ಬೆಂಗಳೂರು: ಜಾತಿಗಣತಿ ಮಿನಿ ಪಾಕಿಸ್ತಾನದ ಉತ್ಪಾದನೆ ಆಗೋಕೆ ದಾರಿ ಆಗ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಪದ್ಮನಾಭ ನಗರದ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರು ಕಾಂತರಾಜು ಅವರನ್ನ ಮನೆಗೆ ಕರೆಸಿಕೊಂಡು ಸಿದ್ದಪಡಿಸಿರೋ ವರದಿ. ಜಗಜಾಹೀರಾತುವಾದ ವರದಿ, ಅನಾಥವಾಹಿರೋ ವರದಿ. ಇದರಲ್ಲಿ ಏನೂ ಸೀಕ್ರೆಟ್ ಇಲ್ಲ, ಎಲ್ಲರಿಗೂ ಗೊತ್ತಿತ್ತು. ಮುಸ್ಲಿಂ ಅವರ ಪರವಾಗಿದೆ, ೪% ಮೀಸಲಾತಿ ಗುತ್ತಿಗೆಯಲ್ಲಿ ಮಾಡಿದರು.ಮಿನಿ ಪಾಕಿಸ್ತಾನದ ಉತ್ಪಾದನೆ ಆಗೋಕೆ ದಾರಿ ಆಗ್ತಿದೆ. ಜಾತಿ ಜಾತಿ ಧರ್ಮ ಧರ್ಮ ಒಡೆಯೋ ಪ್ರಕ್ರಿಯೆ.ಲಿಂಗಾಯತರಿಗೆ ಪಂಗನಾಮ ಇಟ್ಟಿದ್ದಾರೆ.ಒಕ್ಕಲಿಗರಿಗೆ, ದಲಿತರಿಗೆ ನಾಮ ಇಟ್ಟಿದ್ದಾರೆ ಎಂದರು.
ಲಿಂಗಾಯತರನ್ನ ಭಾಗ ಮಾಡಿದ್ದಾರೆ. ಮುಸ್ಲಿಂ ನಲ್ಲೂ ಎರಡು ರೀತಿ ಇದೆ, ಅಲ್ಲಿ ಯಾಕೆ ಭಾಗ ಮಾಡಿಲ್ಲ?. ಒಕ್ಕಲಿಗರನ್ನ ಡಿವೈಡ್ ಮಾಡಿದ್ದಾರೆ. ಒಕ್ಕಲಿಗರಿಗೆ ಇರೋದೇ ಒಂದೇ ಮಠ. ನೆಹರು ಅವರು ಇದೇ ಮಾಡಿದರು. ಅಂಬೇಡ್ಕರ್ ಅವರು ಸ್ಪರ್ಧೆ ಮಾಡಿದ್ದ ಜಾಗವನ್ನೇ ಪಾಕಿಸ್ತಾನಕ್ಕೆ ಸೇರಿಸಿದರು. ಆಗ ಅಂಬೇಡ್ಕರ್ ಬೇರೆ ಕಡೆ ನಿಂತು ಗೆದ್ದಿದ್ದು. ನೆಹರು ಅವರು ಕೂಡ ಧರ್ಮಾಧಾರಿತವಾಗಿ ದೇಶ ಒಡೆದವರು. ಮಿಲಿಟರಿಗೆ ಕೋಟಿ ಕೋಟಿ ಸುರಿಯುತ್ತಿರೋದು ಕೂಡ ದೇಶ ಇಬ್ಬಾಗ ಮಾಡಿದ್ದಕ್ಕಾಗಿ., ಸಿದ್ದರಾಮಯ್ಯ ಅವರು ನೂರು ವರ್ಷ ಇರಲ್ಲ. ಪಾರ್ಟಿ ಒಡೆಯೋದರಲ್ಲಿ, ಸಮಾಜವಾಧಿ ಬಿಟ್ಟರು, ಕಾಂಗ್ರೆಸ್ ಪಕ್ಷವನ್ನು ಯಾವಾಗ ಒಡೆಯುತ್ತಾರೆ ಗೊತ್ತಿಲ್ಲ.ಸಿದ್ದರಾಮಯ್ಯ ಪ್ರಾಯೋಜಿತ ಅವೈಜ್ಞಾನಿಕ ವರದಿ ಎಂದು ಆರೋಪಿಸಿದ್ದಾರೆ.
ಕೋಟ್ಯಂತರ ಜನರ ಮನೆಗೆ ಹೋಗಿ ಸಿದ್ದಪಡಿಸಿಲ್ಲ ವರದಿ. ಸಾಫ್ಟ್ವೇರ್ ನಲ್ಲಿ ನಾವೇ ನಂಬರ್ ಒನ್ ಇದ್ದೇವೆ. ಇಷ್ಟಿದ್ರೂ ವೇರಿಫೀಕೇಷನ್ ಮಾಡೋಕೆ ಮನೆಗೆ ಹೋಗಲ್ಲ ಅಂದ್ರೆ ಹೇಗೆ?. ನಾವು ಜಾತಿಗಣತಿ ಯ ವಿರೋಧಿಗಳಲ್ಲ. ಮತಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳೀತಾರೆ ಅಂದ್ರೆ ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಹೋರಾಟ ಮಾಡಿ ಅಲ್ಲ, ಶೇರ್ ಮಾಡಿ ಸ್ವತಂತ್ರ ಪಡೆದಿದ್ದು ಕಾಂಗ್ರೆಸ್. ಒರಿಜಿನಲ್ ಕಾಂಗ್ರೆಸ್ ನವರು ಅಲ್ಲವೇ ಅಲ್ಲ, ಒರಿಜಿನಲ್ ಗಿರಾಕಿಗಳು ಅಲ್ಲ. ದೇಶಕ್ಕೆ ತ್ಯಾಗ ಮಾಡಿದ್ದವರು ಸತ್ತು ಹೋದರು. ಕಾಂಗ್ರೆಸ್ ಪದ ಕೊಟ್ಟಿದ್ದು ಬ್ರಿಟಿಷರು. ಜಾತಿಗಣತಿ ಇದು ಜಾತಿ ಜಾತಿ ಗಳನ್ನ ಒಡೆಯೋದು. ಲಿಂಗಾಯತ, ಒಕ್ಕಲಿಗರಲ್ಲೇ ಬೆಂಕಿ ಹಚ್ಚೋ ಕೆಲಸ. ಇದು ಒಪ್ಪುವಂತಹ ವರದಿ ಅಲ್ಲ. ಈಗಾಲಾದರೂ ವರದಿ ಮರಳಿ ಪಡೀಬೇಕು.ಇದು ದಾಖಲೆ ಆಗುವಂತಹದ್ದು, ಪ್ರತೀ ಮನೆಗೆ ಹೋಗಿ ಡೇಟಾ ತೆಗೆದುಕೊಂಡು ವರದಿ ಕೊಡಿ ಎಂದಿದ್ದಾರೆ.
೧೫೦ ಕೋಟಿ ಕೊಟ್ಟಿದ್ದು ಕೂಡ ಬೋಗಸ್. ಈ ಹಣ ತಿಂದವರು ಯಾರು? ಇದು ಕೂಡ ತನಿಖೆ ಆಗಬೇಕು, ಯಾರ ಜೇಬಿಗೆ ಹೋಗಿದೆ? ಸರ್ವೇ ಎಲ್ಲಿ ಯಾವಾಗ ಮಾಡಿದರು?. ಸಹಿ ಹಾಕದೇ ಕಾಂತರಾಜು ತಪ್ಪಿಸಿಕೊಂಡು ಓಡಿ ಹೋಗಿದ್ದು ಯಾಕೆ?. ಗೊಂದಲದ ಗೂಡಾಗಿದೆ ವರದಿ. ಇದು ಮುಸ್ಲಿಂ ಸಮುದಾಯದ ಓಲೈಕೆ ಮಾಡೋ ಸಲುವಾಗಿ ವ್ಯವಸ್ಥಿತವಾಗಿ ಮಾಡಿರೋ ವರದಿ. ಇದರಲ್ಲಿ ಸಿದ್ದರಾಮಯ್ಯ ಅವರ ಕೈ ಚಳಕದಿಂದ ಆಗಿರೋ ವರದಿ.ನಾವು ನಾಳೆ ಸಭೆ ಸೇರುತ್ತೇವೆ.ಜಾತಿಗಣತಿ ಗೆ ನಾವು ವಿರೋಧ ಇಲ್ಲ, ಆದ್ರೆ ಮತ್ತೊಮ್ಮೆ ಮಾಡಬೇಕು. ಡೈರೆಕ್ಟರ್, ಪ್ರಡ್ಯೂಸರ್, ಕ್ಯಾಮರಾ ಮನ್, ಡಿಸ್ಟ್ರಿಬ್ಯೂಷನ್ ಎಲ್ಲವೂ ಸಿದ್ದರಾಮಯ್ಯ ಎಂದಿದ್ದಾರೆ.
ರಾಜಣ್ಣ ಒಂದು ರೀತಿ, ಸಿದ್ದರಾಮಯ್ಯ ಒಂದು ರೀತಿ ಹೇಳ್ತಾರೆ. ನಾಳೆ ಸಂಜೆ ವರದಿ ಕುರಿತು ಸಭೆ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಇರೋರು ಯಾರು ವಿರೋಧ ಮಾಡಿದ್ದಾರೆ. ಅವರಿಗೆ ಇಡೀ ಸಮುದಾಯ ಅವರನ್ನು ಬೈಕಾಟ್ ಮಾಡುತ್ತೇವೆ, ನಾನು ಎಚ್ಚರಿಕೆ ನೀಡುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಂ ಓಲೈಕೆ ಮಾಡೋಕೆ ನಾಚಿಕೆ ಆಗಬೇಕು. ಇದೊಂದು ಪಕ್ಕಾದ ರಾಜಕೀಯ ದ ಸಮೀಕ್ಷೆ. ಹೈಕಮಾಂಡ್ ಮಾತು ಕೇಳಿ ಮಾಡಿದ್ರೆ ಹಳ್ಳಿಗಳಲ್ಲೂ ಇವರನ್ನು ಸೇರಿಸಲ್ಲ. ಮೈನಿಂಗ್ ಕುರಿತು ೫೦೦ ಕೋಟಿ ಡೀಲ್, ರಾಜಣ್ಣ ಹನಿಟ್ರ್ಯಾಪ್ ಕೇಸ್ ಮುಚ್ಚಿಹಾಕೋಕೆ ವರದಿ ತಂದಿದ್ದಾರೆ. ಕಾಂಟ್ರಾಕ್ಟರ್ ಆರೋಪ, ಮುಡಾ ಎಲ್ಲಾ ಸೈಡ್ ಲೈನ್ ಆಯ್ತಲ್ಲ. ಸಿದ್ದರಾಮಯ್ಯ ಓರ್ವ ಕುತಂತ್ರಗಾರ, ತಂತ್ರಗಾರ ಅಲ್ಲ. ಜೆಡಿಎಸ್ ಪಕ್ಷ ಒಡೆದಿದ್ದೇ ಸಿದ್ದರಾಮಯ್ಯ ಅವರು ಎಂದಿದ್ದಾರೆ.
ಇನ್ನು ೧೭ಕ್ಕೆ ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ನವರು ಬೂಟಾಟಿಕೆ ಪ್ರತಿಭಟನೆ ಮಾಡುತ್ತಿದ್ದಾರೆ.ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಧರಣಿ ಮಾಡುತ್ತಿದ್ದಾರೆ.ಹಾಲು, ಆಲ್ಕೋಗಾಲು, ಮೆಟ್ರೋ, ಬಸ್ ದರ, ರೈತರಿಗೆ ಬೀಜದ ದರ ಏರಿಕೆ ಮಾಡಿದ್ದಾರೆ. ಬೆಂಗಳೂರು ಜನರನ್ನ ಹಿಂಡಿ ಹಿಪ್ಪೆಮಾಡಿಸ್ದಾರೆ. ಜನರ ಶಾಪ ಸರ್ಕಾರಕ್ಕೆ ತಟ್ಟಿದೆ, ಸರ್ವನಾಶ ಆಗುತ್ತದೆ, ಬಹಳ ದಿನ ಇರಲ್ಲ ಸರ್ಕಾರ. ಮನೆಹಾಳ ಕಾಂಗ್ರೆಸ್ ಸರ್ಕಾರಕ್ಕೆ ಶಾಸ್ತಿ ಮಾಡಬೇಕಾಗಿದೆ ಎಂದರು.