ಮನೆ Latest News ಕೇಂದ್ರ ಸರ್ಕಾರ ED-IT- CBI ಅನ್ನು ದುರ್ಬಳಕೆ ಮಾಡಿಕೊಂಡಿದೆ ; ಸಚಿವ ಕೆ ಎಚ್ ಮುನಿಯಪ್ಪ...

ಕೇಂದ್ರ ಸರ್ಕಾರ ED-IT- CBI ಅನ್ನು ದುರ್ಬಳಕೆ ಮಾಡಿಕೊಂಡಿದೆ ; ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ

0

ಬೆಂಗಳೂರು; ಕೇಂದ್ರ ಸರ್ಕಾರ ED-IT- CBI ಅನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಕೆ ಎಚ್ ಮುನಿಯಪ್ಪ  ನಾವಿಬ್ಬರು ಹಲವು ದಿನಗಳಿಂದ ಭೇಟಿ ಮಾಡಬೇಕು ಅಂತಾ ಇದ್ವೀ. ಇವತ್ತು ಜಮೀರ್ ಅಹ್ಮದ್ ಖಾನ್ ನಮ್ಮ ಮನೆಗೆ ತಿಂಡಿಗೆ ಬಂದಿದ್ದಾರೆ.ಜಮೀರ್ ಅಹ್ಮದ್ ಖಾನ್ ಅವರು ಕೋಲಾರದ ಎಲ್ಲ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ ಎಂದಿದ್ದಾರೆ.

ಜಾತಿಗಣತಿಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಅಂಕಿ ಸಂಖ್ಯೆಗಳ ಅನುಗುಣವಾಗಿ ಸೌಲಭ್ಯ ಕೊಡಬೇಕು. ಜನಸಂಖ್ಯೆ ಅಧಾರದ ಮೇಲೆ ಸೌಲಭ್ಯ ಕೊಡಬೇಕು. ಅದಕ್ಕೆ ನಾಳೆ ಚರ್ಚೆ ಮಾಡುತ್ತೇವೆ. ಬಿಜೆಪಿ ಅವರು ಕಾಂಗ್ರೆಸ್ ಪಕ್ಷವನ್ನ ಮುಗಿಸಲು ದುರುದ್ದೇಶದಿಂದ ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಕೇಸ್ ಹಾಕಿದ್ದಾರೆ. ಕಳೆದ‌10 ವರ್ಷದಿಂದ ಎನ್ ಮಾಡ್ತಾ ಇದ್ರು. ಇದನ್ನ ನಾವೂ ಖಂಡಿಸುತ್ತೇವೆ.ನಾವು ಹೋರಾಟ ಮಾಡುತ್ತೇವೆ. ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ.ರಾಜಕೀಯವನ್ನ ಸಿದ್ದಾಂತದ ಮೇಲೆ ಮಾಡಬೇಕು.ಕೇಂದ್ರ ಸರ್ಕಾರ ED-IT- CBI ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿಗೆ ಸೇರಲು ಹಿಂದೇಟು ಹಾಕಿದ್ರೆ ಅವರ ವಿರುದ್ದ ಇಡಿ- ಐಟಿ ದಾಳಿ‌ ಮಾಡಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ರಾಹುಲ್ – ಸೋನಿಯಾ ಗಾಂಧಿ ಅವರನ್ನ ಟಾರ್ಗೆಟ್ ಮಾಡಿದ್ರೂ ಕಾಂಗ್ರೆಸ್ ಪಕ್ಷವನ್ನ ಮುಗಿಸಲು ಸಾಧ್ಯವಿಲ್ಲ.ನಮ್ಮ ಪಕ್ಷ ಇತಿಹಾಸ ಇರೋ ಪಕ್ಷ ಆಗಿದೆ. ಈಡೀ ದೇಶದಲ್ಲಿ ವಾತವಾರಣವನ್ನ ಭಯಭೀತ ಮಾಡಿದ್ದಾರೆ. ಅವರು ಮಾಡಿರುವ ಕೆಲಸದಿಂದ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠ ಆಗುತ್ತೆ. ರಾಜಣ್ಣ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ತಯಾರಿಲ್ಲ ಎಂದರು.

ಮುನಿಯಪ್ಪ ಸಿಎಂ ರೇಸ್ ನಲ್ಲಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ಹೈಕಮಾಂಡ್ ತೀರ್ಮಾನ ಮಾಡಿ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡಿದೆ. ಅವರೇ ಮುಂದುವರೆಯುತ್ತಾರೆ ಎಂದರು.

ಇನ್ನು ಜನಮೀರ್ ಅಹ್ಮದ್ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ 21ಕ್ಕೆ ಸಿಎಂ ಕಾರ್ಯಕ್ರಮವಿದೆ. ಅವರ ಜಿಲ್ಲೆಗೆ ವಸತಿ ಇಲಾಖೆಯಿಂದ ಮನೆ ಹಂಚಿಕೆ ಬಗ್ಗೆ ಚರ್ಚೆ ಮಾಡಿದ್ವೀ. ದರ್ಗಾ. ಸಿಸಿ ರಸ್ತೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಳೆ ಸಂಪುಟ ಸಭೆ ಇದೆ. ಜಾತಿ ಜನಗಣತಿ ವಿಚಾರದಲ್ಲಿ ಪರ ವಿರೋಧ ಇರೋದು ಸಹಜ.ನಾಳೆ‌ ಎಲ್ಲವನ್ನೂ ಚರ್ಚೆ ಮಾಡಿ ಮಾತನಾಡ್ತುತ್ತೇವೆ.ಇನ್ನೂ ಚರ್ಚೆನೇ ಆಗಿಲ್ಲ. ಎನ್ ಮಾತನಾಡೋದು.ಇವತ್ತು ನಾನು ಎನ್ ಮಾತನಾಡಲ್ಲ. ಅಂಕಿ ಸಂಖ್ಯೆಗಳ ಬಗ್ಗೆ ನಾಳೆ ಸಂಪೂರ್ಣವಾಗಿ ಚರ್ಚೆ ಮಾಡುತ್ತೇವೆ ಎಂದರು.

ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್  ಬಗ್ಗೆ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ: ಗೃಹ ಸಚಿವ ಪರಮೇಶ್ವರ್ ಹೇಳಿಕೆ

ಬೆಂಗಳೂರು; ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್  ಬಗ್ಗೆ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್ ಸುಳ್ಳು ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು ಅದಕ್ಕಾಗಿಯೇ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ. ಆ ತನಿಖೆಯಲ್ಲಿ ಗೊತ್ತಾಗಲಿದೆ. ತನಿಖೆ ಹಿರಿಯ ಅಧಿಕಾರಿಗಳು ಮಾಡುತ್ತಾರೆ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ. ಆಕಸ್ಮಿಕನೋ ಅಥವಾ ನಿಜವಾದ ಅಟ್ಯಾಕೋ ಗೊತ್ತಾಗಲಿದೆ ಎಂದಿದ್ದಾರೆ.

ನಿನ್ನೆ ಒಕ್ಕಲಿಗರ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು  ಸಭೆ ನಡೆಸಿದ ಅಷ್ಟೆ ಗೊತ್ತು. ಚರ್ಚೆ ಏನು ಅಂತ ಗೊತ್ತಿಲ್ಲ.ಆ ಸಮುದಾಯ ನಮಗೆ ಅನ್ಯಾಯ ಆಗಬಾರದು ಅಂತ ಚರ್ಚೆ ಮಾಡಿದ್ದಾರೆ. ಅಷ್ಟು ಮಾತ್ರ ನನಗೆ ಗೊತ್ತಿರೋದು. ಒಕ್ಕಲಿಗ ಸಭೆ ಮಾಡೋದು ಸರಿ ದಲಿತ ಸಭೆ ಮಾಡೋದು ತಪ್ಪು ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ ತಪ್ಪು ಸರಿ ಅಂತ ನಾನು ಹೇಳಲು ಆಗಲ್ಲ. ಅದನ್ನ ನಾನು ಹೇಳಲು ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ದಾವಣಗೆರೆಯಲ್ಲಿ ಮಹಿಳೆಗೆ ಥಳಿಸಿದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಪೊಲೀಸ್ ಗಮನಿಸುತ್ತಾರೆ. ಕಾನೂನಿನ ಪ್ರಕಾರ ಕ್ರಮ ಆಗಲಿದೆ.ಮುಲಾಜು ಇಲ್ಲದೆ ಕ್ರಮ ಆಗುತ್ತದೆ. ಇಂಥ ಘಟನೆ ನಡದಾಗ ಸುಮ್ಮನೆ ಕೂರಲು ಆಗಲ್ಲ.ಎಲ್ಲಾ ವಿಚಾರದಲ್ಲೂ ಹೇಳಿದ್ಧೇನೆ ಕಠಿಣ ಕ್ರಮ ತೆಗದುಕೊಳ್ಳಿ ಅಂತ. ಹಾಗಾಗಿಯೇ ಪೊಲೀಸರು ಮುಲಾಜಿಲ್ಲದೆ ಕ್ರಮ ವಹಿಸುತ್ತಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ ಆದಾಗ ಕಠಿಣ ಕ್ರಮ ತೆಗೆದುಕೊಳ್ಳಿ ಅಂತಲೇ ಹೇಳಿದ್ದೇವೆ,.ಟಾಟಾ ಟ್ರಸ್ಟ್ ಅವರು ಒಂದು ಸರ್ವೇ ಮಾಡಿದ್ದಾರೆ. ಪೊಲೀಸ್ ಯಾವ ರೀತಿ ಕೆಲಸ ಮಾಡ್ತಾ ಇದ್ದಾರೆ ಅಂತ ಸರ್ವೇ ಮಾಡಿದೆ. ಕರ್ನಾಟಕಕ್ಕೆ ೬.೮ ಮಾರ್ಕ್ಸ್ ಕೊಟ್ಟಿದ್ದಾರೆ. ಕರ್ನಾಟಕ ಮೊದಲ ಸ್ಥಾನ ದಲ್ಲಿ ಇದೆ. ನಾವು ಯಾವ ರೀತಿ ಕೆಲಸ ಮಾಡ್ತಿದೆ ಅಂತ ಪ್ರೂ ಆಗಿದೆ ಎಂದ್ರು.

ನಾಳೆ ಕ್ಯಾಬಿನೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು ವರದಿ ಮಂಡಣೆ ಆದ ಬಳಿಕ ನಾವು ಸಮಯ ಕೇಳಿದ್ದೆವು. ಸಿಎಂ ನಮಗೆ ಒಂದು ವಾರ ಸಮಯ ಕೊಟ್ರು. ನಾಳೆ ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ. ಎಲ್ಲರೂ ಅವರವರ ಅಭಿಪ್ರಾಯ ಹೇಳುತ್ತಾರೆ. ಅಂತಿಮವಾಗಿ ಏನು ನಿರ್ಣಯ ಆಗುತ್ತೆ ಕಾದು ನೋಡೋಣ .ಶಾಮನೂರು ಮಾತಿಗೆ ನಾನು ಉತ್ತರ ಕೊಡಲ್ಲ.ಯಾರೇನೇ ಹೇಳಿದರೂ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ಸಂಪುಟದಲ್ಲಿ ಇರುವವರ ಅವರ ಅಭಿಪ್ರಾಯ ಹೇಳ್ತಾರೆ.ಅವರವರ ಸಮುದಾಯದ ಅಭಿಪ್ರಾಯ ಕೇಳಿರುತ್ತಾರೆ. ಅಂತಿಮವಾಗಿ ಚರ್ಚೆ ಮಾಡಿದ ಬಳಿಕವೇ ತೀರ್ಮಾನ ಮಾಡೋದು.ನಾಳೆ ನೋಡೋಣ ಅಧಿವೇಶನ ಕರೆಯುವ ವಿಚಾರವಾಗಿ ಎಂದಿದ್ದಾರೆ.