ಮನೆ Latest News ಸರ್ಕಾರ ಬಾನು ಮುಸ್ತಾಕ್ ರನ್ನು ದಸರಾ ಉದ್ಘಾಟನೆಗೆ ಕರೆದು ಹಿಂದೂ ಭಾವನೆಗೆ ಧಕ್ಕೆ ತರ್ತಿದೆ;...

ಸರ್ಕಾರ ಬಾನು ಮುಸ್ತಾಕ್ ರನ್ನು ದಸರಾ ಉದ್ಘಾಟನೆಗೆ ಕರೆದು ಹಿಂದೂ ಭಾವನೆಗೆ ಧಕ್ಕೆ ತರ್ತಿದೆ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

0

ಬೆಂಗಳೂರು; ಸರ್ಕಾರ ಬಾನು ಮುಸ್ತಾಕ್ ರನ್ನು  ದಸರಾ ಉದ್ಘಾಟನೆಗೆ ಕರೆದು ಹಿಂದೂ ಭಾವನೆಗೆ ಧಕ್ಕೆ ತರ್ತಿದೆ  ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಮೈಸೂರು ದಸರಾ ಕನ್ನಡ ನಾಡಿನ ನಾಡ ಹಬ್ಬ. ಮೈಸೂರು ದಸರಾಕ್ಕೆ ಬಾನು ಮುಸ್ತಾಕ್ ಅವರನ್ನ ಅತಿಥಿಯಾಗಿ ಕರೆದಿದ್ದಾರೆ. ಯಾರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ವೋ, ಯಾರಿಗೆ ಮೂರ್ತಿ ಪೂಜೆ ಮೇಲೆ ನಂಬಿಕೆ ಇಲ್ವೋ ಅವರು ಬಂದು ಏನು ಮಾಡ್ತಾರೆ. ಸರ್ಕಾರ ಬಾನು ಮುಸ್ತಾಕ್ ದಸರಾಕ್ಕೆ ಕರೆದು ಹಿಂದೂ ಭಾವನೆಗೆ ಧಕ್ಕೆ ತರ್ತಾ ಇದೆ. ಸಾಹಿತ್ಯ ಸಮ್ಮೇಳನದಲ್ಲಿ ನೀವು ಕನ್ನಡವನ್ನ ತಾಯಿ ಭುವನೇಶ್ವರಿ ಗೆ ಹೋಲಿಸ್ತಿರಿ. ಅರಿಶಿಣ ಕುಂಕುಮ ಧ್ವಜ ಉಪಯೋಗಿಸ್ತಿರಿ ಆರಾಧನೆ ಮಾಡ್ತಿರಿ, ಅಲ್ಪ ಸಂಖ್ಯಾತರಾಗಿ ನಾನು ಎಲ್ಲಿ ನಿಲ್ಲಲಿ ಎಂದು ಪ್ರಶ್ನಿಸಿದ್ರು. ಅಂದರೆ ಅವರು ನಮ್ಮ ಭುವನೇಶ್ವರಿ ಯನ್ನ ಒಪ್ಪೊಲ್ಲ. ಹಾಗಾದರೆ ತಾಯಿ ಚಾಮುಂಡೇಶ್ವರಿ ಯನ್ನ ಹೇಗೆ ಒಪ್ತಾರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಏನಾಗಿದೆ. ಚಾಮುಂಡೇಶ್ವರಿಯನ್ನಉ ಒಪ್ಪದವರನ್ನು ಏಕೆ ಕರೆಯುತ್ತಾರೆ. ದಸರಾ ಕೇವಲ ಸಾಂಸ್ಕೃತಿಕ ಉತ್ಸವ ಅಲ್ಲ ಧಾರ್ಮಿಕ ಉತ್ಸವ. ತಾಯಿ ಚಾಮುಂಡೇಶ್ವರಿ ರಾಕ್ಷಸ ಸಂಹಾರ ಮಾಡಿದ್ದಕ್ಕೆ ದಸಾರಾ ಆಚರಿಸ್ತಿವಿ. ಧಾರ್ಮಿಕತೆ ಜೊತೆಗೆ ಸಾಂಸ್ಕೃತಿಕ ಉತ್ಸವ ಮಾಡ್ತಿವಿ. ಬಾನು ಮುಸ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು.  ಅವರು ಪುಷ್ಪಾರ್ಚನೆ ಮಾಡೊಲ್ಲ ಅಂತಾ ಭಾವಿಸ್ತೀನಿ. ಅವರ ಕಾರ್ಯಕ್ರಮ ದಿಂದ ಹೊರಹೋಗಬೇಕು ಅಂತಾ ಮನವಿ ಮಾಡ್ತೀನಿ. ಎಲ್ಲಾ ಭಕ್ತಾದಿಗಳು ವಿರೋಧ ಮಾಡ್ತಿವಿ. ಬಾನು ಮುಸ್ತಾಕ್ ಅವರು  ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆಯಾ ಹೇಳಲಿ. ನಂಬಿಕೆ ಇದ್ರೆ ಬನ್ನಿ, ನಮ್ಮ ವಿರೋಧ ಇಲ್ಲ. ಯಾವುದೇ ವಿಚಾರಕ್ಕೆ ನಮ್ಮ ವಿರೋಧ ಇಲ್ಲ. ಜಾತ್ಯಾತತೆಯ ಅರ್ಥ ಹಿಂದು ಧರ್ಮಕ್ಕೆ ವಿರೋಧ ಮಾಡು ಅನ್ನೋದಲ್ಲ. ಬಾನು ಮುಸ್ತಕ್ ಅವರನ್ನ ಸರ್ಕಾರ ವಾಪಸ್ ಕರೆಸ ಬೇಕು ಎಂದು ತಿಳಿಸಿದ್ದಾರೆ.

ಟಿಪ್ಪು ಹಾಗೂ ಹೈದರಾಲಿ ದಸರಾ ಆಚರಣೆ  ಮಾಡಿದ್ದರಬಹುದು ಆದರೆ ಎಂದು ಚಾಮುಂಡಿಗೆ ಎಂದು ನಮಸ್ಕಾರ ಮಾಡಿಲ್ಲ. ನಾವು ನಾಸ್ತಿಕರನ್ನು ಗೌರವಿಸಿಸ್ತಿವಿ  ನಾವು ವೈಚಾರಿಕವಾಗಿ ವಿರೋಧಿಸ್ತಾ ಇಲ್ಲ. ಅವರಿಗೆ ನಂಬಿಕೆಯೇ ಇಲ್ಲದಾಗ ಹೇಗೆ ಪುಷ್ಪಾರ್ಚನೆ ಮಾಡ್ತಿರಿ. ಈ ರಾಜ್ಯದಲ್ಲಿ ಭುವನೇಶ್ವರಿ ದೇವಸ್ಥಾನ ಇದೆ. ಕುವೆಂಪು ಅವರು ಜಯಹೇ ಕರ್ನಾಟಕ ಮಾತೆ ಅಂತಾ ಹೇಳಿದ್ರು.ಮಾತೆಯಾಗಿ ಪೂಜೆ ಮಾಡಿದ್ರು. ಇಂತಹದ್ದಕ್ಕೆ ಅಪಮಾನ ಮಾಡುವವರು ನಾಳೆ ಚಾಮುಂಡಿ ಗೆ ಅಪಮಾನ ಮಾಡೋಲ್ಲ ಅನ್ನೋದು ಏನು ಗ್ಯಾರಂಟಿ .ಇದು ನವರಾತ್ರಿ, ಇದು ದುರ್ಗೆಗೆ ಸಂಬಂಧಿಸಿದ್ದು. ಉತ್ತರ ಹೇಳಬೇಕು ಈ ಕಾಂಗ್ರೆಸ್ ಸರ್ಕಾರ ಎಂದರು.

ಇದೇ ಇಂಡಿ ಒಕ್ಕೂಟದ‌ ಕೇರಳ ಸರ್ಕಾರ ಶಬರಿ ಮಲೆ ಕಾರ್ಯಕ್ರಮ  ಉದ್ಘಾಟನೆಗೆ  ದೇವರೇ ನಂಬಂದ, ಹಿಂದೂ ವಿರೋಧಿಯಾಗಿರುವ ಸ್ಟಾಲಿನ್ ಗೆ ಕರೆಯುತ್ತಿದೆ. ಇತ್ತ ಕರ್ನಾಟಕ ಸರ್ಕಾರ ಚಾಮುಂಡಿ ನಂಬದ ಬಾನು ಮುಸ್ತಾಕ್ ಕರೆಯುತ್ತಾರೆ. ಅದೆಷ್ಟು ತುಷ್ಠಿಕರಣದ ರಾಜಕೀಯ ಮಾಡ್ತಿರಿ ಪ್ರಶ್ನಿಸಿದ್ದಾರೆ.