ಮನೆ Latest News ಸುಳ್ಳು ಸುದ್ದಿಯ ಕೇಸ್ ಗಳ ಸಂಖ್ಯೆ ಇನ್ನು ಕಡಿಮೆ ಆಗುತ್ತದೆ, ನಾವು ಹಿಡಿಯೋಕೆ‌ ಶುರು ಮಾಡಿದ್ದೇವೆ;...

ಸುಳ್ಳು ಸುದ್ದಿಯ ಕೇಸ್ ಗಳ ಸಂಖ್ಯೆ ಇನ್ನು ಕಡಿಮೆ ಆಗುತ್ತದೆ, ನಾವು ಹಿಡಿಯೋಕೆ‌ ಶುರು ಮಾಡಿದ್ದೇವೆ; ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಸುಳ್ಳು ಸುದ್ದಿಯ ಕೇಸ್ ಗಳ ಸಂಖ್ಯೆ ಇನ್ನು ಕಡಿಮೆ ಆಗುತ್ತದೆ, ನಾವು ಹಿಡಿಯೋಕೆ‌ ಶುರು ಮಾಡಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ವಿಚಾರದ ಬಗ್ಗೆ ಮಾತನಾಡಿದ ಅವರು ಕಡಿವಾಣ ಹಾಕ್ತವಿ ಎಂದ್ರೆ ನಾಳೆ ಬೆಳಿಗ್ಗೆ ಬಟನ್ ಒತ್ತೋದು ಅಂತ ಅಲ್ಲ. ಅದಕ್ಕೊಂದು ಪದ್ಧತಿ ಇದೆ, ಅವೆಲ್ಲ ಮಾಡ್ತಿವಿ. ಟೈಮ್ ತೆಗೆದುಕೊಳ್ಳುತ್ತೇವೆ, ಇದು ಸುಲಭದ ವಿಚಾರ ಅಲ್ಲ. ಅವರೆಲ್ಲೋ ಫಾರಿನ್ ನಲ್ಲಿ ಕುಳಿತು ಪೋಸ್ಟ್ ಮಾಡ್ತಾನೆ. ನಾವು ಇಲ್ಲಿ ಕಾನೂನು ಮಾಡಿದ್ರೆ, ಅವನು‌ಹೇಗೆ ನಿಲ್ಲಿಸುತ್ತಾನಾ?. ನಾವು ಕಡಿವಾಣ ಹಾಕಲು ಡಿಜಿಯವರಿಗೆ‌ ಸೂಚನೆ ನೀಡಿದ್ದೇವೆ. ಡಿಜಿ ಅವರು ಎಲ್ಲ ಕೆಲಸ ಮಾಡ್ತಿದ್ದಾರೆ.ಸುಳ್ಳು ಸುದ್ದಿಯ ಕೇಸ್ ಗಳ ಸಂಖ್ಯೆ ಇನ್ನು ಕಡಿಮೆ ಆಗುತ್ತದೆ. ನಾವು ಹಿಡಿಯೋಕೆ‌ ಶುರು ಮಾಡಿದ್ದೇವೆ, ಕಡಿಮೆ ಆಗುತ್ತವೆ ಎಂದಿದ್ದಾರೆ.

ಬಿಜೆಪಿಯಿಂದ ತಿರಂಗಾ ಯಾತ್ರೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ದೇಶದ ಭದ್ರತೆ ವಿಚಾರ.ಶುರುವಿನಿಂದಲೂ ನಾವು ಹೇಳ್ತಿದ್ದೇವೆ.ರಾಜಕೀಯ ಬಣ್ಣ ಬಳಿಯಬಾರದು ಅಂತ. ನಾವೆಲ್ಲರೂ ಒಟ್ಟಾಗಿ ದೇಶದ ರಕ್ಷಣೆ ಮಾಡಬೇಕು. ನಾವು ಅಂದ್ರೆ ಕಾಂಗ್ರೆಸ್ ಪಕ್ಷ  ಮುಂಚೂಣಿಯಲ್ಲಿದೆ. ಅದಕ್ಕೆ ನಾವು ತಿರಂಗಾ ಯಾತ್ರೆ ಮಾಡಿದ್ದೆವು. ನಾವು ಎಲ್ಲರನ್ನೂ ಕರೆದು ಮಾಡಿದ್ದೆವು. ಮುಂಚೂಣಿಯಲ್ಲಿ ಯಾರಾದ್ರೂ ಮಾಡಬೇಕಲ್ಲ. ಮೊದಲು ಅವರೇ ಮಾಡಿದ್ರೆ ನಾವು ಹೋಗ್ತಿದ್ದೆವು. ಈಗ ಅವರು ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಟ್ರಂಪ್ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ನಾವು ಸಿಎಂ ಜೊತೆಗೆ ಸಭೆ ಮಾಡುತ್ತಿದ್ದೇವು.ಏನೆಲ್ಲ ಕ್ರಮ‌ ತೆಗೆದುಕೊಳ್ಳಬೇಕು ಅಂತ.ಆ ಸಂದರ್ಭದಲ್ಲಿ ಟ್ರಂಪ್ ಟ್ವೀಟ್ ಬಂತು. ಟ್ರಂಪ್ ಟ್ವೀಟ್ ಮಾಡಿದ ಮೇಲೆ ಕದನ ವಿರಾಮದ ಬಗ್ಗೆ ಗೊತ್ತಾಯಿತು.ಇನ್ನೂ ಡಿಫೆನ್ಸ್ ಮಿನಿಸ್ಟರ್, ಕೇಂದ್ರ ಸರ್ಕಾರದಿಂದ ಕ್ಲಾರಿಫಿಕೇಷನ್ ಬಂದಿಲ್ಲ. ಹೇಗೆ ಇವರು ಅನೌನ್ಸ್ ಮಾಡ್ತಾರೆ ಅಂತ ಕಾಯ್ದು ನೋಡೋಣ ಅಂದುಕೊಂಡಿದ್ದೆವು. ಅರ್ಧ ಗಂಟೆಯಲ್ಲಿ ಮೇಲೆ ಡಿಫೆನ್ಸ್ ಮಿನಿಸ್ಟರಿ  ಪ್ರತಿಕ್ರಿಯೆ ನೀಡಿದ್ರು. ಕದನ ವಿರಾಮ ಬಗ್ಗೆ ಗೊತ್ತಾಯಿತು. ಇದೆಲ್ಲ ದೇಶದ ರಕ್ಷಣೆ ವಿಚಾರ. ದೇಶದ ರಕ್ಷಣೆ ವಿಚಾರ ಪ್ರಧಾನಮಂತ್ರಿಗೆ ಗೊತ್ತು .ಅದನ್ನು ನಮ್ಮ ದೇಶದ ಜನರಿಗೆ ತಿಳಿಸುವ ಕೆಲಸ ಮಾಡ್ತಾರೆ. ಇದು ದೇಶದ ರಕ್ಷಣೆಯ ಪ್ರಶ್ನೆ. ಇದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ.ನಮ್ಮ ರಾಷ್ಟ್ರೀಯ ಅಧ್ಯಕ್ಷರು, ರಾಹುಲ್ ಗಾಂಧಿ ಪ್ರತಿಕ್ರಿಯೆ ಕೊಡ್ತಾರೆ ಎಂದಿದ್ದಾರೆ.

ಸುಹಾಸ್ ಶೆಟ್ಟಿ ಕೇಸ್ ಎನ್‌ಐಎಗೆ ನೀಡುವಂತೆ ಬಿಜೆಪಿ ಗವರ್ನರ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಗೊತ್ತಿಲ್ಲ, ಗವರ್ನರ್ ಏನು ತೀರ್ಮಾನ ತೆಗೆದುಕೊಳ್ತಾರೆ ಅವರಿಗೆ ಬಿಟ್ಟಿದ್ದು ಎಂದರು. ಆ್ಯಂಟಿ ಕಮ್ಯೂನಲ್ ಪೋರ್ಸ್ ವಿಚಾರದ ಬಗ್ಗೆ ಮಾತನಾಡಿ ಅದರ ಬಗ್ಗೆ ಪ್ರಸ್ತಾವನೆ ಬಂದಿದೆ. ಸರ್ಕಾರ ಯಾವ ರೀತಿ ಇರಬೇಕು ಅಂತ ಡಿಜಿಯವರಿಗೆ ಹೇಳಿದೆ. ನಾವು ಸರ್ಕಾರಕ್ಕೆ ಎಎನ್‌ಎಫ್ ರೀತಿ ಮಾಡಬೇಕು ಹೇಳಿದ್ದೇವೆ. ಅದನ್ನು ಇವತ್ತು ಪ್ರಸ್ತಾವನೆ ಮಾಡಿ‌ ಕಳುಹಿಸಿದ್ದಾರೆ.ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ.ಎರಡು ಮೂರು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.