ಮನೆ Latest News ಸ್ಪೀಕರ್ ನಡೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ದಿನ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

ಸ್ಪೀಕರ್ ನಡೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ದಿನ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು: 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು ಟಿ ಖಾದರ್ ಅವರು ಅಮಾನತು ಮಾಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ದಿನ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ನಾವು ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇವೆ. ಒಬ್ಬ ಮಂತ್ರಿ ಹನಿಟ್ರಾಪ್ ಆಗಿದೆಎಂದು ಸಧಲದನದಲ್ಲಿ ಸರ್ಕಾರಕ್ಕೆ ಅಪಮಾನ. ಒಬ್ಬ ಸರ್ಕಾರದ ನಾಯಕರು ಅವರ ಪರ ನಿಲ್ಲಲಿಲ್ಲ. ಸಿಬಿಐ ತನಿಖೆಯಾಗಬೇಕು. ಸಿಎಂ ಸದನದಲ್ಲಿ ಉತ್ತರ ಕೊಡೊದಕ್ಕೆ ಯೋಗ್ಯತೆ ಇಲ್ಲ.ಅವರ ಸಹೋದ್ಯೋಗಿಯನ್ನ ರಕ್ಷಣೆ ಮಾಡೋಕೆ ಆಗ್ತಿಲ್ಲ. ಅವರೇ ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ನಾವು ಹೋರಾಟ ಮಾಡಿರೋದು ಸದನದ ಗೌರವ ಉಳಿಸೋದಕ್ಕೆ. ೧೮ ಶಾಸಕರನ್ನ ಅಮಾನತು ಮಾಡಿದ್ಸಾರೆ. ನಾವು ಯಾರು ಅವರು ಬರೋವರೆಗು ಸದನದಕ್ಕೆ ಹೋಗೊಲ್ಲ. ಬಾಯ್ಕಾಟ್ ಮಾಡ್ತಿವಿ ಎಂದ್ರು. ಬಳಿಕ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿದ ಬಿಜೆಪಿ ಜೆಡಿಎಸ್ ಶಾಸಕರು  ರಾಜ್ಯಪಾಲರ ಕಾರ್ಯದರ್ಶಿ ಮೂಲಕ  ರಾಜ್ಯಪಾಲರಿಗೆ ದೂರು ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು ನಾವು ರಾಜ್ಯಪಾಲರ  ಕಾರ್ಯದರ್ಶಿ ಭೇಟಿ ಮಾಡಿ ಬಂದಿದ್ದೇವೆ. ಮುಸ್ಲಿಂ ಮೀಸಲಾತಿ ಬಿಲ್ ತಂದಿದ್ದಾರೆ. ಇಡೀ ‌ದೇಶ ಎರಡು ಭಾಗ ಮಾಡಿದ್ದಾರೆ. ಹಿಂದೂಗಳನ್ನ ಭಾಗ ಮಾಡಿದ್ದಾರೆ. ಇದು‌ ಸಂವಿಧಾನ ವಿರೋಧಿ.ಧರ್ಮಾ ಧಾರಿತ ಮೀಸಲಾತಿ ನೀಡೋದಕ್ಕೆ‌ ಯಾವುದೇ ಅಧಿಕಾರ ಇಲ್ಲ. ಮುಸ್ಲಿಂ ಅವರ ಅಭಿವೃದ್ಧಿ ಮೇಲೆ ಹಣ ನೀಡುತ್ತಿದ್ದಾರೆ.ಇದೊಂದು ರೀತಿ ಹಲಾಲ್ ಬಜೆಟ್ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು. ಹಿಂದು ಮುಸ್ಲಿಂ ಒಟ್ಟಿಗೆ ಹೋಗಬೇಕೆಂದು ಸಂವಿಧಾನ ಹೇಳುತ್ತದೆ. ಆದ್ರೆ ಇದನ್ನ ಒಡೆಯೋ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಸ್ಲಿಂ ಅವರ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ 18  ಬಿಜೆಪಿ ಶಾಸಕರು 6 ತಿಂಗಳುಗಳ ಕಾಲ ಅಮಾನತು; ಸ್ಪೀಕರ್ ಯು ಟಿ ಖಾದರ್ ಆದೇಶ

ಬೆಂಗಳೂರು: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ 18  ಬಿಜೆಪಿ ಶಾಸಕರು 6 ತಿಂಗಳುಗಳ ಕಾಲ ಅಮಾನತು ಸ್ಪೀಕರ್ ಯು ಟಿ ಖಾದರ್ ಆದೇಶ ನೀಡಿದ್ದಾರೆ. ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ನಿನ್ನೆಯಿಂದ ಚರ್ಚೆ ನಡೆಯುತ್ತಿದೆ. ಇಂದು ಸಹ ಹನಿಟ್ರ್ಯಾಪ್ ವಿಚಾರದಲ್ಲಿ ಬಾವಿಗಿಳಿದು ಬಿಜೆಪಿ ಶಾಸಕರು ಗಲಾಟೆ ಮಾಡಿದ್ದಾರೆ.

ಈ ವೇಳೆ  ಸ್ಪೀಕರ್ ಪೀಠಕ್ಕೆ ಬಿಜೆಪಿ ಶಾಸಕರು ಪೇಪರ್ ಗಳನ್ನ ಎಸೆದಿದ್ದಾರೆ. ಇದಕ್ಕೆ ಗರಂ ಆದ ಸ್ಪೀಕರ್ 18 ಶಾಸಕರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಶಾಸಕರಾದ ದೊಡ್ಡನಗೌಡ ಪಾಟೀಲ್, ಅಶ್ವಥ್ ನಾರಾಯಣ್, ಭರತ್ ಶೆಟ್ಟಿ, ಎಸ್.ಆರ್ ವಿಶ್ವನಾಥ್, ಎಂ.ಆರ್ ಪಾಟೀಲ್,  ಭೈರತಿ ಬಸವರಾಜು,ಬಿ ಸುರೇಶ್ ಗೌಡ, ಮುನಿರತ್ನ, ಶರಣು ಸಲಗರ, ಯಶಪಾಲ್ ಸುವರ್ಣ, ಚನ್ನಬಸಪ್ಪ, ಧೀರಜ್ ಮುನಿರಾಜು, ಉಮಾನಾಥ್ ಕೋಟ್ಯಾನ್, ಬಿ.ಪಿ ಹರೀಶ್, ರಾಮಮೂರ್ತಿ,ಶೈಲೇಂದ್ರ ಬೆಲ್ದಾಳೆ, ಬಸವರಾಜ ಮತ್ತಿಮಾಡ, ಚಂದ್ರು ಲಮಾಣಿ ಸೇರಿ 18 ಮಂದಿ ಶಾಸಕರನ್ನ ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶ ನೀಡಿದ್ದಾರೆ.

ಅಲ್ಲದೇ ಯು.ಟಿ ಖಾದರ್ ನಿಮ್ಮನ್ನ ಕ್ಷಮಿಸಬಹುದು, ಆದ್ರೆ ಸ್ಪೀಕರ್ ಕ್ಷಮಿಸಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ. ಇನ್ನು ಸ್ಪೀಕರ್ 18 ಮಂದಿಯನ್ನು ಅಮಾನತುಗೊಳಿಸಿ ಆದೇಶ ನೀಡುತ್ತಿದ್ದಂತೆ ಮಾರ್ಷಲ್ ಗಳು ಅವರನ್ನು ಸದನದಲ್ಲಿ ಹೊರಗೆ ಹಾಕಿದ್ದಾರೆ.

ಇನ್ನು ರಾಜ್ಯ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಆರು ತಿಂಗಳು ಕಾಲ ಶಾಸಕರನ್ನು ಅಮಾನತ್ತು  ಮಾಡಲಾಗಿದೆ. ಮೊದಲ ಬಾರಿಗೆ 6 ತಿಂಗಳಗಳ ಕಾಲ ಶಾಸಕರು ಅಮಾನತ್ತು ಮಾಡಲಾಗಿದೆ.  ಮುಂದಿನ ಆರು ತಿಂಗಳು  ವಿಧಾನ ಸಭೆ ಪ್ರಾಂಗಣ ಪ್ರವೇಶಕ್ಕೆ ಈ ಶಾಸಕರುಗಳಿಗೆ ಅವಕಾಶ ಇರುವುದಿಲ್ಲ. ಯಾವುದೇ ಟಿಎಡಿಎ ನೀಡದಂತೆ ಆದೇಶ ನೀಡಲಾಗಿದ್ದು, ಸ್ಥಾಯಿ ಸಮಿತಿ ಸಭೆಗಳಲ್ಲೂ ಭಾಗಿಯಾಗೋದಕ್ಕೆ ಅವಕಾಶ ಇರೋದಿಲ್ಲ. ಅಮಾನತ್ತಿನ ಅವಧಿಯಲ್ಲಿ ಶಾಸಕರು ನೀಡುವ ಯಾವುದೇ ಸೂಚನೆಗೆ ಮಾನ್ಯತೆ ಇರೋದಿಲ್ಲ. ಶಾಸಕರ ದಿನ ಭತ್ಯೆಗೂ ಕೋಕ್ ಬೀಳಲಿದೆ.