ಮನೆ Latest News ರೈತರ ಪಾಲಿಗೆ ರಾಜ್ಯ ಸರ್ಕಾರ ಯಮ ಕಿಂಕರರಾಗಿದ್ದಾರೆ: ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ...

ರೈತರ ಪಾಲಿಗೆ ರಾಜ್ಯ ಸರ್ಕಾರ ಯಮ ಕಿಂಕರರಾಗಿದ್ದಾರೆ: ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು; ರೈತರ ಪಾಲಿಗೆ ರಾಜ್ಯ ಸರ್ಕಾರ ಯಮ ಕಿಂಕರರಾಗಿದ್ದಾರೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್  ಹೇಳಿದ್ದಾರೆ,

ಇಂದು ವಿಧಾ‌ನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಟಿ ನಡೆಸಿದ್ರು.  ಸುದ್ದಿಗೋಷ್ಠಿಯಲ್ಲಿ ರೈತರ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧದ ಬಿಜೆಪಿ ಹೋರಾಟದ ಪೋಸ್ಟರ್ ಮತ್ತು ವೀಡಿಯೋ ಬಿಡುಗಡೆ ಮಾಡಿದ್ರು. ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ಬಿಜೆಪಿ ರೈತ ಮೋರ್ಛಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ರೈತರ ಪಾಲಿಗೆ ರಾಜ್ಯ ಸರ್ಕಾರ ಯಮ ಕಿಂಕರರಾಗಿದ್ದಾರೆ. ತುಂಗಭದ್ರಾ ಅಣೆಕಟ್ಟು ನೀರು ಶೇಖರಣೆ ಮಾಡದ ಕಾರಣದ ಅಟ ಭಾಗದ ರೈತರಿಗೆ ಎರಡನೇ ಬೆಳೆ ತೆಗೆಯುವ ಯೋಗ ಕಸಿದುಕೊಂಡಿದ್ದಾರೆ. ಅತಿವೃಷ್ಟಿ, ರೈತರಿಗೆ ಪರಿಹಾರ ನೀಡದಿರುವಿಕೆ, ಮೆಕ್ಕೆಜೋಳ ಖರೀದಿ ಕೇಂದ್ರ, ಹಾಲಿನ ಪ್ರೋತ್ಸಾಹ ಧನ ವಿವಾರ ಇಟ್ಟುಕೊಂಡು ಬಿಜೆಪಿ ರೈತ ಮೋರ್ಛಾ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಆರು ತಿಂಗಳಿನಿಂದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಡಿದಾಟ ನಡೆಯುತ್ತಿದೆ. ಸಿಎಂ ಕುರ್ಚಿಯ ನಾಲ್ಕು ಕಾಲುಗಳನ್ನು ನಾಲ್ಕು ಜನ ಕಿತ್ತುಕೊಂಡು ಹೋಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್, ಜಾರಕಿಹೊಳಿ ಕಿತ್ತುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿಗೆ ಕಾಲುಗಳೇ ಇಲ್ಲ.ನನ್ನ ಹಿಂದೆ 60 ಜನ ಇದ್ದಾರೆ, 50 ಜನ ಇದ್ದಾರೆ ಅಂತಾ ಸವಾಲುಗಳ ಮೇಲೆ ಸವಾಲು ಬರುತ್ತಿದೆ ಎಂದರು.

ಶಾಸಕರ ಖಾತೆಗಳಿಗೆ ಹಣ ಜಮಾವಣೆ ಆಗುತ್ತಿದೆ. ರಾಜ್ಯದ ನೀರಾವರಿ ಸಚಿವರು ಫುಲ್ ಬ್ಯುಸಿ. ಅವರ ಹೊಲಕ್ಕೆ ನೀರು ಹರಿಸಲು ಅಧಿಕಾರಕ್ಕಾಗಿ ಕಾದು ಕುಳಿತಿದ್ದಾರೆ. ನೀರಾವರಿ ಇಲಾಖೆಯಲ್ಲಿ ಒಂದೇ ಒಂದು ಸಭೆ ಮಾಡಿದಂತೆ ಕಾಣುತ್ತಿಲ್ಲ. ಯಾವ ಮಂತ್ರಿಯೂ ನೆರೆ ಪೀಡಿತ ಸ್ಥಳಗಳಿಗೆ ಹೋಗಿಲ್ಲ. ಎಲ್ಲರೂ ದೆಹಲಿ ಟೂರ್, ಸಿದ್ದರಾಮಯ್ಯ ಮನೆ ಬ್ರೇಕ್ ಫಾಸ್ಟ್, ಡಿ.ಕೆ. ಮನೆ ಡಿನ್ನರ್ ಇಷ್ಟೇ ಆಗಿದೆ. ನಾನು 25 ರಂದು ಕಲ್ಬುರ್ಗಿ, 26 ರಂದು ಹೊಸಪೇಟೆ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಸುಳ್ಳೇ ಕಾಂಗ್ರೆಸ್ಸಿನ ಬಂಡವಾಳ, ರೈತರ ದಿಕ್ಕು ತಪ್ಪಿಸಿದ ಸಿಎಂ ಎಂಬ ಘೋಷಣೆಯೊಂದಿಗೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ.ಬಿಜೆಪಿ ರಾಜ್ಯಾಧ್ಯಕ್ಷರು ನಾಳೆ ದಾವಣಗೆರೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಇತಿಹಾಸದಲ್ಲಿ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಹೋರಾಟ ಮಾಡಿದಷ್ಟು ಯಾವತ್ತೂ ಮಾಡಿಲ್ಲ. ವಿಪಕ್ಷವಾಗಿ ನಮಗೆ ಆದೇಶ ಮಾಡಲು ಅಧಿಕಾರ ಇಲ್ಲ.ಆದರೆ ಜನರಿಗೆ ತಪ್ಪನ್ನು‌ ತಿಳಿಸುವ ಜವಾಬ್ದಾರಿ ಇದೆ, ಅದನ್ನು ಮಾಡುತ್ತಿದ್ದೇವೆ. ತುಂಗಭದ್ರಾ ಮಂಡಳಿ ಇದ್ದರೂ ರಾಜ್ಯ ಸರ್ಕಾರದ್ದೇ ಹೆಚ್ಚು ಹೊಣೆ. ನಾವು 21ನೇ ಶತಮಾನದಲ್ಲಿದ್ದೇವೆ, ಅಣೆಕಟ್ಟು ಗೇಟ್ ರಿಪೇರಿಗೆ ಇನ್ನೂ ಸಮಯ ಬೇಕು ಅಂದರೆ ದೇವರೇ ಬಲ್ಲ. ಸಿಎಂ ಕುರ್ಚಿ ಹಸ್ತಾಂತರ 4 ದಿನ ತಡ ಆಗಿದ್ದಕ್ಕೆ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದೀರಾ. ಇಲ್ಲಿ ಅಣೆಕಟ್ಟು ಗೇಟ್ ಮುರಿದು ಹೋಗಿ ಒಂದೂವರೆ ವರ್ಷ ಆಯಿತು . ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆದರೆ ಬಿಜೆಪಿಗೆ ಒಳ್ಳೆಯದು. ಬಿಜೆಪಿ ಶಾಸಕರು ಸಾಯುವ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಹೋಗುತ್ತಾರೆ?. ಡಿ.ಕೆ. ಶಿವಕುಮಾರ್ ಹಿಂದೆ ಇಷ್ಟು ದಿನ 10-12 ಶಾಸಕರು ಅಂತಾ ಇದ್ದಿದ್ದು 70 ಜನ ಇದ್ದಾರೆ ಅಂತಾ ಹೇಗಾಯ್ತು? ಎಂದು ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ್ ಶಾಸಕರ ಸಹಿ ಹಾಕಿಸುವುದಕ್ಕೇ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದು. ಎರಡು ದಿನಗಳಿಂದ ಸಿದ್ದರಾಮಯ್ಯ ಸಡನ್ ಆಗಿ ಡಲ್ ಆಗಿ… ಡೀಲ್ ಆದ ಮೇಲೆಯೇ ಸಿದ್ದರಾಮಯ್ಯ ಡಲ್ ಆಗಿರುವುದು. ಇಷ್ಟು ದಿನ ಐದು ವರ್ಷ ನಾನೇ ಸಿಎಂ ಅಂತಿದ್ದವರು, ಹೈಕಮಾಂಡ್ ಹೇಳಿದಂತೆ ನಾನು, ಡಿ.ಕೆ. ಕೇಳಬೇಕು ಎಂದು ಹೇಳಲಾರಂಭಿಸಿದ್ದಾರೆ. ಡಿ.ಕೆ. ಶಿವಕುಮಾರ್ ದೇವರನ್ನು ನಂಬುವವರು, ಇವತ್ತು ವರ ಕೊಡುತ್ತದೋ, ಒಂದೂವರೆ ವರ್ಷಗಳ ಬಳಿಕ ಕೊಡುತ್ತದೋ ನೋಡೋಣ ಎಂದರು.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಷ್ಟೇ, ಏನೂ ಅಧಿಕಾರ ಇಲ್ಲ. ಡಿ.ಕೆ. ಶಿವಲುಮಾರ್ ನಾನು ದೇವರು ನಂಬುವವನು ಅಂತಾ ಹೇಳುತ್ತಾರೆ. ಅವರು ಗಾಳ ಹಾಕಿದ್ದಾರೆ, ಹುಳಗಳು ಕಚ್ಚಿಕೊಳ್ಳಬೇಕಷ್ಟೇ. ಅವರ ಹಿಂದೆ ಅಷ್ಟು ಜನ ಇದ್ದಾರೆ ಅವರೇ ಹುಳಗಳು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಳಿ ಎಟಿಎಂ ಇದ್ದಂತೆ. ಎಟಿಎಂ ಹೋದರೆ ಮಾತ್ರ ಅಲ್ಲಿ ತೆರೆಯುತ್ತದೆ ಇತ್ತೀಚೆಗೆ ಸಿದ್ದರಾಮಯ್ಯ ಎಟಿಎಂ ನಲ್ಲಿ ಡಿ.ಕೆ. ಶಿವಕುಮಾರ್ ರನ್ನು ಮೀರಿಸಿದ್ದಾರೆ. ಬಿಜೆಪಿ ಕೇಂದ್ರ ನಾಯಕತ್ವ ಸಿಕ್ಕಾಪಟ್ಟೆ ಬಲಯುತವಾಗಿದೆ. ಕಾಂಗ್ರೆಸ್ ಶಾಸಕರು ಯಾರೇ ಬಂದರೂ ನಾವು ಅವರ ಜೊತೆ ಸರ್ಕಾರ ಮಾಡಲ್ಲ. ನಾವು ಜನಾದೇಶ ಪಡೆದೇ ಮುಂದೆ ಸರ್ಕಾರ ಮಾಡುತ್ತೇವೆ. ನಾವು ಮತ್ತು ಜೆಡಿಎಸ್ ಒಟ್ಟಾಗಿ ಹೋಗುತ್ತೇವೆ. ನಾವು ಖಂಡಿತವಾಗಿ 170 ಸೀಟು ಗೆಲ್ಲುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಗೊಂದಲ ಇಲ್ಲ ಅಂದರೆ ಯಾಕೆ ಖರ್ಗೆ ಮನೆ, ದೆಹಲಿ, ಜೈಲಿಗೆ ಹೋಗಬೇಕು. ಬಿಜೆಪಿ ರಾಜ್ಯಾಧ್ಯಕ್ಷರು ಅವರ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಹೋದಾಗ ವರಿಷ್ಠರನ್ನು ಭೇಟಿ ಮಾಡುವುದು ಸಹಜ. ನಾಳೆ ಬಂದು ಅವರು ರೈತರ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ತಾವು ಅಧ್ಯಕ್ಷ ಎನ್ನುವುದನ್ನೇ ಮರೆತಿದ್ದಾರೆ. ಹೆಸರಿಗೆ ಮಾತ್ರ ಅವರು ಅಧ್ಯಕ್ಷರು. ಕೀ ಇರುವುದು ಗಾಂಧಿ ಫ್ಯಾಮಿಲಿ ಬಳಿ ಎಂದು ಲೇವಡಿ ಮಾಡಿದರು.