ಮನೆ Latest News ನಮ್ಮ ಸರ್ಕಾರದಲ್ಲಿ ಯಾವುದೇ ಹಣಕ್ಕೆ ಸಮ್ಯಸೆಯಿಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ನಮ್ಮ ಸರ್ಕಾರದಲ್ಲಿ ಯಾವುದೇ ಹಣಕ್ಕೆ ಸಮ್ಯಸೆಯಿಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ನಮ್ಮ ಸರ್ಕಾರದಲ್ಲಿ ಯಾವುದೇ ಹಣಕ್ಕೆ ಸಮ್ಯಸೆಯಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈಬಗ್ಗೆ ಮಾತನಾಡಿದ ಅವರು ಆರ್ಥಿಕ ವರ್ಷದ ಕೊನೆಯ ತಿಂಗಳು.ನಮ್ಮ ಸರ್ಕಾರದಲ್ಲಿ ಯಾವುದೇ ಹಣಕ್ಕೆ ಸಮ್ಯಸೆಯಿಲ್ಲ. 2-3 ತಿಂಗಳು ವಿಳಂಬ ಆಗಿದೆ, ಎಲ್ಲ ಒಂದೇ ಸರಿ‌ ಕಲೆಕ್ಷನ್ ಆಗಲ್ಲ.ಅನ್ನಭಾಗ್ಯ ಅಕ್ಕಿ ಎಂದೂ ನಿಂತಿಲ್ಲ. ಹಣ ಸ್ವಲ್ಪ ವಿಳಂಬವಾಗಿರಬಹುದು.ಈ ತಿಂಗಳು ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ರಿಲೀಸ್ ಆಗುತ್ತೆ .ಎರಡ್ಮೂರು ತಿಂಗಳದ್ದು ರಿಲೀಸ್ ಆಗಬೇಕು, ಈ ತಿಂಗಳು ಆಗುತ್ತೆ. ಜನಕ್ಕೆ‌ ನಮ್ಮ ಮೇಲೆ ನಂಬಿಕೆ ವಿಶ್ವಾಸವಿದೆ.ವಿರೋಧ ಪಕ್ಷ ಹಾಗೂ ಮಾಧ್ಯಮಗಳು ಮಾತ್ರ ಮಾತಾಡ್ತಿದ್ದಾರೆ.ಈ ತಿಂಗಳು ಹಣ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.

ರಾಜಸ್ತಾನ್ ನ ಆಲ್ ಇಂಡಿಯಾ ನೀರಾವರಿ ಮಂತ್ರಿಗಳ ಸಭೆಗೆ ಹೋಗ್ತಿದ್ದೀನಿ. ನಮ್ಮ ರಾಜ್ಯಕ್ಕೆ‌ ನೀರಾವರಿ ವಿಚಾರಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಬೇಕಿದೆ.ಹಲವು ಯೋಜನೆಗಳನ್ನ ತಯಾರು ಮಾಡಿ ಕಳಿಸಿಕೊಟ್ಟಿದೆ.ಈಗಾಗಲೇ ನಮ್ಮ ಆಂದ್ರ, ತೆಲಂಗಾಣ ಮುಖ್ಯಂತ್ರಿಗಳ ಬಳಿ ಮಾತನಾಡಿದ್ದೇನೆ.ಮೇಕೆದಾಟು, ಮಹದಾಯಿ ಯೋಜನೆಗಳಲ್ಲಿ ಹಣ ಸಿಕ್ಕಿಲ್ಲ. ಎಲ್ಲಾ ಡ್ಯಾಂಗಳನ್ನ ದುರಸ್ಥಿ ಮಾಡಬೇಕಿದೆ.ನವಿಲೆಯಿಂದ 25 ರಿಂದ 30 ಟಿಎಂಸಿ ವೇಸ್ಟ್ ಆಗ್ತಿದೆ ಎಂದರು.

ರಾಜಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ‌ ಪ್ರೀತಿ ಇದೆ ಅದಕ್ಕೆ ಮಾತನಾಡ್ತಾರೆ: ಡಿ.ಕೆ.ಸುರೇಶ್ ಹೇಳಿಕೆ

ರಾಜಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ‌ ಪ್ರೀತಿ ಇದೆ ಅದಕ್ಕೆ ಮಾತನಾಡ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಡಿ ಕೆ ಶಿವಕುಮಾರ್ ಅವರ ವಿರುದ್ಧ ಸಹಕಾರ ಸಚಿವ ಕೆ ಎನ್ ರಾಜಣ್ಣ ನೀಡಿರುವ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಡಿ ಕೆ ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಎಲ್ಲರಿಗೂ ಇದೆ. ರಾಜಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ‌ ಪ್ರೀತಿ ಇದೆ ಅದಕ್ಕೆ ಮಾತನಾಡ್ತಾರೆ. ಕಲ್ಲಿಗೆ ಏಟು ಬಿದ್ದಾಗಲೆ ಶಿಲೆ ಆಗುವುದು ತಟ್ಟುತ್ತಿದ್ದಾರೆ ತಟ್ಟಲಿ.ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಇದೆಯಾ ಇಲ್ವಾ ಅಂತಾಹೈಕಮಾಂಡ್ ತೀರ್ಮಾನ ಮಾಡುತ್ತೆ.ಹೀಗೆ ಬಹಿರಂಗವಾಗಿ ಮಾತನಾಡುವುದರಿಂದ ಡ್ಯಾಮೇಜ್ ಆಗುತ್ತೋ ಇಲ್ವೋ ಅನ್ನೋದನ್ನ ಸಿಎಂ ರನ್ನ ಕೇಳಿ, ಎಐಸಿಸಿ ಅಧ್ಯಕ್ಷರನ್ನು ಕೇಳಿ ರಾಜ್ಯ ಉಸ್ತುವಾರಿಯನ್ನು ಕೇಳಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಯಾರಿಗಾದರೂ ಒಳ್ಳೆಯದಾಗಬೇಕು ಅಂದ್ರೆ ಸಾಕಷ್ಟು ಜನ ಆಶೀರ್ವಾದ ಬೇಕು.ಆಶೀರ್ವಾದ ಮಾಡ್ತಿದಾರೆ ಪ್ರಸಾದ ಕೊಡ್ತಿದಾರೆ.ಪ್ರಸಾದ ಜಾಸ್ತಿ ಆದರೂ ಹೊಟ್ಟೆ ನೋವು ಬರಲ್ಲ ನಾವು ಹಳ್ಳಿಯಿಂದ ಬಂದವರು.ಪವರ್ ಶೇರಿಂಗ್ ಬಗ್ಗೆ ನನಗೆ ಏನು ಮಾಹಿತಿ ಇಲ್ಲ ನಾನು ಸಾಮಾನ್ಯ ಕಾರ್ಯಕರ್ತ.ಅಧಿಕಾರ ಹಂಚಿಕೆ ಬಗ್ಗೆ ಈಗ ಚರ್ಚೆ ಯಾಕೆ? .ಕುರ್ಚಿ ಖಾಲಿ ಇಲ್ಲ.ಚರ್ಚೆ ಹುಟ್ಟು ಹಾಕಿದವರು ಯಾರು..?ಕೆಎಂ ಎಫ್ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೆ ಹುದ್ದೆಯ ಆಕಾಂಕ್ಷಿ ನಾನಲ್ಲ ಜನ ನನ್ನನ್ನ ಸೋಲಿಸಿದ್ದಾರೆ ರೆಸ್ಟ್ ಮಾಡ್ತಿದಿನಿ ಎಂದರು.