ಮನೆ Latest News ಡಿ ಕೆ ಶಿವಕುಮಾರ್ ಗೆ ಮತ್ತೆ ಪರೋಕ್ಷವಾಗಿ ತೇಜಸ್ವಿ ಸೂರ್ಯ ಟಾಂಗ್

ಡಿ ಕೆ ಶಿವಕುಮಾರ್ ಗೆ ಮತ್ತೆ ಪರೋಕ್ಷವಾಗಿ ತೇಜಸ್ವಿ ಸೂರ್ಯ ಟಾಂಗ್

0

ಬೆಂಗಳೂರು: ಡಿ ಕೆ ಶಿವಕುಮಾರ್ ಗೆ ಮತ್ತೆ ಪರೋಕ್ಷವಾಗಿ ತೇಜಸ್ವಿಸೂರ್ಯ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ವೈಯಕ್ತಿಕ ಟೀಕೆ ಮಾಡುವುದಿಲ್ಲ. ಡಿಕೆ ಶಿವಕುಮಾರ್ ಹಿರಿಯ ರಾಜಕಾರಣಿ ಇದ್ದಾರೆ. ನಾನು 3೦ ನಿಮಿಷ ಸಮಯ ಕೇಳಿದ್ದೇನೆ. ಟನಲ್ ರೋಡ್ ಬೆಂಗಳೂರಿಗೆ ಯಾಕೆ ಒಳ್ಳೆಯದಲ್ಲ ಎಂಬುದರ ಬಗ್ಗೆ ಪರಿಸರವಾದಿಗಳು ನಾವು ಮನವರಿಕೆ ಮಾಡಿಕೊಡ್ತೇವೆ. ಮಾಡೇ ಮಾಡ್ತಿವಿ ಅಂತ ಜಿದ್ದಿಗೆ ಬೀಳೋದು ತಪ್ಪು. ತೇಜಸ್ವಿಗೆ ಟ್ರಾಫಿಕ್ ಕುರಿತು ಏನು ಗೊತ್ತಿದೆ ಎಂದಿದ್ದಾರೆ. ನಾವೇ ಸಲಹೆಗಳನ್ನ ಕೊಡ್ತೇವೆ. ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಆಗ್ತಿದ್ದು, ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ.ಪ್ರಕಾಶ್ ಬೆಳವಾಡಿ ಪಿಐಎಲ್ ಅರ್ಜಿ ಹಾಕಿದ್ದಾರೆ . ಅದನ್ನ ನಾನೇ ಹೈಕೋರ್ಟ್ ನಲ್ಲಿ ವಾದ ಮಾಡ್ತಿದ್ದೇನೆ. ಉತ್ತರಖಾಂಡ್, ಜಮ್ಮುವಿನಲ್ಲಿ . ಟನಲ್ ರೋಡ್ ಕುಸಿದಿವೆ ಎಂದಿದ್ದಾರೆ.

ನಮ್ಮ ವಿರೋಧ ಟನಲ್ ರೋಡ್ ಗೆ . ಸ್ಯಾಂಕಿ ಕೆರೆ, ಲಾಲ್ ಬಾಗ್ ಗೆ ಈ ಯೋಜನೆಯಿಂದ ಸಮಸ್ಯೆಯಾಗುತ್ತೆ. ಡಿಕೆ ಶಿವಕುಮಾರ್ ಗೆ ಟನಲ್ ಬಗ್ಗೆ ಯಾವ ಅಧಿಕಾರಿಗಳು ಮಾಹಿತಿ ಕೊಡ್ತಿದ್ದಾರೋ, ಅವ್ರು ಸರಿಯಾಗಿ ಮಾಹಿತಿ ನೀಡಿಲ್ಲ. ಬೆಂಗಳೂರಿಗೆ ನಾನು ಪ್ಲ್ಯಾನ್ ಹಾಫ್ ಆ್ಯಕ್ಷನ್ ತಯಾರು ಮಾಡಿದ್ದೇನೆ ಎಂದು ಹೇಳಿದ್ದಾರೆ..

ರಸ್ತೆಗುಂಡಿ ಬಗ್ಗೆ  ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ೨೪ ವರ್ಷದ ಯುವತಿ ಗುಂಡಿಯಿಂದಾಗಿ ತೀರಿಕೊಂಡಿದ್ದಾರೆ.ಅವರ ಜೀವನ ಸರಿ ಮಾಡಬೇಕು ಅನ್ನೊದನ್ನ ಯೋಚನೆ ಮಾಡಬೇಕು. ಟೀಕೆಗಳನ್ನು ‌ಮಾಡೋದು ಸುಲಭ. ಟೀಕೆ ಮಾಡೋದ್ರಿಂದ ಜೀವನದಲ್ಲಿ ಯಾರಿಗೂ ಉಪಯೋಗ ಆಗೋದಿಲ್ಲ ಎಂದು ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಪರೋಕ್ಷವಾಗಿ ತೇಜಸ್ವಿಸೂರ್ಯ ಟಾಂಗ್ ಕೊಟ್ಟಿದ್ದಾರೆ.