ಮನೆ Latest News ಸರ್ಕಾರ ಜಾತಿ ಗಣತಿ ಎಂಬ ಮರಕೋತಿ ಆಟ ಆಡುತ್ತಿದೆ : ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ...

ಸರ್ಕಾರ ಜಾತಿ ಗಣತಿ ಎಂಬ ಮರಕೋತಿ ಆಟ ಆಡುತ್ತಿದೆ : ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು: ಸರ್ಕಾರ ಜಾತಿ ಗಣತಿ ಎಂಬ ಮರಕೋತಿ ಆಟ ಆಡುತ್ತಿದೆ  ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ನಿನ್ನೆ ತಿಂಡಿ ತಿಂದು ಕೆಲಸ ಕಾರ್ಯ ಇಲ್ಲದೇ ಹೋಗಿರುವ ಕ್ಯಾಬಿನೆಟ್ ಆಗಿದೆ. ಕ್ಯಾಬಿನೆಟ್ ಕರೆದು ಈಗ ಲಿಖಿತವಾಗಿ ಕೊಡಬೇಕಂತೆ. ಇದೆಲ್ಲಾ ಸಿದ್ದರಾಮಯ್ಯ ಟ್ರಿಕ್ಸ್. ಅವರ ಸಚಿವರನ್ನೇ ಚುನಾವಣೆ ವೇಳೆ ಕಟ್ಟಿ ಹಾಕಲು ಮಾಡಿರುವ ಕುತಂತ್ರ. ಡಿ.ಕೆ. ಶಿವಕುಮಾರ್, ಚಲುವರಾಯಸ್ವಾಮಿ, ಲಿಂಗಾಯತ ಸಚಿವರು ಏನಾದರೂ ಲಿಖಿತವಾಗಿ ಕೊಟ್ಟರೆ ಅದನ್ನು ಅವರ ವಿರುದ್ಧ ಚುನಾವಣೆ ಸಮಯಕ್ಕೆ ಬಹಿರಂಗಪಡಿಸಲು ಪ್ಲಾನ್ ಮಾಡಿದ್ದಾರೆ. ಸಿದ್ದಗಂಗಾ ಮಠಕ್ಕೆ ಗಣತಿಗೆ ಬಂದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಜಾತಿ ಗಣತಿ ಮಾಡಿರುವುದೇ ಅವೈಜ್ಞಾನಿಕ. ಕಾಂಗ್ರೆಸ್ ನವರೇ ಅದನ್ನು ಕೀಟಲೆ ಮಾಡಿದರು. ಡಾಟಾ ಭರ್ತಿ ಮಾಡಲು ಶಾಲಾ ಮಕ್ಕಳನ್ನು ಬಳಸಿದ್ದಾರೆ. ಖರ್ಚು ಮಾಡಿದ 165 ಕೋಟಿ ಕೊಳ್ಳೆ ಹೊಡೆದಿದ್ದಾರೆ. ಕಾಂತಿಯೇ ಇಲ್ಲದ ಕಾಂತರಾಜ ಸಹಿ ಮಾಡದೇ ಯಾಕೆ ಓಡಿ ಹೋದ?.ಒರಿಜಿನಲ್ ಕಡತವೇ ಇಲ್ಲ ಅಂತಾ ಜಯಪ್ರಕಾಶ್ ಹೆಗ್ಡೆ ನಮ್ಮ ಸರ್ಕಾರಕ್ಕೆ ಬರೆದ ಪತ್ರ ಇದೆ ಎಂದರು.

ಬಾಯಿ ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್ ನ ಕಪಿಗಳಿಗೆ ಈಗ ಅರ್ಥ ಆಗಿದ್ಯಾ?. ಮನೆ ಮನೆಗಳಿಗೆ ಹೋಗಿರುವ ದಾಖಲೆಗಳನ್ನು ಬಿಡುಗಡೆ ಮಾಡಿ. ಸಿದ್ದರಾಮಯ್ಯ ಮನೆಯಲ್ಲಿ ಕುಳಿತುಕೊಂಡು ಅವರ ಗ್ಯಾಂಗ್ ತಯಾರು ಮಾಡಿರುವ ವರದಿ ಇದು. ನವೆಂಬರ್ ನಲ್ಲಿ ಸಿದ್ದರಾಮಯ್ಯ ಕೆಳಗಿಳಿಯುವಾಗ ಇದನ್ನು ಬಳಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.ಒಂದು ಕೋಟಿಯಷ್ಟು ಜನ ತ್ರಿಶಂಕು ಜಾತಿಯವರ ಭವಿಷ್ಯ ಏನು?. ಸಿದ್ದರಾಮಯ್ಯ ಮೋಸದ ರಾಮಯ್ಯ. ಅಧಿಕಾರ ಹಸ್ತಾಂತರ ಮಾಡಬೇಕು ಅಂತಾ ಆದಾಗ ವರದಿ ಬಿಡುಗಡೆ ಮಾಡಿದ್ದಾರೆ. ಎರಡು ವರ್ಷದಿಂದ ಕಳ್ಳೇಕಾಯಿ ತಿಂತಿದ್ರಾ?. ಎರಡು ವರ್ಷ ಮಜಾ ಹೊಡೆದುಕೊಂಡು ಇದ್ದರು.ಇದು ನಾಳೆ ಬಾ, ನಾಡಿದ್ದು ಬಾ ಅಲ್ಲ, ಆಚೆ ನಾಡಿದ್ದು ಬಾ ಎಂಬ ಕಥೆ ಆಗಿದೆ ಎಂದು ತಿಳಿಸಿದ್ರು.

ಈಗ ಸಿದ್ದರಾಮಯ್ಯನ ವರದಿ ಮೂಲಕ ಮುಸ್ಲಿಮರು ಬಹು ಸಂಖ್ಯಾತರು ಅಂತಾ ಆಗಿದೆ. ಕೂಡಲೇ ಅವರಿಗೆ ಅಲ್ಪಸಂಖ್ಯಾತ ಎಂಬ ಸ್ಥಾನಮಾನ ತೆಗೆದು ಹಾಕಬೇಕು. ಎಲ್ಲಾ ಸಮುದಾಯವರು ಅವರವರೇ ಗಣತಿ ಮಾಡುವುದಾದರೆ ಈ ಸರ್ಕಾರ ಯಾಕೆ ಬೇಕು?. ಒದ್ದು ಕಿತ್ತು ಬಿಸಾಕಿ ಈ ಸರ್ಕಾರವನ್ನು . ಕಾಂಗ್ರೆಸ್ ಶಾಸಕರೇ ವರದಿ ಒಪ್ಪಲ್ಲ, ಸಚಿವರು ರಾಜೀನಾಮೆ ಕೊಡಲಿ ಅಂದಿದ್ದಾರೆ. ಕಾಂಗ್ರೆಸ್ ಪಕ್ಷದವರೇ ವಿರೋಧಿಸುವ ವರದಿ ಸಿದ್ದರಾಮಯ್ಯಗೆ ಯಾಕೆ?. ಸಿದ್ದರಾಮಯ್ಯಗೆ ಕೂಡಾ ವರದಿ ಜಾರಿ ಆಗುವುದು ಬೇಕಿಲ್ಲ. ಸಂಕಟ ಬಂದಾಗ ವೆಂಕಟರಮಣ ಅಷ್ಟೇ ಎಂದಿದ್ದಾರೆ.

ಸೋನಿಯಾ ಗಾಂಧಿ ೫ ವರ್ಷ ಸಿದ್ದರಾಮಯ್ಯ ಸಿಎಂ ಅಂತಾ ಹೇಳಲಿ. ಆಗ ಈ ಜಾತಿ ಗಣತಿ ವರದಿ ಆಚೆ ಬಂದರೆ ಕೇಳಿ, ಸೀಲ್ ಆಗಿ ಸೈಲೆಂಟ್ ಆಗಿ ಹೋಗಿ ಬಿಡುತ್ತದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಕೂಡಾ ನಾಳೆ ಬಾ ಅಂತಾನೇ ಆಗುತ್ತದೆ. ಸಿದ್ದರಾಮಯ್ಯರನ್ನು ಮುಂದುವರಿಸದಿದ್ದರೆ ವರದಿ ಇಟ್ಟುಕೊಂಡು ಅವರು ಬೀದಿಗೆ ಇಳಿಯುತ್ತಾರೆ. ನಿನ್ನೆ ಕ್ಯಾಬಿನೆಟ್ ನಲ್ಲಿ ದೊಡ್ಡ ಗಲಾಟೆ ಆಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.ನಿನ್ನಿಂದ ಏನೂ ಸರ್ಕಾರ ಬಂದಿಲ್ಲ ಎಂಬ ಮಾತುಗಳ ಮಟ್ಟಕ್ಕೆ ಜಗಳ ಆಗಿದೆ ಎಂದರು.

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ಬ್ರಾಹ್ಮಣ ಸಮುದಾಯಕ್ಕೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ. ಬ್ರಾಹ್ಮಣ ಸಚಿವರು, ಕಾಂಗ್ರೆಸ್ ಬ್ರಾಹ್ಮಣ ಶಾಸಕರು ಈ ವರೆಗೆ ಮಾತನಾಡಿಲ್ಲ. ಅವರೆಲ್ಲರೂ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯಗೆ ಹಿಂದೂಗಳ ಬಗ್ಗೆ ಎಷ್ಟು ಕೋಪ ಇದೆ ಅಂತಾ ಫಸ್ಟ್ ಸ್ಯಾಂಪಲ್ ತೋರಿಸಿದ್ದಾರೆ. ಮುಂದೆ ಲಿಂಗಾಯತರು, ಒಕ್ಕಲಿಗರಿಗೂ ತೋರಿಸುತ್ತಾರೆ. ಇದೆಲ್ಲಾ ಸಿದ್ದರಾಮಯ್ಯ ಆದೇಶ ಇಲ್ಲದೇ ಆಗಲ್ಲ. ಜನಿವಾರ ಹಾಕುವ ಸಮುದಾಯದ ಮುಂದೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು.ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ನಡೆಯುತ್ತಿರುವುದು ಸಿದ್ದರಾಮಯ್ಯ ಪ್ರಾಯೋಜಿತ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು  ಅದಕ್ಕೆ ಮೂರು ಪೈಸೆಯ ಬೆಲೆಯೂ ಇಲ್ಲ. ಇವರಿಗೆ ಪ್ರತ್ಯೇಕವಾದ ಕಾನೂನು ಕೊಡಲು ಇದೇನು ಪಾಕಿಸ್ತಾನ, ಅಫ್ಘಾನಿಸ್ತಾನ ಅಲ್ಲ. ಕಾಂಗ್ರೆಸ್ ನವರೇ ದುಡ್ಡು ಕೊಟ್ಟು ಮಾಡಿಸುತ್ತಿರುವ ಪ್ರತಿಭಟನೆ .ಇವರು ಕೇವಲ ಹಿಂದೂಗಳ ಜಮೀನು ಮಾತ್ರ ಅಲ್ಲ, ಮುಸ್ಲಿಮರ ಜಮೀನನ್ನೂ ನುಂಗಿದ್ದಾರೆ. ಈ ನೆಲದ ಕಾನೂನನ್ನು ಪಾಲಿಸಬೇಕು ಅಷ್ಟೇ. ಈ ಸರ್ಕಾರ ಇರುವವರೆಗೆ ಬಹುಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲ. ಸಿದ್ದರಾಮಯ್ಯ ತೊಲಗುವವರೆಗೂ ಮುಸ್ಲಿಮರ ಓಲೈಕೆ ನಿಲ್ಲಲ್ಲ ಎಂದಿದ್ದಾರೆ.