ಬೆಂಗಳೂರು: ಒಳ ಮೀಸಲಾತಿ ಮಾಡುವ ಅಧಿಕಾರ ಸರ್ಕಾರಕ್ಕೆ ಕೋರ್ಟ್ ಕೊಟ್ಟಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಒಳಮೀಸಲಾತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು ಒಳ ಮೀಸಲಾತಿ ಮಾಡುವ ಅಧಿಕಾರ ಸರ್ಕಾರಕ್ಕೆ ಕೋರ್ಟ್ ಕೊಟ್ಟಿದೆ. ಬೇರೆ ರಾಜ್ಯಗಳಲ್ಲಿ ಜನರ ದತ್ತಾಂಶದ ಆಧಾರದ ಮೇಲೆ ವರ್ಗೀಕರಣ ಮಾಡಿದ್ದಾರೆ. ಆದಿ ಕರ್ನಾಟಕ ಎಂಬ ಜಾತಿ ಇದೆ. ಎಡ, ಬಲ ಎಂಬ ಜಾತಿಯ ಪ್ರಮಾಣಪತ್ರ ಪಡೆದ್ದರಿಂದ ಗೊಂದಲ ನಿರ್ಮಾಣ ಆಗಿದೆ. ಜಾತಿಯ ಜನಗಣಿಯೇ ನಡೆಸಿ ಪರಿಶಿಷ್ಟ ಜಾತಿ, ವರ್ಗದವರ ಜಾತಿಗಣತಿ ನಡೆಸಿ. ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ, ವರದಿ ಸರ್ಕಾರಕ್ಕೆ ಕೊಟ್ಟಿದ್ದಾರೆ ಎಂದು ತಿಳಿಸಿದ್ರು. ಒಳಮೀಸಲಾತಿ ಅನುಷ್ಠಾನ ಆಗುವರೆಗೂ ಬ್ಯಾಕ್ ಲಾಗ್ ಮಾಡುವಂತಿಲ್ಲ. ಒಂದು ವರ್ಷ ವಯೋಮಿತಿ ವಿಸ್ತರಣೆ ಮಾಡಿ ಎಂದ್ರು.
ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ; ಯತ್ನಾಳ್ ಉಚ್ಛಾಟನೆ ಸಂಬಂಧ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಂಗಳೂರು; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ ಎಂದು ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿಯಿಂದ ಶಾಸಕ ಯತ್ನಾಳ್ ಉಚ್ಚಾಟನೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ. ಅದು ಅವರ ಪಕ್ಷದ ಆಂತರಿಕ ವಿಚಾರ. ಯಾರನ್ನ ಇಟ್ಟಿಕೊಳ್ತಾರೆ, ಬಿಡ್ತಾರೆ ಅವರಿಗೆ ಬಿಟ್ಟ ವಿಚಾರ. ಯತ್ನಾಳ್ ಅವರದ್ದು ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರದ ವಿರುದ್ಧ ಇತ್ತು. ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರ ಅಂದ್ರೆ ಇಷ್ಟ ಅಂತ ಕೇಂದ್ರ ಬಿಜೆಪಿ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಇವರಿಬ್ಬರನ್ನ ಬಿಟ್ಟು ಕೊಡೊಲ್ಲ ಅಂತ ತೋರಿಸಿದ್ದಾರೆ. ದುಬೈನೊಂದಿಗೆ ನಂಟು ಇರುವವರನ್ನ ಬಿಟ್ಟು ಕೊಡೊಲ್ಲ ಅಂತ ಸಂದೇಶ ರವಾನಿಸಿದ್ದಾರೆ ಎಂದಿದ್ದಾರೆ.
ದೆಹಲಿಯಲ್ಲಿ ಹೆಚ್ ಡಿಕೆ ಮತ್ತು ಸಚಿವ ಸತೀಸ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ?. ನಾನೂ ಸಹ ಕೇಂದ್ರದ ಸಚಿವರನ್ನ ಭೇಟಿ ಮಾಡ್ತಾ ಇರುತ್ತೇನೆ. ಕೇಂದ್ರದ ಅನುದಾನ, ಹೊಸ ಯೋಜನೆಗಳ ಬಗ್ಗೆ ಮಾತನಾಡಬಾರದಾ?. ನೀವೇ ಮಾರ್ಗಸೂಚಿ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸದನದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲಿ, ಅವರಿಗೆ ಸದಸ್ಯರೇ ಇಲ್ಲ. ಮುಂದೆ ಏನೇನೋ ಆಗುತ್ತೆ, ಕಾದು ನೋಡಿ. ಇದು ಅವರ ರಾಜಕೀಯ ಅಸ್ತಿತ್ವ ಎಂದಿದ್ದಾರೆ.
ಜಾರಕಿಹೊಳಿ ಹಾಗೂ ಹೆಚ್ಡಿಕೆ ಭೇಟಿ ಇಲಾಖೆ ವಿಚಾರಕ್ಕೆ ಸಂಬಂಧಿಸಿದಂತೆ ಇರಬಹುದು; ಸಚಿವ ಚಲುವರಾಯಸ್ವಾಮಿ ಹೇಳಿಕೆ
ಬೆಂಗಳೂರು: ದುಬೈನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕೇಂದ್ರ ಸಚಿವ ಹೆಚ್ ಡಿಕೆ ಭೇಟಿ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು ಭೇಟಿ ವೈಯಕ್ತಿಕ. ಇಲಾಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿರಬಹುದು ಎಂದಿದ್ದಾರೆ. ಅವರು ಪಕ್ಷಕ್ಕೆ ಸೀನಿಯರ್ ಇದ್ದಾರೆ. ಅವರನೇ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗೊಕೆ ಆಗುತ್ತಾ..?. ಈ ಬಗ್ಗೆ ಅವರನ್ನೆ ಕೇಳಿದ್ರೆ ಸರಿಯಾದ ಉತ್ತರ ಸಿಗಬಹುದು ಎಂದಿದ್ದಾರೆ.
ಇನ್ನು ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತನಾಡಿದ ಅವರು ಹನಿಟ್ರ್ಯಾಪ್ ವಿಚಾರವಾಗಿ ದೂರು ಕೊಡಲಿ ಅಂತ ಹೇಳಿದ್ದರು. ಅದರಂತೆ ದೂರು ಕೊಟ್ಟಿದ್ದಾರೆ ಗೃಹ ಸಚಿವರು ಇದ್ದಾರೆ. ಅದೆಲ್ಲವನ್ನೂ ಅವರು ನೋಡಿಕೊಳ್ತಾರೆ. ಯತ್ನಾಳ್ ಉಚ್ಚಾಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರ ಪಕ್ಷದ ವಿಚಾರ. ಅದರ ಬಗ್ಗೆ ನಾನು ಮಾತನಾಡಲ್ಲ.ಬಹಳ ದಿನದಿಂದ ಅವರ ಪಕ್ಷದಲ್ಲಿ ಆತಂರಿಕ ಜಗಳ ಇತ್ತು. ಈಗ ಅವರ ಮೇಲೆ ಕ್ರಮ ಆಗಿದೆ ಎಂದರು.











