ಬೆಂಗಳೂರು: ಆರೆಸ್ಸೆಸ್ ಗೀತೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿಗೆ ಸುನೀಲ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಸಂಘದ ಗೀತೆ ಹಾಡಿದ್ದಾರೆ ಅಂತ ಇನ್ಯಾರದ್ದೋ ಒತ್ತಡ ಬಿತ್ತು ಅಂತ ಡಿಕೆಶಿ ಕ್ಷಮೆ ಕೇಳಿರೋದು ಅತ್ಯಂತ ದುರಂತದ ಸಂಗತಿ. ಗಾಂಧಿ ಕುಟುಂಬಕ್ಕೆ ನಿಷ್ಟರಾಗಿರಬೇಕು ಅನ್ನೋದಲ್ಲ ಮುಖ್ಯ, ಮೊದಲು ನೀವು ದೇಶಭಕ್ತರಾಗಬೇಕು. ಸಂಘದ ಪ್ರಾರ್ಥನೆ ದೇಶಭಕ್ತಿ ಹೇಳಿಕೊಡುವ ಪ್ರಾರ್ಥನೆ. ನೀವು ಗಾಂಧಿ ಕುಟುಂಬಕ್ಕೆ ಪ್ರೀತರಾಗಬೇಕು ಅಂತ ದೇಶಭಕ್ತಿ ಮರೆತಿರೋದು ದುರಂತ.ಈ ಹಿಂದಿನ ಅಧಿವೇಶನದಲ್ಲಿ ಡಿಕೆಶಿ ಅವರು ತಾವು ಆರೆಸೆಸ್, ತಾವು ಸಂಘದ ವಿಠಲ ಶಾಖೆಗೆ ಹೋಗ್ತಿದ್ದೆ ಅಂತ ಹೇಳಿದ್ರು. ಇದರ ಬಗ್ಗೆಯೂ ಕಾಂಗ್ರೆಸ್ ನವ್ರು ಹಾಗಾದ್ರೆ ಆಕ್ಷೇಪಣೆ ಎತ್ತುತ್ತಾರಾ?. ಅಸಲಿಗೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕಿತ್ತು.ಹಿಂದೂ ಅಶ್ಲೀಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಡಿಕೆಶಿ ಕ್ಷಮೆ ಕೇಳಬೇಕಿತ್ತು.ಸಂಘದ ಪ್ರಾರ್ಥನೆ ಹಾಡಿದ್ದಕ್ಕೆ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದಿದ್ದಾರೆ.
ಬಾನು ಮುಷ್ತಾಕ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ದಸರಾ ನಾಡಹಬ್ಬ, ಶ್ರದ್ಧಾ ಭಕ್ತಿಯ ಸಂಸ್ಕೃತಿ. ಇದರ ಉದ್ಘಾಟನೆ ಬಗ್ಗೆ ಜವಾಬ್ದಾರಿಯುತ ಸರ್ಕಾರ ತೀರ್ಮಾನ ಮಾಡಬೇಕು. ಇಸ್ಲಾಂ ನಲ್ಲಿ ವಿಗ್ರಹಾರಾಧಾನೆ ಇದ್ರೆ, ಅದನ್ನು ಬಾನು ಮುಷ್ತಾಕ್ ಒಪ್ಕೊಂಡ್ರೆ ನಮ್ಮ ಅಭ್ಯಂತರ ಇಲ್ಲ. ಒಂದು ಕಡೆ ಅವರು ವಿಗ್ರಹಾರಾಧನೆ ಅವರು ಮಾಡಲ್ಲ.ಮಹಮದ್ ಘೋರಿಯಿಂದ ಹಿಡಿದು ಪಿಫ್ಐವರೆಗೆ ಎಷ್ಟೋ ದೇವಸ್ಥಾನನಗಳಲ್ಲಿ ವಿಗ್ರಹಗಳನ್ನು ನಾಶಪಡಿಸಿರುವ ಇತಿಹಾಸ ಇದೆ ಇಂಥ ಸಂದರ್ಭದಲ್ಲಿ ವಿಗ್ರಹ ಆರಾಧಾನೆ, ನಮ್ಮ ಸಂಸ್ಕೃತಿಯನ್ನು ಅವ್ರು ಒಪ್ಕೋತಾರೆ ಅನ್ನೋದನ್ನು ಸರ್ಕಾರ ಖಾತ್ರಿ ಪಡಿಸಿಕೊಳ್ಳಬೇಕಿತ್ತು.ಈ ವಿವಾದವನ್ನು ಸರ್ಕಾರವೇ ಮೈಮೇಲೆ ಎಳೆದುಕೊಂಡಿದೆ.ಹಿಂದೂಗಳನ್ನು ಅವಮಾನಿಸುವುದು, ಸಾಂಸ್ಕೃತಿಕ ಉತ್ಸವಗಳ ಮೇಲೆ ಧಕ್ಕೆ ತರೋದೇ ಸರ್ಕಾರದ ಉದ್ದೇಶ.ಧರ್ಮಸ್ಥಳ ವಿಚಾರದಲ್ಲು ಸರ್ಕಾರದ ಸಹಾನುಭೂತಿ ಇಲ್ಲದೇ ಇಷ್ಟೆಲ್ಲ ಆಗೋದಿಕ್ಕೆ ಸಾಧ್ಯ ಇಲ್ಲ. ಅದರ ಮುಂದುವರೆದ ಭಾಗವೇ ದಸರಾ ಉದ್ಘಾಟನೆಗೆ ಅಧ್ಯಕ್ಷರ ಆಯ್ಕೆ ಎಂದು ಹೇಳಿದ್ದಾರೆ.
ಅನ್ನಭಾಗ್ಯದ ಅಕ್ಕಿ ದುಬೈಗೆ ಸಾಗಾಟ ಜಾಲ ವಿಚಾರದ ಬಗ್ಗೆ ಮಾತನಾಡಿ ಗ್ಯಾರಂಟಿ ಯೋಜನೆಗಳು ಬೇರೆ ಬೇರೆ ಹಂತಗಳಲ್ಲಿ ದುರುಪಯೋಗ ಆಗಿದೆ.ಗ್ಯಾರಂಟಿ ಜಾರಿ ಸಮಿತಿ ಮಾಡಿದ್ದಕ್ಕೆ ಬಿಜೆಪಿ ವಿರೋಧಿಸಿತ್ತು. ಒಂದು ಗೋದಾಮಿನಿಂದ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ಗ್ಯಾರಂಟಿ ಅಧ್ಯಕ್ಷರು ಸರಬರಾಜು ಮಾಡಿದ್ದಾರೆ. ಮುಂದೆ ಇನ್ನಷ್ಟು ಅಧ್ಯಕ್ಷರ ಅಕ್ರಮಗಳು ಬಯಲಿಗೆ ಬರುತ್ವೆ. ಇದು ಗ್ಯಾರಂಟಿ ಸರ್ಕಾರ ಅಲ್ಲ, ಇದು ಬುರುಡೆ ಸರ್ಕಾರ. ಜನರಿಗೆ ಬುರುಡೆ ಬಿಡೋದೇ ಸರ್ಕಾರದ ಕೆಲಸ ಎಂದು ತಿಳಿಸಿದ್ದಾರೆ.











