ಮನೆ Latest News ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲಾ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು...

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲಾ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ‌. ಸುನೀಲ್ ಕುಮಾರ್ ಎಕ್ಸ್ ಪೋಸ್ಟ್

0

 

ಬೆಂಗಳೂರು; ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲಾ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ ಎಂದು  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ‌. ಸುನೀಲ್ ಕುಮಾರ್ ಎಕ್ಸ್ ನಲ್ಲಿ  ಪೋಸ್ಟ್ ಮಾಡಿದ್ದಾರೆ.

ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲಾ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ! .ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿ ಆಗಿದ್ದ ತಣ್ಣಗಿನ ಮಲೆನಾಡಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತೀರಾ  ಸಿದ್ದರಾಮಯ್ಯನವರೇ?.ಇದರಿಂದ ಪೊಲೀಸರ ಆತ್ಮ ಸ್ಥೈರ್ಯ ಏನಾಗಬೇಡ?. ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ ಎಂದಿದ್ದಾರೆ.

ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ನಕ್ಸಲರ ಶರಣಾಗತಿ ಸರ್ಕಾರ ಮುಂದಾಗಿರೋದು ಆತಂಕಕಾರಿ ಬೆಳವಣಿಗೆ. ಬಂದೂಕಿನ ಸದ್ದು ಕೇಳಿಸಿದವರಿಗೆ ಶರಣಾಗತಿ ಘೋಷಿಸಲು ಹೊರಟಿದ್ದಾರೆ. PFI ಉಗ್ರರಿಗೆ ಕೇಸ್ ಗಳನ್ನ ವಾಪಾಸ್ ತೆಗೆದುಕೊಳ್ಳುವುದಕ್ಕೂ ಒಂದೇ ಮಾನದಂತ ಅನುಸರಿಸುತ್ತಿದ್ದಾರೆ. ನಕ್ಸಲರು ಶರಣಾಗಬೇಕು ಅಂತ ಸಿದ್ದರಾಮಯ್ಯ ಹೇಳ್ತಾರೆ. ನಕ್ಸಲರಿಗೆ ಸಿಎಂ ಸಿದ್ದರಾಮಯ್ಯ ಹತ್ತಿರವುದ್ದಾರೋ ಅಥವಾ ನಕ್ಸಲರೇ ಸಿದ್ದರಾಮಯ್ಯ ಬಳಿ ಇದ್ದಾರೋ ಗೊತ್ತಿಲ್ಲ. ಕಾಡಿನಲ್ಲಿರುವ ಕಾಡು ನಕ್ಸಲರನ್ನ ನಾಡು ನಕ್ಸಲರನ್ನಾಗಿ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ನಕ್ಸಲರಲ್ಲಿ ಆಸೆಯ ಚಿಗುರನ್ನ ಬೆಳೆಸಿದೆ. ಕೇಂದ್ರ ಸರ್ಕಾರ ನಕ್ಸಲ್ ಮುಕ್ತ ಮಾಡೋಕೆ ಮುಂದಾಗಿದೆ. ಈ ಬೆಳವಣಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ANF ಪಡೆ, ಕೂಬಿಂಗ್ ಗೆ ನೈತಿಕ‌ ಸ್ಥೈರ್ಯಕ್ಕೆ ಇದು ಹಿನ್ನೆಡೆ. ವಿಕ್ರಂ ಗೌಡ ಎನ್ ಕೌಂಟರ್ ವೇಳೆ ಇವರೇ ತನಿಖೆ ಮಾಡಬೇಕು ಅಂತಾರೆ. ಈಗ ಶರಣಾಗುತ್ತೀವಿ ಅಂತಿರೋದು ಎಷ್ಟು ಸರಿ?. ನಕ್ಸಲರ ಮುಖ್ಯ ವೇದಿಕೆಗೆ ಬರೋಕೆ ಘನವಾಗಿ ನಡೆಯಬೇಕು ಅಂತಾರೆ. ರೈತಾಪಿ ವರ್ಗವನ್ನ ಹಿಂಸೆಯ ಮೂಲಕ ಪ್ರಚೋದಿಸಿದ ಗುಂಪು. ಇದು ನಗರ ನಕ್ಸಲರನ್ನ ಹೆಚ್ಚು ಮಾಡುವ ಪ್ರಕ್ರಿಯೆ ಎಂದಿದ್ದಾರೆ.

ಇನ್ನು ಇಂದು ನಕ್ಸಲರು ಶರಣಾಗ್ತಿದ್ದಾರೆ ಎಂಬ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಈಗ ಇಂದು ನಕ್ಸಲರು ಶರಣಾಗ್ತಿದ್ದಾರೆ ಇಷ್ಟೇ ಹೇಳಬಹುದು ನಾನು. ಬಾಕಿ ವಿಚಾರ ನಾನು ಈಗ ಮಾತಾಡಲ್ಲ. ನಾವು ಶರಣಾಗತಿಗೆ ಕರೆ ಕೊಟ್ಟಿದ್ವಿ. ವಿಕ್ರಮ್ ಗೌಡ ಎನ್‌ಕೌಂಟರ್ ವೇಳೆಯೇ ಶರಣಾಗುವಂತೆ ಕರೆ ಕೊಡಲಾಗಿತ್ತು. ಕಾಡಲ್ಲಿದ್ದು ಈ ರೀತಿ ಜೀವನ ಯಾಕೆ, ಮುಖ್ಯವಾಹಿನಿಗೆ ಬನ್ನಿ ಅಂದಿದ್ವಿ.ಅವರ ಮೇಲೆ ಹಲವು ಕೇಸ್ ಗಳಿವೆ ನಿಜ. ಅವರೆಲ್ಲ ಶರಣಾದ ಮೇಲೆ ಕೇಸ್ ಗಳ ವಿಚಾರದಲ್ಲಿ ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಆಗುತ್ತೆ ಎಂದಿದ್ದಾರೆ.