ಮನೆ Latest News ರಾಜ್ಯ ಸರ್ಕಾರ ಮತ್ತೆ ಆತುರಾತುರವಾಗಿ ಜನಗಣತಿಗೆ ಮುಂದಾಗಿದೆ; ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್...

ರಾಜ್ಯ ಸರ್ಕಾರ ಮತ್ತೆ ಆತುರಾತುರವಾಗಿ ಜನಗಣತಿಗೆ ಮುಂದಾಗಿದೆ; ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಳ್ತಂಗಡಿ; ರಾಜ್ಯ ಸರ್ಕಾರ ಮತ್ತೆ ಆತುರಾತುರವಾಗಿ ಜನಗಣತಿಗೆ ಮುಂದಾಗಿದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಮತ್ತೆ ಆತುರಾತುರವಾಗಿ ಜನಗಣತಿಗೆ ಮುಂದಾಗಿದೆ.ಆತುರ ಯಾಕೆ ಅಂತಾ ಗೊತ್ತಿಲ್ಲ. ಸಿದ್ದರಾಮಯ್ಯನವರು ಇಳಿಯುತ್ತಿದ್ದಾರೋ ಏನೋ ಗೊತ್ತಿಲ್ಲ. ಇರುವ ಬುಕ್ ಅನ್ನೇ ರೀ ಪ್ರಿಂಟ್ ಮಾಡುತ್ತಾರೆ ಅಷ್ಟೇ. ಕಾಟಾಚಾರಕ್ಕೆ ಸಮೀಕ್ಷೆ ಮಾಡುತ್ತಾರೆ ಅಷ್ಟೇ. 15 ದಿನಗಳಲ್ಲಿ ಜಾತಿ ಗಣತಿ ಅಂದರೆ ಇದ್ಯಾವ ಸೀಮೆ ಗಣತಿ? ಕೇಂದ್ರ ಸರ್ಕಾರದ ಗಣತಿಯನ್ನೇ ಮಾನ್ಯ ಮಾಡುವುದು, ರಾಜ್ಯ ಸರ್ಕಾರದ ಗಣತಿಯನ್ನು ಮಾನ್ಯ ಮಾಡಲ್ಲ.ಜಾತಿ ಗಣತಿ ಬೆಂಕಿಯಲ್ಲಿ ಬೇಳೆ ಬೇಗ ಬೇಯಿಸಿಕೊಳ್ಳಲು ಮಾಡಿರುವ ಹುನ್ನಾರ. ಎದೆ ತಟ್ಟಿ, ತೊಡೆ ತಟ್ಟಿ ಹೇಳಿದ್ರಲ್ವಾ ಜಾತಿ ಗಣತಿ ತಂದೇ ತರುತ್ತೇನೆ ಅಂತಾ. ಧೈರ್ಯ ಇದ್ದರೆ ಸವಾಲು ಹಾಕಬೇಕಿತ್ತು ಹೈಕಮಾಂಡ್ ಗೆ . ಇದಕ್ಕಿಂತ ಅವಮಾನ ಸಿಎಂಗೆ ಬೇರೆ ಯಾವುದೂ ಇಲ್ಲ ಎಂದು ಗುಡುಗಿದ್ದಾರೆ.

ರಾಜ್ಯದ ಜನತೆಗೆ ವಿಶ್ವಾಸ ಕಳೆದು ಹೋಗಿದೆ. ಕೇಂದ್ರದ ಜೊತೆ ಕೈಜೋಡಿಸಿದರೆ ರಾಜ್ಯ ಸರ್ಕಾರಕ್ಕೂ ಗೌರವ.ಹದಿನೈದು ದಿನಗಳಲ್ಲಿ ಮಾಡುತ್ತೇವೆ ಅಂದರೆ ಮತ್ತೆ ಜಾತಿ ಜಾತಿಗಳ ನಡುವೆ ದಂಗೆ ಏಳುತ್ತದೆ. ದಸರಾ ಹಬ್ಬದಲ್ಲಿ ಎಲ್ಲರೂ ಪ್ರವಾಸ, ಊರುಗಳಿಗೆ ಹೋಗುತ್ತಾರೆ. ಇದೇ ಸಮಯವನ್ನು ಗಣತಿಗೆ ಆಯ್ಕೆ ಮಾಡಿಕೊಂಡಿದ್ದಾರೆ ಅಂದರೆ ಎಷ್ಟು ಮನೆ ಹಾಳ ಸರ್ಕಾರ. ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡಲು ಸರ್ಕಾರವೇ  ಅವಕಾಶ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾದಾಯಿ ಅನುಮತಿ ವಿಚಾರದ ಬಗ್ಗೆ ಮಾತನಾಡಿ ಸಂಸತ್ ಅಧಿವೇಶನ ನಡೆಯುತ್ತಿದೆ. ಕಾಂಗ್ರೆಸ್ ಸಂಸದರು ಪ್ರಶ್ನೆ ಮಾಡಿದ್ದಾರಾ?. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರೇ ಇದ್ದಾರೆ, ನಿಲುವಳಿ ಕೊಟ್ಟಿದ್ದಾರಾ?. ಕಾಂಗ್ರೆಸ್ ನವರು ಸಂಸತ್ ನಲ್ಲಿ ಬಹಿಷ್ಕಾರ ಮಾಡಲಿ ನೋಡೋಣ. ಆಗ ನಮ್ಮ ಎಲ್ಲಾ ಸಂಸದರು ಬೆಂಬಲ‌ ಕೊಟ್ಟೇ ಕೊಡುತ್ತಾರೆ. ಧೈರ್ಯ ಇದ್ದರೆ ಬಹಿಷ್ಕಾರ ಮಾಡಲಿ ಎಂದಿದ್ದಾರೆ. ಆಂಧ್ರಪ್ರದೇಶದಲ್ಲಿ ಇಬ್ಬರು ರಾಜ್ಯದ ಬಿಜೆಪಿ ಕಾರ್ಯಕರ್ತರ ಕೊಲೆ ಪ್ರಕರಣದ ಬಗ್ಗೆ ಮಾತನಾಡಿ ಕರ್ನಾಟಕ ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು . ಆಂಧ್ರಪ್ರದೇಶ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ 3 ಆರೋಪಿಗಳಿಗೆ ಶಿಕ್ಷೆ ವಿಚಾರದ ಬಗ್ಗೆ ಮಾತನಾಡಿ ಪೊಲೀಸರು ಎನ್ ಐಎಗೆ ಇನ್ನಷ್ಟು ಸಹಕಾರ ಕೊಟ್ಟರೆ ಇನ್ನಷ್ಟು ಕ್ರಮ ಆಗುತ್ತದೆ. ಕಠಿಣ ಕ್ರಮ‌ ಆದರೆ ಇಂತಹ ಘಟನೆಗಳು ಕಡಿಮೆ ಆಗುತ್ತದೆ ಎಂದು ತಿಳಿಸಿದ್ದಾರೆ .ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ  ಯಾವ ಕ್ಷೇತ್ರ ಅಂತಾ ರಾಹುಲ್ ಗಾಂಧಿ ಹೇಳಲಿ. ನಂತರ ನಾವು ಅದಕ್ಕೆ ಉತ್ತರ ಕೊಡುತ್ತೇವೆ. ಈಗಾಗಲೇ ಇಡಿ ಬಳ್ಳಾರಿ ಚುನಾವಣೆ ಹೇಗೆ ನಡೆದಿದೆ ಅಂತಾ ವರದಿ ಕೊಟ್ಟಿದೆ. ಅವರಿಗೆ ಈ ಸಲ ೯ ಸೀಟು ಗೆದ್ದಿರುವುದೇ ಅವರಿಗೆ ಲಾಟರಿ ಎಂದು ಲೇವಡಿ ಮಾಡಿದ್ದಾರೆ.

ಸ್ಮಾರ್ಟ್ ಮೀಟರ್ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಎಫ್ ಐಆರ್ ದಾಖಲಿಸಲು ಕೋರ್ಟ್ ಸೂಚನೆ ನೀಡಿರುವ ಬಗ್ಗೆ ಮಾತನಾಡಿ  ಕೋರ್ಟ್ ಆದೇಶವನ್ನು ಸ್ವಾಗತ ಮಾಡುತ್ತೇವೆ. ಬಿಹಾರ ಚುನಾವಣೆ ಬರುತ್ತಿದೆ. ಅದಕ್ಕೆ ಬೇರೆ ರಾಜ್ಯಗಳಲ್ಲಿ ಇಲ್ಲದೇ ಇರುವ ದರ ವಸೂಲಿ ಮಾಡುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯೆತೆ ಹೊರಗೆ ಬರಲಿದೆ ಎಂದಿದ್ದಾರೆ.