ಮನೆ Latest News ನಾವೆಲ್ಲರೂ ಹೋಗಿ ಕೇಂದ್ರ ಸಚಿವರನ್ನ ಭೇಟಿ ಮಾಡೊಣ ಅಂತಾ ಚರ್ಚೆ ನಡೆಸಲಾಗಿದೆ: ಡಿಸಿಎಂ ಡಿ ಕೆ...

ನಾವೆಲ್ಲರೂ ಹೋಗಿ ಕೇಂದ್ರ ಸಚಿವರನ್ನ ಭೇಟಿ ಮಾಡೊಣ ಅಂತಾ ಚರ್ಚೆ ನಡೆಸಲಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು: ನಾವೆಲ್ಲರೂ ಹೋಗಿ ಕೇಂದ್ರ ಸಚಿವರನ್ನ ಭೇಟಿ ಮಾಡೊಣ ಅಂತಾ ಚರ್ಚೆ ನಡೆಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನೀರಾವರಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಇಂದು‌ ಮಹತ್ವದ ಸಭೆ ಕರೆಯಲಾಗಿತ್ತು. ರಾಜ್ಯದ ವಿಚಾರದಲ್ಲಿ ಸಭೆ ಮಾಡಲಾಯಿತು. ನೀರಾವರಿ ವಿಚಾರದಲ್ಲಿ ಸಭೆ ಕರೆಯಲಾಗಿತ್ತು. ಬಹಳ ವರ್ಷದಿಂದ ಹೋರಾಟಕ್ಕೆ ಪರಿಹಾರ ಹತ್ತಿರ ಬರ್ತಿದೆ. ಮಹದಾಯಿ ಕೃಷ್ಣ ಕಾವೇರಿ ವಿಚಾರದಲ್ಲಿ ಚರ್ಚೆ ಮಾಡಲು ಸಭೆ ಕರೆಯಲಾಗಿತ್ತು.ನಾನು ಹಾಗೂ ಹೆಚ್ ಕೆ ಪಾಟೀಲ್ ಎಮ್ ಬಿ ಪಾಟೀಲ್ ಸೇರಿ ಸಭೆ ಕರೆಯಲಾಗಿತ್ತು. ನಾನು ಕೇಂದ್ರ ಸಚಿವರಾದ ಜೋಶಿ ಸೇರಿದಂತೆ ಹಲವರ ಬಳಿ ಚರ್ಚಿಸಿ ದಿನಾಂಕ ನಿಗದಿ ಮಾಡಿತ್ತು. ಬೊಮ್ಮಾಯಿ ಶೆಟ್ಟರ್ ಸೇರಿದಂತೆ 24 ಸಂಸದರು ಭಾಗಿಯಾಗಿದ್ದರು.ಅವರು ಕೂಡ ಅನೇಕ ಅಭಿಪ್ರಾಯ ತಿಳಿಸಿದ್ದಾರೆ.ರಾಜ್ಯ ಹೇಗೆ ಮುಂದೆ ಹೋಗ್ತಿದೆ ಅಂತಾ ಚರ್ಚೆ ಮಾಡಲಾಯಿತು ಎಂದಿದ್ದಾರೆ.

ಅವರು ಉಪಚುನಾವಣೆ ಘೋಷಣೆ ಆಗಿರುವ ಕಾರಣ ಮತ್ತೊಂದು ದಿನಾಂಕ ನಿಗದಿ ಮಾಡಿ ಅಂತಾ ಹೇಳಿದ್ದಾರೆ. ರೈಲ್ವೆ ವಿಚಾರದಲ್ಲಿ ವೋಟಿಂಗ್ ಇದೆ ಅಂತಾ ಹೋದರು. ಚುನಾವಣೆ ಬಳಿಕ ಮತ್ತೊಂದು ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಸಭೆ ಮುಂದೂಡುದ್ದೇವೆ ಜತೆಗೆ ಪ್ರಾಸ್ತಾವಿಕ ಚರ್ಚೆ ಮಾಡಲಾಯಿತು. ಅವರಿಗೂ ಎಲ್ಲಾ ಮನವರಿಕೆ ಆಗಿದೆ. ಅವರಿಗೆ ಅನುಕೂಲ ಆಗುವ ದಿನಾಂಕವನ್ನ ನಿಗದಿ ಮಾಡಲಾಗುತ್ತದೆ. ನಾವೆಲ್ಲರೂ ಹೋಗಿ ಕೇಂದ್ರ ಸಚಿವರನ್ನ ಭೇಟಿ ಮಾಡೊಣ ಅಂತಾ ಚರ್ಚೆ ನಡೆಸಲಾಗಿದೆ.ಸರ್ವಪಕ್ಷ ಸಭೆಯಲ್ಲಿ ಅಭಿಪ್ರಾಯ ಮೂಡಿದೆ.ಸರ್ವಪಕ್ಷ ನಿಯೋಗ ತೆರಳಲು ಈ ಸಭೆ ನಿರ್ಧಾರ ಆಗಿದೆ.ಕೇಂದ್ರ ಭೇಟಿ ಮಾಡಲು ಸರ್ವಪಕ್ಷ ನಿಯೋಗ ತೆರಳಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.