ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ಅಕ್ಟೋಬರ್ 30 ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಆ ಬಳಿಕ ನಟ ದರ್ಶನ್ ಅವರು ಸಂಪೂರ್ಣ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಆ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು.
ನಟ ದರ್ಶನ್ ಅವರ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು. ಈ ವೇಳೆ ದರ್ಶನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ದರ್ಶನ್ ಮಧ್ಯಂತರ ಬೇಲ್ ನ ಷರತ್ತು ಉಲ್ಲಂಘಿಸಿಲ್ಲ ಎಂದು ವಾದ ಮಂಡಿಸಿದ್ರು. ಅಲ್ಲದೇ ಡಿ.11ಕ್ಕೆ ದರ್ಶನ್ ಗೆ ಸರ್ಜರಿ ಫಿಕ್ಸ್ ಆಗಿದೆ, ಈಗ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿಸಿದ್ರು.
ಇನ್ನು ವಾದವನ್ನು ಆಲಿಸಿದ ದ ನ್ಯಾಯಾಧೀಶರು ಮುಂದಿನ ಆದೇಶ ನೀಡೋವರೆಗೂ ಬೇಲ್ ವಿಸ್ತರಣೆ ಮಾಡಿ ಆದೇಶ ನೀಡಿದರು. ಹೀಗಾಗಿ ನಟ ದರ್ಶನ್ ಗೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಬಂಪರ್ ಗಿಫ್ಟ್; ಬಳ್ಳಾರಿ ಜೈಲಿನಿಂದ ನಟ ಡಿ ಬಾಸ್ ರಿಲೀಸ್
ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ಇಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆ ಮೂಲಕ 131 ದಿನಗಳ ಬಳಿಕ ನಟ ದರ್ಶನ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ವೈದ್ಯಕೀಯ ಕಾರಣಕ್ಕಾಗಿ ಮಧ್ಯಂತರ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೆಲವೊಂದು ಷರತ್ತುಗಳನ್ನು ವಿಧಿಸಿ ದರ್ಶನ್ ಅವರಿಗೆ ಜಾಮೀನು ನೀಡಿದೆ. ನಟ ದರ್ಶನ್ ಅವರ ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ನೀಡಲು ತಿಳಿಸಿಲಾಗಿದೆ. ಅಲ್ಲದೇ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿ ನೀಡುವಂತೆ ತಿಳಿಸಿದೆ. ಇನ್ನು ಅತ್ತ ಜಾಮೀನು ವಿಚಾರ ಗೊತ್ತಾಗುತ್ತಿದ್ದಂತೆ ಜೈಲಿನಲ್ಲಿ ನಟ ದರ್ಶನ್ ಸಂಭ್ರಮಿಸಿದ್ದಾರೆ ಎನ್ನಲಾಗಿದೆ.ಜೈಲಿನ ಸಿಬ್ಬಂದಿ ಮೂಲಕ ನಟ ದರ್ಶನ್ ಬೇಲ್ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ದರ್ಶನ್ ಅವರಿಗೆ ಬೇಲ್ ಸಿಗುತ್ತೆ ಅನ್ನೋ ಧೈರ್ಯದಲ್ಲಿದ್ದ ವಿಜಯಲಕ್ಷ್ಮೀ ದರ್ಶನ್ ಇಂದು ಬಳ್ಳಾರಿ ಜೈಲ್ ಗೆ ಆಗಮಿಸಿದ್ದರು.ಪತ್ನಿ ವಿಜಯಲಕ್ಷ್ಮಿ, ಸುಶಾಂತ್ ನಾಯ್ಡು, ಬೇಲೂರು ಶ್ರೀನಿವಾಸ ಆಗಮಿಸಿದ್ದರು. ಬಳಿಕ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಮಾಡಿದ್ರು. ಇದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಯ ದುರ್ಗಮ್ಮ ಆಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ವಿಜಯಲಕ್ಷ್ಮೀ ಗೆ ದರ್ಶನ್ ಅಭಿಮಾನಿಗಳು ಸಾಥ್ ನೀಡಿದ್ರು. ಇದೆಲ್ಲಾ ಆದ ಬಳಿಕ ಎಲ್ಲಾ ಕಾನೂನೂ ಪ್ರಕ್ರಿಯೆಗಳನ್ನು ಮುಗಿಸಿ ವಿಜಯಲಕ್ಷ್ಮೀ ದರ್ಶನ್ ಅವರು ನಟ ದರ್ಶನ್ ಅವರನ್ನು ಬೆಂಗಳೂರಿಗೆ ಕರೆ ತಂದರು. ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ಅವರ ಕಾರಿಗೆ ಅಡ್ಡಗಟ್ಟಿ ದರ್ಶನ್ ನೋಡೋದಕ್ಕೆ ಮುಗಿಬಿದ್ರು.
ಅತ್ತ ದರ್ಶನ್ ಗೆ ಜಾಮೀನು ಮಂಜೂರು ಆಗುತ್ತಿದ್ದಂತೆ ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರ ಸಂಭ್ರಮಿಸಿದ್ರು ಎನ್ನಲಾಗಿದೆ. ದರ್ಶನ್ ಗೆ ಜಾಮೀನು ಮಂಜೂರು ಆಗಿದ್ದನ್ನು ಟಿವಿಯಲ್ಲಿ ನೋಡಿ ಫುಲ್ ಖುಷಿಯಾಗಿದ್ರು ಎನ್ನಲಾಗಿದೆ. ತನ್ನಿಂದ ನಟ ದರ್ಶನ್ ಜೈಲು ಸೇರಿದ ಬಗ್ಗೆ ಪವಿತ್ರಾಗೆ ಬೇಸರವಿತ್ತು.ಸದ್ಯ ನಟ ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ಪವಿತ್ರಾ ಕೊಂಚ ನಿರಾಳರಾಗಿದ್ದಾರೆ ಎನ್ನಲಾಗಿದೆ.