ಬೆಂಗಳೂರು; ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ. ರಾಜ್ಯ ದೇಶದ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಿರುವಂತಹ ಮೊಂಡುತನದ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಸಿಎಂ- ಡಿಸಿಎಂ ಸಚಿವರೆಲ್ಲಾ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ. ರಾಜ್ಯ ದೇಶದ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಿರುವಂತಹ ಮೊಂಡುತನದ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ. ಈ ಸರ್ಕಾರಕ್ಕೆ ತಲೆನೂ ಇಲ್ಲ. ಬುಡನೂ ಇಲ್ಲ. ಗಾಂಭೀರ್ಯತೆ ಅನ್ನೋದು ಮೊದಲೇ ಗೊತ್ತಿಲ್ಲ.
ಇಂತಹ ಜನರನ್ನ ಕಟ್ಟುಕೊಂಡು ಎನ್ ಮಾಡೋಕೆ ಆಗಲ್ಲ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಇತಂಹ ಕೆಟ್ಟ ವ್ಯವಸ್ಥೆಯ ಸಿದ್ದರಾಮಯ್ಯರ ಕಾಲದಲ್ಲಿ ಬರುತ್ತೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ಇದು ಹೇಸಿಗೆ ಕೆಲಸ. ಅದ್ಕೆ ಬಿಹಾರದ ಜನರು ಮೋದಿ ಅಭ್ಯುದಯದಲ್ಲಿ ಮತ ಹಾಕಿದ್ದಾರೆ. ಇವರ ಬಗ್ಗೆ ಮಾತನಾಡುವುದೇ ಅಪ್ರಸ್ತುತ, ಮಾತನಾಡುವುದರಿಂದ ಪ್ರಯೋಜನ ಸಹ ಇಲ್ಲ. ಅಪ್ರಸ್ತುತ ವ್ಯವಸ್ಥೆಯಲ್ಲಿ ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ಬಳಿ ಎನೂ ಇಲ್ಲ. ಎಲ್ಲೆಲ್ಲಿ ಎನೇನೂ ಸಿಕ್ಕಿದೆ. ಯಾವುವುದಕ್ಕೋ ಹೋಗ್ತಿದೆ. ನಮ್ಮ ಸರ್ಕಾರ ಇದ್ದಾಗ ನಮ್ಮದೂ 40% ಭ್ರಷ್ಟಾಚಾರ ಅಂದ್ರು. ಈಗ 100% ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಭಗವಂತನೇ ಬೇರೆ. ಕಾಂಗ್ರೆಸ್ ಸರ್ಕಾರವೇ ಬೇರೆಯಾಗಿದೆ. ಇವರ ಬಗ್ಗೆ ಮಾತನಾಡುವುದ್ರಲ್ಲಿ ಅರ್ಥವಿಲ್ಲದಾಗಿದೆ. ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಗೊತ್ತಿಲ್ಲ. ರಾಜ್ಯದ ಹಿತ ಗೊತ್ತಿಲ್ಲ. ಸಮಸ್ಯೆ ಗೊತ್ತಿಲ್ಲ, ರಾಜ್ಯವನ್ನು ಯಾವ ರೀತಿ ತಗೆದುಕೊಂಡು ಹೋಗಬೇಕು ಅನ್ನೋದು ಗೊತ್ತಿಲ್ಲ. ಇತಂಹ ನಿರ್ಲಿಪ್ತ ಅವ್ಯವಸ್ಥೆಯ ಸರ್ಕಾರವನ್ನ ನಾನೂ ನೋಡಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅನ್ನೋದಕ್ಕೆ ನಾಚಿಕೆ ಆಗಬೇಕು. ಕಾಂಗ್ರೆಸ್ ನವರು ದೆಹಲಿಯಲ್ಲಿ ಹೋಗಿ ಕುಳಿತುಕೊಂಡು ಇಲ್ಲದ ವೋಟ್ ಚೋರಿ ಬಗ್ಗೆ ಮಾತನಾಡ್ತಾರೆ. ರಾಹುಲ್ ಗಾಂಧಿ ಯಾವ ವಿಚಾರ ತಗೆದುಕೊಂಡು ಹೋರಾಟ ಮಾಡಬೇಕು ಅದನ್ನ ಮಾಡ್ತಿಲ್ಲ. ಚುನಾವಣಾ ಆಯೋಗವನ್ನ ತಗೆದುಕೊಂಡು ಹೋರಾಟ ಮಾಡುತ್ತಿತುವುದು ನಿಮ್ಮ ಧೋರಣೆ ತೋರಿಸುತ್ತದೆ. ರಾಹುಲ್ ಗಾಂಧಿ ಜೀವನದಲ್ಲಿ ಅವರ ನಾಯಕತ್ವದಲ್ಲಿ ಒಂದು ಚುನಾವಣೆ ಸಹ ಗೆದ್ದಿಲ್ಲ. ರಾಜ್ಯದಲ್ಲಿ ಅಂದು ನಮ್ಮಲ್ಲಿ ತೊಂದರೆ ಆಗಿದಕ್ಕೆ ನೀವೂ ಗೆದ್ದಿದ್ದೀರಿ. ಕಾಂಗ್ರೆಸ್ ಅವನತಿ ರಾಜ್ಯದಲ್ಲಿ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸಹ ದಿನಾ ಕಪ್ಪು ಕಾಣಿಕೆ ತಗೆದುಕೊಂಡು ಎನ್ ನಿಯಂತ್ರಣ ಮಾಡ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಗೆ ಗಾಂಭೀರ್ಯತೆ ಇಲ್ಲದಾಗಿದೆ. ಈ ಸರ್ಕಾರದಿಂದ ಎನಾದ್ರು ಅಭಿವೃದ್ಧಿ ಆಗ್ತುತ್ತೆ ಅಂದುಕೊಂಡ್ರೆ ಅದು ಕನಸಾಗುತ್ತೆ ಎಂದು ಹೇಳಿದ್ದಾರೆ.
ಅಧಿಕಾರ ಕುರ್ಚಿಗಾಗಿ ಇವರು ಕಿತ್ತಾಡುತ್ತಿದ್ದಾರೆ.ಮೋದಿಯವರ ದೂರದೃಷ್ಟಿಯಿಂದ ಮುಂದೆ ಆರು ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸುತ್ತೆ. ವಿಕಸಿತ ಭಾರತ 2047 ಒಳಗೆ ಎಲ್ಲವೂ ಅಭಿವೃದ್ಧಿ ಆಗುತ್ತೆ. ತುಮಕೂರಿಗೆ ಮೆಟ್ರೋ ಹಾಗೂ ಪೋರ್ ಲೈನ್ ಹೈವೆ ಸಹ ಬರುತ್ತದೆ. ಅದಕ್ಕಾಗಿ ಈಗ ಡಿಪಿಆರ್ ಸಹ ಆಗುತ್ತಿದೆ. ತುಮಕೂರು. ಕೋಲಾರ. ರಾಮನಗರ ಸೇರಿದಂತೆ ಬೆಂಗಳೂರು ಗಡಿಭಾಗದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರೈಲ್ವೆ ಇಲಾಖೆ ತನ್ನದೇಯಾದ ಕೊಡುಗೆ ಕೊಡುತ್ತಿದೆ ಎಂದಿದ್ದಾರೆ.











