ಬೆಂಗಳೂರು: ಸೆಪ್ಟೆಂಬರ್ ಕ್ರಾಂತಿ ಬಾಲಕೃಷ್ಣ ಅವರಿಂದಲೇ ಶುರು ಆಗುತ್ತದೆ ಎಂದು ರಾಜೇಂದ್ರ ರಾಜಣ್ಣ ಸ್ಫೋಟಕ ಹೇಳಿ ನೀಡಿದ್ದಾರೆ. ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ಇದೆ. ಇವರ ಟೀಮೇ ಬಿಜೆಪಿ ಗೆ ಹೋಗಬಹುದು. ಸಿಎಂ ಮಾಡ್ತೀವಿ ಅಂದ್ರೆ ಇವರೆಲ್ಲ ಬಿಜೆಪಿಗೆ ಹೋಗಬಹುದು ಎಂದಿದ್ದಾರೆ.
ಬಾಲಕೃಷ್ಣ ಬಿಜೆಪಿನೂ ಮುಗಿಸಿ ಬಂದಿದಾರೆ ಜೆಡಿಎಸ್ ಅನ್ನೂ ಮುಗಿಸಿ ಬಂದಿದ್ದಾರೆ. ಕೆಲವರಿಗೆ ಮಾತಾಡೋ ತೀಟೆ ತೆವಲು. ಅದನ್ನು ತೀರಿಸಿಕೊಳ್ಳಲು ಹೀಗೆಲ್ಲ ಮಾತಾಡ್ತಾರೆ. ರಾಜಣ್ಣ ಅಸೆಂಬ್ಲಿಯಲ್ಲಿ ಆರ್ ಎಸ್ ಎಸ್ ಹಾಡೇನೂ ಹಾಡಿಲ್ಲ. ರಾಜಣ್ಣ ಬಾಲ್ಯದಿಂದ ಆರ್ ಎಸ್ ಎಸ್ ಚಡ್ಡಿ ಹಾಕಿಕೊಂಡು ಸಂಘದ ಶಾಖೆಗೆ ಹೋಗಿಲ್ವಲ್ಲ??. ಸೆಪ್ಟೆಂಬರ್ ಆದಮೇಲೆ ಕ್ರಾಂತಿ ಇವರೇ ಬಿಜೆಪಿಗೆ ಹೋದ್ರೂ ಆಶ್ಚರ್ಯ ಇಲ್ಲ. ಯತ್ನಾಳ್ ಆಗಲೇ ಇದನ್ನು ಬಹಿರಂಗ ಮಾಡಿದ್ದಾರೆ. ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ನಡೆದು ಬಾಲಕೃಷ್ಣ ಅವರೆಲ್ಲ ಬಿಜೆಪಿಗೆ ಹೋಗಬಹುದು. ಅಧಿಕಾರ ಶಾಶ್ವತ ಅಲ್ಲ, ಜನರಿಗೆ ಬಿಟ್ಟಿದ್ದು. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡ ಮಾತಾಡಲಿ. ಕೆಲವರಿಗೆ ಓಲೈಸಲು ಮಾತಾಡುವ ಚಟ. ರಾಜಣ್ಣವರ ಮೇಲೆ ಮಾತಾಡಿದರೆ ಬಾಲಕೃಷ್ಣ ಗೆ ಮೈಲೇಜು. ಷಡ್ಯಂತ್ರದಿಂದ ಇವರೆಲ್ಲ ತಾನೇ ಸಚಿವ ಸ್ಥಾನ ತೆಗೆಸಿದ್ದು. ಆಗಿರೋ ತಪ್ಪಿಗೆ ಮತ್ತೆ ಮಂತ್ರಿ ಸ್ಥಾನ ಕೊಡಬೇಕು ಅಂಥ ಶಾಂತಿಯುತ ಪ್ರತಿಭಟನೆ ಗಳಾಗಿವೆ ಎಂದು ರಾಜೇಂದ್ರ ರಾಜಣ್ಣ ಬಾಲಕೃಷ್ಣಗೆ ತಿರುಗೇಟು ಕೊಟ್ಟಿದ್ದಾರೆ.
ಬಾಲಕೃಷ್ಣ ಅವರೆಲ್ಲ ಬಿಜೆಪಿ ಗೆ ಸೇರೋದೇ ಸೆಪ್ಟೆಂಬರ್ ಕ್ರಾಂತಿ. ಅದೇ ವಿಚಾರವನ್ನೇ ನಾನು ಪ್ರಸ್ತಾಪ ಮಾಡಿದ್ದು. ಯಾವುದಾದರೂ ಪಕ್ಷದಲ್ಲಿ ಸಿಎಂ ಸ್ಥಾನ ಕೊಡ್ತೀವಿ ಅಂದ್ರೆ ಇವರೆಲ್ಲ ಹೋಗಬಹುದು. ಅದೇ ಕ್ರಾಂತಿ ಬೇರೆನಲ್ಲ. ಬಹಿರಂಗವಾಗಿ ಯಾರಾದ್ರೂ ರಾಜಣ್ಣ ಅವರನ್ನು ಬಿಜೆಪಿಯವರು ಭೇಟಿಯಾಗಿಲ್ಲ. ರಾಜಣ್ಣ ಅವರನ್ನು ಸಂಚು ಪಿತೂರಿಯಿಂದ ರಾಜೀನಾಮೆ ಪಡೆದಿದ್ದಾರೆ ಬಿಟ್ಟರೆ, ರಾಜಣ್ಣ ಭ್ರಷ್ಟಾಚಾರ ಮಾಡಿ ಸಚಿವ ಸ್ಥಾನ ಬಿಟ್ಟಿಲ್ವಲ್ಲಾ?. ರಾಜಣ್ಣ ಯಾವತ್ತೂ ಪಕ್ಷದ ವಿರುದ್ದ ಮಾತಾಡಿಲ್ವಲ್ಲ. ಹೌದ್ರಿ ನಾವು ಇನ್ನು ಹತ್ತು ವರ್ಷ ಬಿಟ್ಟರೂ ಸಿದ್ದರಾಮಯ್ಯ ಪರವೇ. ಬೇರೆ ಯಾರನ್ನೋ ತೋರಿಸಿದರೆ ನಮಗೆ ಮತ ಪಡೆಯೋದು ಅಷ್ಟರಲ್ಲೇ ಇದೆ ಎಂದ ಅವರು ಡಿ ಕೆ ವಕುಮಾರ್ ಜೊತೆಗೆ ಕೆಲವರು ಕಾಲು ಹೊರಗಡೆ ಇಟ್ಟಿದ್ದಾರೆ ಎಂಬುದು ಸತ್ಯವಾ? ಎಂಬ ಪ್ರಶ್ನೆ ಗೆ ಹೌದು ಎಂದಿದ್ದಾರೆ.
ನಾವು ಸಿದ್ದರಾಮಯ್ಯ ಪರ ಇದ್ದೇವೆ ಅಂತಲೇ ಇಷ್ಟೆಲ್ಲ ಮಾಡಿದ್ದಾರೆ. ನಮಗೆ ಆಗಿರೋ ಅನ್ಯಾಯದ ಪ್ರಕಾರ ಮತ್ತೆ ಸಚಿವ ಸ್ಥಾನ ಕೊಡಬೇಕು. ಎಸ್.ಟಿ ವರ್ಗಕ್ಕೆ ಸೇರಿದ ೧೫ ಮಂದಿ ಶಾಸಕರಿದ್ದಾರೆ. ಹೀಗಾಗಿ ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕು. ದೆಹಲಿಗೆ ಸ್ವಾಮೀಜಿ ಗಳೂ ಹೋಗಿ ಭೇಟಿ ಮಾಡ್ತಾರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತಾರೆ. ಸೆಪ್ಟೆಂಬರ್ ನಲ್ಲಿ ಅವರಿಗೆಲ್ಲ ಬ್ರೇನ್ ಮ್ಯಾಪಿಂಗ್ ಮಾಡಿಸಿ.ಯಾರು ಯಾರ ಜೊತೆಗೆ ಮಾತುಕತೆ ಮಾಡಿದ್ದಾರೆ ಚರ್ಚೆ ಮಾಡಿದ್ದಾರೆ ಯಾರ ಸಂಪರ್ಕದಲ್ಲಿದ್ದಾರೆ ಎಲ್ಲವೂ ಬ್ರೇನ್ ಮ್ಯಾಪಿಂಗ್ ಆಗಲಿ. ಸೆಪ್ಟೆಂಬರ್ ಕ್ರಾಂತಿಯದ್ದು ಎಲ್ಲ ಹೊರ ಬರಲಿ ಎಂದಿದ್ದಾರೆ.
ಡಿ ಕೆ ಶಿವಕುಮಾರ್ ವಿರುದ್ದವೂ ಪರೋಕ್ಷ ವಾಗ್ದಾಳಿ ನಡೆಸಿದ ರಾಜೇಂದ್ರ, ಸಿದ್ದರಾಮಯ್ಯ ಬೆಂಬಲದಿಂದಲೇ ವೋಟು ಬರುತ್ತದೆ. ಇನ್ಯಾರದ್ದೋ ಮುಖ ತೋರಿಸಿದರೆ ಓಟು ಬರುತ್ತದೆ ಎಂಬುದಿಲ್ಲ ಎಂದಿದ್ದಾರೆ.











