ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಅವರು ನಿನ್ನೆ ನಾಳೆ ತಮ್ಮ ಲೈಫ್ ನ ಹೀರೋಯಿನ್ ಳನ್ನು ಪರಿಚಯಿಸುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಅದರಂತೆ ಇಂದು ತಮ್ಮ ರಿಯಲ್ ಬದುಕಿನ ಹೀರೋಯಿನ್ ನನ್ನು ಇಡೀ ಕರುನಾಡಿಗೆ ಸುಂದರವಾದ ವೀಡಿಯೊವೊಂದರ ಮೂಲಕ ಪರಿಚಯಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು ಸೋನಾಲ್ ಜೊತೆಗಿನ ಸುಂದರವಾದ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ ಅದರಲ್ಲಿ ಅವರು ನಾನು ತರುಣ್ ಸುಧೀರ್, ಇನ್ನೂ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ, ನನ್ನ ನಾಯಕಿ ಸೋನಲ್ ಜೊತೆ (Tharun here, directing my greatest love story yet, with my leading lady sonal ) ಎಂದು ಇಂಗ್ಲೀಷ್ ನಲ್ಲಿ ಬರೆದಿದ್ದಾರೆ . ಅಲ್ಲದೇ ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ ಎಂದು ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ. ಅಲ್ಲದೇ ಆಗಸ್ಟ್ 11 ರಂದು ನಾವು ಮದುವೆಯಾಗುತ್ತಿದ್ದೇವೆ ಎಂದು ಮದುವೆ ದಿನಾಂಕವನ್ನು ತಿಳಿಸಿದ್ದಾರೆ. ಇನ್ನು ಇದೇ ವೀಡಿಯೋವನ್ನು ಸೋನಲ್ ಕೂಡ ಶೇರ್ ಮಾಡಿದ್ದು, ನಾನು ಸೋನಲ್, ಇನ್ನೂ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ, ಅದು ನನ್ನ ಜಂಟಲ್ ಮೆನ್ ತರುಣ್ ಜೊತೆ ಎಂದು ಹೇಳಿದ್ದಾರೆ.(Sonal here, directing my greatest love story yet, with my gentlemen Tharun.) ಇನ್ನು ಇಬ್ಬರು ಮದುವೆ ವಿಚಾರ ಅಧಿಕೃತವಾಗಿ ಅನೌನ್ಸ್ ಮಾಡುತ್ತಿದ್ದಂತೆ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ದರ್ಶನ್ ರನ್ನು ಭೇಟಿಯಾದ ತರುಣ್ ಸುಧೀರ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಅವರ ಅನೇಕ ಸ್ನೇಹಿತರು ಈಗಾಗಲೇ ಜೈಲಿಗೆ ತೆರಳಿ ಭೇಟಿ ಮಾಡಿದ್ದಾರೆ. ಹೀಗಿರುವಾಗ ಅವರ ಆಪ್ತ ನಿರ್ದೇಶಕ ತರುಣ್ ಸುಧೀರ್ ಯಾಕೆ ಇನ್ನೂ ದರ್ಶನ್ ಅವರನ್ನು ಭೇಟಿಯಾಗಲು ಬಂದಿಲ್ಲ, ಅವರು ಮದುವೆಯಾಗ್ತಿದ್ದಾರೆ ಅದಕ್ಕೆ ಕಾರಣ ದರ್ಶನ್. ಹೀಗಿದ್ರೂ ಇನ್ನು ಯಾಕೆ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಇವತ್ತು ತರುಣ್ ಸುಧೀರ್ ತನ್ನ ಆಪ್ತ ಮಿತ್ರನ ಭೇಟಿಗಾಗಿ ಬಂದೇ ಬಿಟ್ಟಿದ್ದರು.
ಇನ್ನು ದರ್ಶನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು , ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ವಾಗದೇ ಸಂಜೆಯಾಗುತ್ತಿದ್ದಂತೆ ದರ್ಶನ್ ಅವರಿಗೆ ಜ್ವರ ಬರುತ್ತಿತ್ತು. ಆದರೆ ಈಗ ಅವರು ಚೇತರಿಸಿಕೊಂಡಿದ್ದಾರೆ. ಏನಿಲ್ಲ ಈಗ ಆರಾಮಗಿದ್ದೇನೆ ಮಗ ಅಂತಾ ನನ್ನ ಬಳಿ ಹೇಳಿದ್ರು. ಇನ್ನು ನನ್ನ ವಿವಾಹದ ವಿಚಾರ ಅವರಿಗೆ ಮೊದಲೇ ಗೊತ್ತಿತ್ತು. ನನಗೆ ಅವರು ಇಲ್ಲದ ಸಮಯದಲ್ಲೇ ಮದುವೆಯಾಗುವಂತಾಯ್ತಲ್ವಾ ಅನ್ನೋ ಕೊರಗು ಇತ್ತು. ಆದರೆ ಮದುವೆ ವೇಳೆ ನಾನು ಬರ್ತಿನಿ ಅಂತಾ ಅವರೇ ಹೇಳಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ನನಗೆ ಇದೆ.ಹಾಗೆ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಂದು ತರುಣ್ ಹೇಳಿದ್ದಾರೆ.
ಇದರ ಮಧ್ಯೆ ಪೆರೋಲ್ ಮೇಲೆ ಅಂದರೆ ಸ್ಪೆಷಲ್ ಪರ್ಮಿಷನ್ ಮೇಲೆ ಡಿ ಬಾಸ್ ನಿಮ್ಮ ಮದುವೆಗೆ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಅಷ್ಟೋತ್ತಿಗೆ ಅವರು ಜೈಲಿನಿಂದ ರಿಲೀಸ್ ಆಗಿ ಬರ್ತಾರೆ ಅಂದಿದ್ದಾರೆ. ಇನ್ನು ಜೈಲಿನಲ್ಲಿ ಆಹ್ವಾನ ಪತ್ರಿಕೆ ನೀಡೋದಕ್ಕೆ ಅವಕಾಶವಿಲ್ಲ. ಆದರೆ ನಾನು ಅವರ ಆಶೀರ್ವಾದ ಪಡೆದುಕೊಂಡೆ. ಜೈಲಿನಲ್ಲಿ ನಟ ದರ್ಶನ್ ಸ್ವಲ್ಪ ತೂಕ ಕಡಿಮೆಯಾಗಿ ಸಣ್ಣಗಾಗಿದ್ದಾರೆ ಎಂದು ತರುಣ್ ಹೇಳಿದ್ದಾರೆ.