಲಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನ ಜನಾಕ್ರೋಶ ಯಾತ್ರೆ ಆರಂಭಿಸ್ತೇವೆ. ಎಲ್ಲ ಜಿಲ್ಲಾ ಕೇಂದ್ರಗಳಿಗೂ ನಮ್ಮ ಈ ಜನಾಕ್ರೋಶ ಯಾತ್ರೆ ತಲುಪಲಿದೆ. ಸರ್ಕಾರದ ಧೋರಣೆ, ನೀತಿ ವಿರುದ್ಧ ಜನಾಕ್ರೋಶ ಮಾಡ್ತೇವೆ ಎಂದ್ರು. ಇನ್ನು ವಿನಯ್ ಸೋಮಯ್ಯ ಪ್ರಕರಣದಲ್ಲಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗದ ವಿಚಾರದ ಬಗ್ಗೆ ಮಾತನಾಡಿದ ಅವರು ಅಧಿಕಾರದ ದರ್ಪದಿಂದ ಕಾಂಗ್ತೆಸ್‌ನವ್ರು ಹೇಳಿಕೆ ಕೊಡ್ತಿದ್ದಾರೆ. ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ. ಇದರ ಹಿಂದೆ ಯಾರೆಲ್ಲ ದುಷ್ಟ ಶಕ್ತಿಗಳು ಇವೆ ಅಂತ ಎಲ್ರಿಗೂ ಗೊತ್ತಿದೆ ಅವರಿಗೆ ಶಿಕ್ಷೆ ಆಗಲೇಬೇಕು.ನಾವು ಕಾನೂನು ಹೋರಾಟ ಮಾಡ್ತೇವೆ. ಇವತ್ತು ಕಾನೂನು ತಜ್ಞರ ಜತೆ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತೇನೆ ಎಂದರು.
ಸ್ಥಳೀಯ ಶಾಸಕರ ಅಟ್ಟಹಾಸಕ್ಕೆ ನಮ್ಮ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿನಯ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷ ಮೌನಾಚರಣೆ ಮಾಡಿದ್ರು.ಇನ್ನು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಬಗ್ಗೆ ಮಾತನಾಡಿದ ಅವರು ಇದು ಬಹಳ ಶ್ರೇಷ್ಠವಾದ, ಶುಭ ದಿನ, ಪವಿತ್ರ ದಿನ. ತ್ಯಾಗ ಬಲಿದಾನ, ಯುವ ಪೀಳಿಗೆ ಪಕ್ಷ ನಡೆಸುವ ಬಗ್ಗೆ ಹಲವರು ಮುಂದಿಟ್ಟಿದ್ದಾರೆ. ಬಿಜೆಪಿ ಅಂದರೆ ದೇಶದಲ್ಲಿ ಕೋಟಿ ಕೋಟಿ ಯುವಕರಲ್ಲಿ ದೇಶ ಭಕ್ತಿ ಪ್ರೇಮ ಮೂಡಿಸುವ ಕೆಲಸ ಮಾಡುತ್ತೆ. ಭಾರತ್ ಮಾತಾಕಿ ಜೈ ಅಂತ ಕೂಗುವವರಿದ್ದಾರೆ ಅಂದರೆ ಅದು ಭಾರತೀಯ ಜನತಾ ಪಕ್ಷದಲ್ಲಿ. ಇಂದು ರಾಷ್ಟ್ರೀಯ ದಿನ, ನಡ್ಡಾ ಅಪೇಕ್ಷೆಯಂತೆ ಹಳ್ಳಿಯಿನಮದ ಡೆಲ್ಲಿಯವರಿಗಡ ಧ್ವಜ ಹಾರಿಸುವ ಮೂಲಕ ಸಂಸ್ಥಾಪನ ಆಚರಣೆ ಮಾಡಿದ್ದಾರೆ ಎಂದರು.
ಶಾಮ್ ಪ್ರಕಾಶ್ ಮುಖರ್ಜಿ ಅವರ ಸ್ಲೋಗನ್ ಮೂಲಕ ಸ್ಮರಿಸಿದ ಬಿವೈವಿ ಸ್ವಾತಂತ್ರ್ಯ ಬಂದ್ಮೇಲೆ ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದು ಬಿಜೆಪಿ ಪಕ್ಷ. ಮುಂಬೈ ನಲ್ಲಿ ನಡೆದ ರಾಷ್ಟ್ರೀಯ ಕಾರಕಾರಿಣಿ ಸಭೆಯಲ್ಲಿ ಮೋದಿ ಅವರು ಅಧಿಕಾರ ತೆಗೆದುಕೊಳ್ಳಬೇಕು ಅಂತ ಘೊಷಣೆ ಮಾಡಿದ್ದು ಬಿ ಎಸ್ ವೈ ಎಂದರು. 370, ರಾಮಮಂದಿರ ನಿರ್ಮಾಣ ಬಿಜೆಪಿಯ ಕನಸಾಗಿತ್ತು. ಭಾರತದಲ್ಲಿ ಭವಿಷ್ಯ ಇಲ್ಲ ಅಂತ ಯುವಜನತೆ ಮಾತನಾಡುತ್ತಿತ್ತು. ಯುವಕರು ಬೇರೆ ದೇಶಗಳಿಗೆ ಹೋಗಬೇಕಾದಾಗ ತಲೆತಗ್ಗಿಸಿ ಹೋಗಬೇಕಿತ್ತು. ಭಾರತದ ಪ್ರಧಾನಮಂತ್ರಿ ಅಂತ ಮನಮೋಹನ ಸಿಂಗ್ ಅವರು ಹೇಳಿಕೊಳ್ಳಲು ಆಗ್ತಾ ಇರಲಿಲ್ಲ. ಈಗ ಆ ವಾತಾವರಣ ಬದಲಾಯಿಸಿದ್ದಾರೆ ಮೋದಿ ಜೀ. ಬಿಜೆಪಿಯನ್ನ ಮುಸಲ್ಮಾನರ ವಿರೋಧಿ ಅಂತ ಕಾಂಗ್ರೆಸ್ ಕಾಣುತ್ತಿದೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ನ್ಯಾಯ ಕೂಡಿಸಬೇಕು ಅಂತ ಕಾಂಗ್ರೆಸ್ ಗೆ ಎಂದೂ ಅನ್ನಿಸಿಲ್ಲ. ಮೋದಿ ಸರ್ಕಾರ ತ್ರಿಬಲ್ ತಲಾಕ್ ನ ಕಿತ್ತು ಹಾಕಿದೆ. ಮೊನ್ನೆ ವಕ್ಫ್ ಬಿಲ್ ಮಂಡನೆ ಆಗಿದೆ.2047ನೇ ಇಸವಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಆಗ್ಬೇಕು.ಅಮೇರಿಕಾ, ಅರಬ್ ದೇಶಗಳಿಗೆ ಹೋದರೆ ಮೋದಿ ಅವರಿಗೆ ರಾಜಾತಿಥ್ಯ ಸಿಗ್ತಿದೆ ಎಂದರು.