ಮನೆ Latest News ನಾಳೆ ತಮ್ಮ ಬದುಕೆಂಬ ಸಿನಿಮಾದ ಹೀರೋಯಿನ್ ಳನ್ನು ಪರಿಚಯಿಸಲಿರುವ ನಿರ್ದೇಶಕ ತರುಣ್ ಸುಧೀರ್

ನಾಳೆ ತಮ್ಮ ಬದುಕೆಂಬ ಸಿನಿಮಾದ ಹೀರೋಯಿನ್ ಳನ್ನು ಪರಿಚಯಿಸಲಿರುವ ನಿರ್ದೇಶಕ ತರುಣ್ ಸುಧೀರ್

0

ಬೆಂಗಳೂರು; ಸ್ಯಾಂಡಲ್ ವುಡ್ ನ ನಂಬರ್ ಒನ್ ನಿರ್ದೇಶಕ ತರುಣ್ ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಸಿದ್ಧರಾಗಿರೋದು ಗೊತ್ತೇ ಇದೆ. ಆದ್ರೆ ಎಲ್ಲೂ ಕೂಡ ಅಧಿಕೃತವಾಗಿ ಸೋನಲ್ ಮೊಂತೆರೋ ಅವರ ಹೆಸರನ್ನು ತರುಣ್ ಸುಧೀರ್ ಹೇಳಿಲ್ಲ. ಸೂಕ್ತ ಸಮಯದಲ್ಲಿ ನಿಮೆಗೆಲ್ಲಾ ಹೇಳೇ ಹೇಳ್ತೀನಿ ಅಂತಾ ಹೇಳಿದ್ರು. ಅದರಂತೆ ಇದೀಗ ತರುಣ್ ಸುಧೀರ್ ಅವರು ತಮ್ಮ ಲೈಫ್ ನ ಹೀರೋಯಿನ್ ನ ಎಲ್ಲರಿಗೂ ಪರಿಚಯಿಸುವ ಸಮಯ ಬಂದೇ ಬಿಟ್ಟಿದೆ. ಅದಕ್ಕೆ ಅವರೇ ಮುಹೂರ್ತ ಫಿಕ್ಸ್ ಮಾಡಿದ್ದು ನಾಳೆ ಆಕೆಯನ್ನು ಕರುನಾಡಿಗೆ ಪರಿಚಯಿಸಲಿದ್ದಾರೆ.

 

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತರುಣ್ ಪೋಸ್ಟ್ ಒಂದನ್ನು ಹಾಕಿದ್ದು ಕೊನೆಗೂ ಡೈರಕ್ಟರ್ ಗೆ ಅವರ ಲೈಫ್ ನ ಹೀರೋಯಿನ್ ಸಿಕ್ಕಾಯ್ತು. ನಮ್ಮದೇ ಕಾಲ್ಪನಿಕ ಕಥೆಯಲ್ಲಿ ನಟಿಸುತ್ತಿದ್ದೇವೆ ಎಂದು ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಜುಲೈ 22 ರಂದು ಅಂದರೆ ನಾಳೆ ಬೆಳಗ್ಗೆ 11-08 ನಿಮಿಷಕ್ಕೆ ಆಕೆಯನ್ನು ಪರಿಚಯಿಸುತ್ತೇನೆ ಎಂದು ತರುಣ್ ಸುಧೀರ್ ಬರೆದುಕೊಂಡಿದ್ದಾರೆ.

 

ದರ್ಶನ್ ರನ್ನು ಭೇಟಿಯಾದ ಆಪ್ತ, ನಿರ್ದೇಶಕ ತರುಣ್ ಸುಧೀರ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಅವರ ಅನೇಕ ಸ್ನೇಹಿತರು ಈಗಾಗಲೇ ಜೈಲಿಗೆ ತೆರಳಿ ಭೇಟಿ ಮಾಡಿದ್ದಾರೆ. ಹೀಗಿರುವಾಗ ಅವರ ಆಪ್ತ ನಿರ್ದೇಶಕ ತರುಣ್ ಸುಧೀರ್ ಯಾಕೆ ಇನ್ನೂ ದರ್ಶನ್ ಅವರನ್ನು ಭೇಟಿಯಾಗಲು ಬಂದಿಲ್ಲ, ಅವರು ಮದುವೆಯಾಗ್ತಿದ್ದಾರೆ ಅದಕ್ಕೆ ಕಾರಣ ದರ್ಶನ್. ಹೀಗಿದ್ರೂ ಇನ್ನು ಯಾಕೆ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಇವತ್ತು ತರುಣ್ ಸುಧೀರ್ ತನ್ನ ಆಪ್ತ ಮಿತ್ರನ ಭೇಟಿಗಾಗಿ ಬಂದೇ ಬಿಟ್ಟಿದ್ದರು.

ಇನ್ನು ದರ್ಶನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು , ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ವಾಗದೇ ಸಂಜೆಯಾಗುತ್ತಿದ್ದಂತೆ ದರ್ಶನ್ ಅವರಿಗೆ ಜ್ವರ ಬರುತ್ತಿತ್ತು. ಆದರೆ ಈಗ ಅವರು ಚೇತರಿಸಿಕೊಂಡಿದ್ದಾರೆ. ಏನಿಲ್ಲ ಈಗ ಆರಾಮಗಿದ್ದೇನೆ ಮಗ ಅಂತಾ ನನ್ನ ಬಳಿ ಹೇಳಿದ್ರು. ಇನ್ನು ನನ್ನ ವಿವಾಹದ ವಿಚಾರ ಅವರಿಗೆ ಮೊದಲೇ ಗೊತ್ತಿತ್ತು. ನನಗೆ ಅವರು ಇಲ್ಲದ ಸಮಯದಲ್ಲೇ ಮದುವೆಯಾಗುವಂತಾಯ್ತಲ್ವಾ ಅನ್ನೋ ಕೊರಗು ಇತ್ತು. ಆದರೆ ಮದುವೆ ವೇಳೆ ನಾನು ಬರ್ತಿನಿ ಅಂತಾ ಅವರೇ ಹೇಳಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ನನಗೆ ಇದೆ.ಹಾಗೆ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಂದು ತರುಣ್ ಹೇಳಿದ್ದಾರೆ.

ಇದರ ಮಧ್ಯೆ ಪೆರೋಲ್ ಮೇಲೆ ಅಂದರೆ ಸ್ಪೆಷಲ್ ಪರ್ಮಿಷನ್ ಮೇಲೆ ಡಿ ಬಾಸ್ ನಿಮ್ಮ ಮದುವೆಗೆ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಅಷ್ಟೋತ್ತಿಗೆ ಅವರು ಜೈಲಿನಿಂದ ರಿಲೀಸ್ ಆಗಿ ಬರ್ತಾರೆ ಅಂದಿದ್ದಾರೆ. ಇನ್ನು ಜೈಲಿನಲ್ಲಿ  ಆಹ್ವಾನ ಪತ್ರಿಕೆ ನೀಡೋದಕ್ಕೆ ಅವಕಾಶವಿಲ್ಲ. ಆದರೆ ನಾನು ಅವರ ಆಶೀರ್ವಾದ ಪಡೆದುಕೊಂಡೆ. ಜೈಲಿನಲ್ಲಿ ನಟ ದರ್ಶನ್ ಸ್ವಲ್ಪ ತೂಕ ಕಡಿಮೆಯಾಗಿ ಸಣ್ಣಗಾಗಿದ್ದಾರೆ ಎಂದು ತರುಣ್ ಹೇಳಿದ್ದಾರೆ.