ಬೆಳಗಾವಿ; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಡಿಸಿಎಂ ನಡುವೆ ಟಾಕ್ ಫೈಟ್ ಮತ್ತೆ ಜೋರಾಗಿದೆ. ಲಕ್ಷ್ಮಣ್ ಸವದಿ ವಿರುದ್ಧ ರಮೇಶ್ ಜಾರಕಿಹೊಳಿಗೆ ಸವದಿ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮುಗ್ಧ ವ್ಯಕ್ತಿ ನಿಲ್ಲಿಸಿ ತಿರುಪತಿ ನಾಮ ಹಾಕಿಸಿದ್ರೂ , ಪುನಃ ಬಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಗೆ ಬೆಂಬಲ ಕೊಡಲು ಬಂದಿದ್ದಾರೆ. ಅಥಣಿ ತಾಲೂಕಿನ ಜನ ರಮೇಶ್ ಜಾರಕಿಹೊಳಿ ಅವರನ್ನ ತಿರಸ್ಕಾರ ಮಾಡಿದ್ದಾರೆ.ಅದರ ಅರಿವು ರಮೇಶ್ ಜಾರಕಿಹೊಳಿಗೆ ಆಗಿಲ್ಲ.ಅವರಿಗೆ ಮಾನ ಮರ್ಯಾದೆ ಗೌರವ ಗೊತ್ತಿದ್ರೇ ನಮ್ಮ ತಾಲೂಕಿಗೆ ಕಾಲಿಡಬಾರದು ಎಂದಿದ್ದಾರೆ.
ಯಾರು ಜನರು ಇರ್ತಾರೆ ಅಂತವರಿಗೆ ಸೂಕ್ಷ್ಮತೆ ಗೊತ್ತಿರುತ್ತೆ. ಕ್ಷ್ಮತೆ ಇಲ್ಲದ ಜನರಿಗೆ ಇದ್ಯಾವುದು ಅರಿವಿಗೆ ಬರಲ್ಲ. ಅವನಿಗೆ ತನ್ನ ಗೌರವ ಬಗ್ಗೆ, ಇನ್ನೊಬ್ಬರ ಗೌರವ ಗೊತ್ತಿಲ್ಲ. ಸಂಸ್ಕಾರ ಅನ್ನೋವಂತಹದ್ದು ಬೇಕಾಗುತ್ತೆ. ಆ ಸಂಸ್ಕಾರ ಇಲ್ಲದ ಸಂದರ್ಭದಲ್ಲಿ ಇಂತಹದ್ದು ಮಾತಾಡ್ತಾರೆ. ಮೆಂಟಲ್ ರೀತಿಯಲ್ಲಿ ನಾನು ಮಾತನಾಡಲು ಹೋಗಲ್ಲ ಎಂದು ರಮೇಶ್ ಜಾರಕಿಹೊಳಿಗೆ ಪರೋಕ್ಷವಗಿ ಮೆಂಟಲ್ ಎಂದು ಸವದಿ ಹೇಳಿದ್ದಾರೆ.
ಅವರ ಹಾಗೇ ನಾನು ಮಾತಾಡಿದ್ರೇ ಜನ ನನ್ನನ್ನು ಮೆಂಟಲ್ ಅಂತಾರೆ. 2023ರಲ್ಲಿ ಎನೂ ಅನ್ನೋದನ್ನ ಜನ ತೋರಿಸಿದ್ದಾರೆ. 2028ಕ್ಕೂ ತೋರಸ್ತಾರೆ ಅದನ್ನ ಬರೆದುಕೊಂಡು ಆತ ಹೋಗಲಿ ಎಂದು ಏಕ ವಚನದಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ವಾಗ್ದಾಳಿ ನಡೆಸಿದ್ದಾರೆ.











