ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವನ್ನಪ್ಪಿರೋದು ಇದೀಗ ಗೊತ್ತಾಗಿದೆ.ಇನ್ನು ಇದುವರೆಗೂ ಭೀಕರ ದುರಂತಕ್ಕೆ 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನನೂ ಕೂಡ 200 ಕ್ಕೂ ಹೆಚ್ಚು ಮಂದಿಯ ಸುಳಿವು ಲಭ್ಯವಾಗಿಲ್ಲ. ಹೀಗಿರುವಾಗಲೇ ಇದೀಗ ಅತ್ಯಂತ ದುಃಖದ ವಿಚಾರವೊಂದು ಬಯಲಾಗಿದೆ. ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಕೊನೆಯುಸಿರೆಳೆದಿರೋದು ಗೊತ್ತಾಗಿದೆ.
ನೀತು ಜೊಜೊ ಎಂಬ ಮಹಿಳೆ ವಯನಾಡ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತ ನಡೆದ ದಿನ ಅಂದರೆ ಜುಲೈ 30ರಂದು ಚೂರಲ್ ಮಲ ಗ್ರಾಮದಲ್ಲಿ ಭೂಕುಸಿತ ಆರಂಭವಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಡಾ. ಮೂಪೆನ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸಿ ಎಂದು ರಾತ್ರಿ 1-15ರ ಸುಮಾರಿಗೆ ಆಕೆ ಕೇಳಿಕೊಂಡಿದ್ದಾರೆ.
ಕೂಡಲೇ ಅವರು ರಕ್ಷಣಾ ತಂಡಗಳಿಗೆ ಅವರು ಮಾಹಿತಿ ನೀಡಿ ನೆರವಿಗಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ದುರಂತ ಅಂದರೆ ಅಷ್ಟರಲ್ಲಿ ಒಂದಷ್ಟು ಜೀವ ಉಳಿಸಲು ಸಹಕರಿಸಿದ ನೀತು ಜೊಜೊ ಅವರು ಉಸಿರು ಚೆಲ್ಲಿದ್ದರು. ತಾವು ಅಪಾಯದಲ್ಲಿದ್ದರು ನೀತು ಜೊಜೊ ಮನೆಯಲ್ಲಿದ್ದ ತನ್ನ ಪತಿ, ಅತ್ತೆ ಹಾಗೂ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.ಅಷ್ಟರಲ್ಲಿ ಮನೆ ಕುಸಿದು ಬಿದ್ದಿದೆ. ಚೂರಲ್ಮಾಲಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಹೋಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ನೀತು ಅವರ ಮನೆಯನ್ನು ಸಕಾಲದಲ್ಲಿ ತಲುಪಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ನೀತು ಸಾವನ್ನಪ್ಪಿದ್ದರು. ನೀತು ಅವರ ಸಮಯಪ್ರಜ್ಞೆಯಿಂದ ಪತಿ ಜೊಜೊ, ಹಸುಗೂಸು ಹಾಗೂ ಅತ್ತೆ ಪಾರಾಗಿದ್ದಾರೆ. ಮೊನ್ನೆ ನೀತು ಮೃತದೇಹ ಪತ್ತೆಯಾಗಿದೆ. ಇನ್ನು ನೀತು ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಒಟ್ಟು ನಾಲ್ಕು ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಹಾಯಕ್ಕಾಗಿ ನೀತು ತಮ್ಮ ಸಹೋದ್ಯೋಗಿ ಬಳಿ ಮನವಿ ಮಾಡುತ್ತಿರುವ ಆಡಿಯೋ ಇದೀಗ ವೈರಲ್ ಆಗಿದೆ.
ಮಾನವೀಯತೆ ಮರೆತ ಜನ; ವಯನಾಡು ದುರಂತದಲ್ಲಿ ಸರ್ವಸ್ವವನ್ನು ಕಳೆದುಕೊಂಡವರಿಗೆ ಈಗ ಕಳ್ಳರ ಕಾಟ
ವಯನಾಡ್: ಊಹಿಸಲಾಗದ ಜಲ ಸ್ಫೋಟಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದೆ. ಪ್ರವಾಸಿಗರ ಪಾಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಸ್ಮಶಾನವಾಗಿ ಬದಲಾಗಿದೆ. ಹುಡುಕಿದಲ್ಲೆಲ್ಲಾ ಹೆಣಗಳೇ ಪತ್ತೆಯಾಗುತ್ತಿವೆ.200ಕ್ಕೂ ಹೆಚ್ಚು ಜನ ಇದುವರೆಗೂ ಪತ್ತೆಯಾಗಿಲ್ಲ. ಇಡೀ ವಿಶ್ವವೇ ವಯನಾಡಿನ ಜನರಿಗಾಗಿ ಮರಗುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಮಾನವೀಯತೆಯನ್ನೇ ಮರೆತ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ.
ಚೂರಲ್ಮಾಲ ಹಾಗೂ ಮುಂಡಕೈ ಗ್ರಾಮಗಳು ಭೂಕುಸಿತಕ್ಕೆ ಅಕ್ಷರಶಃ ಸ್ಮಶಾನಗಳಾದ್ರೆ ಭೂಕುಸಿತದ ಆತಂಕದಲ್ಲಿದ್ದ ಒಂದಷ್ಟು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿದ್ದಾರೆ. ಮನೆ ಮಠ ಎಲ್ಲವನ್ನೂ ಬಿಟ್ಟು ಬಂದಿರುವ ಅವರು ಸದ್ಯ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ಕಳ್ಳರು ಗ್ರಾಮಗಳಲ್ಲಿರು ಅವರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ತಂಗಿರುವ ರೆಸಾರ್ಟ್ ಗಳಲ್ಲೂ ಕಳ್ಳತನವಾಗುತ್ತಿದ್ದು, ಗ್ರಾಮದಲ್ಲಿರುವ ನಮ್ಮ ಮನೆಗಳಿಗೆ ಹೋಗಿ ನೋಡಿದಾಗ ಅಲ್ಲಿ ಬಾಗಿಲು ಮುರಿದು ಕಳ್ಳತನ ಮಾಡಿರೋದು ನಮಗೆ ಗೊತ್ತಾಗಿದೆ ಅಂತಾ ಅವರೆಲ್ಲಾ ಹೇಳಿದ್ದಾರೆ. ಹಾಗಾಗಿ ಗ್ರಾಮಗಳಿಗೆ ಅಪರಿಚರಿತರಿಗೆ ಬರೋದಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.