ಮನೆ Latest News ಸಿಎಂ ಅವ್ರು ಸಬ್ಕ ವಿಭಜನೆ ಸಬ್ಕ ಶೋಷಣೆ ಅನ್ನೋ ರೀತಿ ನಲ್ಲಿ ಅಧಿಕಾರ ನಡೆಸ್ತಿದ್ದಾರೆ: ಮಾಜಿ...

ಸಿಎಂ ಅವ್ರು ಸಬ್ಕ ವಿಭಜನೆ ಸಬ್ಕ ಶೋಷಣೆ ಅನ್ನೋ ರೀತಿ ನಲ್ಲಿ ಅಧಿಕಾರ ನಡೆಸ್ತಿದ್ದಾರೆ: ಮಾಜಿ ಸಚಿವ ಸುನೀಲ್ ಕುಮಾರ್

0

ಬೆಂಗಳೂರು: ಸಿಎಂ ಅವ್ರು ಸಬ್ಕ ವಿಭಜನೆ ಸಬ್ಕ ಶೋಷಣೆ ಅನ್ನೋ ರೀತಿ ನಲ್ಲಿ ಅಧಿಕಾರ ನಡೆಸ್ತಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಾತಿ ಗಣತಿ ವಿಚಾರ ಚರ್ಚೆ ನಡೀತಿದೆ. ಬಿಜೆಪಿ ಕೇಂದ್ರದಲ್ಲಿ ಸಬ್ಕ ಸತ್ ಸಬ್ಕ ವಿಕಾಸ್ ಅಂತ ಆಡಳಿತ ನಡೆಸ್ತಿದೆ. ಇಲ್ಲಿ ಸಿಎಂ ಅವ್ರು ಸಬ್ಕ ವಿಭಜನೆ ಸಬ್ಕ ಶೋಷಣೆ ಅನ್ನೋ ರೀತಿ ನಲ್ಲಿ ಅಧಿಕಾರ ನಡೆಸ್ತಿದ್ದಾರೆ.ಈ ಡೇಟಾ ಸಿಎಂ ಅವರೇ ತಯಾರು ಮಾಡಿಸಿದ್ದಾರೆ. ಈ ಸರ್ಕಾರ ಮಾಡಿರುವ ವರದಿ ಗೊಂದಲ ಮಾಡ್ತಿದೆ. ಗೊಂದಲ ಮಾಡೋದ್ರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ . ಈ ವರದಿ ಅವೈಜ್ಞಾನಿಕ ಆಗಿದೆ.ಈ ವರದಿ ಸಾಕಷ್ಟು ಹಿಂದುಳಿಗ ವರ್ಗಗಳಿಗೆ ಅನ್ಯಾಯ ಮಾಡಿದೆ. ಅದರಿಂದ ಸರ್ಕಾರದಲ್ಲಿ 350ಕ್ಕೂ ಹೆಚ್ಚು ಸಮುದಾಯಕ್ಕೆ ಎನ್ನು ಸಿಗುತ್ತಿಲ್ಲ. ಹಿಂದುಳಿದ ವರ್ಗಗಳನ್ನ ಮತ್ತಷ್ಟು ಪ್ರಪಾತಕ್ಕೆ ತುಳಿಯೋ ಕೆಲಸ ಮಾಡ್ತಿದೆ ಈ ವರದಿ. ಈ ಹಿಂದೆ ಪ್ರವರ್ಗ 1ಇದ್ದವರಿಗೆ ಪ್ರವರ್ಗ 2 ಗೆ ಸೇರಿಸಿದ್ದಾರೆ ಎಂದರು.

ಅವರು ಅವಕಾಶ ವಂಚಿತರಾಗ್ತಾರೆ ಅಂತ ಕಂಡು ಬರುತ್ತೆ . ಇವಾಗ 45 ಲಕ್ಷ ಇರೋ ಜನ ಸಂಖ್ಯೆ ಗೆ 1ಬಿ ಮಾಡೋಕೆ ಹೊರಟಿದ್ದಾರೆ. ಇದು ರಾಜಕೀಯ ದುರುಪಯೋಗ. ಸಣ್ಣ ಸಮುದಾಯ 45ಲಕ್ಷ ಇರುವವರ ಜೊತೆ ಫೈಟ್ ಮಾಡೋಕೆ ಆಗುತ್ತಾ? ಕಾಂತರಾಜು ಅವರ ವರದಿ ಸರ್ಕಾರದ ಬಳಿ ಇಲ್ಲ ಅಂದ್ರೆ ಇವಾಗ ಜಯ ಪ್ರಕಾಶ್ ಅವ್ರು ಹೇಗೆ ತಯಾರು ಮಾಡಿದ್ರು. ಕಾಂತಾರಾಜು ಅವರ ವರದಿ ಯಾಕೆ ನೀವು ಮಂಡನೆ ಮಾಡಿಲ್ಲ.ಈ ಗೊಂದಲಗಳನ್ನ ಸರ್ಕಾರ ಸರಿ ಮಾಡಬೇಕು. 65% ಬಿಹಾರ್ ನಲ್ಲಿ ಮಿಸಾಲತಿ ಕೊಡೊ ವಿಚಾರದಲ್ಲಿ  ಕೋರ್ಟ್ ನಲ್ಲಿ ಕೊಡಬಾರದು ಅಂತ ಹೇಳಿದೆ. ಇಲ್ಲಿ ಇವಾಗ 85% ಕೊಡಬೇಕು ಅಂತ ಮಾಡಿದ್ದೀರಾ. ಈ ವರದಿ ತಯಾರು ಮಾಡ್ಬೇಕಾದ್ರೆ ನಿಮ್ಮ ಕೈನಲ್ಲಿ ಇರಲಿಲ್ವಾ ನ್ಯಾಯಾಲದ ಆದೇಶ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ನೇಮಿಸಿದ ಅಧ್ಯಕ್ಷ ವರದಿ ಕೊಟ್ಟಿಲ್ಲ ಅಂದ್ರೆ ಯಾರಿಗೆ ಕೇಳ್ಬೇಕು. ಇದು ಸಿದ್ದರಾಮಯ್ಯ ಅವರೇ ಸ್ಪಷ್ಟನೆ ಕೊಡ್ಬೇಕು. ಕಾಂತಾರಾಜು ವರದಿ ಮೊದಲು ಟೇಬಲ್ ಮಾಡಿ ಆಮೇಲೆ ಈ ವರದಿ ತರಲಿ.ನಾನು ಈ ಹಿಂದೆ ಕೂಡ ಅಧಿವೇಶನದಲ್ಲಿ ಹೇಳಿದ್ದೆ ಎಂದ ಅವರು ಜನಿವಾರ ಪ್ರಕರಣವನ್ನು ಖಂಡಿಸಿ ಮಾತನಾಡಿ ಜನಿವಾರ ತೆಗೆಯುವ, ಉಡುದಾರ ತೆಗೆಯುವ ಪ್ರಕರಣಗಳು ನಡೆದಿವೆ. ಸಿದ್ದರಾಮಯ್ಯ ಅವರು ಆಡಳಿತ ಮಾಡೋದು ಬಿಟ್ಟು ಹಿಂದೂ ದ್ವೇಷಿಯಾಗಿ ಯಾಕೆ ಮುಂದುವರೆಯುತ್ತಿದ್ದಾರೆ? ಸರ್ಕಾರದ ಪ್ರಾಯೊಜಕತ್ವದಿಂದಲೇ ಜನಿವಾರ ತೆಗೆಸಲಾಗಿದೆಯಾ?. ಸರ್ಕಾರ ಮಕ್ಕಳ ಭವಿಷ್ಯದ ಜತೆ ಆಟ ಆಡೋದು ಬೇಡ. ಅವರ ಭಾವನೆಗಳ ಜತೆ ಯಾಕೆ ಸರ್ಕಾರ ಆಟವಾಡ್ತಿದೆ.ಒಂದೆರಡು ಇಂತಹ ಪ್ರಕರಣ ಬಯಲಿಗೆ ಬಂದಿರಬಹುದು. ಬಯಲಿಗೆ ಬಾರದ ಹಲವು ಪ್ರಕರಣಗಳು ನಡೆದಿವೆ. ಸರ್ಕಾರ ಇದರ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ವಂಚಿತ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಿ.ಇಷ್ಟು ದೊಡ್ಡ ಪ್ರಕರಣ ನಡೆದಾಗಲೂ ಸಿದ್ದರಾಮಯ್ಯ ಒಂದೇಒಂದು ಶಬ್ಧ ಮಾತಾಡಲ್ಲ . ಹಿಜಾಬ್ ಪ್ರಕರಣ ನಡೆದಾಗ ಮಾತಾಡಿದ ಸಿದ್ದರಾಮಯ್ಯ ಈಗ್ಯಾಕೆ ಮೌನ ಯಾರೋ ಒಬ್ಬರನ್ನು ಸಸ್ಪೆಂಡ್ ಮಾಡಿ ಸರ್ಕಾರ ಕೈಕಟ್ಟಿ ಕೂರೋದು ಬೇಡ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ಕನಕಪುರ ರಸ್ತೆಯಲ್ಲಿ ಗುಂಡಿಗಳಿರುವ ಬಗ್ಗೆ ಸಾರ್ವಜನಿಕರ ಆಕ್ರೋಶ ವಿಚಾರದ ಬಗ್ಗೆ ಮಾತನಾಡಿದ ಅವರು ಮೊದಲು ಬೆಂಗಳೂರು ರಸ್ತೆಗುಂಡಿಗಳನ್ನು ಮುಚ್ಚಿ. ರಸ್ತೆಗುಂಡಿಗಳ ಕಡೆ ಮೊದಲು ಗಮನ ಕೊಡಿ. ನಂತರ ಬ್ರ್ಯಾಂಡ್ ಬೆಂಗಳೂರು, ಬ್ರ್ಯಾಂಡ್ ಕನಕಪುರ ಮಾಡಿ.ಮೊದಲು ಬ್ರ್ಯಾಂಡ್ ಕರಪ್ಷನ್ ನಿಲ್ಲಿಸಿ. ನಿಮ್ಮದು 60% ಸರ್ಕಾರ ಅಂತ ಒತ್ತಿ ಒತ್ತಿ ಹೇಳ್ತಿದ್ದೇವೆ.ಕರ್ನಾಟಕ ಕರಪ್ಷನ್ ಮುಕ್ತ ಮಾಡಿ ಮೊದಲು ಎಂದಿದ್ದಾರೆ.