ಬೆಂಗಳೂರು; ಸಿಎಂ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ ಮೂಡಾ ಸೈಟ್ ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಒಂದು ವರ್ಷದಲ್ಲೇ ಹಗರಣದ ಮೇಲೆ ಹಗರಣ ಬಯಲಿಗೆ ಬರುತ್ತಿದೆ.ಒಂದೊಂದೇ ಇಲಾಖೆಯಲ್ಲಿ ಮೇಲಿಂದ ಮೇಲೆ ಹಗರಣ ಬೆಳಕಿಗೆ ಬರ್ತಿವೆ.ವಾಲ್ಮೀಕಿ ನಿಗಮ ಬೆನ್ನಲ್ಲೇ ಮೈಸೂರಿನ ಮೂಡಾದಲ್ಲಿ ದೊಡ್ಡ ಹಗರಣ ಆಗಿದೆ ಅನ್ನೋದು ಸದ್ದು ಮಾಡ್ತಿದೆ.ಮುಖ್ಯಮಂತ್ರಿ ಉಸ್ತುವಾರಿ ಜಿಲ್ಲೆಯಲ್ಲಿ ಹಗರಣ ಆಗಿದ್ರೂ ಸುಮ್ಮನಿದ್ದಾರೆ.ಒಂದು ರೀತಿಯಲ್ಲಿ ಅವರ ಮನೆ ಬಾಗಿಲಲ್ಲೇ ನಡೆದಿರೋ ಹಗರಣ ಇದು. ಅವರ ಕುಟುಂಬದ ಸದಸ್ಯರಿಗೆ ಸೈಟ್ ಹಂಚಿಕೆ ಆಗಿರೋದು ಪ್ರಾಥಮಿಕ ವರದಿಯಲ್ಲಿ ಸ್ಪಷ್ಟವಾಗಿದೆ ಎಂದಿದ್ದಾರೆ.
ಸಿಎಂ ಕಚೇರಿಯಲ್ಲೇ ಹಗರಣಗಳು ನಡೀತಿರೋ ವೇಳೆ,ಹಣಕಾಸು ಇಲಾಖೆಯ ಗಮನಕ್ಕೆ ಬಾರದೇ ವಾಲ್ಮೀಕಿ ನಿಗಮದಲ್ಲಾದ ಹಗರಣ ಇವೆಲ್ಲದ್ದರಿಂದ ಸಿಎಂ ಆಗಿ ಮುಂದುವರಿಯೋ ನೈತಿಕತೆಯನ್ನ ಇವತ್ತು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ಹೌಸಿಂಗ್ ಬೋರ್ಡ್ ನಲ್ಲಿ ನಿವೇಶನ ಹಂಚಿಕೆಯಲ್ಲಿ ಹಗರಣ ಆಗಿದ್ದು ಕಂಡು ಬರ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿರೋದು ಶೂನ್ಯ ಅಭಿವೃದ್ಧಿ ಸರ್ಕಾರ ಹಾಗೂ ಹಗರಣಗಳ ರಾಜ್ಯ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ರೀತಿಯ ಸರ್ಕಾರ ಆಡಳಿತ ನಡೆಸೋ ನೈತಿಕತೆ ಕಳೆದುಕೊಳ್ತಿದೆ.15ರಿಂದ ಅಧಿವೇಶನದಲ್ಲಿ ಈ ಹಗರಣದ ಬಗ್ಗೆ ಪ್ರಸ್ತಾಪ ಮಾಡಲಿದೆ.ಯಾರು ತಪ್ಪಿತಸ್ಥರು ಅನ್ನೋದು ಗೊತ್ತಾಗಬೇಕಾಗಿದೆ. ಆರೋಪ ಬಂತಂದ್ರೆ ಕೇವಲ ವರ್ಗಾವಣೆ ಮಾಡೋದು ಅಷ್ಟೇ ಆಗ್ತಿದೆ.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಗರಣ ನಡಿಯುತ್ತೆ ಹಾಗೂ ಅದನ್ನ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ.ಇದನ್ನ ಬಿಜೆಪಿ ಖಂಡಿಸುತ್ತದೆ.ನಾಳೆ ಇದನ್ನೆಲ್ಲಾ ಪ್ರತಿಭಟಿಸಿ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಕುಟುಂಬದವರು ಸೈಟ್ ಪಡೆದಿರೋದು ದಾಖಲೆಗಳಲ್ಲಿ ಗೊತ್ತಾಗಿದೆ.ಇದನ್ನ ಸಿಎಂ ಅವರು ಬಿಜೆಪಿ ಕಾಲದಲ್ಲೇ ಅಂತ ಸಮರ್ಥಿಸಿಕೊಳ್ತಿದ್ದಾರೆ. ಇನ್ನು ಬಿಜೆಪಿ ಕಾಲದಲ್ಲಿ ಬಿಡುಗಡೆಯಾದ ಹಣವನ್ನ ಮತ್ತು ಯೋಜನೆ ತಡೆ ಹಿಡಿಯುತ್ತಾರೆ ಮತ್ತು ಎನ್ ಇಪಿ ತಡೆಯುತ್ತಾರೆ.ಈಗ ಅವರ ಹೆಂಡತಿ ಹೆಸರಲ್ಲಾದ ಸೈಟು ಬಿಜೆಪಿ ಕಾಲದ್ದು ಅಂತ ಯಾಕೆ ಸಮರ್ಥಿಸಿಕೊಳ್ತಾರೆ? ನಮ್ಮ ಅನುದಾನ ಹಾಗೂ ಟೆಂಡರ್ ತಡೆಯೋದಕ್ಕೆ ಬರ್ತದೆ.ತನ್ನ ಹೆಂಡತಿ ಹೆಸರು ಬಂತು ಅಂದ್ರೆ ಇದನ್ನ ಯಾಕೆ ಸಮರ್ಥಿಸಿಕೊಳ್ತೀರಿ?ಯಾರೋ ಕೊಟ್ಟಂತಹ ವಾಚ್ ನಾನು ಕೊಂಡುಕೊಂಡಿದ್ದು ಅಂತ ಹೇಳ್ತೀರಿ. ಹಾಗಾಗಿ ಈಗ ಹೆಂಡತಿ ಕೊಟ್ಟ ಸೈಟು ಯಾರೋಕೊಟ್ಟಿದ್ದು ಅಂತ ಹೇಳೋದು ಮುಖ್ಯಮಂತ್ರಿಗೆ ಶೋಭೆ ತರಲ್ಲ.ಆ ಸೈಟನ್ನ ತಕ್ಷಣವೇ ಸರ್ಕಾರಕ್ಕೆ ಹಿಂತಿರುಗಿಸಿ ತನಿಖೆಗೆ ಒಳಪಡಿಸಬೇಕು.ಯಾವ ರೀತಿ ಹೋರಾಟ ಮಾಡಬೇಕು ಅನ್ನೋದು ದಾಖಲೆ ಸಿಕ್ಕ ಮೇಲೆ ನಿರ್ಧಾರ ಮಾಡುತ್ತೇವೆ ಎಂದು ಸುನೀಲ್ ಕುಮಾರ್ ಅವರು ಹೇಳಿದ್ದಾರೆ.