ಬೆಂಗಳೂರು; ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಎಂದು ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ೪% ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್. ರಾಜಕಾರಣದ ಪರಮಾವಧಿ ಮುಟ್ಟಿದೆ.ಸಂವಿಧಾನದ ರಚನಾ ಸಭೆಯಲ್ಲಿ ಕೆಲವರು ಮತೀಯ ಆಧಾರ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಿದ್ರು. ಆಗ ಬಹಳ ಸ್ಪಷ್ಟವಾಗಿ ಅಂಬೇಡ್ಕರ್ ಅವರು ಮತೀಯ ಅಧಾರದ ಮೀಸಲಾತಿ ನಿರಾಕರಿಸಿದ್ರು. ಜಾತಿ,ಆರ್ಥಿಕ ಹಿಂದುಳಿದ ಮೀಸಲಾತಿ ನೀಡಬಹುದು. ಧರ್ಮದ ಮೇಲೆ ಮೀಸಲಾತಿ ನೀಡೋದು ಸಂವಿಧಾನ ವಿರೋಧ. ಇದನ್ನ ಖಂಡಿಸುತ್ತೇವೆ, ಇದರ ವಿರುದ್ದ ಹೋರಾಟ ಮಾಡ್ತೇವೆ.ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದಿದ್ದಾರೆ.
ಸಂವಿಧಾನ ವಿರೋಧಿ ಮತೀಯ ಮೀಸಲಾತಿ ವಾಪಾಸ್ ತಗೆದುಕೊಳ್ಳಬೇಕು.ಇಲ್ಲದಿದ್ದರೆ ಸದನದದ ಒಳಗೆ ಹೊರಗೆ ವಿರುದ್ದ ಹೋರಾಟ ಮಾಡುತ್ತೇವೆ.ಇದನ್ನ ನ್ಯಾಯಾಲಯದಲ್ಲಿ ಹೋರಾಟ ಮಾಡ್ತೀವಿ.ಕಾಂಗ್ರೆಸ್ ವೋಟ್ ಬ್ಯಾಂಕ್ ಗೆ ಸಂವಿಧಾನದ ವಿರೋಧಿ ವರ್ತನೆ ಆಗ್ತಿದೆ.ಜಾತಿ,ಆರ್ಥಿಕ ಹಿಂದುಳಿದ ಮೀಸಲಾತಿ ಗೆ ಸಂವಿಧಾನದಲ್ಲಿ ಅವಕಾಶ ಇದೆ. ಮೀಸಲಾತಿ ಕೊಡ್ತಾರೆ ಅಂತ ಗೊತ್ತಿದ್ರೆ ಜಿನ್ನಾ ಪಾಕಿಸ್ತಾನ ಕೇಳ್ತಿರಲಿಲ್ಲ. ಕಾಂಗ್ರೆಸ್ ಈಗೆ ನಡೆದುಕೊಳ್ಳುತ್ತೆ ಅಂದ್ರೆ ಪಾಕಿಸ್ತಾನ ಕೇಳ್ತಾ ಇರಲಿಲ್ಲ. ಈ ಬಿಲ್ ನ್ನು ನಾವು ವಿರೋಧಿಸುತ್ತೇವೆ ಎಂದು ಸಿ ಟಿ ರವಿ ಹೇಳಿದ್ದಾರೆ.
ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ;ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಬೆಂಗಳೂರು; ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮುಸ್ಲಿಂಮರಿಗೆ ಮೀಸಲಾತಿ ಕೊಟ್ಟಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದ್ಮೆಲೆ ಮುಸ್ಲಿಂಮರ ಒಲೈಕೆ ನಡಿತಿದೆ. ದಲಿತರ ಜೀವನ ಮಟ್ಟ ಸುಧಾರಿಸಬೇಕು ಎಂದು ಸಂವಿಧಾನದ ಮೂಲಕ ಶಕ್ತಿ ತುಂಬಲಾಯ್ತು. ಆದ್ರೆ ಈ ಸರ್ಕಾರ ಮುಸ್ಲಿಂಮರಿಗೆ 4% ಗುತ್ತಿಗೆ ಮೂಲಕ ಮೀಸಲು ನೀಡಿದೆ. ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಮೀಸಲಾತಿ ತರಲಾಗಿದೆ. ಮುಸ್ಲಿಂಮರಿಗೆ ಎಲ್ಲಾ ಸೌಲಭ್ಯ ಕೊಡ್ತಿವಿ ಅಂತಿದೆ. ವಿಧಾನಸೌಧದ ಒಳಗೆ ಹೊರಗೆ ಹೋರಾಟ ಮಾಡ್ತಿವಿ ಎಂದು ಎಚ್ಚರಿಸಿದ್ದಾರೆ.
ಸಂವಿಧಾನ ವಿರೋಧಿ ನಡೆಯ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡ್ತಿದ್ದಾರೆ ಎಂದ ಅವರು ರನ್ಯಾ ರಾವ್ ಕೇಸನಲ್ಲಿನ ಸಚಿವರ ಹೆಸರು ಬಹಿರಂಗಗೊಳಿಸೋ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಮಂತ್ರಿಗಳು ಇದ್ದಾರಾ ಇಲ್ವೋ ಅಂತ ಉತ್ತರ ಕೊಡಬೇಕಿತ್ತು. ಸರ್ಕಾರ ಇನ್ನು ಉತ್ತರ ಕೊಟ್ಟಿಲ್ಲ. ಯತ್ನಾಳ್ ಘೋಷಣೆ ಮಾಡ್ತಿವಿ ಎಂದಿರೋ ವಿಚಾರ ಬೆಳಿಗ್ಗೆ ಗೊತ್ತಾಯ್ತು. ಅವರ ಜೊತೆ ನಾನು ಮಾತಾಡ್ತಿನಿ ಎಂದು ಆರ್ ಆಶೋಕ್ ಹೇಳಿದ್ದಾರೆ.
ಯತ್ನಾಳ್ ಅವರ ಬಾಯಲ್ಲಿ ಬರುವ ಮಾತು ಸರಿಯಿಲ್ಲ; ಸಚಿವ ಮಧುಬಂಗಾರಪ್ಪ ಹೇಳಿಕೆ
ಬೆಂಗಳೂರು; ಯತ್ನಾಳ್ ಅವರ ಬಾಯಲ್ಲಿ ಬರುವ ಮಾತು ಸರಿಯಿಲ್ಲ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವರನ್ನ ರಿವೀಲ್ ಮಾಡ್ತೇನೆಂಬ ಯತ್ನಾಳ್ ಹೇಳಿಕೆಗೆ ರಿಯ್ಯಾಕ್ಟ್ ಮಾಡಿ ಮೊದಲು ಯತ್ನಾಳ್ ಅವರ ಬಳಿ ಹೆಸರು ರಿವೀಲ್ ಮಾಡೋಕೆ ಹೇಳಿ ಎಂದಿದ್ದಾರೆ. ಯಾರಿದ್ದಾರೆ ಅನ್ನೋದು ಬರಲಿ. ಅದಕ್ಕೆ ನಾವೇನು ಹೆದರಬೇಕಿಲ್ಲ. ಯತ್ನಾಳ್ ಮಾತನಾಡೋದು ಸರಿಯಿಲ್ಲ. ಅವರ ಬಾಯಲ್ಲಿ ಬರುವ ಮಾತು ಸರಿ ಇರಲ್ಲ ಎಂದಿದ್ದಾರೆ.ಅದನ್ನ ನೀವು ಹಾಕ್ತೀರಲ್ಲ. ಬರಲಿ ನಾವು ಫೇಸ್ ಮಾಡ್ತೇವೆ.ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ.











