ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರೋದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಹೈಕೋರ್ಟಿಗೆ ಒಟ್ಟು 712 ಪುಟಗಳ ರಿಟ್ ಅರ್ಜಿಯನ್ನು ಸಿಎಂ ಸಲ್ಲಿಸಿದ್ದರು. ಇಂದು ಆ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆಯಿತು. ಈ ವೇಳೆ ನ್ಯಾಯಾಧೀಶರು ಆಗಸ್ಟ್ 29ರ ವರೆಗೆ ವಿಚಾರಣೆಯನ್ನು ಮುಂದೂಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಆದೇಶ ನೀಡಿದ್ದಾರೆ. ಹಾಗಾಗಿ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಅರ್ಜಿ
ಬೆಂಗಳೂರು; ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಹೈ ಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಪರ ಹೈಕೋರ್ಟ್ ಗೆ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ವಾದ ಮಂಡಿಸಿದ ಸಿಎಂ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ,ರಾಜ್ಯಪಾಲರು ಸರಿಯಾಗಿ ಪರಿಶೀಲನೆ ನಡೆಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ವಾದ ಮಂಡಿಸಿದರು.ಇನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರ ಪರವಾಗಿ ವಕೀಲ ತುಷಾರ್ ಮೆಹ್ತಾ ಅವರು ಮಂಡಿಸಿದರು.ಈ ವೇಳೆ ತುಷಾರ್ ಮೆಹ್ತಾ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು ಎಂದು ಮನವಿ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಗ್ವಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಲಾಗಿದೆ ನಿಜ. ಹಾಗಂದ ಮಾತ್ರಕ್ಕೆ ಅವರ ವಾದ ಕೇಳಬೇಕಿಲ್ಲ ಎಂದು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.
ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ
ಬೆಂಗಳೂರು ; ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ.ಈ ಬಗ್ಗೆ ಪ್ರಾಸಿಕ್ಯೂಷನ್ ಬಳಿಕ ಕಾನೂನಾತ್ಮಕವಾಗಿ ಹೋರಾಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್ ಯಾವ ರೀತಿಯಲ್ಲಿ ಅನುಮತಿ ಕೊಟ್ಟಿದೆ ಅಂತ ಗೊತ್ತಿಲ್ಲ.ಒಂದು ವೇಳೆ ಕೊಟ್ಟಿದ್ರೆ ಕಾನೂನು ಹೋರಾಟ ಮಾಡುತ್ತೇವೆ.ಸಿಎಂ ಹಾಗೂ ಪಕ್ಷ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ ಎಂದಿದ್ದಾರೆ.
ರಾಜ್ಯಪಾಲರಿಗೆ ಮೇಲಿಂದ ಒತ್ತಡ ಇತ್ತು.ಸಿಎಂ ಸಿದ್ದರಾಮಯ್ಯ ಅವರು ಮೌಖಿಕವಾಗಿ, ಪತ್ರ ವ್ಯವಹಾರ ಮಾಡಿಲ್ಲ.ಈ ಬಗ್ಗೆ ನಾವು ಉತ್ತರ ರಾಜ್ಯಪಾಲರಿಗೆ ಕೊಟ್ಟಿದ್ವಿ.ಆದ್ರೂ ಪ್ರಾಸ್ಯೂಕ್ಯೂಷನ್ ಗೆ ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಮೇಲಿಂದ ಒತ್ತಡ ಇರಬಹುದು.ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿದೆ ಎಂದು ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ರಾಜ್ಯಪಾಲರು ಯಾವ್ ರೀತಿ ಅನುಮತಿ ಕೊಟ್ಟಿದ್ದಾರೋ ನೋಡಬೇಕು.ಕಾನೂನಾತ್ಮಕ ಹೋರಾಟ ಮಾಡ್ತೇವೆ ಅಂತಾ ಮೊದಲೇ ಹೇಳಿದ್ದೇವೆ.ಸಿಎಂ ಲೀಗಲ್ ಟೀಮ್ ಜೊತೆ ಚರ್ಚೆ ಮಾಡಿ ಮುಂದೆ ಹೋಗ್ತಾರೆ.ಕ್ಯಾಬಿನೆಟ್ ಅಡ್ವೈಸ್ ಮಾಡಿದ್ಮೇಲೂ ಕೊಟ್ಟಿದ್ದಾರೆ. ಕೊಡಲ್ಲ ಅಂದುಕೊಂಡಿದ್ವಿ.ಅವರಿಗೆ ಮೊದಲಿನಿಂದಲೂ ಮೇಲಿನಿಂದ ಒತ್ತಡ ಇದೆ ಅನ್ನೋದು ಸ್ಪಷ್ಟ ಇದೆ. ನಿಖರವಾದ ಮಾಹಿತಿಗಳು, ಸಿಎಂ ಆದೇಶ ಕೊಟ್ಟಿರೋದಾಗಲೀ, ಮೌಖಿಕ ಆದೇಶ ಕೊಟ್ಟಿರೋದಾಗಲೀ ಇಲ್ಲ.ನಾವು ಎಳೆ ಎಳೆಯಾಗಿ ಶೋಕಾಸ್ ನೋಟೀಸ್ ಗೆ ಉತ್ತರ ಕೊಟ್ಟಿದ್ದೇವೆ. ಆದ್ರೂ ಕೊಟ್ಟಿದ್ದಾರೆ, ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡಿದ್ದಾರೆ.ರಾಜಭವನದಲ್ಲಿ ಏನ್ ಬೆಳವಣಿಗೆ ಆಗುತ್ತೋ ನಮಗೆ ಗೊತ್ತಿಲ್ಲ.ಪ್ರಾಸುಕ್ಯೂಷನ್ ಗೆ ಅನುಮತಿ ಕೇಳಿರೋರ ಜೊತೆ ಚರ್ಚೆ ಮಾಡಬಹುದು ಗವರ್ನರ್. ಇದು ದ್ವೇಷದ ರಾಜಕಾರಣ ಅನ್ಸುತ್ತೆ.ನೇರವಾಗಿ ಸಿಎಂ ಸಿದ್ದರಾಮಯ್ಯ ಯಾವುದರಲ್ಲೂ ಇನ್ವಾಲ್ವ್ ಆಗಿಲ್ಲ.ಬಿಜೆಪಿಯವ್ರು ರಾಜೀನಾಮೆ ಕೇಳೋದು ಸ್ವಾಭಾವಿಕ.ಇದನ್ನೆಲ್ಲಾ ಎದುರಿಸ್ತೀವಿ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಈ ವಿಚಾರ ಸಿಎಂ ಗಮನಕ್ಕೆ ಬಂದ ಬಳಿಕ ತನ್ನ ವಿರುದ್ಧವೇ ಒಂದು ಕಮೀಷನ್ ನೇಮಕ ಮಾಡ್ತಾರೆ.ಹೆದರೋದಾದ್ರೆ ಕಮಿಷನ್ ಯಾಕೆ ಮಾಡ್ತಿದ್ರು.ಇಲ್ಲಿವರೆಗೂ ಯಾರಿಗೆ ಸೈಟ್ ಕೊಟ್ಟಿದ್ದಾರೆ, ಯಾರಿಗೆಲ್ಲಾ ಕೊಟ್ಟಿದ್ದಾರೆ ವರದಿ ಕೊಡ್ತಾರೆ.ತನುಖಾ ವರದಿ ಬರದೆ, ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ.ವರದಿ ಬಂದ ಮೇಲೆ ಪ್ರಾಸಿಕ್ಯೂಷನ್ ಕೊಟ್ಟಿದ್ರೆ ಇವರ ಕೈ ಬಲ ಆಗ್ತಿತ್ತು.ಒಂದು ವೇಳೆ ತಪ್ಪಾದ್ರೆ, ರಾಜ್ಯಪಾಲರ ಮೇಲೆ ತಪ್ಪು ಅಭಿಪ್ರಾಯ ಮೂಡಲಿದೆ.ಲೀಗಲ್ ಟೀಮ್ ಅಭಿಪ್ರಾಯ ಪಡೆದು ಮುಂದಾಗ್ತೀವಿ ಎಂದಿದ್ದಾರೆ. ನಿರಾಣಿ ಮೇಲೆ ಪರ್ಮೀಷನ್ ಕೊಡಲಿಲ್ಲ, ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ ವಿರುದ್ಧ ಪರ್ಮೀಷನ್ ಕೊಡಲಿಲ್ಲ.ಬಿಜೆಪಿ ಕಾಲದ ಹಗರಣ ತನಿಖೆ ಸ್ಪೀಡ್ ಅಪ್ ಮಾಡಿದ್ದೇವೆ.ವರದಿ ಬಂದ ಬಳಿಕ ಕ್ರಮ ತಗೋತೇವೆ ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಬಿ.ಕೆ ಹರಿ ಪ್ರಸಾದ್ ಮಾತನಾಡಿ ಮಾಧ್ಯಮದಲ್ಲಿ ಬರ್ತಿರುವುದು ಸತ್ಯವಾದ್ರೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ.ಸೈಟ್ ಹಂಚಿಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ನಿರ್ಧಾರ ಅಲ್ಲ.20 ವರ್ಷಗಳ ಹಿಂದೆ ನಡೆದಿರುವ ಬೆಳವಣಿಗೆ.ನಾವು ಕಾನೂನು ಹೋರಾಟ ಮಾಡುತ್ತೇವೆ.ಬಿಜೆಪಿ ಬಹಳ ಹೀನಾಯವಾಗಿ ಸೋತಿದೆ.ಕಾಂಗ್ರೆಸ್ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.ಹಿಮಾಚಲ, ತೆಲಂಗಾಣದಲ್ಲಿ ಪ್ರಯತ್ನ ಮಾಡಲಾಯಿತು.ಸಕ್ಸಸ್ ಆಗಿರಲಿಲ್ಲ, ಈಗ ಕರ್ನಾಟಕದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.ಜಾರ್ಖಾಂಡ್ ಸಿಎಂ ಅವರನ್ನು ಇದೇ ರೀತಿ ಬಂಧಿಸಿತ್ತು.ಕೋರ್ಟ್ ತನಿಖಾ ಸಂಸ್ಥೆಗೆ ಛೀಮಾರಿ ಹಾಕಿ ಜಾಮೀನು ನೀಡಿತ್ತು.ಅಮಿತ್ ಶಾ ಸೇರಿ ಬಹಳ ನಾಯಕರ ವಿರುದ್ಧ ಆರೋಪ ಇದೆ .ಆರೋಪ ಬಂದವರು ಅಧಿಕಾರದಲ್ಲಿದ್ದಾರೆ.ರಾಜೀನಾಮೆ ಕೊಡಬೇಕು ಎಂದು ಕೇಳುವುದು ಬಿಜೆಪಿ ಫ್ಯಾಷನ್ ಆಗಿದೆ.ಯಡಿಯೂರಪ್ಪ ಅವರ ಪ್ರಕರಣದಲ್ಲಿ ಹಣವನ್ನು ಚೆಕ್ ರೂಪದಲ್ಲಿ ಪಡೆದಿದ್ದರು.ಯಡಿಯೂರಪ್ಪ ವಿರುದ್ಧ ಈಗಲೂ ಫೋಕ್ಸೊ ಕೇಸ್ ಇದೆ.ಇಲ್ಲಿ ಸಿಎಂ ನೇರವಾಗಿ ಭಾಗಿಯಾಗಿರುವ ಮಾಹಿತಿ ಇಲ್ಲ.ಹಿಂದುಳಿದ, ಜನಪ್ರಿಯ ನಾಯಕ ಅಂತಾ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ.