ಬೆಂಗಳೂರು; ಉದ್ಯೋಗ ನೇಮಕಾತಿ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಗೊಂದಲ ಜನರಲ್ಲಿ ಇಲ್ಲ. ಇದಕ್ಕೆ ನೇರವಾಗಿ ಸರ್ಕಾರ ಹೊಣೆ. ಎಲ್ಲರಿಗೂ ನ್ಯಾಯ ಸಿಗುವಂತೆ ಸರ್ಕಾರ ಕ್ರಮ ವಹಿಸಬೇಕು. ಉದ್ಯೋಗ ನೇಮಕಾತಿ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಮೂರು ವರ್ಷವಾದರೂ ನೇಮಕಾತಿ ಮಾಡಿಲ್ಲ ಎಂದರೆ ಸಹಜವಾಗಿ ಯುವಕರಲ್ಲಿ ಆಕ್ರೋಶ ಬರುತ್ತದೆ.ನಿಮ್ಮ ಅಧಿಕಾರದ ಕಚ್ಚಾಟದಲ್ಲಿ ಯುವಕರನ್ನು ಮರೆತರೆ ಸಹಜವಾಗಿ ಅವರು ಬೀದಿಗೆ ಬರಬೇಕಾಗುತ್ತದೆ.ವಿಪಕ್ಷವಾಗಿ ನಾವು ನಿಮ್ಮನ್ನು ಪ್ರಶ್ನೆ ಮಾಡಬೇಕು, ಯುವಕರ ಜೊತೆ ನಿಲ್ಲಬೇಕು.ದೇಶದ ಎಲ್ಲಾ ವಿಚಾರಗಳ ಬಗ್ಗೆ ದಾರಿ ತಪ್ಪಿಸುವ ನೀವು ಈ ವಿಚಾರದಲ್ಲಿ ಉತ್ತರ ಕೊಡಲ್ಲ.ಪ್ರತಿಭಟನೆ ಮಾಡುವ ಯುವಕರು ಯಾರೂ ರಾಜಕೀಯ ಮಾಡುವಂತಹವರಲ್ಲ ಎಂದಿದ್ದಾರೆ.
ಮಾತಿನಂತೆ ನಡೆದುಕೊಳ್ಳಿ ಎಂದು ನಾವು ಹೋರಾಟ ಮಾಡುತ್ತಿರುವುದಕ್ಕೆ ಸರ್ಕಾರ ಗ್ಯಾರಂಟಿ ಕೊಡುತ್ತಿದೆ, ಹೃದಯದಿಂದ ಕೊಡುತ್ತಿಲ್ಲ. ಸರ್ಕಾರ ಸುಳ್ಳು ಹೇಳಿದಾಗ ಯಾರನ್ನು ಕೇಳಬೇಕು? ಯಾಕೆ ಸರ್ಕಾರ ಸುಳ್ಳು ಹೇಳಲು ಬಂದಿದೆ?.ಎಲ್ಲಾ ಕಡೆಯಲ್ಲೂ ಮೀಸಲಾತಿ ಕೊಡಿ ನಾವು ಬೇಡ ಎನ್ನಲ್ಲ ಎಂದ ಅವರು ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿರುವ ಪ್ರಕರಣದ ಬಗ್ಗೆ ಮಾತನಾಡಿ ಅಟ್ಟೂರು ಭಾಗದಲ್ಲಿ ನಮ್ಮ ಕಾರ್ಯಕರ್ತರೇ ಮಾಹಿತಿ ಕೊಟ್ಟು ಹಿಡಿದಿರುವುದು. ಇದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು .ಐದು ಗ್ಯಾರಂಟಿಗಳನ್ನು ಕೊಡುವಾಗ ಅಂದು ನಿಮಗೆ ಮತ ಅಷ್ಟೇ ಬೇಕಾಗಿತ್ತು.ಅಂದು ನೀವು ಅದರ ಸಾಧಕ ಬಾಧಕ ಯೋಚನೆ ಮಾಡಲಿಲ್ಲ. ಬೇಡ ಎನ್ನುವವರು ತಾವಾಗಿಯೇ ಗ್ಯಾರಂಟಿಗಳನ್ನು ಬಿಟ್ಟುಬಿಡುತ್ತಾರೆ ಎಂದು ತಿಳಿಸಿದ್ದಾರೆ,











