ಬೆಂಗಳೂರು: ಗಾರ್ಡನ್ ಸಿಟಿಗೆ ಗಾರ್ಬೇಜ್ ಸಿಟಿ ಅಂತ ಹೆಸರು ತಂದ ಕುಖ್ಯಾತಿ ಬಿಜೆಪಿಯವರದ್ದು ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಹಿಂದೆಲ್ಲ ಪುಂಡರ ಹಾವಳಿ ಜಾಸ್ತಿ ಆಗಿತ್ತು.ನಿನ್ನೆ ಸಿಬಿಟಿಯಿಂದ ಸೂಳೆಬಾವಿಗೆ ಹೋಗುವ ರಸ್ತೆಯಲ್ಲಿ ಗಲಾಟೆ ಆಗಿದೆ. ನವೀನ್ ಡ್ರೈವರ್ ಮಹದೇವ್ ಕಂಡಕ್ಟರ್.ಇಬ್ಬರು ಮಹಿಳೆಯರು ಟಿಕೇಟ್ ತಗೊಂಡಿದಾರೆ, ಹುಡುಗನ ಹತ್ರ ಝಿರೋ ಟಿಕೇಟ್ ಇತ್ತಂತೆ.ನಮ್ಮ ಎಂಡಿ ಬಳಿ ಮಾತಾಡಿದ್ದೇನೆ, ಗೃಹ ಸಚಿವರಿಗೂ ಕೂಡ ಮಾತಾಡಿದ್ದೇನೆ.ಕರ್ನಾಟಕದಲ್ಲಿ ಇದ್ದವರು ಕರ್ನಾಟಕ ಮಾತಾಡಲೇಬೇಕು.ಈ ರೀತಿ ಮಾತಾಡಿದ್ದು ಸರಿಯಲ್ಲ.ಮಾತೃಭಾಷೆ ಮರಾಠಿ ಮಾತಾಡಲಿ ಆದರೆ ನಮ್ನ ಭಾಷೆ ಕಲಿಯಲೇಬೇಕು.ಇದನ್ನು ಖಂಡನೆ ಮಾಡಲೇಬೇಕು.ಇಂಥ ಘಟನೆ ನಡೆದಾಗ ಪಕ್ಷಾತೀತವಾಗಿ ಖಂಡಂ ಮಾಡಬೇಕು. ಎಂಇಸಿ ಯಾವಾಗಲೂ ಅಲ್ಲಿ ಗೆಲ್ಲುತಿತ್ತು, ಈಗ ಪರಿಸ್ಥಿತಿ ಬದಲಾಗಿದೆ ಎಂದರು,
ಬಿಜೆಪಿ ಯಾವತ್ತೂ ಜನಪರ ಇಲ್ಲ.ಕೆಲಸ ಮಾಡಿ ಓಟು ತೆಗೆದುಕೊಳ್ಳುವುದು ಅವರ ಪ್ರಣಾಳಿಕೆಯಲ್ಲೇ ಇಲ್ಲ.ಬಿಜೆಪಿಯವರು ಕೆಲಸ ಮಾಡುವುದನ್ನೇ ಮರೆತಿದ್ದಾರೆ.ಬೆಂಗಳೂರಲ್ಲಿ ೧.೪೦ ಕೋಟಿ ಜನರಿದ್ದಾರೆ.ಬಿಜೆಪಿ ಕಾಲದಲ್ಲಿ ೬ ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ರು.ಗಾರ್ಡನ್ ಸಿಟಿಗೆ ಗಾರ್ಬೇಜ್ ಸಿಟಿ ಅಂತ ಹೆಸರು ತಂದ ಕುಖ್ಯಾತಿ ಬಿಜೆಪಿಯವರದ್ದು.ದೇಶದಲ್ಲಿ ಎಲ್ಲಾದ್ರೂ ಪಾಟ್ ಹೋಲ್ ಮುಚ್ಚುವುದಕ್ಕೆ ಹೈಕೋರ್ಟ್ ಮಾನಿಟರ್ ಮಾಡಿರುವುದನ್ನು ಕೇಳಿದ್ದೀರಾ?.ಇಷ್ಟು ದೊಡ್ಡ ಬೆಂಗಳೂರು ನಿರ್ವಹಣೆ ಮಾಡಲು ಬಿಬಿಎಂಪಿಯನ್ನು ಎರಡೋ ಮೂರೋ ಮಾಡಬೇಕಾಗುತ್ತದೆ ಎಂದರು.
ವಾಹನಗಳು ನಮ್ಮಲ್ಲಿ ವಿಪರೀತ ಜಾಸ್ತಿ ಆಗುತ್ತಿದೆ.ಆ ದೃಷ್ಟಿಯಿಂದ ಶಿವಕುಮಾರ್ ಆ ಮಾತು ಹೇಳಿರಬೇಕು.ಡಿಕೆಶಿವಕುಮಾರ್ ಗೆ ಎರಡಲ್ಲ ನಾಲ್ಕು ಖಾತೆ ಕೊಟ್ಟರೂ ಕೂಡ ನಿಭಾಯಿಸುತ್ತಾರೆ.ಬಿಜೆಪಿಯವರ ಆರೋಪ ಸಹಜ. ಇನ್ನು ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ಬೋಗಸ್ ಇರಬಹುದು.ಗೃಹ ಸಚಿವರ ಜೊತೆಗೆ ಈ ಬಗ್ಗೆ ಮಾತಾಡ್ತೇನೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪದ ಬಗ್ಗೆ ಮಾತಾನಾಡಿ ನಾವು ಹಾಳುಮಾಡಿದ್ದಲ್ಲ,ಅವರು ಮಾಡಿದ್ದು. ಮಧ್ಯರಾತ್ರಿ ಅಲ್ಲಿಗೆ ಹೋಗಿದ್ದೇಕೆ ಅಂತ ಅರಗ ಹೇಳಲಿಲ್ವೇ.ಈಶ್ವರಪ್ಪ ಮೆರವಣಿಗೆ ಮಾಡಲಿಲ್ವಾ.ಅವರಿಂದಾಗಿಯೇ ವ್ಯವಸ್ಥೆ ಹಾಳಾಗಿದ್ದು.ತಪ್ಪುಗಳು ಆಗುತ್ತವೆ .ಆದಾಗ ಆ್ಯಕ್ಟ್ ಮಾಡಿ ಸರಿಪಡಿಸಬೇಕು.ದಕ್ಷಿಣ ಕನ್ನಡದಲ್ಲಿ ಕೊಲೆಗಳು ಆಗ್ತಿದ್ವು.ನಾನು ಗೃಹ ಮಂತ್ರಿ ಆದ್ಮೇಲೆ ಅಲ್ಲಿ ನಿಂತ್ವು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
2028 ಕ್ಕೆ ನನ್ನ ನೇತೃತ್ವದಲ್ಲೇ ಚುನಾವಣೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿದ ಅವರು ಅದನ್ನೆಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾವ ಎಲೆಕ್ಷನ್ಗೆ ಯಾರು ಅಧ್ಯಕ್ಷರಾಗಿರಬೇಕು ಅಂತ ತೀರ್ಮಾನ ಮಾಡುತ್ತೆ.ಈಗಲೇ ಹೇಳೋಕೆ ಬರಲ್ಲ.ಅದನ್ನೆಲ್ಲಾ ಹೈಕಮಾಂಡ್ ತೀರ್ಮಾನ ಮಾಡೋದು .ಅದನ್ನ ಎಲ್ಲರಿಗೂ ಆಸೆ ಇರುತ್ತೆ.ಆಗಾಗಿ ಸತೀಶ್ ಜಾರಕಿಹೊಳಿ ಆಸೆ ವ್ಯಕ್ತಪಡಿಸಿರಬಹುದು ಎಂದಿದ್ದಾರೆ.ನಾನು ಸಿಎಂ ಆಗಲ್ಲ ಅಂತ ಗೊತ್ತು, ಅದಕ್ಕೆ ಆಸೆ ಇಟ್ಕೊಂಡಿಲ್ಲ ಎಂದ್ರು,.