ಮನೆ Latest News ವಿಶೇಷ ಅಧಿವೇಶನದಲ್ಲಿ ನಾಟಕೀಯ ಬೆಳವಣಿಗೆ ಆಗಿದೆ:ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ.

ವಿಶೇಷ ಅಧಿವೇಶನದಲ್ಲಿ ನಾಟಕೀಯ ಬೆಳವಣಿಗೆ ಆಗಿದೆ:ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ.

0

ಮಂಡ್ಯ: ವಿಶೇಷ ಅಧಿವೇಶನದಲ್ಲಿ ನಾಟಕೀಯ ಬೆಳವಣಿಗೆ ಆಗಿದೆ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆಯ ಘಟನೆ ಮೊದಲ ಬಾರಿ ನಡೆದದ್ದಲ್ಲ.ಜೆ‌ಹೆಚ್ ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಆಗಿನ ಘಟನೆ ನೆನಪು ಮಾಡಿಕೊಳ್ಳಬೇಕು.ವಿಧಾನ ಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ.ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ. ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ.ಮನರೇಗಾ ವಿಷ್ಯದಲ್ಲಿ ಕೇಂದ್ರ ಸರ್ಕಾರ ವಿರೋಧಿಸುವುದು ಈ ಸರ್ಕಾರದ ಉದ್ದೇಶ.ಹಾಗಾಗಿ ವಿಶೇಷ ಅಧಿವೇಶನ ಕರೆದಿದ್ದಾರೆ‌.ದಲಿತರ ಪದ ಬಳಸಿ ಇವರ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ‌.ಕಾಂಗ್ರೆಸ್ ಸರ್ಕಾರ SCPTSP ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ.ಎಂದಿದ್ದಾರೆ.

ಈ ಸರ್ಕಾರದಲ್ಲಿ ಹಲವಾರು ಅಕ್ರಮಗಳು ನಡೆದಿದೆ.ಕಾನೂನು ಬಾಹಿರ ನಿರ್ಧಾರಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳುವ ಅವಕಾಶ ಇದ್ರು ಮಾಡಲಿಲ್ಲ.ಬೇರೆ ರಾಜ್ಯದ ರಾಜ್ಯಪಾಲರ ರೀತಿ ನಮ್ಮ ರಾಜ್ಯಪಾಲರು ಸರ್ಕಾರದ ಜೊತೆ ಸಂಘರ್ಷ ಮಾಡಲಿಲ್ಲ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ವಿಶ್ವಾಸದಲ್ಲಿಲ್ಲ..ಕೆಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಾಪಾಸ್ ಹೋಗಿವೆ.ಬೆಳೆ ಬೆಳೆದ ರೈತರನ್ನ ಕಾಪಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಬೆಳೆ ಎಷ್ಟು ಖರೀದಿ ಮಾಡಿದ್ದೀರಾ ಹೇಳಿ?.ಮಾವಿನ ಬೆಲೆ ಕುಸಿದಾಗ ಕೇಂದ್ರ ಸರ್ಕಾರದ ಮುಂದೆ ಹೋಗಿದ್ರು.ನಾನು ಸಿಎಂ ಆಗಿದ್ದಾಗ ಮಾವು ಬೆಲೆ ಕುಸಿದಾಗ ರಾಜ್ಯ ಸರ್ಕಾರದ ದುಡ್ಡು ಕೊಟ್ಟಿದ್ದೆ.ನಿಮ್ಮ ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯಲ್ಲ.ಕೇಂದ್ರದ ಜೊತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಿ.ಮಾತೆತಿದ್ದರೆ ದೊಡ್ಡ ಪ್ರಮಾಣದ ಟ್ಯಾಕ್ಸ್ ಕಟ್ಟುತ್ತಿದ್ದೇವೆ ಅಂತೀರಾ?.ನೀವಲ್ಲ ತೆರಿಗೆ ಕಟ್ಟುವವರು, ಜನರು ಕಟ್ಟುತ್ತಿದ್ದಾರೆ.ರಾಜ್ಯದ ಸಮಸ್ಯೆಗಳಿಗೆ ಸದನದಲ್ಲಿ ಚರ್ಚೆಗಳಾಗಿ‌.ಸರ್ಕಾರದ ನ್ಯೂನತೆಗಳನ್ನ ಮರೆಮಾಚಲು ಈ ಹೈಡ್ರಾಮ ಎಂದು ಆರೋಪಿಸಿದ್ದಾರೆ,