ಬೆಂಗಳೂರು; ಸರ್ಕಾರದಲ್ಲಿ ಹಣ ಇಲ್ಲ, ಇದಕ್ಕೆ ಆತ್ಮಹತ್ಯೆಗಳೇ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸರ್ಕಾರದಲ್ಲಿ ಸಂಬಳ ಕೊಡ್ತಾ ಇಲ್ಲ, ಲೈಬ್ರರಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಹಣ ಇಲ್ಲ, ಇದಕ್ಕೆ ಆತ್ಮಹತ್ಯೆಗಳೇ ಸಾಕ್ಷಿ. ಸಿದ್ದರಾಮಯ್ಯ ಬೇಕಾದಷ್ಟು ದುಡ್ಡಿದೆ ಅಂತ ಬುರುಡೆ ಬಿಡ್ತಾರೆ. ಶ್ವೇತಪತ್ರ ಹೊರಡಿಸಿ, ನಿಮ್ಮ ಸಾಲ, ಹಿಂದಿನ ಸಾಲದ ಬಗ್ಗೆ ಮಾಹಿತಿ ಕೊಡಿ. ಯಾವ ಯಾವ ಸಿಎಂ ಎಷ್ಟು ಸಾಲ ಮಾಡಿದ್ದಾರೆ ಹೇಳಲಿ. ಧೈರ್ಯ ತಾಕತ್ ಇದ್ರೆ ಬಿಡುಗಡೆ ಮಾಡಲಿ ಎಂದು ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಕಿರಣ್ ಮಜುಂದಾರ್ ಷಾ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಅವಧಿಯಲ್ಲೂ ಮಜುಂದಾರ್, ಪೈ ಟ್ವೀಟ್ ಮಾಡಿದ್ದಾರೆ. ಒಂದೇ ತಿಂಗಳಿನಲ್ಲಿ ರಸ್ತೆ ಗುಂಡಿ ಮುಚ್ಚಿದ್ವಿ. ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಹಿಂದೆ ಏನು ಟೆಂಟರ್ ಆಗಿತ್ತು ಅದೇ ನಡೀತಿರೋದು ಈಗ. ನಾವು ನೂರು ಮೇಲ್ಸೇತುವೆ ಕಟ್ಟಿದ್ದೇವೆ ನೀವು ಕಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
15 ರಸ್ತೆ ಸರಿಪಡಿಸುವ ವಿಚಾರವಾಗಿ ಮಜುಂದಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸರ್ಕಾರ ಸತ್ತಾಗ, ಭಿಕ್ಷೆ ಬೇಡುವ ಪರಿಸ್ಥಿತಿ ಬಂದಾಗ ಜನಗಳೇ ಆಗ ಮಾಡುವ ಪರಿಪಾಟು ಬಂದಿದೆ. ಎಲ್ಲಾ ಸಾರ್ವಜನಿಕ ಸಂಘ ಸಂಸ್ಥೆಗಳು ರಸ್ತೆ ಗುಂಡಿ ಸರಿಪಡಿಸಬೇಕು. ಸರ್ಕಾರ ಪಾಪರ್ ಆಗಿದೆ ಎಂದ ಅವರು ಗುತ್ತಿಗೆದಾರರ ಬಿಲ್ ಪಾವತಿ ವಿಚಾರದ ಬಗ್ಗೆ ಮಾತನಾಡಿ ನೀವು 15 ಸಾವಿರ ಕೋಟಿ ಬಿಟ್ಟು ಹೋಗಿದ್ರಿ. ನಾವಲ್ವಾ ಅದನ್ನ ಕ್ಲಿಯರ್ ಮಾಡಿದ್ದು. ನಿಮ್ಮ ಕಾಮಗಾರಿಯ ಸಾಲ ನಾವು ತೀರಿಸಿದ್ದೇವೆ. ಅದು ರೊಟೀನ್ ವಿಚಾರ. ಎತ್ತಿನಹೊಳೆ ಬಿಜೆಪಿ ಮಾಡಿದ್ದು. ಪಾಪರ್ ಆಗಿದೆ, ಗುತ್ತಿಗೆದಾರರಿಗೆ ಹಣ ಕೊಡೋಕೆ ಆಗಲ್ಲ. ಜನವರಿಯಲ್ಲಿ ಬಿಡುಗಡೆ ಮಾಡೋದು ಅಂತ ಹೇಳಿದ್ದಾರೆ. 2029ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದು ಸಾಧ್ಯಾನೇ ಇಲ್ಲ ಎಂದಿದ್ದಾರೆ.
ನಿನ್ನೆ ಆರ್.ಅಶೋಕ್ ನಿವಾಸ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಂಬಳ ಕಟ್ ಮಾಡ್ತಿದ್ದಾರೆ, ಟಾರ್ಚರ್ ಮಾಡ್ತಿದ್ದಾರೆಂದು ಹೇಳಿದ್ರು. ನಾನು, ಹಿಂದು ಒಕ್ಕಲಿಗ ಅಂತ ಮಾಹಿತಿ ಕೊಟ್ಟಿದ್ದೇನೆ. ಎಂಚು, ಬಾಣಲಿ, ಚೆನಕೆ, ಪಾತ್ರೆ ಎಷ್ಟಿ ಅಂತ ಎಲ್ಲ ಕೇಳಿದ್ರು. ನನ್ನ ಜಾತಿ, ಧರ್ಮ, ಹೆಸರು, ವಿಳಾಸ ಕೊಟ್ಟಿದ್ದೇನೆ. ಆಧಾರ್ ಕೊಡದಿದ್ದರೆ ಅಪ್ಲೋಡ್ ಆಗಲ್ಲ ಅಂದ್ರು ಕೊಟ್ಟಿ. ಈ ಸಮೀಕ್ಷೆ ಉಢಾಫೆ. ಸಿದ್ದರಾಮಯ್ಯ ಔಟ್ ಗೋಯಿಂಗ್ ಎಂದು ತಿಳಿಸಿದ್ದಾರೆ.
ಸುಧಾಮೂರ್ತಿಗಳು ಬೃಹಸ್ಪತಿಗಲಾ ಅಂತ ಹೇಳ್ತಾರೆ. ಹಾಗಾದ್ರೆ ಕೋರ್ಟ್ ಗೆ ಅವಮಾನ ಮಾಡ್ತಿದ್ದೀರ.ಇಷ್ಟು ಇದ್ರೆ ಭಾಗವಹಿಸಿ ಅಂತ ಕೋರ್ಟ್ ಹೇಳಿದೆ.ಜನರಿಗೆ ಹೀನಾಮಾನವಾಗಿ ನಿಂಧನೆ ಮಾಡ್ತಿರೋದು ಎಷ್ಟು ಸರಿ? .ಭಾಗಿಯಾಗದಿದ್ದರೆ ಅಪಾಯ ಇಲ್ಲ, ಉಪಯೋಗವೂ ಇಲ್ಲ ಅಂದಿದ್ದಾರೆ. ರಾಜ್ಯಕ್ಕೆ ಹೆಚ್ಚು ಆದಾಯ ಬರದತಿರೋದು ಇನ್ಫೋಸಿಸ್ ಸಂಸ್ಥೆಯಿಂದ. ಅವರು ಆಂದ್ರಗೆ ಹೊರಟು ಹೋದ್ರೆ ನಮ್ಮ ಕತೆ ಏನು?. ಈಗಲೇ ಭಿಕ್ಷಾಪಾತ್ರೆ ಹಿಡಿದಿದ್ದೀರಿ. ನಿಮ್ಮ ತೆರಿಗೆ ಬೆಂಗಳೂರಿನಲ್ಲೇ ಖರ್ಚು ಮಾಡಿ ಅಂತಾರೆ ಜನ, ಮಾಡ್ತಿದ್ದೀರಾ?. ನಮ್ಮ ತೆರಿಗೆ, ನಮ್ಮ ಹಕ್ಕು ಅಂತೀರಲ್ಲ ಆಯಾ ಭಾಗದ ತೆರಿಗೆ ಅಲ್ಲೇ ಖರ್ಚು ಮಾಡ್ತಿದ್ದೀರಾ?ಎಂದು ಕೇಳಿದ್ದಾರೆ.
ಸುಧಾಮೂರ್ತಿಗೆ ಸಿಎಂ ಬೃಹಸ್ಪತಿ ಎಂಬ ಪದ ಬಳಕೆ ವಿಚಾರದ ಬಗ್ಗೆ ಮಾತನಾಡಿ ನಿಮ್ಮ ವಿದ್ಯಾರ್ಹತೆ ಮುಂದಿದೆ. ನೀವಾ, ಇನ್ಫೋಸಿಸ್ ಅವರಾ ಬೃಹಸ್ಪತೆ ಅಂತ ಜನರಿಗೆ ಗೊತ್ತಾಗುತ್ತೆ. ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ 2 ಸಾವಿರ ಕೋಟಿ ಕೊಟ್ಟಿದ್ದಾರೆ. CSR ಬಿಟ್ಟು ಹೆಚ್ಚುವರಿ ಹಣ ಕೊಟ್ಟಿದ್ದಾರೆ, ನೀವೆಲ್ಲಿ ಕೊಟ್ಟಿದ್ದೀರಿ ಎಂದಿದ್ದಾರೆ.











