ಮನೆ Latest News ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ; ಬೆಂಗಳೂರಿನಲ್ಲಿ‌ ಸಭೆ ಸೇರಿದ ಬಿಜೆಪಿಯ ಅಮಾನತುಗೊಂಡ ಶಾಸಕರು

ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ; ಬೆಂಗಳೂರಿನಲ್ಲಿ‌ ಸಭೆ ಸೇರಿದ ಬಿಜೆಪಿಯ ಅಮಾನತುಗೊಂಡ ಶಾಸಕರು

0

ಬೆಂಗಳೂರು; ಆರು ತಿಂಗಳುಗಳ ಕಾಲ ಅಮಾನತುಗೊಂಡಿರುವ 18 ಬಿಜೆಪಿ ಶಾಸಕರು ಶಾಸಕ ಡಾ. ಅಶ್ವಥ್ ನಾರಾಯಣ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ರು. ವಿಧಾನಸಭೆ ಸ್ಪೀಕರ್ ಗೆ ಪತ್ರ ಬರೆದು ಅಮಾನತು ತೆರವುಗೊಳಿಸಲು ಮನವಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ರು.

ಸಭೆ ಬಳಿಕ ಮಾತನಾಡಿದ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ ನಿಯಮದ ಪ್ರಕಾರ ಒಂದು ದಿನಕ್ಕೆ ಅಥವಾ ಹೆಚ್ಚು ಅಂದರೆ ಆ ಸದನದ ಅವಧಿಗೆ ಮಾತ್ರ ಅಮಾನತು ಮಾಡಬೇಕು. ಆದರೆ ಈ ನಿಯಮ ಮೀರಿ ನಮ್ಮನ್ನು ಆರು ತಿಂಗಳು ಅಮಾನತ್ತು ಮಾಡಿರುವುದು ಕಾನೂನು ಬಾಹಿರ. ಮಹಾರಾಷ್ಟ್ರದಲ್ಲೂ ಹೀಗೇ ನಿಯಮ ಮೀರಿ ಶಾಸಕರನ್ನು ಒಂದು ವರ್ಷ ಅಮಾನತು ಮಾಡಲಾಗಿತ್ತು. ಮಹಾರಾಷ್ಟ್ರ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್, ಮಹಾರಾಷ್ಟ್ರ ಸ್ಪೀಕರ್ ಆದೇಶ ಅತಾರ್ಕಿತ, ಅಸಮಂಜಸ ಅಂತ ತೀರ್ಪು ಕೊಟ್ಟಿತ್ತು.ಇಲ್ಲೂ ಸಹಾ ಮಹಾರಾಷ್ಟ್ರ ರೀತಿಯೇ ನಿಯಮ ಮೀರಿ ಸ್ಪೀಕರ್ ವರ್ತನೆ ಮಾಡಿದ್ದಾರೆ ಎಂದ್ರು.

ನಾವು ಸ್ಪೀಕರ್ ಪೀಠಕ್ಕೆ ಅಗೌರವ ತೋರಲಿಲ್ಲ. ಆರು ತಿಂಗಳ ಕಾಲ ಸಸ್ಪೆಂಡ್ ಮಾಡಿದ್ದು ಸರಿಯಲ್ಲ.ಸರ್ಕಾರದ ಒತ್ತಡಕ್ಕೆ ಸ್ಪೀಕರ್ ಈ ರೀತಿ ಆದೇಶ ಮಾಡಿದ್ದಾರೆ. ಸ್ಪೀಕರ್ ತಮ್ಮ ಆದೇಶದ ಪುನರ್ ಪರಿಶೀಲಿಸಬೇಕು.ಇದನ್ನು ಸ್ಪೀಕರ್ ಅವರಿಗೆ ನಾವು ಮನವರಿಕೆ ಮಾಡುತ್ತೇವೆ.ನಮ್ಮ ಅಮಾನತು ಆದೇಶ ವಾಪಸ್ ಪಡೆಯಬೇಕು ಅಂತ ನಾವು ಒತ್ತಾಯಿಸುತ್ತೇವೆ. ಸ್ಪೀಕರ್ ಆದೇಶವನ್ನು ನಾವೂ ಕೋರ್ಟಿನಲ್ಲಿ ಪ್ರಶ್ನಿಸಬಹುದು. ಕೋರ್ಟಿಗೆ ಹೋದರೆ ಸ್ಪೀಕರ್ ತೀರ್ಮಾನ ರದ್ದಾಗಲಿದೆ. ಆದರೆ ನಾವು ಕೋರ್ಟಿಗೆ ಹೋಗಲ್ಲ. ಸ್ಪೀಕರ್ ಇದನ್ನು ಅರ್ಥ ಮಾಡಿಕೊಂಡು ಆದೇಶ ವಾಪಸ್ ಪಡೆಯಬೇಕು. ನಾವು ಸ್ಪೀಕರ್ ಅವರಿಗೆ ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದ್ರು.

ಜನವಸತಿ, ವಾಣಿಜ್ಯ ಸಂಕೀರ್ಣಗಳ‌ ಮೇಲೆ ಈ ಸೆಸ್ ಬರೆಯನ್ನು ಬಿಬಿಎಂಪಿ ಹಾಕುತ್ತಿದೆ: ಬೆಂಗಳೂರಿನಲ್ಲಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿಕೆ  

ಬೆಂಗಳೂರಿನಲ್ಲಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಬಿಬಿಎಂಪಿ ಪಾರ್ಕಿಂಗ್ ಸೆಸ್, ತ್ಯಾಜ್ಯದ ಸೆಸ್ ವಿಧಿಸುತ್ತಿರುವ ಬಗ್ಗೆ ಮಾತನಾಡಿ ಘನ ತ್ಯಾಜ್ಯ ನಿರ್ವಹಣಾ ಸೆಸ್ ಹಾಗೂ ಘನತ್ಯಾಜ್ಯ ನಿರ್ವಹಣಾ ಯೂಸರ್ ಫೀ ಅಂತ ಎರಡು ಮಾದರಿಯ ಸೆಸ್ ಗಳನ್ನು ಜನರ ಮೇಲೆ ಬಿಬಿಎಂಪಿ ಹಾಕುತ್ತಿದೆ. ಬಿಬಿಎಂಪಿ ಈ ಮೂಲಕ ಜನರಿಗೆ ದೊಡ್ಡ ಕರೆಂಟ್ ಶಾಕ್ ಕೊಟ್ಟಿದೆ. ಮನಬಂದಂತೆ ಜನರ ಮೇಲೆ ಆಸ್ತಿ ತೆರಿಗೆ ಜೊತೆ ಈ ಎರಡೂ ಸೆಸ್ ಗಳನ್ನು ಹಾಕುತ್ತಿದೆ ಎಂದ್ರು.

ಜನವಸತಿ, ವಾಣಿಜ್ಯ ಸಂಕೀರ್ಣಗಳ‌ ಮೇಲೆ ಈ ಸೆಸ್ ಬರೆಯನ್ನು ಬಿಬಿಎಂಪಿ ಹಾಕುತ್ತಿದೆ. ಬಿಬಿಎಂಪಿ 5.4.2024 ರಂದು ಈ ಸಂಬಂಧ ಒಂದು ಸುತ್ತೋಲೆ ಹೊರಡಿಸಿದೆ. ಕಟ್ಟಡದ ಅಳತೆ ಮೇಲೆ ಸೆಸ್ ಹಾಕುವ ಬಗ್ಗೆ ಸುತ್ತೋಲೆಯಲ್ಲಿ ಹೇಳಲಾಗಿದೆ.ಕಸದ ಸೆಸ್ ಜೊತೆಗೆ ಬಳಕೆ ಶುಲ್ಕವನ್ನೂ ಹಾಕಲಾಗಿದೆ.ತಿಂಗಳು ಮತ್ತು ವರ್ಷಕ್ಕೆ ಎಂದು ಎರಡು ವಿಭಾಗದಲ್ಲಿ ಈ ಸೆಸ್ ಮತ್ತು ಶುಲ್ಕ ಹಾಕುತ್ತಿದ್ದಾರೆ.3-4 ಸಾವಿರ ಚದರ ಅಡಿಗೆ‌ 400 ರೂ., ಖಾಲಿ ನಿವೇಶನ ಇದ್ದರೆ ಚದರಡಿಗೆ 60 ಪೈಸೆ ಸೆಸ್ ಹಾಕುತ್ತಿದ್ದಾರೆ ಎಂದ್ರು.

ಸಾವಿರಾರು ಕೋಟಿ ಖರ್ಚು ಮಾಡಿದರೂ ಮುಖ್ಯ ರಸ್ತೆಗಳಲ್ಲಿ ಕಸ ಬಿದ್ದಿರುತ್ತದೆ. ಜನರ ಮೇಲೆ ಬಳಕೆದಾರರ ಶುಲ್ಕ ಹಾಕಬಾರದು.ಮನೆಯಲ್ಲೇ ಘನತ್ಯಾಜ್ಯ ನಿರ್ವಹಣೆ ಮಾಡಿದರೆ ಬಳಕೆದಾರರ ಶುಲ್ಕದಲ್ಲಿ 50% ವಿನಾಯಿತಿ ಕೊಡಬೇಕು ಅಂತಾ ಕಾನೂನಿನಲ್ಲೇ ಇದೆ. ವ್ಯವಸ್ಥಿತವಾಗಿ ಹೇಗೆ ಅಕ್ರಮ ಮಾಡಬಹುದು ಅಂತಾ ಬಿಬಿಎಂಪಿ ಇತ್ತೀಚೆಗೆ ಮಾಡಿರುವ ಕ್ರಮಗಳೇ ಉದಾಹರಣೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಜ‌ನ ಎಲ್ಲಿಗೆ ಹೋಗಬೇಕು?. ಬಿಬಿಎಂಪಿ‌ ಮನಸ್ಸಿಗೆ ಬಂದಂತೆ ಕಟ್ಟಡಗಳ ಮೇಲೆ ಕಸದ ಸೆಸ್ ಹಾಕಿದೆ. 100 ಫ್ಲ್ಯಾಟ್ ಗಳಿರುವ ಅಪಾರ್ಟ್ ಮೆಂಟ್ ಬಲ್ಕ್ ಜನರೇಟರ್ ವರ್ಗಕ್ಕೆ ಬರುತ್ತದೆ. ಈ ವರ್ಗದ ಅಪಾರ್ ಮೆಂಟ್ ಗಳಿಗೆ ಸೆಸ್ ಹಾಕುತ್ತಾರೆ, ಆದರೆ ಬಳಕೆ ಶುಲ್ಕ ಹಾಕುವಂತೆಯೇ ಇಲ್ಲ. ಈ ವರ್ಗದ ಅಪಾರ್ ಮೆಂಟ್ ಗಳು ಕಸ ವಿಲೆದವಾರಿಯನ್ನು ಅವರೇ ಮಾಡಿಕೊಳ್ಳುತ್ತಾರೆ.ಆದರೆ ಇವರಿಗೂ ಸೆಸ್ ಜತೆಗೆ ಬಳಕೆ ಶುಲ್ಕ ಹಾಕುತ್ತಿದ್ದಾರೆ,  ಇದು ಸರಿಯಲ್ಲ.ನೂರು ಫ್ಲ್ಯಾಟ್ ಗಳಿಗಿಂತ ಕಡಿಮೆ ಇರುವ ಅಪಾರ್ಟ್ ಮೆಂಟ್ ಗಳಿಗೆ ಮನಸ್ಸಿಗೆ ಬಂದಂತೆ ಬಳಕೆ ಶುಲ್ಕ ಹಾಕಲಾಗಿದೆ.ಜನರಿಗೆ ಬದುಕಲು ಅವಕಾಶ ಮಾಡಿಕೊಡಬೇಕು, ಆದರೆ ಇವರು ರಕ್ತ ಹೀರಲು ಬರುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.

ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಎಂಬ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಈ ರೀತಿಯಾಗಿ ಸಿಎಂ ಆರ್ಥಿಕ ಸಲಹೆಗಾರರು ಹೇಳಿಕೆ ಕೊಟ್ಟಿದ್ದರೆ ಅವರ ಹೇಳಿಕೆಗೆ ಸ್ವಾಗತ. ಸರ್ಕಾರಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ ಎಂದರು.