ಉಡುಪಿ: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಅವರಿಗೆ ಕೈದಿ ಸಂಖ್ಯೆ 6106 ನ್ನು ನೀಡಲಾಗಿತ್ತು. ಈ ಸಂಖ್ಯೆ ನೀಡುತ್ತಿದ್ದಂತೆ ದರ್ಶನ್ ಅವರ ಅಭಿಮಾನಿಗಳು ಆ ಸಂಖ್ಯೆಯನ್ನು ತಮ್ಮ ವಾಹನಗಳ ಮೇಲೆ ಹಾಕಿಸಿಕೊಂಡಿದ್ದರು. ಅಲ್ಲದೇ ಟ್ಯಾಟೋ ರೂಪದಲ್ಲಿ ಅನೇಕರು ತಮ್ಮ ದೇಹದ ಮೇಲೆ ಹಾಕಿಸಿಕೊಂಡಿದ್ದಾರೆ. ಕೆಲವರು ಹೇರ್ ಕಟ್ಟಿಂಗ್ ಕೂಡ ಮಾಡಿಕೊಂಡಿದ್ದಾರೆ. ಈ ರೀತಿಯೆಲ್ಲಾ ದರ್ಶನ್ ಅವರ ಪರವಾಗಿ ಡಿ ಬಾಸ್ ಮೇಲಿರುವ ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಇದೀಗ ಅಭಿಮಾನಿಗಳ ತಂಡವೊಂದು ಗಣೇಶೋತ್ಸವ ಆಚರಣೆಯಲ್ಲಿ ದರ್ಶನ್ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿವೆ.
ಹೌದು..ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ದರ್ಶನ್ ಕೈದಿ ಸಂಖ್ಯೆಯ ಟೀ ಶರ್ಟ್ ಧರಿಸಿ ಯುವಕರು ಡ್ಯಾನ್ಸ್ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳ್ಕೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ಅನ್ನು ನೀಡಲಾಗಿತ್ತು. ಆ ಸಂಖ್ಯೆಯ ಟೀ ಶರ್ಟ್ ಧರಿಸಿ ಯುವಕರ ತಂಡವೊಂದು ಡ್ಯಾನ್ಸ್ ಮಾಡಿದೆ. ಕೈದಿ ನಂಬರ್ 6106 ಎಂದು ಬರೆದಿದ್ದ ಟೀ ಶರ್ಟ್ ಧರಿಸಿ ಚೊಂಗುಡ್ಡಿ ಫ್ರೆಂಡ್ಸ್ ಎಂಬ ತಂಡ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಟೀ ಶರ್ಟ್ ನೋಡಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಟೀ ಶರ್ಟ್ ತೆಗೆದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಯುವಕರ ತಂಡಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಸ್ಥಳೀಯರ ವಿರೋಧವನ್ನು ಲೆಕ್ಕಿಸದ ತಂಡ ಸಂವಿಧಾನದ 19 ನೇ ವಿಧಿ ನಮಗೆ ಸ್ವಾತಂತ್ರ್ಯ ನೀಡಿದೆ ಎಂದು ತಕರಾರು ತೆಗೆದಿದೆ. ಈ ಹಂತದಲ್ಲಿ ಕೊಂಚ ಗಲಾಟೆ ಏರ್ಪಟ್ಟು ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಅವರಿಗೆ ಅಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಅಲ್ಲದೇ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಸದ್ಯ ಬಳ್ಳಾರಿ ಜೈಲಿನಲ್ಲಿರುನ ನಟ ದರ್ಶನ್ ಅವರನ್ನು ಅಲ್ಲಿ ವಿಶೇಷ ಭದ್ರತಾ ಸೆಲ್ ನಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರಕ್ಕಿಂತ ಬಳ್ಳಾರಿ ಜೈಲು ಸ್ಟ್ರಿಕ್ಟ್ ಇದು ಡಿ ಬಾಸ್ ದರ್ಶನ್ ಗೆ ಉಸಿರು ಬಿಗಿ ಹಿಡಿದ ಅನುಭವವಾಗುತ್ತಿದೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಹಾಗೂ ಇಬ್ಬು ವಕೀಲರು ಮೊನ್ನೆ ಡಿ ಬಾಸ್ ನ ಭೇಟಿಯಾಗಿದ್ದರು.
ಇನ್ನು ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನ್ ಮಾಡ್ತಿದ್ರು ಅನ್ನೋದಕ್ಕೆ ವೈರಲ್ ಆದ ಫೋಟೋ ವೀಡಿಯೋಗಳೇ ಉತ್ತರ ನೀಡಿದ್ದವು. ಆದರೆ ಬಳ್ಳಾರಿ ಜೈಲಿನಲ್ಲಿ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಗಿದೆ. ಬಳ್ಳಾರಿ ಜೈಲಿನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ದರ್ಶನ್ ನಡೆದುಕೊಳ್ಳುತ್ತಿದ್ದಾರಂತೆ. ಅಲ್ಲದೇ ಜೈಲಾಧಿಕಾರಿಗಳ ಸೂಚನೆಯಲ್ಲಿ ಅವರ ಸೆನ್ ನಲ್ಲಿರುವ ಶೌಚಾಲಯವನ್ನು ಕ್ಲೀನ್ ಮಾಡಿದ್ದಾರಂತೆ. ಅಲ್ಲದೇ ಅವರ ಬಟ್ಟೆಯನ್ನು ಅವರೇ ವಾಶ್ ಮಾಡಿ ಕೊಳ್ಳುತ್ತಿದ್ದು ಸಾಮಾನ್ಯ ಕೈದಿಯಂತೆ ಡಿ ಬಾಸ್ ಜೈಲಿನಲ್ಲಿ ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದಾರಂತೆ ಅಲ್ಲದೇ ಎಲ್ಲರ ಜೊತೆ ದರ್ಶನ್ ಅರು ಹೊಂದಿಕೊಳ್ಳುಲು ಪ್ರಯತ್ನಿಸುತ್ತಾರಂತೆ.