ಬೆಂಗಳೂರು; ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯಿತು. ಇದೇ ವೇಳೆ ಪುನೀತ್ ಹುಟ್ಟು ಹಬ್ಬ ಹಿನ್ನೆಲೆ ಸಿಂಗರ್ ನವೀನ್ ಸಜ್ಜು ವಿಶೇಷ ಹಾಡು ಹಾಡಿದ್ರು. ಅಪ್ಪು ಹಾಡಿಗೆ ಕೈ ಮೊಬೈಲ್ ಟಾರ್ಚ್ ಹಚ್ಚಿ ಕಾರ್ಯಕರ್ತರು ಗೌರವ ಅರ್ಪಣೆ ಮಾಡಿದ್ರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಬಾನು ಚಿಬ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಸಂದೀಪ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಪರಿಷತ್ ಸದಸ್ಯ ಸಲೀಂ ಅಹ್ಮದ್, ಮಾಜಿ ಎಂಎಲ್ಸಿ ಪ್ರಕಾಶ್ ರಾಥೋಡ್, ಬಸನಗೌಡ ಬಾದರ್ಲಿ ಸೇರಿ ಜಿಲ್ಲಾಧ್ಯರು, ಉಪಾಧ್ಯಕ್ಷರು ಭಾಗಿಯಾಗಿದ್ರು.
ಯುವ ಕಾಂಗ್ರೆಸ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದ್ರು. ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹೆಚ್ ಎಸ್ ಮಂಜುನಾಥ್ ಗೆ ಮೊಹಮ್ಮದ್ ನಲಪಾಡ್ ಧ್ವಜ ಹಸ್ತಾಂತರಿಸಿದರು.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಧ್ವಜ ಹಸ್ತಾಂತರ ಮಾಡಿದ್ರು.
ಈ ವೇಳೆ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮದ್ ನಲಪಾಡ್ ಮಾತನಾಡಿ ಡಿ.ಕೆ.ಶಿವಕುಮಾರ್ ಇಲ್ಲದಿದ್ರೆ ನಾನು ಅಧ್ಯಕ್ಷನಾಗುತ್ತಿರಲಿಲ್ಲ. ಮಾಜಿ ಅಧ್ಯಕ್ಷನೂ ಆಗುತ್ತಿರಲಿಲ್ಲ. ಪಾಲಿಟಿಕ್ಸ್ ನಲ್ಲಿ ಬೆಳೆಯಬೇಕು ಅಂದ್ರೆ ಒಬ್ಬರು ನಾಯಕರು ಬೇಕು. ನನಗೆ ಒಳ್ಳೆಯ ನಾಯಕ ಡಿಕೆಶಿ ಸಾಹೇಬ್ರು ಸಿಕ್ಕಿದ್ರು.ನಾನು ಅಧ್ಯಕ್ಷನಾದಾಗ ನನ್ನ ವಿರುದ್ದ ಎಫ್ಐಆರ್ ಮಾಡಿಸಿದ್ರು. ನಾನು ಅಧಿಕಾರ ಪೂರೈಸುವ ವೇಳೆ ಅವರನ್ನೆಲ್ಲಾ ಒಟ್ಟಿಗೆ ಕೊಂಡೊಯ್ದುಕೊಂಡು ಹೋದೆ ಕೆಲವರು ನಿಮಗೆ ಎಲೆಕ್ಷನ್ ಮಾಡಿದ್ದಾರೆ, ಕೆಲವರು ಮಾಡಿಲ್ಲ. ಆದರೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿ ನಿಮ್ಮ ಮೇಲಿದೆ. ನನಗೆ ಇನ್ನೂ ವಯಸ್ಸಿತ್ತು , ನಾನು ಇನ್ನೊಮ್ಮೆ ಅಧ್ಯಕ್ಷನಾಗಬಹುದಿತ್ತು. ಆದರೆ ಡಿಕೆಶಿಯವ್ರು ನೀನು ಮೂರು ವರ್ಷ ಅಧ್ಯಕ್ಷನಾಗಿದ್ದೆ. ಮತ್ತೊಬ್ಬರಿಗೆ ಅವಕಾಶ ಮಾಡಿಕೊಡು ಅಂದ್ರು. ಕಷ್ಟದ ಸಮಯದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇವೆ. ಮುಂದೆ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ತರುವ ಜವಾಬ್ದಾರಿ ಹೊಸ ಅಧ್ಯಕ್ಷರ ಮೇಲಿದೆ ಎಂದ್ರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಯುವಕರು ಅಂದ್ರೆ ದೇಶದ ಶಕ್ತಿ.ಆದ್ರೆ ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬರೋಕೆ ಕಾರಣ ನೀವೇ. ರಾಜ್ಯದ ಜನತೆಗೆ ಕೊಟ್ಠ ಭರವಸೆ ನಾವು ಈಡೇರಿಸಿದ್ದೇವೆ. ಕೇಂದ್ರದವರು ನಿರುದ್ಯೋಗ ಕುರಿತು ಏನೂ ಮಾಡ್ತಿಲ್ಲ. ಆದ್ರೆ ನಾವು ಡಿಗ್ರಿ ಹೋಲ್ಡರ್ ಗಳಿಗೆ ಯುವ ನಿಧಿ ಕೊಟ್ಟಿದ್ದೇವೆ.ಸಂವಿಧಾನಕ್ಕೆ ನಾವು ಗೌರವ ನೀಡುತ್ತಿದ್ದೇವೆ, ಆದ್ರೆ ಕೇಂದ್ರದ ಬಿಜೆಪಿ ಸರ್ಕಾರ ನಮ್ಮನ್ನೆಲ್ಲಾ ಡಿವೈಡ್ ಮಾಡ್ತಿದ್ದಾರೆ .೨೦೨೮ಕ್ಕೆ ಮತ್ತೆ ನಮ್ಮ ಪಕ್ಷ ವನ್ನ ಅಧಿಕಾರಕ್ಕೆ ತರಬೇಕು.ಇಂದು ಅಧಿಕಾರ ಸ್ವೀಕರಿಸಿದ ಎಲ್ಲರಿಗೂ ಶುಭಾಶಯ ಹೇಳುತ್ತೇನೆ.ಆದ್ರೆ ನೀವು ಯಾವಾಗಲೂ ಅಧಿಕಾರದ ಹಿಂದೆ ಹೋಗಬಾರದು, ಪಕ್ಷಕ್ಕಾಗಿ ದುಡಿಯಬೇಕು.ಪಕ್ಷಕ್ಕೆ ಗಟ್ಟಿಯಾಗಿ ಶಕ್ತಿ ನೀಡಬೇಕು. ಗಲ್ಲಿ, ನಗರ, ಊರಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.











