ಮನೆ Latest News ಕೇಂದ್ರ ಪ್ರಚಾರ ಗಿಟ್ಟಿಸಿಕೊಂಡಷ್ಟು ಕೆಲಸ ಮಾಡ್ತಿಲ್ಲ; ಕೇಂದ್ರದ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿಎಂ ಸಿದ್ದರಾಮಯ್ಯ

ಕೇಂದ್ರ ಪ್ರಚಾರ ಗಿಟ್ಟಿಸಿಕೊಂಡಷ್ಟು ಕೆಲಸ ಮಾಡ್ತಿಲ್ಲ; ಕೇಂದ್ರದ ವಿರುದ್ಧ ಅಸಮಾಧಾನ ಹೊರ ಹಾಕಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು; ಕೇಂದ್ರ ಪ್ರಚಾರ ಗಿಟ್ಟಿಸಿಕೊಂಡಷ್ಟು ಕೆಲಸ ಮಾಡ್ತಿಲ್ಲ ಎಂದು ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.

ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ “ಸುವರ್ಣ ಮಹೋತ್ಸವ”, ಮಕ್ಕಳ‌ ದಿನಾಚರಣೆ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.  ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹೆಚ್. ಸಿ ಮಹಾದೇವಪ್ಪ, ಸಿಎಂ ಪೊಲಿಟಿಕಲ್ ಸೆಕ್ರೆಟರಿ ನಜೀರ್ ಅಹ್ಮದ್,  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಸೇರಿದಂತೆ ಪ್ರಮುಖ ಮಹಿಳಾ ನಾಯಕರಿಯರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಿಜವಾದ ಅರ್ಥದಲ್ಲಿ ನೀವೆಲ್ಲ ಎರಡನೇ ತಾಯಿಯಂತೆ ಕರ್ತವ್ಯ ನಿಭಾಯಿಸುತ್ತಿದ್ದೀರಿ. ಈ ಕಾರ್ಯಕ್ರಮದಿಂದ ಅಪೌಷ್ಟಿಕತೆ, ಶಿಶು ಮರಣ, ತಾಯಿ ಮರಣ ಕಡಿಮೆ ಆಗ್ತಿದೆ. ಇದು ಉದಾತ್ತವಾದ ಕೆಲಸ. ಮಕ್ಕಳೇ ದೇಶದ ಮುಂದಿನ ಭವಿಷ್ಯ. ಅವರಿಗೆ ಶಿಕ್ಷಣ, ಅಪೌಷ್ಟಿಕತೆ, ಮರಣ ಪ್ರಮಾಣ ಕಡಿಮೆ ಮಾಡಬೇಕು. ಸಹಕಾರಿ ಸಂಘವನ್ನೂ ರಚನೆ ಮಾಡಿದ್ದಾರೆ ಇದು ಮುಂದಿನ‌ ದಿನಗಳಲ್ಲಿ‌ ಮಹಿಳೆಯರಿಗೆ ಸಹಾಯ ಮಾಡಲಿ. ಸಾಮಾಜಿಕ, ಆರ್ಥಿಕವಾಗಿ ಮಹಿಳೆಯರು ಸ್ವಾಲವಂಬನೆ ಆಗೋದು ಕಷ್ಟವಾಗಿತ್ತು. ಮಹಿಳೆಯರೂ ಸಹ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು ಎಂದರು.

ಉದ್ಯೋಗದಲ್ಲಿ ಮಹಿಳೆಯರ ಪಾಲು 24% ಇದೆ. ತಲಾ ಆದಾಯದಲ್ಲಿ ಇಡೀ‌ ದೇಶದಲ್ಲಿ ಗೃಹ ಲಕ್ಷ್ಮೀ, ಶಕ್ತಿ ಯೋಜನೆಯಿಂದ ಕರ್ನಾಟಕ ನಂಬರ್ ಒನ್. ಕೇಂದ್ರ ಪ್ರಚಾರ ಗಿಟ್ಟಿಸಿಕೊಂಡಷ್ಟು ಕೆಲಸ ಮಾಡ್ತಿಲ್ಲ. ಅಪೌಷ್ಟಿಕತೆ ತೊಲಗಿಸಿ, ಶಿಶು ಮರಣ, ತಾಯಿ ಮರಣ ಕೆಲಸ ಕಡಿಮೆ‌ ಮಾಡಬೇಕು. ಈ ವರ್ಷ 5 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ UKG, LKG ಪ್ರಾರಂಭ ಮಾಡಿದ್ದೇವೆ. ಮುಂದಿನ‌ ದಿನಗಳನ್ನ ಹೆಚ್ಚಾಗಿ ಪ್ರಾರಂಭ ಮಾಡುತ್ತೇವೆ ಎಂದ ಅವರು ಉತ್ತಮ ಭವಿಷ್ಯಕ್ಕೆ ಮಕ್ಕಳನ್ನ ತಯಾರು ಮಾಡಬೇಕು. ಕೂಡಲೇ ಭರ್ತಿ ಮಾಡಬೇಕು ಅಂತ ಮಾಡಿದ್ದೇವೆ. ಇದು ತುಳಿತಕ್ಕೆ‌ ಒಳಗಾದ, ತಪ್ಪಿಸುವ ಕೆಲಸ ಮಾಡಬೇಕು. ಮಹಿಳೆಯರ‌ ಬದುಕಿನಲ್ಲಿ ಚೈತನ್ಯ ಬರಲಿ ಎಂದು ತಿಳಿಸಿದರು.

ಹಿರಿಯರಿಗೆ ಸನ್ಮಾನ ಮಾಡ್ತಿದ್ದೇವೆ, ಅವರೂ ಆರೋಗ್ಯವಾಗಿರಬೇಕು. ಮಹಿಳೆಯರ ರಕ್ಷಣೆಗಾಗಿ‌ ಅಕ್ಕಪಡೆ ರಚನೆ ಮಾಡಿದ್ದೇವೆ. ಇದೇ ತರ ಮುಂದುವರೆದರೆ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆ ಮಾಡಬೇಕಾಗಬಹುದು. ಕುದುರೆ ವ್ಯಾಪಾರ ಯಾವಾಗಿಂದ ಕಾಂಗ್ರೆಸ್ ಪ್ರಾರಂಭ ಮಾಡಿದೆ?. 1969 ರಿಂದಲೇ ಕುದುರೆ ವ್ಯಾಪಾರ ಪ್ರಾರಂಭ ಮಾಡಿದ್ದಾರೆ. ಹೀಗಾಗಿ ಆಗ ಜಾರಕಿಹೊಳಿ ಎಲ್ಲಿದ್ರು? ಆಗಿನ್ನೂ ಅವರು ರಾಜಕೀಯದಲ್ಲಿ ಇರಲೇ ಇಲ್ಲ. ಕಾಂಗ್ರೆಸ್ ಇತಿಹಾಸ ತೆಗೆದು ನೋಡಿದರೆ ಗೊತ್ತಾಗುತ್ತೆ. ಮಹಾರಾಷ್ಟ್ರದ ಎಲ್ಲಾ ಶಾಸಕರನ್ನು ವಿಲಾಸ್ ರಾವ್ ದೇಶಮುಖ್ ರನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದು ಮರೆತು ಬಿಟ್ಟರಾ? ಎಂದು ಪ್ರಶ್ನಿಸಿದರು.