ಬೆಂಗಳೂರು; ಮಾಧ್ಯಮದಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಎಂಪಿ ಕ್ಯಾಂಡಿಡೇಟ್ ಗಳು, ಪರಾಜಿತ ಅಭ್ಯರ್ಥಿಗಳು ಕೂಡ ಕರೆಯುತ್ತೇವೆ. ಇದು ನಿರಂತರ ಪ್ರಕ್ರಿಯೆ. ಬಳಿಕ ಸಿಎಂ ಡಿಸಿಎಂ ಜೊತೆಗೂ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತೇವೆ. ಮಾಧ್ಯಮದಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ಅದೆಲ್ಲ ನಿಮ್ಮ ಕಲ್ಪನೆ ಮಾತ್ರ ಎಂದಿದ್ದಾರೆ.
ಇಂದೇ ವೇಳೆ ಸಭೆಗೆ ಸಂಬಂಧಪಟ್ಟಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತಿರಿಸಿದ ಅವರು ಇದು ಸಂಘಟನಾತ್ಮಕ ಚಟುವಟಿಕೆ ಎಐಸಿಸಿ ಕೆಪಿಸಿಸಿ ಜಂಟಿ ಯಾಗಿ ಮಾಡಬೇಕಿದೆ. ಎಂಎಲ್ಎ ಗಳು ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ಒಂದೇ ಒಂದು ರಾಜ್ಯ ಇಡೀ ದೇಶದಲ್ಲಿ ೫೨ ಸಾವಿರ ಕೋಟಿ ನೇರವಾಗಿ ಜನರ ಖಾತೆಗೆ ಹಾಕುತ್ತಿರುವ ರಾಜ್ಯ. ಗೃಹ ಲಕ್ಷ್ಮಿಯರ ಖಾತೆಗೆ ೨೪ ಸಾವಿರ ಹಣವನ್ನು ಖಾತೆಗೆ ಹಾಕುತ್ತಿದ್ದೇವೆ. ಮೋದಿ ಹಾಗೂ ಬಿಜೆಪಿ ಸೃಷ್ಟಿ ಮಾಡಿದ ಇನಫ್ಲೆಷನ್ ಗೆ ಪರಿಹಾರ ನಾವು ಒದಗಿಸಿದ್ದೇವೆ. ೪ ಕೋಟಿ ಜನರಿಗೆ ಅಕ್ಕಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
೪ ಲಕ್ಷ ಯುವಕರಿಗೆ ಸ್ಕಾಲರ್ ಶಿಪ್ ಸಿಗುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕಾಂಗ್ರೆಸ್ ಸಂಘಟನೆ ಅವರವರ ಕ್ಷೇತ್ರದಲ್ಲಿ ಹೇಗಿದೆ ಎಂಬ ವರದಿ ಪಡೆಯುತ್ತಿದ್ದೇವೆ. ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ರಿವ್ಯೂ ಮಾಡುತ್ತಿದ್ದೇವೆ. ಎಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಮಾಹಿತಿ ಪಡೆಯುತ್ತೇವೆ. ಸಿಎಂ ಹಾಗೂ ಸಚಿವರಿಗೆ ಇದರಿಂದ ಮಾಹಿತಿ ನೀಡಲು ಅರ್ಥ ಮಾಡಿಕೊಳ್ಳಲು ಅನುಕೂಲ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಬಿ ಆರ್ ಪಾಟೀಲ್ ಮಾತುಕತೆ ನಡೆಸಿದ್ರು. ಬಳಿಕ ಮಾತನಾಡಿದ ಅವರು ಹೈಕಮಾಂಡ್ ನಿಂದ ನನಗೆ ಕರೆ ಬಂದಿತ್ತು. ಸುರ್ಜೇವಾಲ ಅವರು ಜೊತೆ ದೀರ್ಘ ಸಭೆ ಆಯ್ತು. ನಾನು ಹೇಳಬೇಕಾಗಿದ್ದನ್ನ ಹೇಳಿದ್ದೇನೆ. ನಾನು ಹೇಳಿದ್ದನ್ನು ನೋಟ್ ಮಾಡಿಕೊಂಡಿದ್ದಾರೆ. ಮುಂದೆ ತೀರ್ಮಾನ ಅವರಿಗೆ ಬಿಟ್ಟಿದ್ದು. ಅಲ್ಲಿ ಏನು ಮಾತಾಡಿದ್ದೀನಿ ಅನ್ನೋದು ನಾನು ನಿಮಗೆ ಹೇಳಲ್ಲ. ನಾನು ಹೇಳಿದ್ದಕ್ಕೆ ಬದ್ಧವಾಗಿದ್ದೇನೆ. ಅವರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದಿದ್ದಾರೆ.
ದಾಖಲೆ ಏನಾದರೂ ಕೊಟ್ಟರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವರು ದಾಖಲೆ ಕೇಳಿಲ್ಲ, ನಾನು ಕೊಟ್ಟಿಲ್ಲ.ಅವರು ಕರೆದಿದ್ದರು, ನಾನು ಹೋಗಿದ್ದೆ. ಸುರ್ಜೇವಾಲಾ ವಾರ್ನ್ ಮಾಡಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ ಅವರು ವಾರ್ನ್ ಮಾಡಿಲ್ಲ.ವಾರ್ನ್ ಮಾಡಿದ್ದಾರೆ ಅನ್ನೋದು ಮಾಧ್ಯಮ ಸೃಷ್ಟಿ ಎಂದು ಇದೇ ವೇಳೆ ಅವರು ಹೇಳಿದ್ದಾರೆ.