ಮನೆ Latest News ಮಹಾರಾಷ್ಟ್ರ ಚುನಾವಣೆಯಲ್ಲಿ EVM ಮೇಲೆ ಅನುಮಾನ ವಿಚಾರ; ಡಾ.ಜಿ ಪರಮೇಶ್ವರ್ ಹೇಳಿಕೆಗೆ ಸಂಸದ ಸುಧಾಕರ್ ಪ್ರತಿಕ್ರಿಯೆ

ಮಹಾರಾಷ್ಟ್ರ ಚುನಾವಣೆಯಲ್ಲಿ EVM ಮೇಲೆ ಅನುಮಾನ ವಿಚಾರ; ಡಾ.ಜಿ ಪರಮೇಶ್ವರ್ ಹೇಳಿಕೆಗೆ ಸಂಸದ ಸುಧಾಕರ್ ಪ್ರತಿಕ್ರಿಯೆ

0

ನವದೆಹಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ EVM ಮೇಲೆ ಅನುಮಾನ ವಿಚಾರಕ್ಕೆ  ಸಂಬಂಧಪಟ್ಟಂತೆ ಡಾ.ಜಿ ಪರಮೇಶ್ವರ್ ಹೇಳಿಕೆಗೆ ಸಂಸದ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಡಾ ಕೆ ಸುಧಾಕರ್ ಇವಿಯಂ ಪರಿಚಯ ಮಾಡಿದವರೆ ಕಾಂಗ್ರೆಸ್ ನವರು. ಇವಿಎಂ ತಿರುಚ ಬಹುದು ಅನ್ನೋಹಾಗಿದ್ರೆ ಅವರೇ ಮಾಡಬಹುದಾಗಿತ್ತು. ಕಳೆದ ಲೋಕಸಭೆಯಲ್ಲಿ ಬಿಜೆಪಿ ಗೆ ಕಡಿಮೆ ಸ್ಥಾನ ಬಂತು. ಇವಿಎಂ‌ ತಿರುಚಲು ಸಾಧ್ಯವಾಗಿದ್ರೆ ಆವತ್ತೆ ಮಾಡಬಹುದಾಗಿತ್ತು. ಹಿರಿಯ ನಾಯಕರಿದ್ದೀರಿ,ತಿಳುವಳಿ ಇರುವವರು ಇದ್ದೀರಿ. ರಾಜಕೀಯ ಲಾಭಕ್ಕಾಗಿ ಇವಿಎಂ ಮೇಲೆ ಮಾತನಾಡಬಾರದು. ಇಷ್ಟು ಜನಸಂಖ್ಯೆ ಇರುವ ದೇಶದಲ್ಲಿ EVM ಅತ್ಯದ್ಭುತವಾಗಿದೆ. ನೀವು ನಮ್ಮ ದೇಶದ ಮಾನವನ್ನು ಹರಾಜು ಹಾಕಬೇಡಿ ಎಂದಿದ್ದಾರೆ.

ಇದೇ ವೇಳೆ ಚನ್ನಪಟ್ಟಣ ಗೆಲುವಿನ ಬಳಿಕ ಒಕ್ಕಲಿಗ ನಾಯಕತ್ವದ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು  ಡಿಕೆಶಿ ಕೂಡ ಒಕ್ಕಲಿಗ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲಿನಿಂದಲೂ ಡಿಕೆಶಿ ಒಕ್ಕಲಿಗ ನಾಯಕರೇ. ಯೋಗೇಶ್ವರ್ ಕೂಡ ಒಕ್ಕಲಿಗ ನಾಯಕರೇ. ನಾನು ಕೂಡ ಒಕ್ಕಲಿಗ ನಾಯಕನೇ. ನಾನು ಕಾಂಗ್ರೆಸ್ ನಲ್ಲೂ ಗೆದ್ದಿದ್ದೇನೆ,ಬಿಜೆಪಿಯಲ್ಲೂ ಗೆದ್ದಿದ್ದೇನೆ. ಉಪಚುನಾವಣೆಯಲ್ಲಿ ಗೆದ್ದರೆ ಒಕ್ಕಲಿಗ ನಾಯಕತ್ವ ಬರುತ್ತೆ ಅಂತಾ ಹೇಳೊಕೆ ಆಗಲ್ಲ. 1992ರಲ್ಲಿ ಒಕ್ಕಲಿಗರು ದೇವೇಗೌಡರಿಗೆ ಬೆಂಬಲಿಸಿದ್ರು.  ಎಸ್ಎಂಕೆ ಗೂ ಸಿಎಂ ಆಗ್ತಾರೆ ಎಂದಾಗ ಒಕ್ಕಲಿಗರು ಬೆಂಬಲಿಸಿದ್ರು. ಕಳೆದ ಚುನಾವಣೆಯಲ್ಲಿ ಒಕ್ಕಲಿಗರು ಡಿಕೆಶಿಯವರಿಗೆ ಬೆಂಬಲಿಸಿದ್ರು. ಚನ್ನಪಟ್ಟಣ ಉಪಚುನಾವಣೆ ಡಿಕೆಶಿ ಸಿಎಂ ಆಗಲಿ ಎಂದು ಮತ ಹಾಕಿರಬಹುದು. ದೇವೇಗೌಡರು ದೈತ್ಯ ಶಕ್ತಿ ಚುನಾವಣೆ ಮುಗಿದ ಮೇಲೆ  ಯೋಗೇಶ್ವರ್ ಹೇಳಿದ್ರು. ನೀವು ಕೂಡ ಎರಡು ಬಾರಿ ಸೋತಿದ್ದೀರಿ ನೀವು ನೀವೃತ್ತಿಯಾಗಿದ್ದಾರಾ..? ಕೊನೆಯ ಕ್ಷಣದ ವರೆಗೂ ಹೋರಾಡ್ತಿನಿ ಅಂತಾ ದೇವೇಗೌಡರು ಹೇಳಿದ್ದಾರೆ. ದೇವೇಗೌಡರು ನಿವೃತ್ತರಾಗಬೇಕು ಎಂದು ಬಯಸಲುಬಾರದು ಎಂದಿದ್ದಾರೆ.

ಸೋತಾಗಲೇ ಆರೋಪ ಮಾಡ್ತಿಲ್ಲ.. ಗೆದ್ದಾಗಲೂ ಆರೋಪ ಮಾಡ್ತಿದ್ದೇವೆ: ಸಿ ಟಿ ರವಿ ಹೇಳಿಕೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿರುಗೇಟು

ಬೆಂಗಳೂರು: EVM ಹ್ಯಾಕ್ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿಕೆ ಸಿಟಿ ರವಿ ವಿರೋಧ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.

ನಾವು ಮೊದಲಿನಿಂದಲೂ ಆರೋಪ ಮಾಡ್ತಿದ್ದೇವೆ. ಸೋತಾಗಲೇ ಆರೋಪ ಮಾಡ್ತಿಲ್ಲ. ಗೆದ್ದಾಗಲೂ ಆರೋಪ ಮಾಡ್ತಿದ್ದೇವೆ. ನಾನು ಹೇಳಿದ್ದು ಏನೂ ಎಂದು ಮೊದಲು ಅರ್ಥ ಮಾಡಿಕೊಳ್ಳಲು ಹೇಳಿ. ನಾನು ಹೇಳಿದ್ದು ಸೆಲೆಕ್ಟ್ ವ್ಯೂ ಆಗಿ ಮಾಡ್ತಾರೆ.. ಸೆಲೆಕ್ಟ್ ವ್ಯೂ ಆಗಿ ರಾಜ್ಯ, ಕ್ಷೇತ್ರ ಆಯ್ಕೆ ಮಾಡಿಕೊಳ್ತಾರೆ ಅಂತ. EVM ಹ್ಯಾಕ್ ಮಾಡ್ತಾರೆ ಅಂತ ನಾವು ಏನೂ ಹೊಸದಾಗಿ ಹೇಳ್ತಿಲ್ಲ. ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. 2013ರ ಚುನಾವಣೆಯಿಂದಲೂ ಚುನಾವಣೆಯಲ್ಲಿ ಗೆಲುವಿಗಾಗಿ ಹ್ಯಾಕ್ ಮಾಡಿದ್ದಾರೆ ಅಂತ ಹೇಳಿದ್ದೇವೆ ಎಂದಿದ್ದಾರೆ.

ಬರೀ ನಾನು ಒಬ್ಬನೇ ಹೇಳಿದ್ರೆ ಹುಚ್ಚ ಅನ್ನಬಹುದು ನನ್ನ. ಆದ್ರೆ ದೇಶದ ಜನ ಹೇಳ್ತಾರೆ ಅಲ್ವಾ..? ಮಹಾರಾಷ್ಟ್ರ ಚುನಾವಣೆ ವಿಶ್ಲೇಷಣೆ ಮಾಡುವಾಗ ಆ ರೀತಿ ಒಂದು ಚರ್ಚೆ ಆಗಿದೆ ಅಂತ ಹೇಳಿದ್ದೇನೆ. ರವಿಗೆ ಅರ್ಥ ಮಾಡಿಕೊಳ್ಳಲು ಬಂದಿಲ್ಲ ಪಾಪ ಎಂದು ವ್ಯಂಗ್ಯ ಮಾಡಿದ್ದಾರೆ.