ಬೆಂಗಳೂರು; ವೈಜ್ಞಾನಿಕವಾಗಿ ಜಾತಿ ಗಣತಿ ವರದಿ ಆಗಿದೆ, ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳ ಪರ ಹಾಗೂ ಪೂರಕವಾಗಿದೆ ಎಂದು ಸಚಿವ ಎಚ್ ಸಿ ಮಹಾದೇವಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜಾತಿಗಣತಿ ವರದಿ ಜಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಾಮಾಜಿಕ ಶೈಕ್ಷಣಿಕ ಆರ್ಥಿಕ ಗಣತಿ ವರದಿ ಇದು. ಸಿಎಂ ಸಿದ್ದರಾಮಯ್ಯ ಅವರು ಸಮಿತಿ ರಚನೆ ಮಾಡಿದ್ರು. ಸುಮಾರು ೨೦೦ ಕೋಟಿ ಕೊಟ್ಟು ವರದಿ ಮಾಡಿಸಿದ್ರು. ಪ್ರಣಾಳಿಕೆಯಲ್ಲೂ ಜಾತಿ ಗಣತಿಗೆ ಪಕ್ಷ ಬದ್ದವಾಗಿತ್ತು. ಭಾರತ ದೇಶದಲ್ಲಿ ಜಾತಿಗಣತಿ ಮಾಡಲು ಕೆಲ ಪ್ರಯತ್ನ ಆಗಿತ್ತು. ಎಲ್ಲವನ್ನು ಕೂಲಕುಂಶವಾಗಿ ಪರಿಗಣಿಸಿ ವರದಿ ಮಾಡಿದ್ದಾರೆ. ಅಸಮಾನತೆ ತೊಡೆದುಹಾಕಬೇಕು, ಸಮಸಮಾಜ ನಿರ್ಮಾಣ ಆಗಬೇಕು. ಈ ತರಹದ ಅಧ್ಯಯನ ಮುಖ್ಯವಾಗಿದೆ. ಸ್ವತಂತ್ರ ಬಂದಾಗ 35 ಕೋಟಿ ಜನಸಂಖ್ಯೆ ಇತ್ತು. ಈಗ 140 ಕೋಟಿ ಜನಸಂಖ್ಯೆ ಆಗಿದೆ. ಅದರ ಆಧಾರದ ಮೇಲೆ ರಾಜ್ಯ & ಕೇಂದ್ರ ಸರ್ಕಾರ ಯೋಜನೆಗಳನ್ನ ನೀಡಬೇಕು. ಯಾವಾಗ ಸಮಾಜಕ್ಕೆ ಏನೂ ಸಿಗಬೇಕು ಅದನ್ನ ಕೊಡಬೇಕು. ಸಮ ಸಮಾಜ ನಿರ್ಮಾಣ ಆಗಬೇಕು. ಈ ವರದಿ ಯಾರ ಪರವಾಗಿಯೂ ಇಲ್ಲ. ವಿರೋಧವೂ ಇಲ್ಲ ಎಂದಿದ್ದಾರೆ.
ಸಂವಿಧಾನದ ಆಶಯದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. 17 ರಂದು ಮತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಮೀಸಲಾತಿ ಹೆಚ್ಚಳ ವಿಚಾರ. ಶಿಪಾರಸ್ಸುಗಳನ್ನ ಅಧ್ಯಯನ ಮಾಡುತ್ತೇವೆ. ಇದೊಂದು ಪ್ರಗತಿ ಪರ ಅಧ್ಯಯನವಾಗಿದೆ. ಜನಸಂಖ್ಯೆ ಸ್ಪೋಟ ಆಗ್ತಾ ಇದೆ. ಹೀಗಾಗಿ ಎಲ್ಲ ಸಮುದಾಯಕ್ಕೆ ಅವಕಾಶ ಸಿಗಬೇಕು. ವೈಜ್ಞಾನಿಕವಾಗಿ ವರದಿ ಆಗಿದೆ, ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳ ಪರವಾಗಿದೆ.ಪೂರಕವಾಗಿದೆ. ನಮ್ಮಕಾರ್ಯಕಾರಿ ಸಮಿತಿಯಲ್ಲೆ ಜೈ ಬಾಪು. ಜೈ ಭೀಮ. ಜೈ ಸಂವಿಧಾನ ಅಂತಾ ಹೇಳಿದೆ. ಸಾಮಾಜಿಕ ನ್ಯಾಯದ ಪರವಾಗಿ ಕಾಂಗ್ರೆಸ್ ಪಕ್ಷವಿದೆ. ಸಂಪುಟ ಸಭೆಯಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ಮಾಡ್ತೀವಿ. ಎಲ್ಲ ಸಂಗತಿಗಳನ್ನ ಸಂಪುಟದಲ್ಲಿ ಚರ್ಚೆ ಮಾಡ್ತೀವಿ. ಅಭಿಪ್ರಾಯ. ಸಲಹೆಗಳನ್ನು ಕೊಡಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದಿದ್ದಾರೆ.
ಬಿಜೆಪಿಯವರು ದುರಾದೃಷ್ಟ ಅಂದಿರುವುದು ಅದನ್ನ ಬಿಟ್ಟು ಬೇರೆ ಎನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಂಡಲ ಕಮೀಷನ್ ವರದಿ ಜಾರಿ ಆದಾಗ ಕಮಂಡಲ ಹಿಡಿದುಕೊಂಡು ಯಾತ್ರೆ ಮಾಡಿದ್ರು. ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ಅಸಮಾನತೆ ಇದೆ ಅಲ್ಲ. ಸಂಪತ್ತು ಎಲ್ಲರಿಗೂ ಹಂಚಿಕೆ ಆಗಿದೇಯ್ಯಾ?. ರಾಜಕೀಯ ಪ್ರಾತಿನಿಧ್ಯಕ್ಜೆ ಈ ವರದಿಗೂ ಸಂಬಂಧವಿಲ್ಲ. ಯಾವ ಸಮುದಾಯಕ್ಕೂ ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡುವ ಉದ್ದೇಶ ಇದಲ್ಲ. ವರದಿಯಲ್ಲಿ ಏನಿದೆ ಅಂತಾ ಇನ್ನೂ ನೋಡದೇ ಮಾತನಾಡಬಾರದು.ಒಬ್ಬರನ್ನ ಹಿಂದಿಕ್ಕಿ ಹಾಕಿ ಇನ್ನೊಬ್ಬರಿಗೆ ಅನ್ಯಾಯ ಮಾಡುವ ಪ್ರಶ್ನೆಯಿಲ್ಲ ಎಂದಿದ್ದಾರೆ.
ಜಾತಿ ಜನಗಣತಿ ವರದಿ ಕಾಗಕ್ಕ ಗೂಬ್ಬಕ್ಕ ಕತೆ ಥರ ಇದೆ; ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ
ಬೆಂಗಳೂರು; ಜಾತಿ ಜನಗಣತಿ ವರದಿ ಕಾಗಕ್ಕ ಗೂಬ್ಬಕ್ಕ ಕತೆ ಥರ ಇದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಜಾತಿ ಜನಗಣತಿ ವರದಿ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಅವರ ಕುರ್ಚಿ ಉಳಿಸಿಕೊಳ್ಳು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್ ನಾಯಕರು ಅವರನ್ನು ಕರೆದು ಹೇಳಿದ್ದಾರೆ.ಸಿದ್ದರಾಮಯ್ಯ ಅವರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ ಅನ್ನೋ ನೋವು ಕಾಡುತ್ತೆ ನನಗೆ ಎಂದಿದ್ದಾರೆ.
ನಾವು ನಮ್ಮ ನಾಯಕರು ಒಟ್ಟಿಗೆ ಕೂತು ಈ ವರದಿ ಬಗ್ಗೆ ಚರ್ಚೆ ಮಾಡ್ತೇವೆ. ಮುಂದೇನು ಮಾಡಬೇಕು ಅಂತ ಚರ್ಚೆ ಮಾಡ್ತೇವೆ.ಜಾತಿ ಜನಗಣತಿ ವರದಿ ಕಾಗಕ್ಕ ಗೂಬ್ಬಕ್ಕ ಕತೆ ಥರ ಇದೆ. ಈ ವರದಿ ಸಿದ್ದರಾಮಯ್ಯಗೇ ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ. ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ. ಈ ವರದಿಯನ್ನು ಸಿದ್ದರಾಮಯ್ಯ ತಿರಸ್ಕರಿಸಲಿ. ಮತ್ತೊಂದು ಸಮೀಕ್ಷೆಯನ್ನು ಮಾಡಿ, ಇನ್ನೂ ಮೂರು ವರ್ಷ ಸಮಯ ಇದೆ ಸಿದ್ದರಾಮಯ್ಯಗೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕ ಆಗಿಲ್ಲ.ಇದೊಂದು ಜೇನಿಗೂಡಿಗೆ ಕೈ ಹಾಕಿದಂತೆ.ನಿಮ್ಮ ಪಕ್ಷದವರೇ ಏನೇನೋ ಹಿಡಿದು ತಿವೀತಿದ್ದಾರೆ.ಈ ವರದಿ ಜಾರಿ ಆದರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ವರದಿ ಜಾರಿಯಾದರೆ ಸಿದ್ದರಾಮಯ್ಯ ಒಂಟಿಯಾಗಿ ಹೋಗ್ತಾರೆ ಎಂದಿದ್ದಾರೆ.
ರಾಜ್ಯ ಸರ್ಕಾರ ದರ ಏರಿಕೆ ಎಲ್ಲ ಪದಾರ್ಥಗಳಿಗೂ ಮಾಡಿದೆ. ಕಾಂಗ್ರೆಸ್ ನ ದರ ಏರಿಕೆ ದಾಹ ಇನ್ನೂ ಇಂಗಿಲ್ಲ.ಇದಲ್ಲದೇ ಬೆಂಗಳೂರಿನಲ್ಲಿ ಅಡಿಗೆ ನೂರು ರೂಪಾಯಿ ವಸೂಲಿ ಮಾಡ್ತಿದ್ದಾರೆ. ಕಸಕ್ಕೂ ಶುಲ್ಕ ಹಾಕಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ರಿ, ಜನರ ಮೇಲೆ ಅನಾವಶ್ಯಕ ಟ್ಯಾಕ್ಸ್ ಹಾಕ್ತಿದ್ದೀರಿ. ಸಿದ್ದರಾಮಯ್ಯ ಏನು ಭರವಸೆ ಕೊಟ್ಟಿದ್ದಾರೋ ಅದರಲ್ಲಿ ಒಂದು ಪರ್ಸೆಂಟ್ ಆದ್ರೂ ಈಡೇರಿಸಿ ಎಂದ ಅವರು ಯತ್ನಾಳ್ ಘರ್ ವಾಪಸಿ ಬಗ್ಗೆ ಕೆಲವರ ಒಲುವು ವಿಚಾರದ ಬಗ್ಗೆ ಮಾತನಾಡಿದ ಅವರು ಸಮಯ ಎಲ್ಲಕ್ಕೂ ಕೂಡಿ ಬರುತ್ತೆ. ಒಳ್ಳೆಯವರಿಗೆ ಒಳ್ಳೇ ಕಾಲ ಬರುತ್ತೆ. ಸೋಮಣ್ಣ ಬಹಿರಂಗವಾಗಿ ಮಾತಾಡೋದನ್ನು ನಿಲ್ಲಿಸಿದ್ರೆ ಅವರಿಗೂ ಕ್ಷೇಮ, ನಮಗೂ ಕ್ಷೇಮ ಎಂದ್ರು. ಜಾತಿ ಜನಗಣತಿ ವರದಿ ತಪ್ಪಾಗಿದೆ.ತಮ್ಮ ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿ ಮಾಡಿದ್ರೆ ರಾಜ್ಯದಲ್ಲಿ ದೊಡ್ಡ ಗೊಂದಲ ಆಗಬಹುದು ಎಂದು ಇದೇ ವೇಳೆ ಅವರು ತಿಳಿಸಿದ್ರು.