ಬೆಂಗಳೂರು; ಕಾಂಗ್ರೆಸ್ ಸರ್ಕಾರ ದೇಶವನ್ನ ಲೂಟಿ ಮಾಡುವ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮನಮೋಹನ್ ಸಿಂಗ್ ಇದ್ದಾಗ ಹಗರಣದ ಸರಮಾಲೆಯನ್ನೇ ನೋಡಿದ್ವಿ. ಈಗ ಪತ್ರಿಕೆಗಳನ್ನ ಲೂಟಿ ಮಾಡಿದ್ದಾರೆ. ಪತ್ರಿಕೆ ರಾಷ್ಟ್ರದ ಧ್ವನಿ ಆಗ್ಬೇಕು. ಇದನ್ನೇ ನೆಹರು ಕುಟುಂಬದ ಧ್ವನಿಯಾಗಿ ಮಾಡಿದ್ದಾರೆ. 03-03-2008ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನ ಮುಚ್ಚಿ ಹಾಕ್ತಾರೆ. ಆ ಸಂಸ್ಥೆಗೂ 2ಸಾವಿರ ಕೋಟಿ ಆಸ್ತಿ ಇದೆ. ಈ ಆಸ್ತಿ ನೇಲೆ ರಾಹುಲ್,ಸೋನಿಯಾ ಗಾಂಧಿಗೆ ಕಣ್ಣು ಬಿತ್ತು. ಯಂಗ್ ಇಂಡಿಯಾ ಅಂತ ಚಾರಿಟೇಬಲ್ ಟ್ರಸ್ಟ್ ಮಾಡಿದ್ರು. ಆದ್ರೆ ಇದುವರೆಗೂ ಯಾವುದೇ ಸಹಾಯ ಮಾಡಿಲ್ಲ. ಯಂಗ್ ಇಂಡಿಯಾ ಮಾಡ್ಕೊಂಡು 38% ಶೇರ್ ತೆಗೆದುಕೊಳ್ಳುತ್ತಾರೆ. 2 ಸಾವಿರ ಕೋಟಿ ಆಸ್ತಿಯನ್ನ ಬರೆಸಿಕೊಳ್ಳಲು 50ಲಕ್ಷ ಕೊಡ್ತಾರೆ. ಆ ಸಂಸ್ಥೆಗಳಿಂದ ನೂರಾರು ಕೋಟಿ ಬಾಡಿಗೆ ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಪತ್ರಿಕೆ ಅಲ್ಲಾ ಯೋಧರು ಪ್ರಾರಂಭ ಮಾಡಿದ ಪತ್ರಿಕೆ. ಕೋರ್ಟ್ ಪ್ರಶ್ನೆ ಮಾಡಿದೆ ಎಂದ್ರು.
ರಾಹುಲ್, ಸೋನಿಯಾ ಗಾಂಧಿ ಬೇಲ್ ತೆಗೆದುಕೊಂಡು ಸುಪ್ರೀಂ ಕೋರ್ಟ್ ಗೆ ಹೋಗಿ ಕೇಸ್ ಬೋಗಸ್ ಅಂತ ಕೇಸ್ ವಜಾ ಮಾಡಿಸಲು ಪ್ರಯತ್ನ ಮಾಡಿದ್ರು. ಆದ್ರೆ ಕೋರ್ಟ್ ಇವತ್ತಿನವರೆಗೂ ಕೇಸ್ ಕ್ಲೋಸ್ ಮಾಡಿಲ್ಲ.ಈಗಲೂ ಬೇಲ್ ನಲ್ಲಿಯೇ ಇದ್ದಾರೆ. ಇಂಡಿಯಾ ಅಂದರೆ ಇಂದಿರಾ ಅಂದ್ರು. ಇಂಡಿಯಾ ಆಸ್ತಿಗಳು ಇಂದಿರಾ ಕುಟುಂಬಕ್ಕೆ ಸೇರಬೇಕು ಅಂದ್ರು. ಇಡಿ ಮುಂದೆ ಬೂಟಾಟಿಕೆಯ ಹೋರಾಟ ಕಾಂಗ್ರೆಸ್ ಮಾಡುತ್ತಿದ್ದೆ. ಕಾಂಗ್ರೆಸ್ ಇದು ರಾಹು ಕಾಲ.ರಾಹು ಕಾಲ ಬಿಡಲು ಇನ್ನು ನೂರ ವರ್ಷ ಬೇಕು ಎಂದು ವಾಗ್ದಾಳಿ ನಡೆಸಿದ್ರು.
ಯಡಿಯೂರಪ್ಪ, ಜನಾರ್ದನ ರೆಡ್ಡಿ, ವಾಜಪೇಯಿ ಜೈಲಿಗೆ ಹಾಕಿದ್ರು. ಆಗ ಚೆನ್ನಾಗಿ ಇತ್ತ ಇಡಿ. ಕಾಂಗ್ರೆಸ್ ಲೂಟಿ ಪಾರ್ಟಿ. ಕಾಂಗ್ರೆಸ್ ಅನ್ನೋದನ್ನ ತೆಗೆದು ಹಾಕಿ ಲೂಟಿ ಪಾರ್ಟಿ ಎಂದು ಹೆಸರು ಬದಲಿಸಬೇಕು. ಇನ್ನು ಪಿಎಸ್‌ಐ ಪರಶುರಾಮ್ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಗೆ ಬಿ ರಿಪೋರ್ಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಆ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿ ಕೇಸ್ ಮುಚ್ಚಿಹಾಕಿದೆ ಲೋಕಾಯುಕ್ತ. ಪರಶುರಾಮ್ ವರ್ಗಾವಣೆಗೆ 40 ಲಕ್ಷ ಲಂಚ ಕೇಳಿದ್ರು ಅಲ್ಲಿನ ಶಾಸಕ ಮತ್ತು ಶಾಸಕನ ಮಗ. ಪರಶುರಾಮ್ ಸಾವಿಗೆ ನ್ಯಾಯ ಯಾರು ಕೊಡ್ತಾರೆ?. ಏನೇ ಹಗರಣ ಬಂದ್ರೂ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕ್ತಿದೆ.ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜಾತಿ ಜನಗಣತಿ ಹೊರಗೆ ತಂದರು. ಜಾತಿ ಜನಗಣತಿ ವರದಿ ಜೇಬಿನಲ್ಲೇ ಇಟ್ಕೊಂಡಿರ್ತಾರೆ ಸಿಎಂ. ಯಾವಾಗ ಬೇಕೋ ಆವಾಗೆಲ್ಲ ವರದಿ ಬಿಡ್ತಾರೆ. ತಮ್ಮ ಜತೆ ಇದಕ್ಕಾಗಿ ನಾಟಕದ ಕಂಪೆನಿ ಸಹ ಸಿಎಂ ಇಟ್ಕೊಂಡಿದ್ದಾರೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವಾಗಿದೆ. ಮಗು ಕರುಳು ಕತ್ತರಿಸಿದ್ದಾರೆ, ರಕ್ತಸ್ರಾವದಿಂದ ಬಾಣಂತಿ ಸತ್ತಿದ್ದಾರೆ. ಇದು ಶಕುನಿ ಸರ್ಕಾರ, ಅಭಿವೃದ್ಧಿ ಬೇಕಾಗಿಲ್ಲ ಈ ಸರ್ಕಾರಕ್ಕೆ ಎಂದು ಆಕ್ರೋಶ ಹೊರ ಹಾಕಿದ್ರು
ಜಾತಿ ಜನಗಣತಿ ವರದಿ 90% ಕರೆಕ್ಟ್ ಇದೆ ಅಂದ್ರು ಜಯಪ್ರಕಾಶ ಹೆಗ್ಡೆ, ಇದು ಒರಿಜಿನಲ್ ವರದಿ ಅಂದ್ರು. 2021 ರ ಅಕ್ಟೋಬರ್ ನಲ್ಲಿ ಅದೇ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದು ಜಾತಿ ಜನಗಣತಿ ವರದಿ ಕಾಣೆಯಾಗಿದೆ ಅಂದಿದ್ದಾರೆ. ಸೀಲ್ಡ್ ಬಾಕ್ಸ್ ಓಪನ್ ಮಾಡಿದಾಗ ಮುದ್ರಿತ ವರದಿಯಲ್ಲಿ ಸದಸ್ಯ ಕಾರ್ಯದರ್ಶಿ ಸಹಿ ಇಲ್ಲ, ಇದರ ಜತೆಗೆ ಮೂಲ ಹಸ್ತಪ್ರತಿ ಇರಲಿಲ್ಲ ಅಂತ ಪತ್ರ ಬರೆದಿದ್ರು. ಈಗ ಹೇಳಲಿ ಸರ್ಕಾರ, ಈ ಜಾತಿ ಜನಗಣತಿ ವರದಿ ಒರಿಜಿನಲ್ಲಾ?. ಮೂಲ ವರದಿಯ ಹಸ್ತಪ್ರತಿಯೇ ಸೀಲ್ಡ್ವಬಾಕ್ಸ್ ನಲ್ಲಿಲ್ಲ ಅಂದ್ಮೇಲೆ ವರದಿ ಒರಿಜಿನಲ್ ಹೇಗಾಗುತ್ತೆ?. ಇದು ರಕ್ತ ಕಣ್ಣೀರು ಪಿಚರ್ ಇದು, ಕಾಂತಿ ಇಲ್ಲದ ಕಾಂತರಾಜ್ ಏನ್ ಹೇಳ್ತಾರೆ ಈಗ? . ಸೈನೂ ಇಲ್ಲ, ಮೂಲ ಪ್ರತಿನೂ ಇಲ್ಲ, ಆ ಸೀಲ್ಡ್ ಬಾಕ್ಸ್ ನಲ್ಲಿ ಬಂದಿದ್ದು ರಕ್ತ ಕಣ್ಣೀರು ಎಂದು ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
165 ಕೋಟಿ ಲೂಟಿ ಮಾಡಿದ್ದಾರೆ. ನಮ್ಮ ಸರ್ಕಾರ ಬಂದರೆ ಇದನ್ನ ತನಿಖೆಗೆ ವಹಿಸುತ್ತವೆ. ಯಾರ ಮನೆಗೆ ಹೋಗದೆ ಒಂದು ಕಛೇರಿಯಲ್ಲಿ ಕುಳಿತು ಸಿದ್ದ ಮಾಡಿರುವ ವರದಿ ಇದು. ಸಿದ್ದರಾಮಯ್ಯ ಮನೆಯಲ್ಲಿ ಸಿದ್ದ ಆಗಿರುವ ವರದಿ ಇದು. ಹೀಗಾಗಿ ಇದು ಬೋಗಸ್ ವರದಿ. ಯಾರ ಬಳಿ ಸರ್ವೆ ಮಾಡಿಸಿದ್ದರು. ಅವರ ಹೆಸರು ಬಿಡುಗಡೆ ಮಾಡಿ.ಯಾರು ಯಾವ ಜಿಲ್ಲೆಗೆ ಹೋಗಿದ್ದ ಎಂದು ಗೊತ್ತಾಗುತ್ತದೆ. ನಮ್ಮ ಬಿಜೆಪಿ ಜಾತಿ ಸಮೀಕ್ಷೆ ಗೆ ವಿರೋಧ ಇಲ್ಲ. ಯಾವ ಜಾತಿ ಅನ್ಯಾಯ ಆಗಿದೆ ಅವರಿಗೆ ನ್ಯಾಯ ಸಿಗಬೇಕು. ಮೂಲ ಪ್ರತಿ ಸಿಕ್ಕಲಿಲ್ಲ ಅದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಮೂಲ ಪ್ರತಿ ಎಲ್ಲಿ ಹೊಯ್ತು,ಇದನ್ನ ಇಲ್ಲಿ ಕೂತು ಸಿದ್ದ ಮಾಡಿದ್ರು. ಮನೆ ಮನೆಗೂ ಹೋಗಿ ಸರ್ವೆ ಮಾಡಿರುವ ದಾಖಲೆ ಬೇಕು. 165 ಕೋಟಿ ಎಲ್ಲಿ ಹೋಯ್ತು ಹೇಳಬೇಕು. ಮೂಲ ಪ್ರತಿ ಇಲ್ಲ ಅಂದರೆ ವರದಿ ಬೋಗಸ್ ಆಗುತ್ತದೆ.ಇಬ್ಬರು ಮಂತ್ರಿಗಳು ಹೇಳಿದ್ದಾರೆ. ಮನೆ ಮನೆಗೂ ಹೋಗಿ ಸರ್ವೆ ಮಾಡಿದ್ದೆವೆ ಎಂದು ಅದನ್ನು ಬಿಡುಗಡೆ ಮಾಡಿ ಎಂದು ನನ್ನ ಒತ್ತಾಯ ಎಂದರು.