ಮನೆ Latest News ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಕ್ಷಮಿಸುವ ಮಾತೇ ಇಲ್ಲ ; ಸದನದಲ್ಲಿ ಗೃಹ ಸಚಿವ...

ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಕ್ಷಮಿಸುವ ಮಾತೇ ಇಲ್ಲ ; ಸದನದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ

0

ಬೆಳಗಾವಿ; ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಕ್ಷಮಿಸುವ ಮಾತೇ ಇಲ್ಲ ಎಂದು ಸದನದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಪಂಚಮಸಾಲಿಗಳ ಹೋರಾಟಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾನು ಮೊದಲೇ ಸಮರ್ಥ ಉತ್ತರ ಕೊಟ್ಟಿದ್ದೇನೆ. 5 ಸಾವಿರ ಟ್ರ್ಯಾಕ್ಟರ್ ಗಳಲ್ಲಿ ಬರ್ತೇವೆ ಅಂದ್ರು. ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ. ಕ್ರೂಸರ್ ಗಳಲ್ಲಿ ಬನ್ನಿ ಎಂದು ಹೇಳಿದ್ದೆವು. 15ಕ್ಕೆ ಹೋಗೋಣ ಎಂದಿದ್ದರೆ ಈ ಸನ್ನಿವೇಶ ಬರ್ತಿರಲಿಲ್ಲ. ಅದಕ್ಕೆ ಬೇಕಾದ ಪೂಟೇಜ್ ನಾನು ಕೊಡ್ತೇನೆ. ಪೊಲೀಸರು ಅವರನ್ನ ಮುಟ್ಟೋದಿಲ್ಲ. ಸ್ವಾಮೀಜಿ ನಡೆಯಿರಿ ಹೊಗೋಣ ಅಂದ್ರು. ಎಲ್ಲರೂ ಮುನ್ನುಗ್ಗಿದ್ರು. ಕಲ್ಲು ಹೊಡೆದು ಚಪ್ಪಲಿ ಎಸೆದ್ರು. ಇದರ ಕಂಪ್ಲೀಟ್ ವಿಡಿಯೋ ಇದೆ. ಆಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಎಂದು ಗೃಹ ಸಚಿವ ಪರಮೇಶ್ವರ್ ಸದನದಲ್ಲಿ ವಿವರಣೆ ಕೊಟ್ಟಿದ್ದಾರೆ.

ಈ ವೇಳೆ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ರು. ಅದಕ್ಕೆ ಉತ್ತರಿಸಿದ ಪರಮೇಶ್ವರ್ ಇದರ ಬಗ್ಗೆ ಯಾವ ತನಿಖೆ ಅಗತ್ಯವಿಲ್ಲ. ಯಾರು ಕಲ್ಲು ಹೊಡೆದ್ರು ಗೊತ್ತಿದೆ. ಯಾರು ಚಪ್ಪಲಿ ಎಸೆದ್ರು ವಿಡಿಯೋ ಇದೆ. ನಾನು ನೋಡದೆ ಯಾವುದನ್ನೂ ಹೇಳಲ್ಲ. ಹಾವೇರಿಯಲ್ಲಿ ಆದ ಘಟನೆ ನೆನಪಿಸಬೇಕಾಗುತ್ತದೆ ಎಂದು ರೈತರ ಗೋಲಿಬಾರ್ ಘಟನೆಯನ್ನು ಪರಮೇಶ್ವರ್ ಪ್ರಸ್ತಾಪಿಸಿದ್ದಾರೆ. ಲಾಠಿಚಾರ್ಜ್ ಅಲ್ಲ ಗೋಲಿಬಾರ್ ಮಾಡಿದ್ರಿ ಎಂದು ಗರಂ ಆಗಿಯೇ ಪರಮೇಶ್ವರ್ ಉತ್ತರಿಸಿದ್ದಾರೆ.

ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಪಕ್ಕಾ. ಯಾರಿಗೂ ನಾವು ಎಸ್ ಕ್ಯೂಸ್ ಕೊಡೋ ಮಾತೇ ಇಲ್ಲ. ಇದನ್ನ ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದು  ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದ್ದು ಸರಿಯಲ್ಲ;  ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

ಬೆಳಗಾವಿ; ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದ್ದು ಸರಿಯಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಆಗಿದೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ. ಇಡೀ ಸಮುದಾಯ ರಾಜ್ಯಾದ್ಯಂತ ಪ್ರತಿಭಟಿಸಿದೆ. ನ್ಯಾಯಾಂತ ತನಿಖೆಗೆ ನಾವು ಅಗ್ರಹಿಸಿದ್ದೆವು. ಸರ್ಕಾರ ಕ್ಷಮೆಯಾಚಿಸುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ ಸರ್ಕಾರ ಯಾವುದನ್ನೂ ‌ಮಾಡಿಲ್ಲ. ಸರ್ಕಾರ ಹಲ್ಲೆ ಮಾಡಿರುವುದನ್ನ ಒಪ್ಪಿಕೊಂಡಂತಾಗಿದೆ. ಲಿಂಗಾಯತ ಸಮುದಾಯದ ಮೇಲೆ ಕೈ ಮಾಡಿರಲಿಲ್ಲ. ಯಾರೂ ಕೈಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗಿದೆ. ಸರ್ಕಾರ ಪೊಲೀಸರ ಮೇಲೆ ಕ್ರಮ ಜರುಗಿಸಿಲ್ಲ. ಆರ್ ಎಸ್ ಎಸ್ ವಿಚಾರ ಸದನದಕ್ಕೆ ತಂದಿದೆ. ಅದನ್ನ ಕಡತದಿಂದ ತೆಗೆಯುವಂತೆ ಹೇಳಿದ್ದೆವು. ಈ ಲಾಠಿ ಚಾರ್ಜ್ ಅನ್ನು ನಾವು ಖಂಡಿಸ್ತೇವೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಬೆಳಗಾವಿ ಸುವರ್ಣ ಸೌಧದ ಎದುರು ಪಂಚಮಸಾಲಿ ಲಿಂಗಾಯತರಿಗೆ 2-A ಪ್ರವರ್ಗಕ್ಕೆ ಸೇರಿಸಬೇಕು ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ್ದು ಸರಿ ಎಂದು ಮುಖ್ಯ ಮಂತ್ರಿಗಳು ಹೇಳಿದ್ದಾರೆ.

ನಾಗಮಂಗಲ ಗಲಭೆ, ಹುಬ್ಬಳ್ಳಿ ಗಲಭೆಯಲ್ಲಿ ಭಾಗವಹಿಸಿದವರ ಮೇಲೂ ಈ ರೀತಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ರಾಜ್ಯದ ಆಸ್ತಿ ಪಾಸ್ತಿಯನ್ನು ಕಾಪಾಡಬಹುದಾಗಿತ್ತು.  ಒಂದು ಕೋಮಿನವರನ್ನು ಉಪ್ಪರಿಗೆ ಮೇಲೆ ಕೂರಿಸಿ ಮತ್ತೊಂದು ಧರ್ಮಕ್ಕೆ ಲಾಠಿ ರುಚಿ ತೋರಿಸುವ ರೋಗಗ್ರಸ್ಥಮನಃಸ್ಥಿತಿ ನಿಮ್ಮದು ಎಂದು ಜನರಿಗೆ ಈಗಾಗಲೇ ತಿಳಿದಿದೆ.

ಪ್ರತಿಭಟನಾಕಾರರ ನೆತ್ತರು ಹೀರಿದ ನಿಮ್ಮ ಸರ್ಕಾರವನ್ನು  ಪಂಚಮಸಾಲಿ ಲಿಂಗಾಯತರು ಎಂದೂ ಕೂಡ ಕ್ಷಮಿಸೋಲ್ಲ. ಬೆಳವಡಿ ಮಲ್ಲಮ್ಮ, ವೀರ ರಾಣಿ ಚೆನ್ನಮ್ಮ ಕುಲದವರು ನಾವು ಎಂಬುದನ್ನು ಮರೆಯದಿರಿ ಎಂದಿದ್ದಾರೆ.