ಮನೆ Latest News ಬಿಜೆಪಿಯವರು ಮತಗಳ್ಳತನ ಮಾಡುವುದರಲ್ಲೂ ನಿಸ್ಸೀಮರು,ಮತ‌ ಕದಿಯುವುದೇ ಅವರ ಕಸುಬು;: ಸಿಎಂ ಸಿದ್ದರಾಮಯ್ಯ ಹೇಳಿಕೆ

ಬಿಜೆಪಿಯವರು ಮತಗಳ್ಳತನ ಮಾಡುವುದರಲ್ಲೂ ನಿಸ್ಸೀಮರು,ಮತ‌ ಕದಿಯುವುದೇ ಅವರ ಕಸುಬು;: ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು; ಬಿಜೆಪಿಯವರು ಮತಗಳ್ಳತನ ಮಾಡುವುದರಲ್ಲೂ ನಿಸ್ಸೀಮರು,ಮತ‌ ಕದಿಯುವುದೇ ಅವರ ಕಸುಬು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯನ್ನ ಸುಳ್ಳಿನ‌ ಸರದಾರ ಅಂತ ಕರೀತೀವಿ. ಸುಳ್ಳೇ ಅವರ ಮನೆ ದೇವರು. ಅಷ್ಟಕ್ಕೇ ಸೀಮಿತ ಆಗಿಲ್ಲ. ಮತಗಳ್ಳತನ ಮಾಡುವುದರಲ್ಲೂ ನಿಸ್ಸೀಮರು. ಮತ‌ ಖದಿಯುವುದೇ ಅವರ ಕಸುಬು. ಇದಕ್ಕಾಗಿಯೇ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಮತಗಳ್ಳತನ ಮಾಡಿ ಲೋಕಸಭೆ, ಅಸೆಂಬ್ಲಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಜಾಪ್ರಭುತ್ವದ ಬುನಾದಿ.ಅದಕ್ಕಾಗಿಯೇ ಅಂಬೇಡ್ಕರ್ ಸಂವಿಧಾನದ ಕರ್ತೃ. ಚುನಾವಣಾ ಆಯೋಗವನ್ನ ಸ್ವಾತಂತ್ರ ಸಂಸ್ಥೆ ಅಂತ ಸಂವಿಧಾನದಲ್ಲಿ ಮಾಡಿದೆ. ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶ ಮಾಡಬಾರದು. ಚುನಾವಣಾ ಪ್ರಕ್ರಿಯೆ ಸ್ವತಂತ್ರವಾಗಿರಬೇಕು. ಜನರ ಅಭಿಪ್ರಾಯದ ವೇಳೆ ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಇದಕ್ಕಾಗಿಯೇ ಫ್ರೀ ಅಂಡ್ ಫೇರ್ ಎಲೆಕ್ಷನ್ ಅಂತ ಹೇಳೋದು, ಇದು ಆಗಲೇಬೇಕು. ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಮತದಾನ‌ ಸ್ವತಂತ್ರವಾಗಿ ಉಳಿಯಬೇಕು. ಇದು‌ ಎಲ್ಲಾ ಪಕ್ಷ, ಸರ್ಕಾರಗಳ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ಕೇಂದ್ರ ಹಾಗೂ ಅನೇಕ ರಾಜ್ಯಗಳಲ್ಲಿ ಮತಗಳ್ಳತನ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ರಾಹುಲ್ ಗಾಂಧಿಯವರು ಬಯಲುಗೊಳಿಸಿದ್ದಾರೆ. ಆರೋಪ ಮಾತ್ರವಲ್ಲ, ಸಾಕ್ಷಿಯನ್ನ ಇಟ್ಟುಕೊಂಡು ಅವರನ್ನ ಬಡಾಬಯಲುಗೊಳಿಸಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಹರಿಯಾಣದಲ್ಲೂ ಮಾಡಿದ್ರು.ಈಗ ಬಿಹಾರ ಚುನಾವಣೆಯಲ್ಲೂ ಅಷ್ಟೆ. ದೆಹಲಿಯಲ್ಲಿ ಮತ ಹಾಕಿದ್ದವರೇ ಬಿಹಾರದಲ್ಲೂ ಮತ ಹಾಕಿದ್ದಾರೆ. ಅನೇಕ ರಾಜ್ಯಗಳಲ್ಲಿ ಒಂದು ಮತಕ್ಕಿಂತ ಹೆಚ್ಚು ಮತ ಹಾಕೋಕೆ ಆಗಲ್ಲ. ದೆಹಲಿ, ಬಿಹಾರಲ್ಲೂ ಮತ ಹಾಕುತ್ತಾರೆ . ಇದು ಸಂವಿಧಾನ ಬಾಹಿರ ಎಂದಿದ್ದಾರೆ.

ಸಂವಿಧಾನ ಬಾಹಿರವಾಗಿ ಅಧಿಕಾರ ಹಿಡಿಯುವುದು ಸಂವಿಧಾನ, ಪ್ರಜಾಪ್ರಭುತ್ವ ಮೂಲ ತತ್ವಗಳಿಗೆ ವಿರೋಧ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಿದ್ರು. ಮಹದೇವಪುರದಲ್ಲಿ ಏನಾಯ್ತು?. ಮನ್ಸೂರ್ ಅಲಿಖಾನ್ ಸೋಲಲು ಕಾರಣ ಏನು?. ಇದನ್ನ ಜನರಿಗೆ ಹೇಳುವ ಕೆಲಸ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್, ಸುರ್ಜೇವಾಲ, ವೇಣುಗೋಪಾಲ್ ಮಾಡಿದ್ದಾರೆ. ಇಷ್ಟೆಲ್ಲಾ ಚುನಾವಣಾ ಆಯೋಗದವರು ತನಿಖೆ ಮಾಡೋಕೆ ಹೋಗಿಲ್ಲ, ಉತ್ತರ ಕೊಡ್ತಿಲ್ಲ.

ಚುನಾವಣಾ ಆಯೋಗವೇ ಇದಕ್ಕೆ ಜವಾಬ್ದಾರಿ. ಕೇಂದ್ರ‌ ಸರ್ಕಾರ ಅಧೀನದಲ್ಲಿ ಕೇಂದ್ರ ಚುನಾವಣಾ ಆಯೋಗ ಕೆಲಸ ಮಾಡ್ತಿದೆ . ಅವರ ಹೇಳಿದ‌‌ ಹಾಗೆ ಇವರು ಕೆಲಸ ಮಾಡ್ತಿದ್ದಾರೆ. ಸ್ವತಂತ್ರ ಸಂಸ್ಥೆಗಳನ್ನ ಮೋದಿ ನಾಶ ಮಾಡುತ್ತಿದ್ದಾರೆ. ಇಡಿ, ಐಟಿ ಬಳಿಕ ಈಗ‌ ಚುನಾವಣಾ ಆಯೋಗ. ಸ್ವತಂತ್ರವಾಗಿ ಕೆಲಸ ಮಾಡಬೇಕು. ಆದ್ರೆ ಅವರ ಅಧೀನದಲ್ಲಿರಿಸಿಕೊಂಡು‌ ಕೆಲಸ ಮಾಡ್ತಿದ್ದಾರೆ. ಕೇಂದ್ರದ ಅಡಿಯಾಳಾಗಿ ಆಯೋಗ ಕೆಲಸ ಮಾಡ್ತಿದೆ.ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರ ಗಮನ ಸೆಳೆಯುವ, ಸಂವಿಧಾನದ ಹಾಗೂ ಪ್ರಜಾಪ್ರಭುತ್ವ ಉಳಿಸಲು, ಸ್ವತಂತ್ರ ಸಂಸ್ಥೆಗಳನ್ನ ಉಳಿಸಲು‌ ಸಹಿ ಸಂಗ್ರಹ ಆಂದೋಲನ ಶುರು ಮಾಡಿದ್ವಿ. 1 ಕೋಟಿ 12 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹ ಆಗಿದೆ .ರಾಷ್ಟ್ರಪತಿಗಳು ಸಂವಿಧಾನಕ್ಕೆ ಹೆಡ್. ಚುನಾವಣಾ ಆಯೋಗಕ್ಕೂ ಕಳುಹಿಸುತ್ತೇವೆ. ಸಾರ್ವಜನಿಕ ಗಮನ‌ಸೆಳೆಯುವುದು, ಜಾಗೃತಿ ಮೂಡಿಸಿ ಸಂವಿಧಾನ ಸಂಸ್ಥೆಗಳನ್ನ ರಕ್ಷಣೆ ಮಾಡ್ತೀವಿ ಎಂದು ಇವರು ಇದೇ ವೇಳೆ ತಿಳಿಸಿದ್ದಾರೆ. ಮಾಧ್ಯಮಗಳು ಈ ಬಗ್ಗೆ ಬೆಳಕು‌ ಚೆಲ್ಲಿತ್ತು. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ನೀವು ಉತ್ತಮ ಕೆಲಸ ಮಾಡಬೇಕು. ರಾಜಕೀಯವಾಗಿ 40 ಜಿಲ್ಲೆಗಳಿವೆ. ಹೆಚ್ಚು ಸಹಿ ಸಂಗ್ರಹ ಮಾಡಲು ಬಾಕಿ ಜಿಲ್ಲೆಗಳಿಗೂ ಸೂಚಿಸಿದ್ದೇವೆ. ಇನ್ನೂ ಮೂರು ದಿನಗಳಲ್ಲಿ ಮಾಡಿ‌ ಕಳುಹಿಸಿ. ಪ್ರಜಾಪ್ರಭುತ್ವವನ್ನ ನಾವು ಒಪ್ಪಿಕೊಂಡಿದ್ದೇವೆ, ಅದು ಉಳಿಯಬೇಕು. ಐದು ವರ್ಷಕೊಮ್ಮ ಜನರಿಂದ ಮಾನ್ಯತೆ ಪಡೆದುಕೊಳ್ಳುತ್ತೇವೆ. ಫ್ರೀ‌ ಅಂಡ್ ಫೇರ್, ಪಾರದರ್ಶಕತೆ ಆಗಿರಬೇಕು ಎಂದು ಅವರು ಇದೇ ವೇಳೆ ಹೇಳಿದ್ದಾರೆ.