ಬೆಂಗಳೂರು ಮೆಟ್ರೋಗೆ ದೇಶದಲ್ಲೇ ಅತಿ ದುಬಾರಿ ಮೆಟ್ರೋ ಎಂಬ ಕುಖ್ಯಾತಿ ಇದೆ ಎಂದು ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಂಟು-ಹತ್ತು ತಿಂಗಳ ಹಿಂದೆಯೇ 71% ಜಾಸ್ತಿ ಮಾಡಲಾಗಿದೆ. ದೇಶದಲ್ಲೇ ಅತಿ ದುಬಾರಿ ಮೆಟ್ರೋ ಎಂಬ ಕುಖ್ಯಾತಿ ಇದೆ. ಮತ್ತೆ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮತ್ತು ಬಿಎಂಆರ್ ಸಿಎಲ್ ಮುಂದಾಗಿದೆ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಬೊಟ್ಟು ಮಾಡುತ್ತಿದೆ. ಫೇರ್ ಫಿಕ್ಸ್ ಕಮಿಟಿ ರಚನೆ ಮಾಡಿ ಅಂತ ನಾಲ್ಕು ಬಾರಿ ಪತ್ರ ಬರೆದ ಮೇಲೆ ರಾಜ್ಯ ಸರ್ಕಾರ ರಚನೆ ಮಾಡಿದೆ. ಕೇಂದ್ರ ಸರ್ಕಾರ ತನಗೆ ಬೇಕು ಅಂತ ಕಮಿಟಿ ರಚನೆ ಮಾಡಿ ಫೇರ್ ಫಿಕ್ಸ್ ಮಾಡಿಲ್ಲ. ಮೆಟ್ರೋ, ಬಿಎಂಆರ್ ಸಿಎಲ್ ಜಾಯಿಂಟ್ ಪ್ರಾಜೆಕ್ಟ್. ರಾಜ್ಯ ಕೇಂದ್ರದ ನಡುವೆ ಒಪ್ಪಂದ ನಡೆದಿದೆ ಎಂದಿದ್ದಾರೆ.
ಫೇರ್ ಫಿಕ್ಸೇಷನ್ ಕಮಿಟಿ ಮಾಡಿ ಅಂತ ರಾಜ್ಯ ಯಾಕೆ ಕೇಳಿತು?. ಆರು ತಿಂಗಳಾದ ಬಳಿಕ ಕೋರ್ಟಿಗೆ ಹೋದ ಮೇಲೆ ರಾಜ್ಯ ಸರ್ಕಾರ ಬಹಿರಂಗ ಮಾಡಿದೆ. ರಾಜ್ಯ ಸರ್ಕಾರ ಸಂಸದರ ಮೇಲೆ ಆರೋಪ ಮಾಡುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ ಹಾಗಾದರೆ ಉತ್ತರ ಕೊಡಲಿ. ಕೂಡಲೇ ದರ ಹೆಚ್ಚಳ ಮಾಡಬೇಕು, ನಮಗೆ ಆರ್ಥಿಕ ಹೊರೆಯಾಗುತ್ತಿದೆ ಅಂತ ಪತ್ರ ಬರೆದಿದ್ದಾರೆ. ಪ್ರತೀ ವರ್ಷ ದರ ಹೆಚ್ಚಳ ಮಾಡಬೇಕು ಅಂತ ರಾಜ್ಯ ಸರ್ಕಾರವೇ ಸಲಹೆ ನೀಡಿದೆ. ಫೇರ್ ಫಿಕ್ಸೇಷನ್ ಕಮಿಟಿಯೇ ಈ ನಿರ್ಣಯ ಮಾಡಿದೆ. ರಾಜ್ಯ ಸರ್ಕಾರದ ಅಧಿಕಾರಿಗಳೇ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬರುವವರೆಗೂ ಬಿಎಂಆರ್ ಸಿಎಲ್ ಗೆ ರಾಜ್ಯ ಸರ್ಕಾರ ಶಾಡೋ ಕ್ಯಾಶ್ ಸಪೋರ್ಟ್ ನೀಡುತ್ತಿತ್ತು. ಸಾಲ ಪಡೆದಿರುವ ಬಡ್ಡಿ ಹೊಡೆತ ತಪ್ಪಿಸಿಕೊಳ್ಳಲು ಬೆಂಬಲವಾಗಿ ಹಣ ನೀಡುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದನ್ನು ನಿಲ್ಲಿಸಿದೆ. ರಾಜ್ಯ ಸರ್ಕಾರ ಸುಮ್ಮನೆ ಆರೋಪ ಹೊರಿಸುವುದನ್ನು ನಿಲ್ಲಿಸಬೇಕು.
ಜಿಬಿಎ ಚುನಾವಣೆ ಸಂಧರ್ಭದಲ್ಲಿ ಈ ವಿಚಾರ ಚರ್ಚೆ ಮಾಡಿದ್ದೇವೆ. ಕೇಂದ್ರದ ಪಾತ್ರ ಇದ್ದರೆ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಾದ್ಯವಿದ್ದರೆ ನಿಲ್ಲಿಸಲು ನಾವೂ ಆಗ್ರಹ ಮಾಡಿದ್ದೇವೆ. ಸಿಎಂ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಹೊಸ ದರ ಪರಿಷ್ಕರಣೆ ಮಾಡಲು ಕಮಿಟಿ ಮಾಡಲು ಪತ್ರ ಬರೆಯಿರಿ ಎಂದು ತಿಳಿಸಿದ್ದಾರೆ.
2016ರ ಆಧಾರದ ಮೇಲೆ ದರ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳದೇ ತಪ್ಪು ಮಾಡಿದ್ದೀರಿ.ಬಡವರಿಗೆ ಈ ಮೆಟ್ರೋ ದರ ಹೊರೆಯಾಗುತ್ತಿದೆ. ಕರ್ನಾಟಕವನ್ನು ದಿವಾಳಿ ಮಾಡುವುದನ್ನು ನಿಲ್ಲಿಸಿ. ಸಿಎಂ, ಡಿಸಿಎಂ ಇಬ್ಬರಿಗೂ ಪ್ರಶ್ನೆ ಮಾಡುತ್ತಿದ್ದೇವೆ. ಸೋಮವಾರದಿಂದ ದರ ಹೆಚ್ಚ ಮಾಡಲು ಹೊರಟಿದ್ದು, ಕೂಡಲೇ ನಿಲ್ಲಿಸಬೇಕು. ಮತ್ತೆ ದರ ಹೆಚ್ಚಳ ನಿರ್ಧಾರದ ಬಗ್ಗೆ ತೀರ್ಮಾನಿಸಿ. ಕೇಂದ್ರ ರಾಜ್ಯದ ಮೇಲೆ, ರಾಜ್ಯ ಕೇಂದ್ರದ ಮೇಲೆ ಆರೋಪ ಅಂತ ಮಾತಾಡುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ದರ ಹೆಚ್ಚಳ ಮಾಡಿದ್ದು ಎನ್ನುವುದಾದರೆ ಎಲ್ಲಾ ರಾಜ್ಯದಲ್ಲೂ ಆಗಬೇಕಿತ್ತು. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಮೋದಿ ಹೀಗೆ ಮಾಡುತ್ತಿದ್ದಾರೆ ಎನ್ನುವುದಾದರೆ ಈಗೇನೂ ಚುನಾವಣೆ ಇಲ್ಲ. ದರ ಹೆಚ್ಚಳ ಪರಿಷ್ಕರಿಸಲು ಬಂದರೆ ಅದನ್ನು ತಡೆಯಬೇಕು ಅಂತ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೇನೆ. ಮರು ಪರಿಷ್ಕರಣೆ ಮಾಡಲು ಮತ್ತೊಂದು ಸಮಿತಿ ರಚನೆ ಮಾಡಿ. ಒಂದು ವೇಳೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯದಿದ್ದರೆ ನಾಳೆಯಿಂದ ನಾವೆಲ್ಲಾ ಮೆಟ್ರೋ ನಿಲ್ದಾಣದಲ್ಲಿ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡುತ್ತೇವೆ. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಕೋರ್ಟ್, ದೆಹಲಿಗೆ ನಿಯೋಗ ಒಯ್ಯುತ್ತೀರಿ. ದೆಹಲಿಗೆ ಒಂದು ನಿಯೋಗ ತೆಗೆದುಕೊಂಡು ಹೋಗಿ, ಕೇಂದ್ರದ ವಿರುದ್ಧ ಮೋದಿ ವಿರುದ್ಧ ಹೋರಾಟ ಮಾಡಿ. ಎಂಟು ತಿಂಗಳಿಂದ ಮೆಟ್ರೋ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ. ಸಿಎಂ ಯಾಕೆ ಹೋರಾಟ ಮಾಡುತ್ತಿಲ್ಲ?.
ಫೇರ್ ಫಿಕ್ಸೇಷನ್ ಮಾಡಿ ಅಂತ ನಾನು ಕೋರ್ಟಿಗೆ ಹೋದೆ. ನಾವೇನು ಅನಕ್ಷರಸ್ಥರಾ?. ಅದರಲ್ಲಿ ಏನಿದೆ ಅಂತ ಓದಲು ಬರಲ್ವಾ? ಎಂದು ಪ್ರಶ್ನಿಸಿದ್ದಾರೆ.











