ಬೆಂಗಳೂರು; ಕೇಂದ್ರ ಸರ್ಕಾರ ಆರ್ಮ್ ಫೋರ್ಸ್ ಸ್ ಹಾಕಿ ಉಗ್ರರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಉಗ್ರರು ೨೮ ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅತ್ಯಂತ ಹೇಯ ಕೃತ್ಯ, ಹೇಡಿಗಳ ಕೃತ್ಯ.ಅಲ್ಲಿಗೆ ಪ್ರವಾಸಕ್ಕೆ ಹೋದವರನ್ನು ಗುಂಡಿಟ್ಟು ಹೇಡಿ ಕೃತ್ಯ ಮಾಡಿದ್ದಾರೆ.ಇಡೀ ವಿಶ್ವ ಕ್ರೂರತ್ವನ್ನು ಖಂಡನೆ ಮಾಡುತ್ತಿದೆ.ಕೇಂದ್ರ ಸರ್ಕಾರ ಆರ್ಮ್ ಫೋರ್ಸ್ ಸ್ ಹಾಕಿ ಉಗ್ರರನ್ನು ಗುಂಡಿಟ್ಟು ಕೊಲ್ಲಬೇಕು.ಪಾಕಿಸ್ತಾನ ಕೂಡ ಭಾಗಿಯಾಗಿದ್ದರೆ ಕೇಂದ್ರ ಸರ್ಕಾರ ಪತ್ತೆ ಹಚ್ಚಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ವನ್ನು ಮೂಲೆಗುಂಪು ಮಾಡಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ನಾವು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದ ಸೇನೆಯನ್ನು ಹಿಂಪಡೆದಿದ್ದೆವು. ಅದನ್ನೇ ದುರುಪಯೋಗ ಮಾಡಿಕೊಂಡಿದ್ದಾರೆ.ಅತ್ಯಂತ ಕಠಿಣ ಶಿಕ್ಷೆ ಆಗಬೇಕು. ಸ್ಥಳೀಯ ಜನರೂ ಕೂಡ ಉಗ್ರಗಾಮಿ ಚಟುವಟಿಕೆಗೆ ಬೆಂಬಲ ನೀಡಲ್ಲ. ಕುಟುಂಬಸ್ಥರು ಪ್ರಾಣ ಕಳೆದುಕೊಂಡಿದ್ದಾರೆ ಅವರ ಕುಟುಂಬಕ್ಕೆ ಆಘಾತ ದುಖ ಭರಿಸುವ ಶಕ್ತಿ ನೀಡಲಿ. ಎಲ್ಲರ ಸಹಾನುಭೂತಿ ಅವರ ಜೊತೆಗೆ ಇದೆ. ನಿಶ್ಚಿತವಾಗಿ ನಾವು ಮೈಮರೆಯಬಾರದಿತ್ತು. ಎಲ್ಲವೂ ಶಾಂತವಾಗಿದೆ ಅಂತ ಭದ್ರತಾ ಪಡೆಗಳ ನಿಯೋಜನೆ ಹಿಂಪಡೆಯಲಾಗಿತ್ತು. ಉಗ್ರಗಾಮಿತನ ಅತ್ಯಂತ ಹೇಡಿ ಕೃತ್ಯ, ಅವರನ್ನು ಗುಂಡಿಟ್ಟು ಕೊಲ್ಲಬೇಕು. ನಮ್ಮ ದೇಶದ ಭದ್ರತಾ ಗಡಿಯನ್ನು ಬಲಪಡಿಬೇಕು. ಉಗ್ರರ ಅಡಗುತಾಣಗಳನ್ನೂ ಹುಡುಕಿ ಕೊಲ್ಲಬೇಕು.ಇದು ರಾಜಕಾರಣ ಮಾಡುವ ಸಮಯ ಅಲ್ಲ ಎಂದಿದ್ದಾರೆ.
ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ; ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು; ಕಾಶ್ಮೀರದಲ್ಲಿ ಉಗ್ರರಿಂದ ನಡೆದ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದೆ. ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಪ್ರವಾಸಿ ಗಳು ಇಬ್ಬರು ಮೃತರಾಗಿದ್ದಾರೆ. ಭರತ್, ಮಂಜುನಾಥ್ ಮೃತಪಟ್ಟಿದ್ದಾರೆ.ನಾನು ಅಧಿಕಾರಿಗಳ ತಂಡ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೋಗಿದ್ದಾರೆ. ಅಲ್ಲಿ ಯಾರಿದ್ದಾರೆ, ಅವರನ್ನ ಸೀಫಾಗಿ ಕರೆದುಕೊಂಡು ಬಾ ಅಂತ ಹೇಳಿದ್ದೀನಿ. ಮೃತರ ಪಾರ್ಥಿವ ಶರೀರವನ್ನು ಕರೆತರು ಸ್ಪೆಷಲ್ ಫ್ಲೈಟ್ ತರಲು ಹೇಳಿದ್ದೀನಿ. ಈ ದಾಳಿ ಪ್ಲಾಲ್ ಆಗಿ ನಡೆದಿದೆ. ಇದನ್ನ ನಾನು ಖಂಡಿಸುತ್ತೇನೆ, ಈ ರೀತಿಯ ದಾಳಿ ಆಗಬಾರದು. ಸುಮಾರು ೨೬-೨೭ ಜನ ಸತ್ತಿದ್ಸಾರೆ ಅಂತ ವರದಿ ಇದೆ. ಭೀಕರವಾದ ದಾಳಿ ಇದು, ಕರ್ನಾಟಕ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಇಂಟಲಿಜೆನ್ಸ್ ಫೇಲ್ ಆಗಿದೆ, ಹಿಂದೆ ಯೂ ಕೂಡ ದಾಳಿ ಆಗಿದೆ. ಪುಲ್ವಾಮಾ ದಾಳಿ ಕೂಡ ಆಗಿದೆ., ನೋಡೋಣ ಪರಿಹಾರದ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಮಾತಾಡುತ್ತೇವೆ. ಹಿಂದೆಯೂ ಕೂಡ ಈ ರೀತಿ ಆಗಲ್ಲ. ೩೭೦ ರದ್ದು ಆಗಿದ್ದರಿಂದ ದಾಳಿ ಎಂಬ ಕಾಂಗ್ರೆಸ್ ಶಾಸಕನ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ವೈಫಲ್ಯ ಇದು.ನಾನು ಹೇಳಿದ್ದೀನಿ ಅಲ್ವೇ. ಉಗ್ರರನ್ನು ಮಟ್ಟ ಹಾಕಲೇ ಬೇಕಾಗಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿ ದಾಳಿ ನಡೆದಿದೆ, ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಇಬ್ಬರು ಮೃತರಾಗಿದ್ದಾರೆ. ಮಂಜುನಾಥ್, ಭರತ್ ಭೂಷಣ್ ಸತ್ತಿದ್ದಾರೆ. ಅಧಿಕಾರಿಗಳು, ಸಂತೋಷ್ ಲಾಡ್ ಕಳಿಸಿದ್ದೇನೆ. ಅಲ್ಲಿ ಯಾರಿದ್ದಾರೆ, ಅವರನ್ನ ಸೇಫಾಗಿ ಕರೆದುಕೊಂಡು ಬರಲು ಹೇಳಿದ್ದೀನಿ. ಮೃತರ ಪಾರ್ಥಿವ ವಾಪಸ್ ತರಲು ಅವರೇ ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಎಲ್ಲಿ, ಯಾವ ರಾಜ್ಯಕ್ಕೆ ಹೋಗಬೇಕು ಎಂದು ಅವರೇ ಮಾಡಿದ್ದಾರೆ. ನನಗೆ ಅನ್ಸುತ್ತೆ, ಈ ದಾಳಿ ಪ್ಲಾನ್ ಆಗಿ ನಡೆದಿದೆ. ಅದು ಯಾರೇ ಆಗಿರಲಿ, ಅದನ್ನ ಖಂಡಿಸುತ್ತೇನೆ. ಉಗ್ರರ ದಾಳಿ ಆಗಬಾರದು, ಯಾವುದೇ ಜಾತಿ, ಧರ್ಮದ ಬಗ್ಗೆ ಆಗಬಾರದು.೨೬-೨೭ ಜನ ಸತ್ತಿದ್ದಾರೆ, ಇದು ದೊಡ್ಡ ದಾಳಿ. ಭೀಕರ ದಾಳಿ ಖಂಡಿಸುತ್ತೇವೆ. ನನಗೆ ಅನ್ಸುತ್ತೆ, ಇಂಟಲಿಜೆನ್ಸ್ ಫೆಲ್ಯೂವರ್ ಆಗಿದೆ. ಕೇಂದ್ರ ಸರ್ಕಾರ ಇಂಟಲಿಜೆನ್ಸ್ ಫೇಲ್ ಆಗಿದೆ. ಹಿಂದೆ ಕೂಡ ದಾಳಿ ಆಗಿದೆ, ಪುಲ್ವಾಮಾ ದಾಳಿ ಆಗಿತ್ತು. ಕೇಂದ್ರದ ವೈಫಲ್ಯ ಇದೆ ಅಂತ ಅನ್ಸುತ್ತೆ. ನೋಡೋಣ, ವಿಚಾರ ಮಾಡಬೇಕು. ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ.ಏನ್ ಪರಿಹಾರ ನೀಡಿದ್ದೇವೆ ಅಂತ ಗೊತ್ತಿಲ್ಲ, ಅದನ್ನ ಪಾಲಿಟಿವ್ ಆಗಿ ನೋಡುತ್ತೇವೆ.ಇಟ್ ಇಸ್ ಎ ಫೆಲ್ಯೂವರ್ ಅಂತ ಹೇಳಿದ್ದೀನಿ. ಕೇಂದ್ರದ ವೈಫಲ್ಯ ಅಂತ ಹೇಳಿದ್ದೀನಿ. ಭದ್ರತೆ ಯಲ್ಲಿ ಯಾವುದೇ ರಾಜಿ ಇಲ್ಲ, ಭದ್ರತೆ ಕೋಡೋ ಕೆಲಸ ಆಗಬೇಕು. ಉಗ್ರರನ್ನ ಮಟ್ಟ ಹಾಕೋ ಕೆಲಸ ಮಾಡಬೇಕು ಎಂದಿದ್ದಾರೆ.