ಬೆಂಗಳೂರು; ಶಾಸಕ ನಾರಾ ಭರತ್ ರೆಡ್ಡಿ ತಪ್ಪು ಮಾಡಿದ್ದಾರೆ ಅಂತ ಸಿಎಂಗೆ ಗೊತ್ತಿದೆ, ಅದಕ್ಕೇ ಈ ಪ್ರಕರಣ ಸಿಬಿಐಗೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ
ನಿನ್ನೆ ಸಿದ್ದರಾಮಯ್ಯ ಮೈಸೂರಿನಲ್ಲಿ ಬಳ್ಳಾರಿ ವಿಚಾರ ಮಾತಾಡಿದ್ದಾರೆ. ನಾರಾ ಭರತ್ ರೆಡ್ಡಿ ಕಡೆಯವರು ನನ್ನ ಮೇಲೆ ಫೈರಿಂಗ್ ಮಾಡಿದ್ದಾರೆ.ಈ ಪ್ರಕರಣ ಸಿಬಿಐಗೆ ಕೊಡಿ ಅಂತ ನಾವು ಒತ್ತಾಯ ಹಾಕಿದ್ದೆವು. ಇದಕ್ಕೆ ನಿನ್ನೆ ಸಿಎಂ ನಮ್ಮ ಅವಧಿಯಲ್ಲಿ ಸುಮಾರು ಕೇಸ್ ಸಿಬಿಐಗೆ ಕೊಟ್ಟಿದ್ದೇವೆ, ಬಿಜೆಪಿ ಅವಧಿಯಲ್ಲಿ ಒಂದೂ ಕೇಸ್ ಸಿಬಿಐಗೆ ಕೊಟ್ಟಿಲ್ಲ ಅಂದಿದ್ದಾರೆ. ಯಾರ ಅವಧಿಯಲ್ಲಿ ಎಷ್ಡು ಕೇಸ್ ಸಿಬಿಐಗೆ ಕೊಟ್ಟಿದ್ದಾರೆ ಎನ್ನುವುದಕ್ಕಿಂತ ಈ ಪ್ರಕರಣ ಯಾಕೆ ಸಿಬಿಐಗೆ ಕೊಡುತ್ತಿಲ್ಲ ಅಂತ ಸಿಎಂ ಹೇಳಬೇಕು. ಅವರ ಶಾಸಕ ನಾರಾ ಭರತ್ ರೆಡ್ಡಿ ತಪ್ಪು ಮಾಡಿದ್ದಾರೆ ಅಂತ ಸಿಎಂಗೆ ಗೊತ್ತಿದೆ. ಅದಕ್ಕೇ ಈ ಪ್ರಕರಣ ಸಿಬಿಐಗೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಸಿಬಿಐ ಬದಲು ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಬಿಐಗೆ ಕೊಡಲಿ. ಹಿಂದೆ ಏಳು ಪ್ರಕರಣ ಸಿಬಿಐಗೆ ಕೊಟ್ಟಿದ್ದೇವೆ ಅಂತ ಎದೆ ತಟ್ಟಿ ಹೇಳುವ ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಬಿಐಗೆ ಕೊಡಲಿ. ಸಿಎಂ ದಾರಿ ತಪ್ಪಿಸುವ ಹೇಳಿಕೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಪ್ರಕರಣ ಸಿಬಿಐಗೆ ಕೊಡಬೇಕು ಅಂತ ಆಗ್ರಹ ಇಟ್ಟುಕೊಂಡು ಪಾದಯಾತ್ರೆ ಮಾಡುವ ಬಗ್ಗೆ ಶ್ರೀರಾಮುಲು ಹೇಳಿದ್ದರು. ಪಾದಯಾತ್ರೆ ವಿಚಾರದಲ್ಲಿ ನಮಗೆ ಸಿದ್ದರಾಮಯ್ಯ ಮೇಲೆ ಏನೂ ಹೊಟ್ಟೆ ಕಿಚ್ಚು ಇಲ್ಲ. ಸಿಬಿಐಗೆ ಪ್ರಕರಣ ಕೊಡಿ ಅಂತಾನೇ ನಾವು ಪಾದಯಾತ್ರೆ ಮಾಡುವ ಹೇಳಿಕೆ ಕೊಟ್ಟಿದ್ದು. ಪಾದಯಾತ್ರೆಗೆ ಹೈಕಮಾಂಡ್ ಅವಕಾಶ ಕೊಡುವ ನಿರೀಕ್ಷೆ ಇದೆ. ವಿಜಯೆಂದ್ರ ವರಿಷ್ಠರ ಗಮನಕ್ಕೆ ಈ ವಿಚಾರ ತರುತ್ತಾರೆ.ನಾವು ಹಂತ ಹಂತವಾಗಿ ಬಳ್ಳಾರಿ ಪ್ರಕರಣದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಶ್ರೀರಾಮುಲು ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ವಿಚಾರದ ಬಗ್ಗೆ ಮಾತನಾಡಿ ಪೋಕ್ಸೋ ಪ್ರಕರಣದ ಬಾಲಕಿ ಹೆಸರು, ಜಾತಿ ಹೇಳಿದರು ಅಂತ ದೂರು ದಾಖಲಾಗಿದೆ. ಈ ವಿಚಾರ ನನಗೆ ಇಂದು ಬೆಳಗ್ಗೆ ಗಮನಕ್ಕೆ ಬಂದಿದೆ.ಡಿ.ಕೆ. ಶಿವಕುಮಾರ್ ಹತಾಶರಾಗಿದ್ದಾರೆ. ನಿನ್ನೆ ನಮ್ಮ ಪಾರಿಜಾತ ಮನೆ ಎದುರು ಕಾಂಗ್ರೆಸ್ ನವರು ಪ್ರತಿಭಟನೆ ನಡೆಸಿದ್ದಾರೆ.ಡಿ.ಕೆ. ಶಿವಕುಮಾರ್ ಅವರಿಗೆ ನಮ್ಮ ಮನೆ ಮುಂದೆ ಪ್ರತಿಭಟನೆ ಮಾಡುವುದಷ್ಟೇ ಮಾಡಲು ಸಾಧ್ಯ . ಇದು ಬಿಟ್ಟು ಅವರಿಗೆ ಇನ್ನೇನು ಮಾಡಲು ಸಾಧ್ಯ?.ಕಾಂಗ್ರೆಸ್ನ ಆರನೇ ಗ್ಯಾರಂಟಿ ಸಿದ್ದರಾಮಯ್ಯ ಮನೆಗೆ ಹೋಗುವುದು. ಸಿದ್ದರಾಮಯ್ಯ ಮನೆಗೆ ಹೋಗುವ ಮುನ್ನ ನಾರಾ ಭರತ್ ರೆಡ್ಡಿಯನ್ನು ಬಂಧಿಸಲಿ, ಪ್ರಕರಣ ಸಿಬಿಐಗೆ ಕೊಡಲಿ ಅಂದಿದ್ದಾರೆ.











