ಮನೆ Latest News ಪಂಚಮಸಾಲಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ; ಬೆಳಗಾವಿ ಡಿಸಿ ಮೊಹಮ್ಮದ್‌ ರೋಷನ್ ರಿಂದ ನಿಷೇಧಾಜ್ಞೆ ಜಾರಿ.

ಪಂಚಮಸಾಲಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ; ಬೆಳಗಾವಿ ಡಿಸಿ ಮೊಹಮ್ಮದ್‌ ರೋಷನ್ ರಿಂದ ನಿಷೇಧಾಜ್ಞೆ ಜಾರಿ.

0

ಬೆಳಗಾವಿ:  ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಹಿನ್ನೆಲೆ ಪಂಚಮಸಾಲಿ ಸಮುದಾಯ ಸುವರ್ಣ ವಿಧಾನ‌ಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆಗೆ ಕರೆಕೊಟ್ಟಿತ್ತು. ಡಿಸೆಂಬರ್ 10 ರಂದು ಶಕ್ತಿಸೌಧಕ್ಕೆ ಮುತ್ತಿಗೆ ಹಾಕಲು ಕರೆ ಕೊಟ್ಟಿತ್ತು. ಇದೀಗ ಅವರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.

ಬೆಳಗಾವಿ ಡಿಸಿ ಮೊಹಮ್ಮದ್‌ ರೋಷನ್  ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಡಿ.9 ಮತ್ತು 10 ರಂದು ಪಂಚಮಸಾಲಿ ಹೋರಾಟದ ವಾಹನ ಬೆಳಗಾವಿ ಪ್ರವೇಶ ಮಾಡದಂತೆ ನಿಷೇಧ ಹೇರಲಾಗಿದೆ. ಪಂಚಮಸಾಲಿ ಹೋರಾಟಕ್ಕೆ ಬರೋ ಟ್ರ್ಯಾಕ್ಟರ್, ಕ್ರೂಜರ್, ಇತರೆ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮುತ್ತಿಗೆಗೆ ಸಿದ್ಧತೆ ಮಾಡಕೊಳ್ಳಲಾಗಿತ್ತು. ಅಧಿವೇಶನ ಹಿನ್ನೆಲೆ ಸಿಎಂ, ಡಿಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಅಲ್ಲದೇ ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರು, ಮಕ್ಕಳು ಆಗಮಿಸುತ್ತಿದ್ದಾರೆ. ಹಾಗಾಗಿ ಕಾನೂನು ಸುವ್ಯವಸ್ಥೆ ಹಿತ ದೃಷ್ಟಿಯಿಂದ ಬಿಎನ್ ಎಸ್ ಎಸ್ ಕಾಯ್ದೆಯ ಕಲಂ 163 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಡಿ.9ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಹಿನ್ನೆಲೆ ಸರ್ಕಾರದ ಆಡಳಿತ ಯಂತ್ರವೇ ಬೆಳಗಾವಿಗೆ ಶಿಪ್ಟ್ ಆಗಿದೆ. ನಾಳೆಯಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಹೀಗಾಗಿ ಊಟ, ವಸತಿ, ಕಚೇರಿ ಸೇರಿದಂತೆ ಎಲ್ಲಾ ಹಂತದಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.ಡಿಸಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಅಧಿವೇಶನಕ್ಕೆ ಸಿದ್ಧತೆ ಮಾಡಲಾಗಿದೆ.ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಟೌನ್ ಶಿಪ್ ಸೇರಿ ಆರು ಕಡೆ ವಸತಿ ವ್ಯವಸ್ಥೆ ಮಾಡಲಾಗಿದ್ದು, 2750 ಕೊಠಡಿಗಳಲ್ಲಿ ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಹತ್ತು ಸಮಿತಿಗಳನ್ನ ರಚನೆ ಮಾಡಿ 18 ಜನ ಅಧಿಕಾರಿಗಳನ್ನ ಮೇಲುಸ್ತುವಾರಿಗಳನ್ನಾಗಿ ಮಾಡಲಾಗಿದೆ. ಅಧಿವೇಶನಕ್ಕೆ ಆರೂವರೆ ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಪೊಲೀಸ್ ಬಂದೋಬಸ್ತ್ ಗೆ ಆರು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ದಿನ ಅಧಿವೇಶನದಲ್ಲಿ ಸುಮಾರು ಇಪ್ಪತ್ತು ಸಾವಿರ ಜನ ಭಾಗಿಯಾಗಲಿದ್ದಾರೆ.

ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆ; ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿ

ಬೆಳಗಾವಿ; ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆ  ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿದ್ರು.

ಈ ವೇಳೆ ಮಾತನಾಡಿದ ಸ್ಪೀಕರ್ ಖಾದರ್, ಡಿ.9 ರಿಂದ 19ರವರೆಗೆ ಅಧಿವೇಶನ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಯಿಂದ ಅಧಿವೇಶನ ಪ್ರಾರಂಭವಾಗಲಿದೆ. ನಾಳೆ 10:30ಕ್ಕೆ ಅನುಭವ ಮಂಟಪದ ಭಾವಚಿತ್ರ ಅನಾವರಣಗೊಳಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ನಾಳೆ ಅನಾವರಣಗೊಳಿಸಲಿದ್ದಾರೆ. ಸಚಿವಾಲಯದ ಹಿರಿಯ ವರ್ಗ, ಸಚಿವರುಗಳು ಭಾಗಿಯಾಗಲಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಆಯ್ಕೆ ಆದವರ ಪ್ರತಿಜ್ಞೆ ಸ್ವೀಕಾರ ನಡೆಯಲಿದೆ. ಪ್ರಶ್ನಾವಳಿ ನಡೆಯಲಿದೆ, ಮಧ್ಯಾಹ್ನ‌ BSC ಸಭೆ ಕೂಡ ನಡೆಯಲಿದೆ. 5 ತಿದ್ದುಪಡಿ ವಿಧೇಯಕಗಳು‌ ಸರ್ಕಾರದಿಂದ ಚರ್ಚೆ ಆಗಲಿದೆ ಎಂದರು.

ಮುಂದುವರೆದು ಮಾತನಾಡಿದ ಅವರು  ಸುವರ್ಣಸೌಧದ ಸಭಾಂಗಣದ ಸ್ಪೀಕರ್‌ ಪೀಠ ವಿಧಾನಸೌಧದ ಮಾದರಿಯಲ್ಲೇ ನವೀಕರಣ ಆಗಿದೆ. ಡಿಸಿಎಂ, ಸಿಎಂ ಸಲಹೆ ಪಡೆದು ರೋಜ್‌ ವುಡ್ ಬಳಸಿ ನವೀಕರಣ ಮಾಡಲಾಗಿದೆ. 6 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಸಹಯೋಗದಿಂದ ಸುಮಾರು 10 ಕಮಿಟಿ ರಚಿಸಲಾಗಿದೆ. ಪ್ರತಿಭಟನೆ ಮಾಡುವವರಿಗೂ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಯುವಕರು, ವಿದ್ಯಾರ್ಥಿಗಳು, ಶಿಕ್ಷಕ ವರ್ಗಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಮಹಾತ್ಮ ಗಾಂಧಿ ಬೆಳಗಾವಿಗೆ ಬಂದು‌ಅಧಿವೇಶದಲ್ಲಿ ಭಾಗಿಯಾಗಿ 100 ವರ್ಷ ಕಳೆದಿದೆ. ಗಾಂಧೀ ಭಾವಚಿತ್ರ ಇರುವ ಎಕ್ಸಿಬಿಷನ್ ಮಾಡಲಾಗಿದೆ. ಚಿಲ್ಡ್ರನ್ಸ್ ಸೈನ್ಸ್ ಸೆಂಟರ್ ನಿರ್ಮಾಣ ಮಾಡಲಾಗಿದೆ ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಸ್ಪೀಕರ್ ಇಡೀ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಇದು ಸ್ವಾಭಿಮಾನದ ಸುವರ್ಣಸೌಧ, ಆದರೆ ಹೆಚ್ಚಿನ ಆದ್ಯತೆ ಈ ಭಾಗಕ್ಕೆ ಕೊಡಬೇಕು. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಹಿಮಾಚಲ ಪ್ರದೇಶ, ನಾಗಪುರದಲ್ಲೂ ಎರಡು ವಿಧಾನಸಭೆ ಇದೆ. ಶಾಶ್ವತವಾಗಿ ಶಾಸಕರ ಭವನ ಮಾಡುವ ಯೋಚನೆ ಇದೆ. ಲೋಕೋಪಯೋಗಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡ್ತೀವಿ. ಅನುಭವ ಮಂಟಪದ ಬಿಲ್ ಬಂದ ಕೂಡಲೇ ಮಾಹಿತಿ ನೀಡ್ತೀವೆ. ಚಿತ್ರಕಲಾ ಪರಿಷತ್ ನಿಂದ ಆ ಕಲಾಕೃತಿ ಮಾಡಲಾಗಿದೆ. ಸುವರ್ಣಸೌಧದ ವಿಧಾನಸಭಾ ಸಭಾಧ್ಯಕ್ಷದ ಪೀಠ ಕರ್ನಾಟಕ ರಾಜ್ಯ ಅರಣ್ಯ ನಿಗಮ ಸಿದ್ದಪಡಿಸಿದೆ. ಇದಕ್ಕೆ ಅಂದಾಜು 45 ಲಕ್ಷ ರೂಪಾಯಿ ವೆಚ್ಚ ತಗುಲಿದೆ.ಒಟ್ಟು 25 ಕೋಟಿ ರೂ. ಬೆಳಗಾವಿ ಅಧಿವೇಶಕ್ಕೆ ಖರ್ಚು ಆಗಲಿದೆ ಎಂದರು.

ಅಧಿವೇಶನ ಆರಂಭಕ್ಕೂ ಮುನ್ನ ಹೇಗಿತ್ತು, ಈಗ ಹೇಗಾಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಬೆಳಗಾವಿಯ ಜನರಿಗೆ ಚಿರೃಣಿ ಆಗಿರುತ್ತೇವೆ. ಯಾರು ವಿರೋಧ ಮಾಡ್ತಾರೋ ಅವರು ಬೆಳಗಾವಿಯವರು ಅಲ್ಲ ಎಂದರು. ಸದನದ ಒಳಗಿರುವ ಸಾವರ್ಕರ್ ಭಾವಚಿತ್ರ ತೆರವಿಗೆ ಒತ್ತಡ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು  ಯಾವುದೇ ಚರ್ಚೆ ಆಗಿಲ್ಲ, ಒತ್ತಡ ಬಂದಿಲ್ಲ. ಸಕಾರಾತ್ಮಕ ಚಿಂತನೆಗೆ ಅಷ್ಟೇ ಅವಕಾಶ. ನಮ್ಮಲ್ಲಿ ನಕಾರಾತ್ಮಕ‌ ಚಿಂತನೆಗೆ ಅವಕಾಶ ಇಲ್ಲ ಎಂದರು.ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನ ಸಿಎಂ ಬಳಿ ಕೇಳಬೇಕು. ಎರಡನೇ ರಾಜಧಾನಿ ಆದರೆ ನನಗೂ ಬಹಳ‌‌ ಸಂತೋಷ. ಸರ್ಕಾರಕ್ಕೆ ಸಲಹೆ ಕೊಡ್ತೀರ ಎಂಬ ಪ್ರಶ್ನೆಗೆ  ನನ್ನ‌ ಸಲಹೆಯನ್ನ ಅಲ್ಲಿ ಹೇಳ್ತೇನೆ ಎಂದ ಸ್ಪೀಕರ್ ಉತ್ತರಿಸಿದ್ದಾರೆ.