ಮನೆ Latest News ಸರಕಾರ ಸಮೀಕ್ಷೆ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ; ವಿಪಕ್ಷ ನಾಯಕ ಆರ್ ಅಶೋಕ್...

ಸರಕಾರ ಸಮೀಕ್ಷೆ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು; ಸರಕಾರ ಸಮೀಕ್ಷೆ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿದೆ. ಹಿಂದೂ ವಿರೋಧಿ ನೀತಿಯೇ ಅಜೆಂಡಾವಾಗಿದೆ. ಕ್ರಿಶ್ಚಿಯನ್ ಅನ್ನೋ‌ದನ್ನು ತಂದ್ರು. ಈ ಪದವನ್ನು ಯಾಕೆ ತಂದ್ರು..?. ಸೋನಿಯಾ ಗಾಂಧಿ ಓಲೈಕೆ ಮಾಡಲು ಬಳಸಿದ್ದಾರೆ.

ಸೋನಿಯಾಗಾಂಧಿಯೂ ಕ್ರಿಶ್ಚಿಯನ್, ಹಾಗಾಗಿ ಸಿದ್ದರಾಮಯ್ಯ ಮಾಡಿದ್ದಾರೆ. ಸರಕಾರದ ಕುತಂತ್ರ ಬಟಾಬಯಲಾಗಿದೆ.  ಸಮೀಕ್ಷೆಯಲ್ಲಿ ಪಾಕಿಸ್ತಾನವನು ಎಂದು ಹೇಳಿದರೆ ಬರೆದುಕೊಳ್ಳುತ್ತೀರಾ. ಸಂವಿಧಾನ ಒಪ್ಪಲ್ಲ, ಅಂಬೇಡ್ಕರ್ ಒಪ್ಪಲ್ಲ ಅಂದ್ರೆ ಬರೆದುಕೊಳ್ಳುತ್ತೀರಾ .ಜಾತಿ ಗಣತಿ ಅಲ್ಲದೆ ಇದು ಮತ್ತಿನ್ನೇನು..? ಎಂದಿದ್ದಾರೆ.

ಸೋನಿಯಾ ಗಾಂಧಿ ನಿರ್ದೇಶನದ ಮೇಲೆ‌ ಹಿಂದೂ ಧರ್ಮ ಒಡೆಯಲಾಗುತ್ತಿದೆ. ವಿರೋಧ ಮಂತ್ರಿಗಳು ರಾಜೀನಾಮೆ ಕೊಟ್ಟು ಬರಬೇಕು.ಕೆಲವು ಮಂತ್ರಿಗಳು ತೋರಿಕೆಗೆ ವಿರೋಧ ಮಾಡಿದ್ದಾರೆ. ಮುಂದೆ ಇಂತಹವನ್ನು ಸಮುದಾಯಗಳು ತರಾಟೆ ತಗೆದುಕೊಳ್ಳುತ್ತವೆ. ಸಮುದಾಯವನ್ನು ಓಲೈಕೆ ಮಾಡುವ ರಾಜಕಾರಣ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಮಿಷನರಿ ಕೈವಾಡ ಕಾಣುತ್ತಿದೆ. ಮತಾಂತರವನ್ನು ಸರಕಾರ ತಡೆಯಬೇಕು. ಸರಕಾರದ ಪ್ರಯೋಕತ್ವದ ಮತಾಂತರಕ್ಕೆ‌ ಸಿದ್ದರಾಮಯ್ಯ ರಾಯಭಾರಿ. ಯಾಕೆಂದ್ರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲ ಅಂದ್ರೆ ಎಲ್ಲರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸಬೇಕು. ಸಿಎಂರ ಅಧಿಕಾರದ ಆಸೆಗೋಸ್ಕರ ಹಿಂದೂಗಳನ್ನು ಕ್ರಿಶ್ಚಿಯನ್ ಮಾಡಲು ಹೊರಟಿದ್ದಾರೆ. ಹಿಂದೂ ಧರ್ಮವನ್ನು ಮಲಿನ ಮಾಡಲು ಹೊರಟಿದ್ದಾರೆ. ಸರಕಾರ ಎರಡು ವರ್ಷ ಅಷ್ಟೇ ಇರಲಿದೆ. ಆಮೇಲೆ ಈ ವರದಿಯನ್ನು ಯಾರು ಕೇಳ್ತಾರೆ. ಸಿದ್ದರಾಮಯ್ಯ ಮಾಡುತ್ತಿರುವ ಸಮೀಕ್ಷೆ ಅಟೆಂಟಿಕ್ ಅಲ್ಲ.ಮುಂದೆ‌ ಬರುವ ಸರಕಾರ ರಿಜೆಕ್ಟ್ ಮಾಡಲಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಸಮೀಕ್ಷೆಯಲ್ಲಿ ಜಾತಿ ಹೆಸರು ಯಾಕೆ..?.  ಮಧುಸೂದನ್ ನಾಯ್ಕ್ ಪಾಕಿಸ್ತಾನದವ್ರು ಅಂತಾ ಹೇಳ್ತಾರೆ ಬರಿಬಹುದಾ ಅದನ್ನು ಬರೆದುಕೊಳ್ಳಬಹುದಾ..? . ಏನು ಬೇಕಾದರೂ ಹೇಗೆ ಬರೆಸಲು ಸಾಧ್ಯ. ಸರಕಾರಕ್ಕೆ ಒಂದು ಮಾರ್ಗಸೂಚಿ ಬೇಡವೇ..?. ಆಯೋಗದ ಅಧ್ಯಕ್ಷ ಸಂವಿಧಾನಕ್ಕೆ ಅಪಚಾರವಾಗುವ ಮಾತುಗಳನ್ನು ಆಡಿದ್ದಾರೆ.

ಸಮೀಕ್ಷೆ ರಾಜಕಾರಣದ ಓಲೈಕೆ ಮಾಡುವ ಸಮೀಕ್ಷೆ.  ಸಮೀಕ್ಷೆಯಲ್ಲಿ ಯಾವುದೇ ಜಾತಿಗೆ ನ್ಯಾಯ ಸಿಗುವುದಿಲ್ಲ .  ಇದು ಧರ್ಮ ಒಡೆಯುವ ಸಮೀಕ್ಷೆ.. ಇದು ಪಕ್ಕಾ..! ಡೌಟೇ ಬೇಡ.  ಸಿದ್ದರಾಮಯ್ಯ ಧರ್ಮ ಒಡೆಯುವ ಶಾಲೆಯ ಹೆಡ್ ಮಾಸ್ಟರ್ .  ಉಳಿದ ಸಚಿವರು ಸಬ್ಜೆಕ್ಟ್ ಟೀಚರ್ಸ್ . ಮುಂದಿನ ವರ್ಷ ಗಣೇಶ ಹಬ್ಬವೇ ಇಲ್ಲ ಎಂದು ಹೇಳುತ್ತಾರೆ . ರಾಜ್ಯವನ್ನು ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.