ಮನೆ Latest News ದಾವಣಗೆರೆ ಉಪ ಚುನಾವಣೆ ಮೇಲೆ ಸಿಎಂ, ಡಿಸಿಎಂ ಕುರ್ಚಿ ಕದನದ ಕರಿ ಛಾಯೆ : ಸಂಸದ...

ದಾವಣಗೆರೆ ಉಪ ಚುನಾವಣೆ ಮೇಲೆ ಸಿಎಂ, ಡಿಸಿಎಂ ಕುರ್ಚಿ ಕದನದ ಕರಿ ಛಾಯೆ : ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ

0

ದಾವಣಗೆರೆ: ರಾಜ್ಯ ಸರ್ಕಾರದ ಎರಡೂವರೆ ವರ್ಷದ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಸಿಎಂ, ಡಿಸಿಎಂ ನಡುವಿನ ಕುರ್ಚಿ ಕದನದ ಕರಿ ಛಾಯೆ ದಾವಣಗೆರೆ ಉಪ ಚುನಾವಣೆ ಮೇಲೆ ಬೀರುತ್ತದೆ. ಬಿಜೆಪಿ ದಾವಣಗೆರೆ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಕಲ ಇಡೀ ಕರ್ನಾಟಕಕ್ಕೆ ಬರುವ ದಿನಗಳಲ್ಲಿ ರಾಜಕೀಯ ದಿಕ್ಸೂಚಿ ಬದಲಾಯಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ದಾವಣಗೆರೆ ಬಿಜೆಪಿ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಅನಿರೀಕ್ಷಿತವಾಗಿ ಉಪ ಚುನಾವಣೆ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ರಾಜಕೀಯವಾಗಿ ಬಹಳಷ್ಟು ಬೆಳೆವಣಿಗೆಗಳು ಆಗಿವೆ. ಕಳೆದ ಎರಡೂವರೆ ವರ್ಷದ ಆಡಳಿತ ನೋಡಿದಾಗ ಜನರು ಭ್ರಮನಿರಸನಗೊಂಡಿದ್ದಾರೆ‌. ಯಾವುದೇ ಕ್ಷೇತ್ರದಲ್ಲಿ  ಜನಕ್ಕೆ ಈ ಸರಕಾರ ಜೀವಂತವಾಗಿದೆ ಎಂದು ಅನಿಸುತ್ತಿಲ್ಲ, ರೈತ ವಿರೋಧಿ ಸರ್ಕಾರ, ಜನಸಾಮಾನ್ಯರ ಸಮಸ್ಯೆ ಆಲಿಸುವವರಿಲ್ಲದಂತಾಗಿದೆ. ಅಭಿವೃದ್ಧಿಯನ್ನು ಅಲ್ಲಿ ಇಲ್ಲಿ ಸನ್ ಗ್ಲಾಸ್ ಹಿಡಿದು ಹುಡುಕ ಬೇಕಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ, ಜನ ಸಾಮಾನ್ಯರು ಭ್ರಷ್ಟಾಚಾರದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ಹೇಳಿದರು.

ಕಳೆದ ಭಾರಿ ಕಾಂಗ್ರೆಸ್ ಅಹಿಂದಾ, ಜಾತಿ ಗಣತಿ  ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಮಾಡಿತ್ತು. ಸಿಎಂ ಸಿದ್ದರಾಮಯ್ಯ ಅಹಿಂದಾ ವರ್ಗಗಳನ್ನು ತಮ್ಮ ರಾಜಕೀಯ ಸ್ಥಾನಮಾನ ಪಡೆದುಕೊಳ್ಳಲು ಬಳಸಿಕೊಂಡು, ತಮ್ಮ ರಾಜಕೀಯ ರೊಟ್ಟಿಯನ್ನು ಅಹಿಂದದ ಬೆಂಕಿಯಲ್ಲಿ ಸುಟ್ಟುಕೊಂಡಿದ್ದಾರೆ. ಅಹಿಂದಕ್ಕೆ ಕಿಂಚಿತ್ತೂ ಸಹಾಯವನ್ನು ಮಾಡಿಲ್ಲ, ಅಹಿಂದವನ್ನು ದುರುಪಯೋಗ ಮಾಡಿರುವ ಈ ಸರ್ಕಾರಕ್ಕೆ ಇವತ್ತು ಆ ವರ್ಗದ ಜನರಿಗೆ ಮುಖ ತೋರಿಸುವ ಧೈರ್ಯ ಉಳಿದಿಲ್ಲ. ಆದರೂ, ಭಂಡತನದ ಪ್ರದರ್ಶನ ಅವರು ಮಾಡುತ್ತಿದ್ದಾರೆ.

ಮೊನ್ನೆ ಸಿಎಂ ಸಿದ್ದರಾಮಯ್ಯ ಅವರು ಮಾಡಿದ ಬಜೆಟ್ ಸುಳ್ಳಿನ ಕಂತೆ, ಸುಳ್ಳನ್ನು ಗಟ್ಟಿಯಾಗಿ ಹೇಳಿದರೆ ಸತ್ಯ ಆಗುತ್ತದೆ ಅನ್ನುವ ಸಿದ್ದಾಂತ ಇಟ್ಟುಕೊಂಡು ಸಿದ್ದರಾಮಯ್ಯ ಮಾತಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಎರಡೂವರೆ ವರ್ಷದಲ್ಲಿ ದಾವಣಗೆರೆ ರಾಜ್ಯ  ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಸ್ಮಾರ್ಟ್ ಸಿಟಿಗೆ 900 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಂದಿದೆ. ಅದು ರಾಜ್ಯ ಸರ್ಕಾದಲ್ಲ. ಅದನ್ನು ಬಿಟ್ಟರೆ ಇಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಆಗಿಲ್ಲ. ದಾವಣಗೆರೆ ಕರ್ನಾಟಕದ ಮಧ್ಯ ಭಾಗದಲ್ಲಿರುವ ಒಂದು ಪ್ರಮುಖ ವಾಣಿಜ್ಯ ಕೇಂದ್ರ ದಾವಣಗೆರೆ ಗತವೈಭವ ತುಂಬಾ ಇದೆ. ನಗರ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಪ್ರಥಮ ಭಾರಿ ದಾವಣಗೆರೆಯಲ್ಲಿ ಸಾಮಾಜಿಕ ಸಮೀಕರಣ ಆಗುತ್ತದೆ

ಯಾವುದು ಕಾಂಗ್ರೆಸ್ ವೋಟ್ ಬ್ಯಾಂಕ್ ಅಂರ ತಿಳಿದುಕೊಂಡಿದ್ದರು ಅದು ಈಗ ಉಳಿದಿಲ್ಲ, ಸಾಮಾಜಿಕವಾಗಿ ಸಮೀಕರಣ ಆಗುತ್ತದೆ, ರಾಜಕೀಯವಾಗಿ ಧ್ರುವೀಕರಣ ಆಗುತ್ತದೆ. ಬಿಜೆಪಿ ದಾವಣಗೆರೆ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಕಲ ಇಡೀ ಕರ್ನಾಟಕಕ್ಕೆ ಬರುವ ದಿನಗಳಲ್ಲಿ ರಾಜಕೀಯ ದಿಕ್ಸೂಚಿ ಬದಲಾವಣೆ ಮಾಡುತ್ತದೆ ಎಂದು ಹೇಳಿದರು.

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಮಗನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಪಠಾಣಾ12 ಸಾವಿರ ಅಂತರದಲ್ಲಿ ಗೆದ್ದಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ಶಿಗ್ಗಾವಿಯಲ್ಲಿ  ಕುತಂತ್ರ ಮಾಡಿ ಹಣದ ಹೊಳೆ ಹರಿಸಿದರು. ಸುಮಾರು 8 ಸಾವಿರ ವೋಟ್‌ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಂದೇ ವರ್ಗದವರನ್ನು ಅಕ್ಕ ಪಕ್ಕ ಕ್ಷೇತ್ರದವರನ್ನು  ತರುವ ಮುಖಾಂತರ ಅಲ್ಲಿ ಕೆಲವು ಅಧಿಕಾರಿಗಳನ್ನು  ತೆಕ್ಕೆಗೆ ಹಾಕಿಕೊಂಡಿದ್ದರಿಂದ  ಅವರಿಗೆ ಗೆಲ್ಲಲು  ಸಾಧ್ಯವಾಗಿದೆ. ಈಗ ಜನರು ಸಂಪೂರ್ಣ ಜಾಗೃತರಾಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ ದಿನನಿತ್ಯ ಅದೇ ಚರ್ಚೆ ನಡೆಯುತ್ತಿದೆ. ಸಿಎಂ, ಡಿಸಿಎಂ ನಡೆಯ ಕರಿ ಛಾಯೆ ದಾವಣಗೆರೆ ಉಪ ಚುನಾವಣೆ ಮೇಲೆ ಬೀರುತ್ತದೆ. ಹಾಗಾಗಿ ಈ ಭಾರಿ ಇಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.