ಮನೆ Latest News ಭರತ್ ಬೊಮ್ಮಾಯಿ ಪರವಾಗಿ ತಡಸ್ ಗ್ರಾಮದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರಚಾರ

ಭರತ್ ಬೊಮ್ಮಾಯಿ ಪರವಾಗಿ ತಡಸ್ ಗ್ರಾಮದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರಚಾರ

0

 

ಶಿಗ್ಗಾವಿ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಭರತ್ ಬೊಮ್ಮಾಯಿ ಪರವಾಗಿ ರೋಡ್ ಶೋ ಪ್ರಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಭರತ್ ಬೊಮ್ಮಾಯಿ ಪರವಾಗಿ ಮತಯಾಚನೆ ಮಾಡಿದ್ರು. ಈ ವೇಳೆ ಭರತ್ ಬೊಮ್ಮಾಯಿ ಹಾಗೂ ಅರವಿಂದ್ ಬೆಲ್ಲದ್ ಉಪಸ್ಥಿತರಿದ್ದರು.

ಇನ್ನು ತಡಸ್ ಗ್ರಾಮದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಯಾವತ್ತು ಯಾರ ಜಮೀನು ವಕ್ಫ್ ಬೋರ್ಡ್ ಗೆ ಹೋಗುತ್ತಿದೆ ಗೊತ್ತಾಗುತ್ತಿಲ್ಲ. ಮುಸ್ಲೀಂ ಧರ್ಮವೇ ಹುಟ್ಟಿರಲಿಲ್ಲ ಅಂಥ ಕಾಲದ ಬಸವವಣ್ಣನವರ ಮಠಗಳನ್ನೇ ವಕ್ಫ್ ಅಂತಿದ್ದಾರೆ. ಬೀದರ್ ಏರ್ಪೋರ್ಟ್ , ವಿಶ್ವೇಶ್ವರಯ್ಯ ಸ್ಕೂಲು, ವಿರಕ್ತ ಮಠ ಎಲ್ಲ ವಕ್ಫ್ ಆಸ್ತಿ. ರೈತರ ಜಮೀನು ವಕ್ಫ್ ಮಾಡಲು ಯಾವುದೇ ನಿಯಮ ಪಾಲನೆ ಇಲ್ಲ. ರಾತ್ರೋ ರಾತ್ರಿ ವಕ್ಫ್ ಗೆ ಟ್ರಾನ್ಸಫರ್ ಮಾಡ್ತಿದ್ದಾರೆ. ಆಡು ಮುಟ್ಟುದ ಸೊಪ್ಪಿಲ್ಲ, ವಕ್ಫ್ ಕೇಳದ ಆಸ್ತಿಯಿಲ್ಲ ಎಂದಿದ್ದಾರೆ.

ನಿನ್ನೆ ಜೆಪಿಸಿ ಕಮಿಟಿ ಬಂದಿತ್ತು. ಹಾವೇರಿಯಿಂದ ರೈತರ ಗುಂಪು ಬಂದು ಜೆಪಿಸಿ ಕಮಿಟಿ ಮುಂದೆ ಕಷ್ಟ ಹೇಳಿಕೊಂಡರು. ರೈತ ಸಣ್ಣಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕಷ್ಟವನ್ನು ಜೆಪಿಸಿ ಮುಂದೆ ತೋಡಿಕೊಂಡ. ಮಗನ ಆತ್ಮಹತ್ಯೆ ಹೇಗಾಯ್ತು ಅಂತ ರೈತ ಹೇಳಿದ. ನಮ್ಮ ಸೋಷಿಯಲ್ ಮೀಡಿಯಾ ದಲ್ಲಿ ನಾನು ರೈತನ ಸ್ಟೇಟಮೆಂಡ್ ಮಾಡಿದೆ. ನಿನ್ನೆ ಮಾಧ್ಯಮದ ಮೇಲೆ ನನ್ನ ಮೇಲೆ ಎಫ್ ಐ ಆರ್ ಮಾಡಿಸಿದ್ದಾರೆ. ಪೊಲೀಸರ ಕೈಲಿ ರಿಪೋರ್ಟ್ ಹಾಕಿಸಿದ್ದಾರೆ ವೈಯಕ್ತಿಕ ಕಾರಣಕ್ಕೆ ಅಂತ ಎಂದರು.

ಇನ್ನು  ತಡಸ್ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ಮಾಡಿದ್ರು. ತೇಜಸ್ವಿ ಸೂರ್ಯ ಎದುರು ರೈತನೊಬ್ಬ ಅಳಲು ತೋಡಿಕೊಂಡ. ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ರೈತ ಸಂತೋಷ್ ಗೆ ಸೇರಿದ ಜಮೀನು ವಕ್ಪ್ ಹೆಸರಿಗೆ ಆಗಿದೆ.  ಮೂರು ತಲೆಮಾರಿನಿಂದ ಉಳುಮೆ ಮಾಡುತ್ತಿದ್ದ ರೈತ ಕುಟುಂಬ ಸಂತೋಷ್ ಅವರದ್ದು. ೨೦೧೫ ರಲ್ಲಿ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಲಾಗಿದೆ. ಬಳಿಕ ರೈತನ ಜಮೀನು ವಕ್ಪ್ ಹೆಸರಿಗೆ, ಸ್ಮಶಾನದ ಹೆಸರು ನಮೂದು. ಲೇಔಟ್ ರಚನೆ ಮಾಡಿರುವ ರೈತ ಕುಟುಂಬ. ವಕ್ಪ್ ಹೆಸರಿಗೆ ಬದಲಾಗಿ ಆತಂಕಕ್ಕೆ ಒಳಗಾದ ರೈತ. ತೇಜಸ್ವಿ ಸೂರ್ಯ ಎದುರು ಅಳಲು. ಸಿದ್ದರಾಮಯ್ಯ ವಿರುದ್ದ ತಡಸ್ ಗ್ರಾಮದ ಯುವಕರು ಧಿಕ್ಕಾರ ಘೋಷಣೆ ಕೂಗಿದ್ರು.