ಮನೆ Latest News ಮುಲಾಜಿಲ್ಲದೇ ಕೇಂದ್ರಸರ್ಕಾರ ಕ್ರಮ ತೆಗೆದು ಕೊಳ್ಳಬೇಕು: ಗೃಹ ಸಚಿವ ಪರಮೇಶ್ವರ್ ಹೇಳಿಕೆ

ಮುಲಾಜಿಲ್ಲದೇ ಕೇಂದ್ರಸರ್ಕಾರ ಕ್ರಮ ತೆಗೆದು ಕೊಳ್ಳಬೇಕು: ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಗೃಹ ಸಚಿವ ಪರಮೇಶ್ವರ್ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮುಲಾಜಿಲ್ಲದೇ ಕೇಂದ್ರಸರ್ಕಾರ ಕ್ರಮ ತೆಗೆದು ಕೊಳ್ಳಬೇಕು ಎಂದಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಟೆರರಿಸ್ಟ್  ಅಟ್ಯಾಕ್ ಆಗಿದೆ. ಅದನ್ನ  ನಾನು ಖಂಡಿಸುತ್ತೇನೆ. 27 ಜನ ಪ್ರಾಣ ಕಳೆದು ಕೊಂಡಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡ್ತೇನೆ.ಕರ್ನಾಟಕದ ಇಬ್ಬರ ಹತ್ಯೆಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಅತ್ಯಂತ ಬಲಿಷ್ಠ ಮಿಲಿಟರಿ ಇಂಟೆಲಿಜೆನ್ಸ್ ಇದೆ.ಬಹಳ ಸಂಧರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಹೇಗೆ ಟೆರರಿಸ್ಟ್ ಒಳಗೆ ಬಂದ್ರು. ಇದನ್ನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಿಂದೂಗಳನ್ನ ಗುರಿಮಾಡಿ ಕೊಂದಿದ್ದಾರೆಂದು ಮಾಹಿತಿ‌ ಬರ್ತಿದೆ. ಇದು ನಿಜಕ್ಕೂ ಆತಂಕಕಾರಿ. ಹಾಗಾಗಿ ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ. ಮುಲಾಜಿಲ್ಲದೇ ಕೇಂದ್ರಸರ್ಕಾರ ಕ್ರಮ ತೆಗೆದು ಕೊಳ್ಳಬೇಕು. ನಾವೇ ಮಾಡಿದ್ದು ಎಂದಿರೋ ಸಂಘಟನೆಯನ್ನ ಹುಡುಕಿ ಕ್ರಮ ತೆಗೆದುಕೊಳ್ಳಬೇಕು. ಸೆಕ್ಯುರಿಟಿ ಲ್ಯಾಪ್ಸ್ ಆಗಿದೆ. ಮಿಲಿಟರಿ ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆ.ಬಟ್ಟೆ ತೆಗೆದು ಹೀನಾಯವಾಗಿ ಕೃತ್ಯ ಮಾಡಿದ್ದಾರೆ ಎಂದಿದ್ದಾರೆ.

ಸೆಕ್ಯೂರಿಟಿ ವಾಪಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು ನಿರ್ದಿಷ್ಟ ಮಾಹಿತಿ ಇಲ್ಲ, ಶಾಂತಿ ಇತ್ತು ಅಲ್ಲಿ ಎಂದು ಸೆಕ್ಯೂರಿಟಿ ವಾಪಸ್ ಪಡೆದಿದ್ರಾ ಗೊತ್ತಿಲ್ಲ .ಸಿಎಂ,  ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಒಂದು ಟೀಮ್ ಕಳಿಸಿದ್ದಾರೆ. ಸ್ಥಳಕ್ಕೆ ಟೀಮ್ ನಿಯೋಜನೆ ಮಾಡಿದ್ದಾರೆ. ಕನ್ನಡಿಗರ ಬಗ್ಗೆ ಮಾಹಿತಿ ಸಿಗಲಿದೆ. ಇದು ಕಾಂಗ್ರೆಸ್, ಬಿಜೆಪಿ ಪ್ರಶ್ನೆ ಅಲ್ಲ. vಮ್ಮ ದೇಶ, ಸಮುದಾಯದ ಭದ್ರತೆ ಪ್ರಶ್ನೆ. ನಾನು ಬಿಜೆಪಿ ಪೆಲ್ಯೂರ್ ಎಂದು ಹೇಳಿದ್ನಾ?ಕೇಂದ್ರ ಸರ್ಕಾರ ಎಂದು ಹೇಳಿದೆ. ಇದೆಲ್ಲವನ್ನು ಮೀರಿ ನಾವು ನಿಲ್ಲಬೇಕು. ವ್ಯಾಖ್ಯಾನ ಮಾಡಬಹುದು, ಆದರೆ ಸತ್ತವರು ಸತ್ರು ವರದಿಗಳು ಏನು ಬರುತ್ತೆ ನೋಡೋಣ.ಈ ಘಟನೆ ಸಂಬಂಧ ಸರ್ಕಾರದ ಅಭಿಪ್ರಾಯವನ್ನ ಕೇಂದ್ರ ಸರ್ಕಾರಕ್ಕೆ ತಿಳಿಸ್ತೇವೆ ಎಂದರು.

 ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ; ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ

ಬೆಂಗಳೂರು;  ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ  ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಪಹಲ್ಗಾಮ್ ನಲ್ಲಿ  ಭಯೋತ್ಪಾದಕರ ದಾಳಿ ಬಗ್ಗೆ ಮಾತನಾಡಿದ ಅವರು ನಿನ್ನೆ ಮಧ್ಯಾಹ್ನ ನಡೆದ ಘಟನೆ ಹೇಯ ಘಟನೆ.ಇಂಥ ಪೈಶಾಚಿಕ ಕೃತ್ಯ ಮಾಡಿದ್ದರಿಂದ ಅವರು ಏನನ್ನು ಸಾಧಿಸಿದರು?.ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ತಡೆಯಲು ಕೇಂದ್ರ ಸಾಕಷ್ಟು ಕ್ರಮ ಕೈಗೊಂಡಿತ್ತು.ಇದು ಪಾಕಿಸ್ತಾನದ ಸಂಚಿನಿಂದ ನಡೆದ ಘಟನೆ. ಇಂಥ ಕೃತ್ಯಗಳನ್ನು ಮಾಡಿದವರ ಮಟ್ಟ ಹಾಕುವ ಕೆಲಸ ಭಾರತ ಸರ್ಕಾರ ಮಾಡುತ್ತದೆ.ಇವರು ಮನುಷ್ಯರಲ್ಲ, ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದಾರೆ.ಅವರು ಮನುಷ್ಯರು ಅಲ್ವೇ ಅಲ್ಲ.ಇನ್ನು ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ ಎಂದಿದ್ದಾರೆ.

ಈ ಪಿಶಾಚಿಗಳಿಗೆ ಜಾತಿ, ಧರ್ಮ ಇಲ್ಲ. ಇಂಥ ಹೀನ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೇಬೇಕು.ಭಾರತೀಯರನ್ನು ಮುಟ್ಟಿದರೆ ಏನು ಮಾಡಬಹುದು ಅಂತ ಅನೇಕ ಉದಾಹರಣೆಗಳಿವೆ.ಇದಕ್ಕೆ ಅವರು ಬೆಲೆ ತೆರಲೇಬೇಕು.ಇದು ಭದ್ರತಾ ವೈಫಲ್ಯ ಅಲ್ಲ, ಇದೊಂದು ವ್ಯವಸ್ಥಿತ ಸಂಚು. ಏಪ್ರಿಲ್ 2ರಿಂದ 7 ರವರೆಗೆ ನನ್ನ ಅಳಿಯ ಅವಿನಾಶ್ ಹಾಗೂ ಮಗಳು ದಿವ್ಯಾ ಪಹಲ್ಗಾಮ್ ಪ್ರವಾಸ ಹೋಗಿದ್ದರು. ಇದು ಭದ್ರತಾ ವೈಫಲ್ಯ ಎಂಬ ಹಗುರ ಮಾತುಗಳನ್ನು ಕಾಂಗ್ರೆಸ್ ನಿಲ್ಲಿಸಲಿ. ಕೇಂದ್ರದ ಕ್ರಮಗಳನ್ನು ಸಹಿಸದೇ ಭಯೋತ್ಪಾದಕ ಶಕ್ತಿಗಳು ಈ ಕೃತ್ಯ ಎಸಗಿವೆ. ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ‌ ಕೆಲಸ ಮಾಡಬಾರದು. ನೀನು ಹಿಂದೂನಾ ಅಂತ ಕೇಳಿ ಗುಂಡು ಹೊಡೆಯುತ್ತಾರೆ ಅಂದರೆ ಇದನ್ನು ಎಲ್ಲರೂ ಖಂಡಿಸಲೇಬೇಕು.ಇನ್ನೂ ಕೇವಲ 24 ಗಂಟೆ ಕಾಯಿರಿ. ಕೇಂದ್ರ ಸರ್ಕಾರ ಏನು ಮಾಡುತ್ತದೆ ನೋಡಿ. ಇದನ್ನೆಲ್ಲಾ ಮೋದಿ, ಅಮಿತ್ ಷಾ ಸಹಿಸಲ್ಲ. ನೋಡುತ್ತಿರಿ ಅವರ ಹೆಡೆಮುರಿ ಹೇಗೆ ಕಟ್ಟುತ್ತಾರೆ ಅಂತ. ಭಯೋತ್ಪಾದಕರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ.ಅವರ ದುರ್ಬುದ್ಧಿಗೆ ತಕ್ಕ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.