ಮನೆ Latest News ಇಬ್ಬರು ವ್ಯಕ್ತಿಗಳಿಂದ‌ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗ್ತಿದೆ; ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ

ಇಬ್ಬರು ವ್ಯಕ್ತಿಗಳಿಂದ‌ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗ್ತಿದೆ; ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ

0

ಬೆಂಗಳೂರು; ಇಬ್ಬರ ವ್ಯಕ್ತಿಗಳಿಂದ‌ ಪಕ್ಷದ ವರ್ಚಸ್ಸಿಗೆ ಧಕ್ಕೆ ಅಗ್ತಿದೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಬ್ಬರ ವ್ಯಕ್ತಿಗಳಿಂದ‌ ಪಕ್ಷದ ವರ್ಚಸ್ಸಿಗೆ ಧಕ್ಕೆ ಅಗ್ತಿದೆ. ಮೂರು ಬಿಟ್ಟು ಬೀದಿಯಲ್ಲಿ‌ ನಿಂತಿದ್ದಾರೆ. ಅವರಿಗೆ ಬಿಜೆಪಿ ಸಂಸ್ಕೃತಿ ಇಲ್ಲ. ಕೆಲವರು ಉಚ್ಚಾಟನೆಯಾಗಿ ಬಂದಿದ್ದಾರೆ ಹೊಸದಾಗಿ ಬಂದಿದ್ದಾರೆ. ಅವರಿಗೆ ಪಕ್ಷದ ಮರ್ಯಾದಿ ಹೋದ್ರು ಪರವಾಗಿಲ್ಲಾ ಅವರು‌ ಫ್ರಂಟ್ ಲೈನ್ ಗೆ ಬರಬೇಕು. ನಾವೆಲ್ಲಾ ಪಕ್ಷದ ಅದ್ಯಕ್ಷರ ಚಕಾರ ಎತ್ತಿಲ್ಲ.30 ವರ್ಷಗಳಿಂದ ರಾಜ್ಯಾಧ್ಯಕ್ಷರ ಚುನಾವಣೆ ನಡೆದಿಲ್ಲ. ವಿಜಯೇಂದ್ರ‌ ಅವರನ್ನ ನೇಮಕ‌ ಮಾಡಿದ್ದು ಪ್ರಭಾವದಿಂದಲ್ಲ. ವಕೀಲ ವೃತ್ತಿ ಬಿಟ್ಟು, ಪಕ್ಷದ ಸಂಘಟನೆಯಲಿ ೧೫ ವರ್ಷದಿಂದ ತೊಡಗಿಸಿಕೊಂಡಿದ್ದಾರೆ. ಅನೇಕ ಪ್ರಾಣಿಗಳು ಬೀದಿಯಲ್ಲಿ ಹೋಗ್ತಾಯಿರುತ್ತವೆ ಎಂದಿದ್ದಾರೆ.

ಕೆಲವು ಶಬ್ದವನ್ನ ಮಾಡ್ತಾವೆ ಅದಕ್ಕೆ ಏನು ಮಾಡೊಕೆ ಆಗೊಲ್ಲ. ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ಸವಾಲು ಹಾಕಬೇಕು ಅವರು. ನಿನ್ನ ತಾಕತ್ತು ತೋರಿಸಬೇಕಾಗಿರೋದು ಎಲ್ಲಿ. ಯಾರ ಮನೆ ಮುಂದೆ ಯಾರು ಬೇಕಾದ್ರು ಓಡಾಡಬಹುದು. ಶಾಸಕರಾಗಿ ಮಂತ್ರಿಗಳಾಗಿದ್ದವರು ಅವರು ಮಾತಾಡೊದು ಸರಿಯಲ್ಲ. ಕೀಳುಮಟ್ಟದ ರಾಜಕಾರಣಿಗಳು ಮಾತ್ರ ಹೀಗೆ ಮಾತಾಡ್ತಾರೆ. ಪ್ರಾಣಿಗಳಲ್ಲ ನಾವು ಮನುಷ್ಯರು. ಕರ್ನಾಟಕದಲ್ಲಿ ೩೯ ಜಿಲ್ಲೆಗಳಿವೆ, ಅದರ ಅಧ್ಯಕ್ಷರು. ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಪರಿಷತ್ ಸದಸ್ಯರನ್ನ ನೇಮಕ ಮಾಡ್ತಿವಿ. ಇವರು ಓಟು ಹಾಕಿ ಗೆಲ್ಲಿಸಬೇಕು.೭೧೧ ಜನ ಮತದಾರರು ಇದ್ದಾರೆ ಅವರನ್ನ ಹೋಗಿ ಕೇಳಿ. ವಿಜಯೇಂದ್ರ‌ ಮನೆ ಮುಂದೆ ಬಂದ್ರೆ ಓಟು ಬರ್ತಾವಾ. ಬಿಜೆಪಿಯನ್ನ ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದಾರೆ.ಕಿರಾಚಿಡುಕೊಂಡು ಹೋದ್ರೆ ಮೆಂಟಲ್ ಆಸ್ಪತ್ರೆಗೆ ಸೇರಿಸಿ ಅಂತಾರೆ. ಹುಚ್ಚಾಟ ಕೆಲಸವಾಗಿದೆ ಇದು. ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು. ಹೈಕಮಾಂಡ್ ನ ನಾವು ಯಾವತ್ತು ಟೀಕೆ ಮಾಡೊಲ್ಲ. ಇವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಸ್ಪರ್ಧೆ ಮಾಡಲಿ ಎಷ್ಟು ಓಟು ಬರುತ್ತೆ ನೋಡೋಣ.ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಆಕ್ಷನ್ ಆಗದಿದ್ರೆ ದೆಹಲಿಗೆ ಹೋಗ್ತಿವಿ. ಶಿವರಾಜ್ ಸಿಂಗ್ ಚೌಹಾಣ್ ಚುನಾವಣೆ ಉಸ್ತುವಾರಿ ಆಗಿದ್ದಾರೆ. ವಿಜಯೇಂದ್ರ‌ ಮತ್ತೆ ಅದ್ಯಕ್ಷರಾಗ್ತಾರೆ ಎಂಬ ಹೊಟ್ಟೆಕಿಚ್ಚಿಗೆ ಈ ರೀತಿ ಮಾತಾಡ್ತಿದ್ದಾರೆ ಎಂದರು.